• Home
  • »
  • News
  • »
  • trend
  • »
  • Viral Video: ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ... ಕಾಮಿಡಿ ವಿಡಿಯೋ ಸಖತ್ ವೈರಲ್

Viral Video: ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ... ಕಾಮಿಡಿ ವಿಡಿಯೋ ಸಖತ್ ವೈರಲ್

ವೈರಲ್  ಆದ ಜೋಡಿ..

ವೈರಲ್ ಆದ ಜೋಡಿ..

ವರನ ಕುತ್ತಿಗೆಗೆ ಹಾರವನ್ನು ಹಾಕುವ ವಧು, ನಂತರ ಬಗ್ಗಿ ವರನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾಳೆ. ನಂತರ ವರನು, ವಧುವಿನ ಕೊರಳಿಗೆ ಹಾರ ಹಾಕಿ ಪಾದಕ್ಕೆ ನಮಸ್ಕರಿಸಿದ ವಿಡಿಯೋ ವೈರಲ್ ಆಗಿದೆ.

  • Share this:

    ಮದುವೆ (Wedding) ಅಂದ್ರೆ ಸಖತ್ ಮಸ್ತಿ ಇರುತ್ತದೆ. ಹಾಗೆಯೇ ಭಾರತೀಯ (Indian) ಸಂಪ್ರದಾಯದ ಮದುವೆಗಳು ಸಾಕಷ್ಟು ವಿಶಿಷ್ಟ ಮತ್ತು ವಿಭಿನ್ನವಾಗಿವೆ. ಮದುವೆಯಲ್ಲಿ ನಡೆಯುವ ಸಂಪ್ರದಾಯಗಳು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಒಂದೊಂದು ಸಮುದಾಯ ಒಂದೊಂದು ರೀತಿಯ ಮದುವೆ ಪದ್ಧತಿ ಮತ್ತು ಸಂಪ್ರದಾಯವನ್ನು ಆಚರಿಸುತ್ತವೆ. ಇನ್ನು ಮದುವೆಯಲ್ಲಿ ಆಗಾಗ್ಗೆ ಆಸಕ್ತಿದಾಯಕ ಮತ್ತು ತಮಾಷೆಯ ವೀಡಿಯೊಗಳು (Video) ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಲೇ ಇರುತ್ತವೆ. ಮದುವೆ ಮತ್ತು ವಧು-ವರರ ವಿಡಿಯೋಗಳು ಕೂಡ ತುಂಬಾ ವೈರಲ್ (Viral) ಆಗಿವೆ. ಈಗ ವಧು-ವರರು ಮಾಲೆ ಹಾಕುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಅನೇಕ ರೀತಿಯಲ್ಲಿ ಕಮೆಂಟ್ (Comment) ಮಾಡಿದ್ದಾರೆ.  


    ವಧು-ವರರ ಹಾರ ಬದಲಾಯಿಸುವ ವಿಡಿಯೋ ವೈರಲ್


    ಈ ವೀಡಿಯೊವನ್ನು @KaptanHindostan ಹೆಸರಿನ ಖಾತೆಯೊಂದಿಗೆ Twitter ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ವಧು ಮೊದಲು ವರನ ಕುತ್ತಿಗೆಗೆ ಹಾರವನ್ನು ಹಾಕುತ್ತಾಳೆ. ನಂತರ ಬಗ್ಗಿ ವರನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾಳೆ. ಇದಾದ ನಂತರ ವರನು, ವಧುವಿನ ಕೊರಳಿಗೆ ಹಾರವನ್ನು ಹಾಕುತ್ತಾನೆ. ನಂತರ ತಾನೂ ಬಗ್ಗಿ ವಧುವಿನ ಪಾದಕ್ಕೆ ನಮಸ್ಕರಿಸಲು ಹೋಗುತ್ತಾನೆ. ಆಗ ವಧು ಹಿಂದೆ ಸರಿಯುತ್ತಾಳೆ. ಮದುವೆಗೆ ಬಂದಿದ್ದ ಜನ ಸಿಳ್ಳೆ, ಚಪ್ಪಾಳೆ ಹಾಗೂ ಕೇಕೆ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.



    ವರನು ವಧುವಿನ ಪಾದಗಳನ್ನು ಮುಟ್ಟಿದಾಗ


    ವಧುವಿಗೆ ಮಾಲೆ ಹಾಕಿದ ಬಳಿಕ ವರ ಆಕೆಯ ಪಾದಗಳನ್ನು ಸ್ಪರ್ಶಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತಿದೆ. ಇದನ್ನು ನೋಡಿದ ವಧು ತನ್ನ ಪಾದಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾಳೆ. ಇದನ್ನು ನೋಡಿದ ಸುತ್ತಮುತ್ತ ನಿಂತವರು ಅಯ್ಯೋ ಇದೇನು..? ಹುಡುಗ, ಹುಡಗಿ ಕಾಲಿಗೆ ನಮಸ್ಕಾರ ಮಾಡಿದ ಅಂತ ಬೆಚ್ಚಿಬಿದ್ದಿದ್ದಾರೆ.


    ಇದನ್ನೂ ಓದಿ: ಕಿಟಕಿ ಸ್ವಚ್ಛಗೊಳಿಸಲು ಅಪಾಯವನ್ನು ಮೈಮೇಲೆ ಎಳೆದುಕೊಂಡ ಮಹಿಳೆ


    ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ 7 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೀಡಿಯೊದ ಶೀರ್ಷಿಕೆಯು - "ಉಫ್ ಯೇ ಲವ್" ಎಂದು ಇದ್ದು ಸಾಕಷ್ಟು ವೈರಲ್ ಆಗಿದೆ.


    'ಇದರಲ್ಲಿ ಏನು ತಪ್ಪು':


    ಈ ವೈರಲ್ ವೀಡಿಯೊಗೆ ಎಲ್ಲಾ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಹೇಳಿದ್ದಾರೆ- 'ಇದರಲ್ಲಿ ಏನು ತಪ್ಪು'? ಎಂದು ಪ್ರಶ್ನಿಸಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು - 'ವರ, ವಧುವಿನ ಕಾಲಿಗೆ ನಮಸ್ಕರಿಸಿದ್ದು ಉದ್ದೇಶಪೂರ್ವಕವಾಗಿ ಆಗಿದ್ದರೆ, ವರನು ಸರಿಯಾದ ಕೆಲಸ ಮಾಡಿದ್ದಾನೆ.' ಎಂದು ಬರೆದುಕೊಂಡಿದ್ದಾರೆ.


     ಆದಾಗ್ಯೂ, ಅನೇಕರು, ಸಂಪ್ರದಾಯದಂತೆ ವರನ ಪಾದಗಳನ್ನು ವಧು ಮುಟ್ಟಿ ನಮಸ್ಕರಿಸಬೇಕು ಎಂದು ಹೇಳಿದ್ದಾರೆ. ವೈರಲ್ ವೀಡಿಯೊಗೆ ಇನ್ನೊಬ್ಬರು ಕಾಮೆಂಟ್ ಮಾಡಿದ್ದು, 'ಈ ಯುವಕ ಮುಗ್ಧವಾಗಿ ವಧುವಿನ ಪಾದಗಳನ್ನು ಮುಟ್ಟಿದ್ದಾನೆ’ ಎಂದು ಹೇಳಿದ್ದಾರೆ.


    ಮದುವೆ ಮಂಟಪದಲ್ಲಿ ಓಡಾಡಿದ್ದ ಕರಡಿ ಕುಟುಂಬ


    ಇನ್ನು ಮೂರು ದಿನಗಳ ಹಿಂದೆ ಒಂದು ಮದುವೆ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಕರಡಿಯೊಂದರ ಕುಟುಂಬ ಮದುವೆ ಸ್ಟೇಜ್ ಮೇಲೆ ಓಡಾಡಿದ್ದವು. ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ಪಾರ್ಟಿಯಲ್ಲಿ ಈ ಘಟನೆ ಸಂಭವಿಸಿತ್ತು. ತಾಯಿ ಕರಡಿ ಮತ್ತು ಅದರ ಮರಿ ಮದುವೆ ಮನೆಗೆ ಆಗಮಿಸಿ ವೇದಿಕೆಯ ಮೇಲೆ ಅಡ್ಡಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.


    ಇದನ್ನೂ ಓದಿ: ಮದ್ವೆಯಲ್ಲಿ ಉಂಡು, ತಿಂದು ಹೊಡೆದಾಡಿದ್ರು! ಈ Marriage ಗಲಾಟೆ ಹೇಗಿತ್ತು ನೋಡಿ


    ಮುಖ್ಯ ವೇದಿಕೆಯ ಕಡೆಗೆ ಹೋಗಿ ತನ್ನ ಮೂಗನ್ನು ನೆಲಕ್ಕೆ ಸವರಿಕೊಂಡು ಹಿಂತಿರುಗುತ್ತದೆ.  ಅದೃಷ್ಟವಶಾತ್, ಕರಡಿ ಮತ್ತು ಅದರ ಮರಿಗಳು ಒಳಗೆ ಪ್ರವೇಶಿಸಿದ ಸಮಯದಲ್ಲಿ ಅತಿಥಿಗಳು ಯಾರೊಬ್ಬರೂ ಗಾಯಗೊಂಡಿಲ್ಲ. ಸ್ಥಳದಲ್ಲಿದ್ದ ಕೆಲಸಗಾರನು ವಿಡಿಯೋವನ್ನು ಚಿತ್ರೀಕರಿಸಿದ್ದರು.

    Published by:renukadariyannavar
    First published: