HOME » NEWS » Trend » IN HAPPY BHUTAN PRIME MINISTER LOTAY TSHERING IS A DOCTOR ON SATURDAYS

ವಾರವೆಲ್ಲ ದೇಶ ಸೇವೆ, ವಾರಾಂತ್ಯದಲ್ಲಿ ರೋಗಿಗಳ ಆರೈಕೆ; ಭೂತಾನ್ ಪ್ರಧಾನಿಯ ಬಗ್ಗೆ ನಿಮಗೆಷ್ಟು ಗೊತ್ತು?

ವಾರದ ಶನಿವಾರದಂದು ರೋಗಿಗಳ ಕ್ಷೇಮವನ್ನು ವಿಚಾರಿಸುವ ಡಾ. ಲೊತಯ್​ ‘ ಕೆಲ ಮಂದಿಗೆ ಗಾಲ್ಫ್​ ಆಡಿದರೆ ಇಷ್ಟ, ಇನ್ನೂ ಕೆಲವರಿಗೆ ಬಿಲ್ಲುಗಾರಿಕೆ ಇಷ್ಟ. ನನಗೆ ನನ್ನ ರೋಗಿಗಳ ಆರೈಕೆ ಮಾಡುವುದು ಇಷ್ಟವೆಂದು ಹೇಳುತ್ತಾರೆ‘

news18
Updated:June 23, 2020, 12:33 PM IST
ವಾರವೆಲ್ಲ ದೇಶ ಸೇವೆ, ವಾರಾಂತ್ಯದಲ್ಲಿ ರೋಗಿಗಳ ಆರೈಕೆ; ಭೂತಾನ್ ಪ್ರಧಾನಿಯ ಬಗ್ಗೆ ನಿಮಗೆಷ್ಟು ಗೊತ್ತು?
ಡಾ.ಲೊಟೆಯ್​ ತೈರಿಂಗ್
  • News18
  • Last Updated: June 23, 2020, 12:33 PM IST
  • Share this:
ವಾರವಿಡೀ ದೇಶ ಸೇವೆ ಮಾಡಿ, ವಾರಂತ್ಯದಲ್ಲಿ ವೈದ್ಯರಾಗಿ ರೋಗಿಗಳ ಸೇವೆ ಮಾಡುವ ಪ್ರಧಾನಿ ಬಗ್ಗೆ ನಿಮಗೆ ತಿಳಿದಿದೆಯೇ.?

ಹೌದು, ಭೂತಾನ್​ ದೇಶದ ಡಾ. ಲೊತಯ್​ ಶೆರಿಂಗ್​​ 2018 ಚುನಾವಣೆಯಲ್ಲಿ ಆಯ್ಕೆಯಾಗಿ ಪ್ರಧಾನಿ ಪಟ್ಟವೇರಿದ್ದರು. ಆದರೆ, ಪ್ರಧಾನಿಯಾದರೂ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದ ಲೊತಯ್​ ಈಗಲೂ ಜಿಗ್ಮೆ ದೊರ್ಜಿ ವಂಗ್​ ಚಕ್​​ ​ ನ್ಯಾಷನಲ್​​​ ರೆಫರೆಲ್​ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಬಾಂಗ್ಲಾದೇಶ, ಜಪಾನ್​, ಆಸ್ಟ್ರೇಲಿಯಾ ಹಾಗೂ ಅಮೇರಿಕಾ ತರಬೇತಿ ಪಡೆದಿರುವ ಡಾ.ಲೊತಯ್​. 2013ರ ನಂತರ ರಾಜಕೀಯ ಜೀವನದತ್ತ ಒಲವು ತೋರಿಸಿದ್ದರು. 2018 ರ ವೇಳೆಗೆ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆಯಾದರು.

ವಾರದ ಶನಿವಾರದಂದು ರೋಗಿಗಳ ಕ್ಷೇಮವನ್ನು ವಿಚಾರಿಸುವ ಡಾ. ಲೊತಯ್​ ‘ ಕೆಲ ಮಂದಿಗೆ ಗಾಲ್ಫ್​ ಆಡಿದರೆ ಇಷ್ಟ, ಇನ್ನೂ ಕೆಲವರಿಗೆ ಬಿಲ್ಲುಗಾರಿಕೆ ಇಷ್ಟ. ನನಗೆ ನನ್ನ ರೋಗಿಗಳ ಆರೈಕೆ ಮಾಡುವುದೇ ಇಷ್ಟವೆಂದು ಹೇಳುತ್ತಾರೆ‘

ಪ್ರಧಾನಿ ಲೊತಯ್​ ವಾರದ ಪ್ರತಿ ಶನಿವಾರದಂದು ಆಸ್ಪತ್ರೆಯ ರೋಗಿಗಳ ಸೇವೆಗೆ ಸಮಯವನ್ನು ಮೀಸಲಿಡುತ್ತಾರೆ. ಗುರುವಾರದಂದು ಡಾಕ್ಟರ್​ ತರಬೇತಿ ಪಡೆಯುವವರಿಗೆ ಮತ್ತು ಇತರ ವೈದ್ಯರೊಂದಿಗೆ ಸಲಹೆ ನೀಡುತ್ತಾರೆ. ರವಿವಾರದಂದು ಕುಟುಂಬದೊಂದಿಗೆ ಸಮಯ ನೀಡುತ್ತಾರೆ.

ಇನ್ನು ವಾರದ ಹೆಚ್ಚಿನ ಸಮಯ ದೇಶ ಸೇವೆಯನ್ನು ಮಾಡಿದರೆ ವಾರಂತ್ಯದಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುತ್ತೇನೆ. ಆದರೆ ಸರಕಾರದ ಕೆಲಸದ ನಿಮಿತ್ತ ಕಚೇರಿಯತ್ತ ಸಾಗುವಾಗ ಆಸ್ಪತ್ರೆಗೆ ತೆರಳುವ ಮನಸ್ಸಾಗುತ್ತದೆ ಎಂದು ಪ್ರಧಾನಿ ಲೊತಯ್ ಹೇಳುತ್ತಾರೆ.
First published: May 11, 2019, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories