• Home
  • »
  • News
  • »
  • trend
  • »
  • Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ

Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ

ಪತಿಗಾಗಿ ಕಿಡ್ನಿ ದಾನ ಮಾಡಿದ ಪತ್ನಿ

ಪತಿಗಾಗಿ ಕಿಡ್ನಿ ದಾನ ಮಾಡಿದ ಪತ್ನಿ

ದಾಂಪತ್ಯದ ಪ್ರೀತಿ (Love) ಗೆ ವಯಸ್ಸು (Age) , ಅಂದ (Beauty) ಇದ್ಯಾವುದೂ ಅಡ್ಡಬರುವುದೇ ಇಲ್ಲ. ಯೌವ್ವನದಿಂದ ಹಿಡಿದು ಇಳಿ ವಯಸ್ಸಲ್ಲೂ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಹೀಗೆ ಆಸರೆಯಾಗುತ್ತಲೇ ಇರುತ್ತಾರೆ.

  • Share this:

ಗಂಡ-ಹೆಂಡತಿ (Husband And Wife) ಸಂಬಂಧ ಶ್ರೇಷ್ಠವಾದದ್ದು ಎನ್ನುತ್ತಾರೆ. ದಾಂಪತ್ಯದ ಪ್ರೀತಿ (Love) ಗೆ ವಯಸ್ಸು (Age) , ಅಂದ (Beauty) ಇದ್ಯಾವುದೂ ಅಡ್ಡಬರುವುದೇ ಇಲ್ಲ. ಯೌವ್ವನದಿಂದ ಹಿಡಿದು ಇಳಿ ವಯಸ್ಸಲ್ಲೂ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಹೀಗೆ ಆಸರೆಯಾಗುತ್ತಲೇ ಇರುತ್ತಾರೆ. ಇವತ್ತು ಮದುವೆ (Marriage) ಯಾಗಿ ನಾಳೆ ಡಿವೋರ್ಸ್‌ (Divorcee) ತೆಗೆದುಕೊಳ್ಳುವ ಕಾಲದಲ್ಲೂ ಪ್ರೀತಿ ತುಂಬಿದ ಹಲವಾರು ಸಂಬಂಧಗಳು ಜೀವಂತ ಇವೆ.


ಪತಿಯ ಉಳಿವಿಗಾಗಿ ಹೆಂಡತಿಯ ತ್ಯಾಗ


ವಿಶೇಷವಾಗಿ ಪತ್ನಿಯಾದವಳು ತನ್ನ ಗಂಡನ ಪ್ರಾಣ ಉಳಿಸಲು ಎಂತಹ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ಈ ರೀತಿಯಾದ ಘಟನೆಗಳು ಆಗಾಗ್ಗೇ ವರದಿಯಾಗುತ್ತಲೇ ಇರುತ್ತವೆ. ಅಂತದ್ದೇ ಒಂದು ಇಳಿವಯಸ್ಸಿನ ದಂಪತಿಗಳ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಂಬಂಧಕ್ಕೆ, ಪ್ರೀತಿಗೆ ಇವರೇ ಉತ್ತಮ ನಿದರ್ಶನ ಎನ್ನುತ್ತಿದ್ದಾರೆ ನೆಟ್ಟಿಗರು.


ತಾಯಿಯ ತ್ಯಾಗದ ಬಗ್ಗೆ ಪುತ್ರನ ಟ್ವಿಟ್ಟರ್‌ ಪೋಸ್ಟ್


ಹೌದು, ಸಾಮಾಜಿಕ ಜಾಲತಾಣದಲ್ಲಿ ತಂದೆಗೆ ತಾಯಿ ಮಾಡಿದ ತ್ಯಾಗವನ್ನು ಮಗ ಲಿಯೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಂದೆಯನ್ನು ಉಳಿಸಲು ತಾಯಿ ಮಾಡಿದ ದೊಡ್ಡ ತ್ಯಾಗದ ಬಗ್ಗೆ, ಅವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧದ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಈ ಪ್ರೀತಿಯ ತ್ಯಾಗಕ್ಕೆ ಎಲ್ಲರೂ ಬಹುಪರಾಕ್‌ ಹೇಳುತ್ತಿದ್ದಾರೆ.


ಎಪ್ಪತ್ತರ ಹರೆಯದಲ್ಲಿ ಪತಿಗಾಗಿ ಕಿಡ್ನಿ ದಾನ ಮಾಡಿದ ಪತ್ನಿ


ಲಿಯೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಪ್ರೇಮ ಕಥೆ ಅವರ ಪೋಷಕರಿಗೆ ಸಂಬಂಧಿಸಿದ್ದು. “ಅಪ್ಪ 98 ಬಾರಿ ಡಯಾಲಿಸಿಸ್ ಸೆಷನ್‌ಗಳಿಗೆ ಒಳಗಾಗಗಿದ್ದಾರೆ. ವಾರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಡಯಾಲಿಸಿಸ್ ಸೆಷನ್‌ನಲ್ಲಿ 5-6 ಗಂಟೆಗಳ ಕಾಲ ನನ್ನ ತಾಯಿ ನನ್ನ ತಂದೆಗಾಗಿ ಕಾಯುತ್ತಾ ಇರುತ್ತಿದ್ದರು.


ಕಿಡ್ನಿ ದಾನ ಮಾಡಿದ ಪತ್ನಿ!


ಕೊನೆಯದಾಗಿ ಅವರನ್ನು ಹೇಗಾದರೂ ಉಳಿಸಲೇ ಬೇಕೆಂದು ನಿರ್ಧರಿಸಿ ಆಕೆ ತನ್ನ ಕಿಡ್ನಿಯನ್ನೇ ದಾನ ಮಾಡಿದ್ದಾರೆ. ಪ್ರಸ್ತುತ ಇಬ್ಬರೂ ಆ ಕೆಟ್ಟ ದಿನಗಳಿಂದ ಹೊರಬಂದು ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಇವರಿಬ್ಬರ ಪ್ರೀತಿ ನನಗೊಂದು ಸುಂದರವಾದ ಪ್ರೇಮಕಥೆ ಎಂದು ನನಗೆ ಅನಿಸಿದೆ" ಎಂದು ಟ್ವಿಟ್ಟರ್‌ನಲ್ಲಿ ಪೋಷಕರಿಬ್ಬರ ಫೋಟೋವನ್ನು ಹಂಚಿಕೊಂಡು ಈ ರೀತಿಯಾಗಿ ಪೋಸ್ಟ್‌ ಮಾಡಿದ್ದಾರೆ. ಲಿಯೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಮೊದಲ ಚಿತ್ರವು ಹಿಮೋಡಯಾಲಿಸಿಸ್ ಘಟಕದ ಪ್ರವೇಶವನ್ನು ತೋರಿಸುತ್ತದೆ.


ಇದನ್ನೂ ಓದಿ: ಅಬ್ಬಬ್ಬಾ, ಈ ಮಹಿಳೆಯ ಕಣ್ಣಲ್ಲಿತ್ತಂತೆ 23 ಕಾಂಟ್ಯಾಕ್ಟ್‌ ಲೆನ್ಸ್! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ


ಇನ್ನೂ ಮೂತ್ರಪಿಂಡದ ಅಳವಡಿಕೆ ವಿಧಾನ ಕೂಡ ಇಬ್ಬರಿಗೂ ಸವಾಲಾಗಿತ್ತು. ಕ್ಲಿಯರೆನ್ಸ್ ಮತ್ತು ಪರೀಕ್ಷೆಗಳು ಸುಮಾರು ಎರಡು ತಿಂಗಳುಗಳನ್ನು ತೆಗೆದುಕೊಂಡಿದ್ದರಿಂದ ಎಪ್ಪತ್ತರ ಹರೆಯದಲ್ಲಿದ್ದರೂ ದಂಪತಿಗಳು ಯಾವುದಕ್ಕೂ ಕುಗ್ಗದೇ ದೃಢವಾಗಿ ತಮ್ಮ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ ಸದ್ಯ ಖುಷಿಯಾಗಿದ್ದಾರೆ ಎಂದು ಲಿಯೋ ಹೇಳಿದ್ದಾರೆ.


ಕೊಚ್ಚಿ ಆಸ್ಪತ್ರೆಯಲ್ಲಿ ಕ್ರಮವಾಗಿ ಅತ್ಯಂತ ಹಿರಿಯ ಮೂತ್ರಪಿಂಡ ದಾನಿಗಳು ಮತ್ತು ಸ್ವೀಕರಿಸುವರಾಗಿದ್ದಾರೆ ಎಂಬ ಖ್ಯಾತಿಗೆ ಕೂಡ ಪಾತ್ರರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿದ ಲಿಯೋ


ಮೂತ್ರಪಿಂಡ ಕಸಿ ಮಾಡುವಲ್ಲಿ ದಕ್ಷತೆ ತೋರಿದ ಕೇರಳದ ಕೊಚ್ಚಿಯ ವೈದ್ಯರಿಗೆ ಲಿಯೋ ಧನ್ಯವಾದ ಅರ್ಪಿಸಿದರು. ಅಲ್ಲದೇ ಟ್ವಿಟ್ಟರ್‌ ಪೋಸ್ಟ್‌ನಲ್ಲಿ, ಅಂಗಾಂಗ ದಾನದಲ್ಲಿ ಜಾಗೃತಿಯ ಅಗತ್ಯತೆಯ ಬಗ್ಗೆಯೂ ಅವರು ತಿಳಿಸಿದ್ದಾರೆ ಮತ್ತು ಕಿಡ್ನಿ ಕಸಿಗಾಗಿ ಐದು ಲಕ್ಷಕ್ಕೂ ಹೆಚ್ಚು ಜನರು ಕಾಯುತ್ತಿದ್ದಾರೆ ಎಂದು ಹೇಳಿದರು. ಇಡೀ ಕಾರ್ಯವಿಧಾನಕ್ಕೆ ಕುಟುಂಬವು ₹ 15,000 ಕ್ಕಿಂತ ಕಡಿಮೆ ಹಣವನ್ನು ಪಾವತಿಸಿದೆ ಮತ್ತು ವೆಚ್ಚದ 99 ಪ್ರತಿಶತವನ್ನು ವಿಮಾ ಕಂಪನಿಯು ಭರಿಸುತ್ತಿದೆ ಎಂದು ಲಿಯೋ ಹೇಳಿದರು.


ಇದನ್ನೂ ಓದಿ: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!


ವೈರಲ್‌ ಆಯ್ತು ಟ್ವಿಟ್ಟರ್ ಪೋಸ್ಟ್


ಅಕ್ಟೋಬರ್ 19 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್‌ ಈವರೆಗೂ 1,300 ಕ್ಕೂ ಹೆಚ್ಚು ಲೈಕ್‌ಗಳನ್ನು, ನೂರಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ಪೋಸ್ಟ್ ಭಾವನಾತ್ಮಕವಾಗಿಯೂ ಅನೇಕ ನೆಟಿಜನ್‌ಗಳ ಹೃದಯ ಗೆದ್ದಿದೆ. "ಎಷ್ಟು ಅದ್ಭುತವಾಗಿದೆ, ನಿಮ್ಮ ಪೋಷಕರಿಗೆ ಶುಭ ಹಾರೈಸುತ್ತೇನೆ, ಅವರಿಬ್ಬರು ಆರೋಗ್ಯವಾಗಿರಲಿ, ಇಂದಿನ ಯುಗದ ಬೆಸ್ಟ್‌ ಲವ್‌ ಸ್ಟೋರಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

Published by:ವಾಸುದೇವ್ ಎಂ
First published: