Garlic As Down Payment: ಹಣ ಅಲ್ಲ, ಬೆಳ್ಳುಳ್ಳಿ, ಕಲ್ಲಂಗಡಿ ಕೊಟ್ಟು ಮನೆ ಖರೀದಿಸ್ತಿದ್ದಾರೆ ಚೀನಾ ಜನ!

China Garlic As Down Payment: ಒಂದು ಕಂಪನಿಯು 30 ಮನೆಗಳ ಮಾರಾಟ ಡೀಲ್‌ಗಳಲ್ಲಿ ಡೌನ್ ಪೇಮೆಂಟ್ ಆಗಿ 516 ಕಿಲೋ ಬೆಳ್ಳುಳ್ಳಿಯನ್ನು ಸಂಗ್ರಹಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೆರೆಯ ರಾಷ್ಟ್ರ ಚೀನಾದಲ್ಲಿ (China) ಮನೆ ಖರೀದಿಸಲು ಬಳಸುತ್ತಿರುವ ವಿಲಕ್ಷಣವಾದ ವ್ಯವಹಾರವು ಈಗ ಎಲ್ಲೆಡೆ ಸುದ್ದಿಯಾಗಿದೆ. ಕರೆನ್ಸಿ (Currency) ಬದಲಿಗೆ, ಆಸ್ತಿ, ಮನೆ ಖರೀದಿಗೆ ಡೌನ್ ಪೇಮೆಂಟ್ (Down Payment) ಆಗಿ ಹಣ್ಣುಗಳು (Fruits) ಮತ್ತು ತರಕಾರಿಗಳನ್ನು (Vegetables) ಸ್ವೀಕರಿಸಲಾಗುತ್ತಿದೆ. ಬೆಳ್ಳುಳ್ಳಿ, ಕರಬೂಜುಗಳು ಮತ್ತು ಪೀಚ್​​ಗಳನ್ನು ಕಂಪನಿಗಳು ತೆಗೆದುಕೊಳ್ಳುತ್ತಿವೆ. ಹೊಸ ಮನೆಗಳನ್ನು (New Home) ಖರೀದಿಸಲು ಹೆಚ್ಚಿನ ಜನರನ್ನು ಆಕರ್ಷಿಸುವ ಸಲುವಾಗಿ ಕಂಪನಿಗಳು (Company) ಈ ನವೀನ ತಂತ್ರವನ್ನು ಅನುಸರಿಸುತ್ತಿವೆ. ಈ ತಂತ್ರಗಳ ಹಿಂದಿನ ಕಾರಣವೆಂದರೆ ಚೀನಾದಲ್ಲಿ ಸುಮಾರು ಒಂದು ವರ್ಷದಿಂದ ವಸತಿ ಕಟ್ಟಡಗಳ ಖರೀದಿ ಇಳಿಮುಖವಾಗಿದೆ. ಅಭಿವೃದ್ಧಿಪಡಿಸಿದ ಪ್ರಮುಖ ಆಸ್ತಿ (Property) ಖರೀದಿ ಇಲ್ಲದೆ ಸಾಲದಲ್ಲಿವೆ.

ಆಸ್ತಿಗಾಗಿ ಪೀಚ್ ಪಾವತಿಸಿ

ಡೌನ್ ಪೇಮೆಂಟ್‌ಗಳಲ್ಲಿ 188,888 ಚೈನೀಸ್ ಯುವಾನ್ ($28,218 ಅಥವಾ ರೂ. 22 ಲಕ್ಷಕ್ಕಿಂತ ಹೆಚ್ಚು) ಮೊತ್ತವನ್ನು ಬ್ಯಾಲೆನ್ಸ್ ಮಾಡಲು ಪೀಚ್‌ ಹಣ್ಣುಗಳ ಮೂಲಕ ಪಾವತಿ ಮಾಡಬಹುದು ಎಂದು ಚೀನಾದ ನಗರವಾದ ವುಕ್ಸಿಯ ಡೆವಲಪರ್ ಕಳೆದ ವಾರ ಎನೌನ್ಸ್ ಮಾಡಿದ್ದು ಈ ವಿಚಾರ ಈಗ ಎಲ್ಲಾ ಕಡೆಗಳಲ್ಲಿಯೂ ಸುದ್ದಿಯಾಗುತ್ತಿದೆ.

ನಿಮ್ಮಲ್ಲಿ ಬೆಳ್ಳುಳ್ಳಿ ಇದೆಯಾ? ಹಾಗಿದ್ದರೆ ಮನೆ ಖರೀದಿಸಬಹುದು!

ಅಲ್ಲಿನ ಪ್ರಮುಖ ಬೆಳ್ಳುಳ್ಳಿ-ಉತ್ಪಾದಿಸುವ ಪ್ರದೇಶದಲ್ಲಿ ತಿಂಗಳಲ್ಲಿ 16-ದಿನದ ಅಭಿಯಾನದ ಭಾಗವಾಗಿ ಸೆಂಟ್ರಲ್ ಚೀನಾ ಮ್ಯಾನೇಜ್‌ಮೆಂಟ್ ಸಂಸ್ಥೆಯು ಬೆಳ್ಳುಳ್ಳಿಯನ್ನು ಹೋಮ್ ಡೌನ್ ಪೇಮೆಂಟ್ ಆಗಿ ಸ್ವೀಕರಿಸಿದೆ. ಇದಂತೂ ಬೆಳ್ಳುಳ್ಳಿ ಬೆಳೆಗಾರರಿಗೆ ವರದಾನವಾಗಿದೆ.

ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಹೆಚ್ಚಿನ ದರದಲ್ಲಿ ಖರೀದಿ

ಕಂಪನಿಯು ಉತ್ಪನ್ನವನ್ನು ಮಾರುಕಟ್ಟೆಯ ಬೆಲೆಗಿಂತ ಮೂರು ಪಟ್ಟು ಹೆಚ್ಚು ಮೌಲ್ಯ ಕೊಟ್ಟು ಪಡೆಯುತ್ತಿದೆ. ವಿಲಕ್ಷಣವಾದ ಡೌನ್ ಪೇಮೆಂಟ್ ವ್ಯವಹಾರದಲ್ಲಿ 30 ಮನೆಗಳಿಗೆ ಡೀಲ್‌ಗಳಲ್ಲಿ ಈಗ 516 ಕಿಲೋ ಬೆಳ್ಳುಳ್ಳಿ  ಸಂಗ್ರಹಿಸಲಾಗಿದೆ.

ಕಲ್ಲಂಗಡಿ ಕೊಡಿ, ಮನೆ ಪಡೆಯಿರಿ

5,000 ಕೆಜಿಯಷ್ಟು ಕಲ್ಲಂಗಡಿ ಹಣ್ಣನ್ನು ಕೊಟ್ಟು ನಾನ್‌ಜಿಂಗ್‌ನಲ್ಲಿ ಇನ್ನೊಬ್ಬ ಡೆವಲಪರ್‌ನಿಂದ ಮನೆಗಳನ್ನು ಖರೀದಿಸಲಾಗಿದೆ. ಕಂಪನಿಯು 5,000 ಕೆಜಿ ಹಣ್ಣುಗಳನ್ನು 100,000 ಚೈನೀಸ್ ಯುವಾನ್ ಮೌಲ್ಯದಲ್ಲಿ ಸಂಗ್ರಹ ಮಾಡಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ನಿಗದಿಪಡಿಸಲಾದ ಬೆಲೆಗಿಂತ ಹಲವು ಪಟ್ಟು ಹೆಚ್ಚು. ಕಂಪನಿಯು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಪ್ರಚಾರವನ್ನು ಮುಕ್ತಾಯಗೊಳಿಸಿದೆ ಎಂದು ಸರ್ಕಾರಿ-ಚೀನೀ ಮಾಧ್ಯಮ ವರದಿ ಮಾಡಿದೆ. ಈಗ ಕೆಲವು ಆಫರ್‌ಗಳನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ: Lalan Kumar: 33 ತಿಂಗಳುಗಳ 24 ಲಕ್ಷ ರೂ. ಸಂಬಳವನ್ನು ಹಿಂತಿರುಗಿಸಿದ ಉಪನ್ಯಾಸಕ! ಇದಪ್ಪಾ ಪ್ರಾಮಾಣಿಕತೆ ಅಂದ್ರೆ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಎಲ್ಲಾ ಪ್ರಚಾರದ ಪೋಸ್ಟರ್‌ಗಳನ್ನು ಅಳಿಸಲು ನಮಗೆ ತಿಳಿಸಲಾಗಿದೆ ಎಂದು ನಾನ್‌ಜಿಂಗ್ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಈ ಕೆಲವು ವಿಶೇಷ ಆಫರ್​ಗಳನ್ನು ಈಗ ಹಿಂತೆಗೆದುಕೊಳ್ಳಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಚೀನಾದಲ್ಲಿ ಆಸ್ತಿ ಮಾರಾಟ ಉದ್ಯಮಕ್ಕೆ ಹೊಡೆತ

ಚೀನಾದ ಪ್ರಾಪರ್ಟಿ ಸೆಕ್ಟರ್ ಸಾಲಗಳ ಭಾರದಲ್ಲಿ ಕುಸಿಯಲು ಪ್ರಾರಂಭಿಸಿದೆ. ಕೊರೋನವೈರಸ್‌ನ ಹೊಸ ರೂಪಾಂತರದಿಂದಾಗಿ ವ್ಯಾಪಕವಾದ ಲಾಕ್‌ಡೌನ್‌ಗಳನ್ನು ಮಾಡಿದಾಗ ಆರ್ಥಿಕ ಚಟುವಟಿಗೆ ಬಲವಾದ ಏಟು ಬಿದ್ದಿದೆ. ಲಾಕ್​ಡೌನ್​ನಿಂದ ತತ್ತರಿಸಿದ್ದ ಡ್ರ್ಯಾಗನ್ ರಾಷ್ಟ್ರದಲ್ಲಿ ಮನೆ ಖರೀದಿ ಮಾಡಲು ಜನರು ಮುಂದೆ ಬರುತ್ತಿರಲಿಲ್ಲ. ಇದು ಪ್ರಾಪರ್ಟಿ ಸೇಲ್ ಕಂಪನಿಗಳನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿತ್ತು.

ಇದನ್ನೂ ಒದಿ: Bank New Rule: ಈ ಬ್ಯಾಂಕ್​ ಚೆಕ್​ ನಿಯಮದಲ್ಲಿ ಭಾರೀ ಬದಲಾವಣೆ! ಮಿಸ್​ ಮಾಡದೇ ನೋಡಿ

ಹೊಸ ಮನೆ ಮಾರಾಟದಲ್ಲಿ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ಬೆಲೆಗ ಭಾರೀ ಕುಸಿತ ಕಂಡಿದೆ. ಈಗಾಗಲೇ ದುರ್ಬಲವಾದ ಆರ್ಥಿಕತೆ ಭವಿಷ್ಯವನ್ನು ಮತ್ತಷ್ಟು ದೊಡ್ಡ ಅಪಾಯಕ್ಕೆ ತಳ್ಳಿದೆ. ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡಲು ಚೀನಾ ಮಂದಿ ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಟ್ರಿಕ್ ಬಳಸಿ ಹೂಡಿಕೆದಾರರು ಪ್ರಾಪರ್ಟಿ ಸೇಲ್​ಗೆ ಯತ್ನಿಸಿದ್ದಾರೆ.
Published by:Divya D
First published: