Cafe: ಈ ಕೆಫೆಯ ಸಿಬ್ಬಂದಿಗೆ ಕಿವಿಯೂ ಕೇಳಿಸಲ್ಲ, ಮಾತೂ ಬರಲ್ಲ! ಆದರೂ ಬ್ಯುಸಿನೆಸ್ ಸೂಪರ್

ಈ ವೀಡಿಯೋ ನೋಡಲು ತುಂಬಾನೇ ಹೃದಯಸ್ಪರ್ಶಿಯಾಗಿದೆ, ಏಕೆಂದರೆ ದೆಹಲಿಯ ದಕ್ಷಿಣ ಭಾಗದಲ್ಲಿರುವ ಕೆಫೆಯು ವಿಶೇಷ ಚೇತನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ. ಈ ಕೆಫೆಗೆ ಎಕೋಸ್ ಎಂದು ಹೆಸರಿಡಲಾಗಿದೆ ಮತ್ತು ಇದು ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿದೆ.

ಕೆಫೆಯ ಸಿಬ್ಬಂದಿ

ಕೆಫೆಯ ಸಿಬ್ಬಂದಿ

  • Share this:
ನಾವು ಸಾಮಾನ್ಯವಾಗಿ ತಿಂಡಿ ತಿನ್ನಲು ಅಥವಾ ಸ್ವಾದಿಷ್ಟಕರವಾದ ಊಟವನ್ನು (Food) ಮಾಡಲು ಯಾವುದಾದರೂ ಹೊಟೇಲ್ ಗೆ ಹೋದಾಗ ನಮ್ಮ ಕಣ್ಣಿಗೆ ಬೀಳುವುದೇ ಮೊದಲು ಆ ಊಟದ ಟೇಬಲ್ (Table) ಮೇಲೆ ಇರುವ ಮೆನು ಕಾರ್ಡ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಂತರ ಆ ಹೊಟೇಲ್ (hotel) ನಲ್ಲಿ ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕೆಂದು ನಿರ್ಧರಿಸಿದಾಗ ಅಲ್ಲಿರುವ ವೇಟರ್ ಬಂದು ನಮಗೆ ವಿಚಾರಿಸಿ ನಾವು ಏನು ತಿನ್ನುತ್ತೇವೆ ಎನ್ನುವುದನ್ನು ಒಂದು ಚಿಕ್ಕ ನೋಟ್ ನಲ್ಲಿ ಬರೆದುಕೊಂಡು ಹೋಗಿ ಹೊಟೇಲ್ ನಲ್ಲಿರುವ ಅಡುಗೆ ಮನೆಗೆ ಹೋಗಿ ಅಲ್ಲಿ ಆ ಆರ್ಡರ್ ಅನ್ನು ಕೊಡುತ್ತಾರೆ.

ಇನ್ನು, ನಾವು ಒಂದು ಚಿಕ್ಕ ಹೊಟೇಲ್ ಗಳಿಗೆ ಈ ಬೆಳಿಗ್ಗೆಯ ತಿಂಡಿಯನ್ನು ತಿನ್ನಲು ಹೋದರೆ, ಅಲ್ಲಿ ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿರುವ ವ್ಯಕ್ತಿ ದುಡ್ಡು ತೆಗೆದುಕೊಂಡು ಅಡುಗೆ ಮನೆಯಲ್ಲಿರುವ ಬಾಣಸಿಗರಿಗೆ ‘ಒಂದು ಪ್ಲೇಟ್ ಇಡ್ಲಿ ಕೊಡಪ್ಪಾ ಇವರಿಗೆ’ ಅಥವಾ ‘ಇಲ್ಲಿ ಒಂದು ಮಸಾಲೆ ದೋಸೆ ಕೊಡಿ’ ಅಂತ ಜೋರಾಗಿ ಕಿರುಚಿ ಹೇಳುವ ಸ್ಟೈಲ್ ನಮಗೆ ತುಂಬಾನೇ ಚಿರಪರಿಚಿತವಾಗಿರುತ್ತದೆ.

ವಿಶೇಷ ಚೇತನರಿಗೆ ಮಾತ್ರ ಇಲ್ಲಿ ಕೆಲಸ

ಆದರೆ ಇಲ್ಲೊಂದು ಹೊಟೇಲ್ ಇದೆ, ಇದು ತುಂಬಾನೇ ವಿಶೇಷವಾಗಿದೆ ಎಂದು ಹೇಳಬಹುದು. ಇಲ್ಲಿ ಕೆಲಸ ಮಾಡುವವರಿಗೆ ಮಾತಾಡಲು ಬರುವುದಿಲ್ಲ, ಮತ್ತು ನೀವು ಮಾತಾಡಿದ್ದು ಇವರಿಗೆ ಕೇಳಿಸುವುದಿಲ್ಲ. ವಿಶೇಷ ಸಾಮರ್ಥ್ಯವುಳ್ಳ ಜನರ ಸಬಲೀಕರಣವನ್ನು ಪ್ರದರ್ಶಿಸುವ ಕೆಲವು ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ತುಂಬಾ ನೋಡಿರುತ್ತೇವೆ.

ಹೃದಯಸ್ಪರ್ಶಿ ವಿಡಿಯೋ

ಈ ವೀಡಿಯೋ ನೋಡಲು ತುಂಬಾನೇ ಹೃದಯಸ್ಪರ್ಶಿಯಾಗಿದೆ, ಏಕೆಂದರೆ ದೆಹಲಿಯ ದಕ್ಷಿಣ ಭಾಗದಲ್ಲಿರುವ ಕೆಫೆಯು ವಿಶೇಷ ಚೇತನರನ್ನು (Specially Abled) ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ. ಈ ಕೆಫೆಗೆ ಎಕೋಸ್ ಎಂದು ಹೆಸರಿಡಲಾಗಿದೆ ಮತ್ತು ಇದು ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿದೆ.

36,000 ಕ್ಕೂ ಹೆಚ್ಚು ವೀಕ್ಷಣೆ

ಕೆಫೆಯ ವೀಡಿಯೋವನ್ನು ನಾಲ್ಕು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ‘ವಾಟ್ಸ್‌ಹಾಟ್‌ದೆಹಲಿ’ ಎಂಬ ಹೆಸರಿನ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಇದುವರೆಗೆ 36,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇದಕ್ಕೆ 2,000ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ.

ಸಂಕೇತ ಭಾಷೆಯಲ್ಲಿ ವಿವರಣೆ

"ದಕ್ಷಿಣ ದೆಹಲಿಯ ಈ ಕೆಫೆಯನ್ನು ಮಾತು ಆಡಲು ಬಾರದ, ಮಾತು ಕೇಳಿಸದ ಸಿಬ್ಬಂದಿಗಳಿಂದ ನಡೆಸುತ್ತಿದ್ದಾರೆ" ಎಂದು ವೀಡಿಯೋದಲ್ಲಿನ ಪಠ್ಯವು ಹೇಳುತ್ತದೆ. ವಿಶೇಷ ಕೋಡ್ ಗಳ ಮೂಲಕ ಒಬ್ಬರು ತಮ್ಮ ಆರ್ಡರ್ ಅನ್ನು ಕೆಫೆಯಲ್ಲಿ ಮಾಡಬಹುದು. ವೀಡಿಯೋದಲ್ಲಿ, ಕೆಫೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಸಂಕೇತ ಭಾಷೆಯಲ್ಲಿ ಏನನ್ನಾದರೂ ವಿವರಿಸುತ್ತಾರೆ. ವೀಡಿಯೋದಲ್ಲಿ, ಕೆಫೆಯ ಒಳಾಂಗಣ ಮತ್ತು ಆಹಾರವು ಅದ್ಭುತವಾಗಿ ಕಾಣುತ್ತದೆ.

ಇದನ್ನೂ ಓದಿ: Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು

"ಇದು ಸೂಪರ್ ಅದ್ಭುತ ಆಹಾರವನ್ನು ಹೊಂದಿರುವ ಅದ್ಭುತ ಕೆಫೆಯಾಗಿದೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ವಾವ್... ನಂಬಲಾಗದು" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. "ಈ ಕೆಫೆ ಹಡ್ಸನ್ ಲೇನ್ ನಲ್ಲಿಯೂ ಇದೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೋವನ್ನು ಸಿಮ್ರಾನ್ ವರ್ಮಾ ಎಂಬ ಫುಡ್ ಬ್ಲಾಗರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಫೆ ತನ್ನದೇ ಆದ ಇನ್‌ಸ್ಟಾಗ್ರಾಮ್ ಪುಟವನ್ನು ಸಹ ಹೊಂದಿದೆ. ಇದು ತನ್ನ ಸಿಬ್ಬಂದಿ ಸನ್ನೆಯ ಭಾಷೆಯಲ್ಲಿ ಸಂವಹನ ನಡೆಸುವ ಅನೇಕ ವೀಡಿಯೋಗಳನ್ನು ಅಲ್ಲಿ ಪೋಸ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Eid ಹಬ್ಬದ ಪಾರ್ಟಿಯಲ್ಲಿ 1.45 ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ನುಂಗಿದ! ಕಪಾಟಿನಲ್ಲಿದ್ದ ಚಿನ್ನ ಮಾಯ, ಆಮೇಲೆ?

ಇಂತಹ ಒಂದು ವೀಡಿಯೋದಲ್ಲಿ ಕೆಲಸಗಾರನೊಬ್ಬ ಸನ್ನೆಯ ಭಾಷೆಯಲ್ಲಿ ತನ್ನ ಹೆಸರು ಮತ್ತು ತನಗೆ ಏನು ಮಾಡಲು ಬರುತ್ತದೆ ಎಂದು ಹೇಳಿ, ಅವರು ಒಂದು ಐಸ್ಕ್ರೀಮ್ ಶೇಕ್ ತಯಾರಿಸುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದಾಗಿದೆ.
Published by:Divya D
First published: