HOME » NEWS » Trend » INCOME TAX RETURN YOU WILL NOT BE ABLE TO USE ITR E FILING PORTAL FROM TODAY STG LG

Income Tax Returns: ಇಂದಿನಿಂದ ITR ಇ-ಫೈಲಿಂಗ್ ಪೋರ್ಟಲ್ ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ..! ಕಾರಣ ಇಲ್ಲಿದೆ

ITR e-Filing Portal: ಜೂನ್‌ 7 ರಿಂದ ಹೊಸ ಪೋರ್ಟಲ್‌ ಸಿದ್ಧವಾಗಲಿದ್ರೂ, ಹೊಸ ವ್ಯವಸ್ಥೆಗೆ ಸ್ಪಂದಿಸಲು ತೆರಿಗೆದಾರರಿಗೆ ಸಮಯವನ್ನು ನೀಡಲು ಇಲಾಖೆ ತೀರ್ಮಾನ ತೆಗೆದುಕೊಂಡಿದೆ

news18-kannada
Updated:June 1, 2021, 3:53 PM IST
Income Tax Returns: ಇಂದಿನಿಂದ ITR ಇ-ಫೈಲಿಂಗ್ ಪೋರ್ಟಲ್ ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ..! ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
  • Share this:

ಕೊರೋನಾ ವೈರಸ್‌ ಸಾಂಕ್ರಾಮಿಕದಿಂದ ಹಲವರ ಕೆಲಸ, ಆದಾಯದ ಮೇಲೆ ಹೊಡೆತ ಬಿದ್ದಿದ್ದರೂ, ದೇಶಕ್ಕಾಗಿ ನಾವು ಆದಾಯ ತೆರಿಗೆ ಕಟ್ಟಲೇಬೇಕು. ಈಗಾಗಲೇ 2020 - 21 ಆರ್ಥಿಕ ವರ್ಷದ ಐಟಿ ರಿಟರ್ನ್ಸ್‌ ಸಲ್ಲಿಕೆ ಆರಂಭಗೊಂಡಿದೆ. ಹೀಗಂತಾ, ಈಗಲೇ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡಲು ಮುಂದಾಗ್ಬೇಡಿ, ಕೆಲ ದಿನಗಳ ಕಾಲ ಇದು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಜೂನ್ 1 ರಿಂದ ದೇಶದ ತೆರಿಗೆದಾರರಿಗೆ ಕನಿಷ್ಠ 6 ದಿನಗಳವರೆಗೆ ಆದಾಯ ತೆರಿಗೆ ವೆಬ್‌ಸೈಟ್ ಬಳಸಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಜೂನ್ 7 ರಂದು ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. “ಇದಕ್ಕಾಗಿ ತಯಾರಿ ಉಡಾವಣಾ ಮತ್ತು ವಲಸೆ ಚಟುವಟಿಕೆಗಳಿಗಾಗಿ, www.incometaxindiaefiling.gov.inನಲ್ಲಿ ಈಗಿರುವ ಇಲಾಖೆಯ ಪೋರ್ಟಲ್ ಜೂನ್ 1 ರಿಂದ ಜೂನ್ 6 ರವರೆಗೆ ಆರು ದಿನಗಳವರೆಗೆ ಲಭ್ಯವಿರುವುದಿಲ್ಲ” ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಹಳೆಯ ಪೋರ್ಟಲ್ - www.incometaxindiaefiling.gov.in ನಿಂದ ಹೊಸದಾದ - www.incometaxgov.in ಗೆ ಪರಿವರ್ತನೆಯಾಗಲಿದ್ದು ಜೂನ್ 7 ರಿಂದ ಹೊಸ ವೆಬ್‌ಸೈಟ್‌ ಕಾರ್ಯರೂಪಕ್ಕೆ ಬರಲಿದೆ ಎಂದು ತೆರಿಗೆ ಇಲಾಖೆ ಉಲ್ಲೇಖಿಸಿದೆ.



"ಜೂನ್ 7, 2021 ರಿಂದ ಹೊಸ ಇ- ಫೈಲಿಂಗ್ ಪೋರ್ಟಲ್‌ಗೆ ತೆರಳಲು ನಾವು ಉತ್ಸುಕರಾಗಿದ್ದೇವೆ. ಹೆಚ್ಚು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಹೊಸ ಪೋರ್ಟಲ್ ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು
ವರ್ಧನೆಗಳನ್ನು ಹೊಂದಿರುತ್ತದೆ.


ಇದನ್ನೂ ಓದಿ:Dakshina Kannada: ಹಸ್ತಮುದ್ರದಲ್ಲೇ ನೃತ್ಯ ಮಾಡಿ ಶೈನ್ ಆದ ಪುತ್ತೂರಿನ ಕಲಾವಿದೆ...!

ಸ್ಟೇ ಟ್ಯೂನ್ಡ್‌!'' ಎಂದು ಆದಾಯ ತೆರಿಗೆ ಇಲಾಖೆ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಹ ಅಸ್ತಿತ್ವದಲ್ಲಿರುವ ಪೋರ್ಟಲ್ ಬಳಕೆಗೆ ಲಭ್ಯವಿರುವುದಿಲ್ಲ.


ವೈಯಕ್ತಿಕ ತೆರಿಗೆದಾರರು ತೆರಿಗೆ ರಿಟರ್ನ್ಸ್ ಸಲ್ಲಿಸಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅನ್ನು ಬಳಸುತ್ತಾರೆ. ಜತೆಗೆ, ಆದಾಯ ತೆರಿಗೆ ಇಲಾಖೆಯು ಆನ್‌ಲೈನ್ ಪೋರ್ಟಲ್ ಅನ್ನು ಐಟಿ ನೋಟಿಸ್ ನೀಡಲು, ಪತ್ರಗಳನ್ನು ಮತ್ತು ಪ್ರಶ್ನಾವಳಿಗಳನ್ನು ಸಮನ್ಸ್‌ ಮಾಡಲು ಸಹ ಬಳಸುತ್ತದೆ. ಅಲ್ಲದೆ, ಮೌಲ್ಯಮಾಪನ, ಮೇಲ್ಮನವಿ, ವಿನಾಯಿತಿ ಮತ್ತು ದಂಡಗಳಲ್ಲಿ ದಂಡ ಆದೇಶಗಳನ್ನು ಸಂವಹನ ಮಾಡಲು ಅಧಿಕಾರಿಗಳು ತೆರಿಗೆದಾರರೊಂದಿಗೆ ಸಂವಹನ ನಡೆಸುತ್ತಾರೆ.

ಜೂನ್‌ 7 ರಿಂದ ಹೊಸ ಪೋರ್ಟಲ್‌ ಸಿದ್ಧವಾಗಲಿದ್ರೂ, ಹೊಸ ವ್ಯವಸ್ಥೆಗೆ ಸ್ಪಂದಿಸಲು ತೆರಿಗೆದಾರರಿಗೆ ಸಮಯವನ್ನು ನೀಡಲು ಇಲಾಖೆ ತೀರ್ಮಾನ ತೆಗೆದುಕೊಂಡಿದೆ. ಈ ಹಿನ್ನೆಲೆ ಆದಾಯ ತೆರಿಗೆದಾರರಿಗೆ ಯಾವುದೇ ವಿಚಾರಣೆ ಅಥವಾ ಹೊಂದಾಣಿಕೆಗಳನ್ನು ಸರಿಪಡಿಸಲು ಜೂನ್ 10 ರ ಬಳಿಕವೇ ಮಾಡಿ ಎಂದು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಬಹುದು ಎಂದು ಐಟಿ ಇಲಾಖೆ ಹೇಳಿದೆ.


ಆದಾಯ ತೆರಿಗೆ ರಿಟರ್ನ್ ಇ-ಫೈಲಿಂಗ್ 2.0 ಪೋರ್ಟಲ್ ಅಡಿಯಲ್ಲಿ, ಹೊಸ ಮೊಬೈಲ್ ಅಪ್ಲಿಕೇಶನ್ ಸಹ ಲಭ್ಯವಾಗಲಿದೆ. ತೆರಿಗೆದಾರರು ಪೋರ್ಟಲ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಬಳಕೆದಾರರ ಕೈಪಿಡಿಗಳು ಮತ್ತು ವಿಡಿಯೋಗಳೊಂದಿಗೆ ಹಂತ ಹಂತದ ಮಾರ್ಗದರ್ಶಿಯನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಆನ್-ಪೋರ್ಟಲ್ ತೆರಿಗೆ ಪಾವತಿಗಳಿಗಾಗಿ ವಿವಿಧ ಆಯ್ಕೆಗಳು, ವಿವಿಧ ಲಾಗಿನ್, ಹೆಲ್ಪ್‌ಡೆಸ್ಕ್ ಸಪೋರ್ಟ್‌ ಮತ್ತು ಚಾಟ್‌ಬಾಟ್ ಸೇರಿದಂತೆ ಅನೇಕ ಆಯ್ಕೆಗಳು ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ.
Youtube Video

ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) 2021 ರ ಏಪ್ರಿಲ್ 1 ರಿಂದ 2021 ರ ಮೇ 24 ರವರೆಗೆ 15.45 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 25,301 ಕೋಟಿ ರೂ.ಗಳ ರೀಫಂಡ್‌ ನೀಡಿದೆ ಎಂದು ಆದಾಯ ತೆರಿಗೆ ಇಲಾಖೆ ಕಳೆದ ವಾರ ಮಾಹಿತಿ ನೀಡಿತ್ತು. ಈ ಪೈಕಿ, 15,00,397 ಪ್ರಕರಣಗಳಲ್ಲಿ 7,494 ಕೋಟಿ ರೂ.ಗಳ ಆದಾಯ ತೆರಿಗೆ ಮರುಪಾವತಿ ಮತ್ತು 44,140 ಪ್ರಕರಣಗಳಲ್ಲಿ 17,807 ಕೋಟಿ ರೂ.ಗಳ ಕಾರ್ಪೊರೇಟ್ ತೆರಿಗೆ ಮರುಪಾವತಿ ನೀಡಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
Published by: Latha CG
First published: June 1, 2021, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories