Honey Bees: ಬೆಂಗಳೂರಿನ ಕಟ್ಟಡಗಳಲ್ಲೀಗ ಜೇನು ನೊಣಗಳದ್ದೇ ಕಾರುಬಾರು; ಇದರ ಹಿಂದಿನ ಗುಟ್ಟೇನು ಗೊತ್ತಾ ಇಲ್ಲಿದೆ ನೋಡಿ

ಈ ದಿನಗಳಲ್ಲಿ ನಗರದ ಎತ್ತರದ ಕಟ್ಟಡಗಳಲ್ಲಿ ಜೇನು ನೊಣಗಳ, ಅದರಲ್ಲೂ ಮುಖ್ಯವಾಗಿ ರಾಕ್ ಜೇನು ನೊಣಗಳ (ಆಪಿಸ್ ಡೋರ್‍ಸಾಟ) ಗೂಡುಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ಕಾರಣದಿಂದಾಗಿ ಅಂತಹ ಕಟ್ಟಡಗಳ ನಿವಾಸಿಗಳು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ.

ಜೇನು ನೊಣಗಳು

ಜೇನು ನೊಣಗಳು

  • Share this:
ಬೆಂಗಳೂರು : ಈ ದಿನಗಳಲ್ಲಿ ನಗರದ ಎತ್ತರದ ಕಟ್ಟಡಗಳಲ್ಲಿ (Buildings) ಜೇನು ನೊಣಗಳ (Honey Bees), ಅದರಲ್ಲೂ ಮುಖ್ಯವಾಗಿ ರಾಕ್ ಜೇನು ನೊಣಗಳ (ಆಪಿಸ್ ಡೋರ್‍ಸಾಟ) ಗೂಡುಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ಕಾರಣದಿಂದಾಗಿ ಅಂತಹ ಕಟ್ಟಡಗಳ ನಿವಾಸಿಗಳು (Residents) ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಮರಗಳ ಸಂಖ್ಯೆ ಕಡಿಮೆ ಆಗಿರುವುದು ಮತ್ತು ತ್ರೀಡಿ ವಾಸ್ತುಶಿಲ್ಪದ ಕಟ್ಟಡಗಳಿಗೆ ಒತ್ತು ನೀಡಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. 3ಡಿ ಜಾಗಗಳೆಂದರೆ, ಮೂರು ಬದಿಗಳನ್ನು ರಚನೆಗಳಿಂದ ಮುಚ್ಚಲಾಗಿರುವ ಕಟ್ಟಡದ ಮೂಲೆಗಳಾಗಿವೆ. ಅಲ್ಲಿ ಸಾಕಷ್ಟು ನೆರಳು, ಕಡಿಮೆ ಸೂರ್ಯನ ಬೆಳಕು (Sunlight) ಇರುತ್ತದೆ. ಜೇನು ನೊಣಗಳಿಗೆ ಇಂತಹ ಜಾಗಗಳು (Place), ಗೂಡುಗಳನ್ನು ನಿರ್ಮಿಸಲು ಅನುಕೂಲಕಾರಿಯಾಗಿವೆ ಮತ್ತು ಅವು ಹನಿ ಬಜಾರ್ಡ್‍ನಂತಹ ಪರಭಕ್ಷಕಗಳಿಂದಲೂ ರಕ್ಷಣೆ ಪಡೆಯಲು ಸಾಧ್ಯವಿದೆ.

8,000 ಜೇನುಗೂಡು ಸಮೂಹಗಳು
ಈ ದಿನಗಳಲ್ಲಿ, ವಾಸ್ತು ವಿನ್ಯಾಸಗಳಲ್ಲಿ, ಗ್ಲಾಸ್ ರಚನೆಗಳು, ಹವಾ ನಿಯಂತ್ರಕಗಳು, ಸಿಮೆಂಟ್ ಮತ್ತು ಕಲ್ಲಿನ ಬಳಕೆ ಹೆಚ್ಚಿರುವುದರಿಂದ ಮತ್ತು ಕಟ್ಟಡದ ಸೌಂದರ್ಯ ಹೆಚ್ಚಲೆಂದು ಕಂಬಗಳನ್ನು ನಿರ್ಮಿಸುವುದರಿಂದ ಕಟ್ಟಡದ ಮೂಲೆಗಳು ತಂಪಾಗಿರುತ್ತದೆ. ಹಾಗಾಗಿ ಇಂತಹ ಜಾಗಗಳು ಜೇನು ನೊಣಗಳಿಗೆ ತಮ್ಮ ಗೂಡುಗಳನ್ನು ನಿರ್ಮಿಸಿಕೊಳ್ಳಲು ಸೂಕ್ತವಾಗಿರುತ್ತದೆ ಎನ್ನುತ್ತಾರೆ ಕೀಟ ಶಾಸ್ತ್ರಜ್ಞರು.

ಎತ್ತರದ ಬಾಡಿಗೆ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಜೇನು ಗೂಡು ಸಮೂಹಗಳ ಸಂಖ್ಯೆ ಹೆಚ್ಚುತ್ತಿರುವುದು ಆಲ್ ಇಂಡಿಯಾ ಕೌನ್ಸಿಲ್ ಆಫ್ ಹನಿಬೀಸ್‍ನ ಗಮನಕ್ಕೆ ಬಂದಿದ್ದು, ಆ ಕುರಿತ ಕಾರಣಗಳು ಮತ್ತು ಅವುಗಳ ಸಂಖ್ಯೆಗಳ ಪರಿಶೀಲನೆಗೆ ಹೆಜ್ಜೆ ಇಡುವಂತೆ ಮಾಡಿದೆ. ಸಮೀಕ್ಷೆ ಒಂದರ ಪ್ರಕಾರ, 2021ರಲ್ಲಿ ಕೇವಲ ಬೆಂಗಳೂರು ಒಂದರಲ್ಲೇ ಅಂತಹ 8,000 ಜೇನುಗೂಡು ಸಮೂಹಗಳು ಕಂಡು ಬಂದಿವೆ.

ಮಲೆನಾಡು ಭಾಗಗಳಲ್ಲಿ ಕ್ಷೀಣಿಸುತ್ತಿರುವ ಜೇನು ನೊಣಗಳ ಉಪಸ್ಥಿತಿ
“ಎತ್ತರದ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು 3ಡಿ ಕನ್‍ಸ್ಟ್ರಕ್ಷನ್ ವಿನ್ಯಾಸಗಳು ಜೆನ್ನೋಣಗಳ ಅಗತ್ಯಗಳಿಗೆ ತಕ್ಕುದಾಗಿವೆ. ಮಲೆನಾಡು ಭಾಗಗಳಲ್ಲಿ ಮತ್ತು ಕಾಫಿ ಎಸ್ಟೇಟುಗಳಲ್ಲಿ ಅವುಗಳ ಉಪಸ್ಥತಿ ಕಡಿಮೆ ಆಗುತ್ತಿದೆ ಎಂಬುವುದು ಕೂಡ ಅಘಾತಕಾರ ಸಂಗತಿ. ಬಿಹಾರ, ಪಶ್ಚಿಮ ಬಂಗಾಳ, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳ ಕಾರ್ಮಿಕರ ಲಭ್ಯತೆ ಕುಸಿತಗೊಂಡಿರುವುದು ಮತ್ತು ಕೀಟನಾಶಕಗಳ ಅತ್ಯಧಿಕ ಬಳಕೆಯೇ ಇದಕ್ಕೆ ಕಾರಣ” ಎಂದು ಹೇಳುತ್ತಾರೆ ಜನಪ್ರಿಯ ಕೀಟ ಶಾಸ್ತ್ರಜ್ಞ ಅಕ್ಷಯ್ ಚಕ್ರವರ್ತಿ.

ಇದನ್ನೂ ಓದಿ: Viral Video: ಈ ನಾಯಿಗಿರೋ ನಿಯತ್ತು ಮನುಷ್ಯರಿಗೂ ಇಲ್ಲ ನೋಡಿ! ಎಷ್ಟು ಚೆಂದ ಅಲ್ವಾ ಶ್ವಾನಗಳ ಪ್ರೀತಿ?

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ (ಯುಎಎಸ್) ನ ಆಗ್ರೋಫಾರೆಸ್ಟ್ರಿಯ ಆಲ್ ಇಂಡಿಯಾ ಕೋಆರ್ಡಿನೇಟೆಡ್ ರಿಸರ್ಚ್ ಪ್ರಾಜೆಕ್ಟ್‍ನ ವಿಜ್ಞಾನಿ ಡಾ. ಕೆ ಟಿ ವಿಜಯ್ ಕುಮಾರ್ ಅವರು ಹೇಳುವ ಪ್ರಕಾರ, ಇದು ಜೇನು ನೊಣಗಳ ವಲಸೆ ಋತುವಿನ ಒಂದು ಭಾಗವಾಗಿದೆ, ಹಾಗಾಗಿ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಬಹುದಾಗಿದೆ.

ತಾಪಮಾನದ ನಿರ್ವಹಣೆ ಮಾಡಲು ಯೋಗ್ಯವಿರುವ ಜಾಗ
ಅವುಗಳಿಗೆ ಸುರಕ್ಷಿತವಾಗಿ ಗೂಡುಗಳನ್ನು ನಿರ್ಮಿಸಲು ಮತ್ತು ಅದರೊಳಗೆ 32- 34 ಡಿಗ್ರಿಗಳಷ್ಟು ತಾಪಮಾನದ ನಿರ್ವಹಣೆ ಮಾಡಲು ಯೋಗ್ಯವಿರುವ ಜಾಗಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ಎತ್ತರದ ಕಟ್ಟಡಗಳನ್ನು ಅವುಗಳು ಸುರಕ್ಷಿತ ಎಂದು ಪರಿಗಣಿಸುತ್ತವೆ. ಅವು ಅತ್ಯಂತ ಆವಶ್ಯಕ ಪರಾಗಸ್ಪರ್ಶಕಗಳಾಗಿರುವುದರಿಂದ, ಸಾರ್ವಜನಿಕರು ಅವುಗಳನ್ನು ಕೊಲ್ಲಬಾರದು ಎನ್ನುತ್ತಾರೆ ಅವರು. ರಾಕ್ ಜೇನು ಜೇನು ನೊಣದ ಗೂಡುಗಳಿಂದ 20-25 ಕೇಜಿಯಷ್ಟು ಜೇನು ತುಪ್ಪವನ್ನು ಪಡೆಯಬಹುದು. ಆ ಜೇನು ತುಪ್ಪದಲ್ಲಿ ಅತ್ಯಂತ ಹೆಚ್ಚು ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ಔಷಧೀಯ ಗುಣಗಳು ಇರುತ್ತವೆ.

ಇದನ್ನೂ ಓದಿ: Bihar Girl: 4 ತೋಳು, ಕಾಲುಗಳೊಂದಿಗೆ ಜನಿಸಿದ ಬಿಹಾರದ ಹುಡುಗಿ! ಸೋನು ಸೂದ್ ನೆರವು

ಈ ಜೇನು ನೊಣಗಳು ತುಂಬಾ ಆಕ್ರಮಣಕಾರಿಯಾಗಿರುತ್ತವೆ ಮತ್ತು ಜನರು ಅವುಗಳನ್ನು ಕೊಲ್ಲುತ್ತಿರುವುದರಿಂದ, ಅವುಗಳ ಪ್ರಭೇದಗಳು ಕಡಿಮೆ ಆಗುತ್ತಿವೆ. ಆಫಿಸ್‍ಮೆಲ್ಲಿಫೆರಾ ಅಥವಾ ಆಪಿಸ್ ಸೆರಾನಾಗಳಂತೆ ಈ ಜೇನು ನೊಣಗಳ ಸಾಕಾಣೆ ಸಾಧ್ಯವಿಲ್ಲ. ಈ ಜೇನು ನೊಣಗಳನ್ನು ಮತ್ತು ಗೂಡುಗಳನ್ನು ಸ್ಥಳಾಂತರ ಮಾಡಬೇಕು ಎಂದಿದ್ದರೆ, ಸಾರ್ವಾಜನಿಕರು ಜಿಕೆವಿಕೆಗೆ ಅಥವಾ ಪ್ರಮಾಣಿಕೃತ ತರಬೇತಿ ಪಡೆದ ಖಾಸಗಿ ಏಜೆನ್ಸಿಗಳಿಗೆ ಕರೆ ಮಾಡಬೇಕು.
Published by:Ashwini Prabhu
First published: