HOME » NEWS » Trend » IN A SHOCKING INCIDENT MURDER ACCUSED COOKED VICTIMS HEART WITH POTATOES FOR HIS FAMILY STG SCT

ಭಯಾನಕ ಘಟನೆ; ಆಲೂಗಡ್ಡೆಯೊಂದಿಗೆ ಹೃದಯ ಬೇಯಿಸಿ ಅಡುಗೆ ಮಾಡಿದ ಕೊಲೆಗಾರ!

Shocking News: ಲಾರೆನ್ಸ್ ಪಾಲ್ ಆಂಡರ್ಸನ್ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿದ್ದಾನೆ. ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಆತನ ಪತ್ನಿಗೆ ಉಣಬಡಿಸಿದ್ದಾನೆ.

news18-kannada
Updated:February 25, 2021, 1:32 PM IST
ಭಯಾನಕ ಘಟನೆ; ಆಲೂಗಡ್ಡೆಯೊಂದಿಗೆ ಹೃದಯ ಬೇಯಿಸಿ ಅಡುಗೆ ಮಾಡಿದ ಕೊಲೆಗಾರ!
ಹೃದಯ
  • Share this:
ತ್ರಿವಳಿ ಕೊಲೆ ಮಾಡಿದ ಆರೋಪಿಯೊಬ್ಬ ಮೃತ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ. ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದೆ. ಈತ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿದ್ದಾನೆ. ಬಳಿಕ ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಆತನ ಪತ್ನಿಗೆ ಉಣಬಡಿಸಿದ್ದಾನೆಂದು ತನಿಖಾಧಿಕಾರಿಗಳು ಚಿಕಾಶಾದ ಗ್ರೇಡಿ ಕೌಂಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿ ಲಾರೆನ್ಸ್ ತನ್ನ ಚಿಕ್ಕಪ್ಪ ಮತ್ತು ಅವರ 4 ವರ್ಷದ ಪುತ್ರಿಯನ್ನು ಮನೆಯಲ್ಲಿಯೇ ಕೊಂದಿದ್ದಾನೆ. ಅಲ್ಲದೆ ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾನೆ. ಫೆಬ್ರವರಿ 9ರಂದು ಕುಡಿದ ಅಮಲಿನಲ್ಲಿ ಮನೆಗೆ ಬಂದು ಪತ್ನಿಯ ಮೇಲೆ ಹಲ್ಲೆ ನಡೆಸಿ ಅವರನ್ನೂ ಗಾಯಗೊಳಿಸಿದ್ದಾನೆ.

‘ರಾಕ್ಷಸರನ್ನು ಬಿಡುಗಡೆ ಮಾಡಲು ಆಲೂಗಡ್ಡೆಯ ಜೊತೆಗೆ ಹೃದಯವನ್ನು ಬೇಯಿಸಿ ಅದನ್ನು ತನ್ನ ಕುಟುಂಬ ಸದಸ್ಯರಿಗೆ ಉಣಬಡಿಸಲು ಲಾರೆನ್ಸ್ ಯತ್ನಿಸಿದ್ದಾನೆ’ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ವಾರಂಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನ ವೃಷಭಾವತಿ ಕಾಲುವೆ ಬಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಸುಮಾರು 20 ವರ್ಷದಿಂದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಆರೋಪಿಯನ್ನು ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್, ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದರು. ಆರೋಪಿ ಬಿಡುಗಡೆ ನಂತರ ಈ ಘಟನೆ ಸಂಭವಿಸಿದೆ.

ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ಗೆ 2017ರಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ತಾನು ಮಾಡಿರುವ ಕೊಲೆಗಳ ಬಗ್ಗೆ ಆತ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ದೇಹದಿಂದ ಹೃದಯವನ್ನು ಹೊರತೆಗೆದು ಅದನ್ನು ಆಲೂಗಡ್ಡೆಯ ಜೊತೆಗೆ ಬೇಯಿಸಿರುವ ಲಾರೆನ್ಸ್ ಸುದ್ದಿ ಅಮೆರಿಕದ ಜನರಿಗೆ ಬೆಚ್ಚಿಬೀಳುವಂತೆ ಮಾಡಿದೆ. ಈ ಭಯಾನಕ ಘಟನೆಯಿಂದ ಅನೇಕರು ಬೆವೆತು ಹೋಗಿದ್ದಾರೆ.
Published by: Sushma Chakre
First published: February 25, 2021, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories