Snake Bite: ಹಾವು ಕಚ್ಚಿದ್ದಕ್ಕೆ ಈಕೆಯ ಎರಡೂ ಕಿಡ್ನಿ ಫೇಲ್ ಆಗಿಬಿಟ್ಟವು, ಆದರೂ ರೋಗಿ ಬದುಕುಳಿದ ಪವಾಡದ ಕತೆ ಇದು!

ಹಾವು ಕಡಿತ ಮತ್ತು ಮೂತ್ರಪಿಂಡ ವೈಫಲ್ಯದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ, ವೈದ್ಯರು ತುಂಬಾ ಎಚ್ಚರಿಕೆ ವಹಿಸಬೇಕು. HUS ರೋಗನಿರ್ಣಯವು ವೈದ್ಯ ಲೋಕಕ್ಕೆ ಒಡ್ಡಿದ ತುಂಬಾ ದೊಡ್ಡ ಸವಾಲು ಆದರೆ ಅದೃಷ್ಟವಶಾತ್ ಅದನ್ನು ಗುರುತಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುಣೆಯ ಆಸ್ಪತ್ರೆಯಲ್ಲಿ(Pune hospital) ನಡೆದ ಅಪರೂಪದ ಪ್ರಕರಣವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹಾವು ಕಡಿತದ (Snake Bite) ನಂತರ ಮೂತ್ರಪಿಂಡ ವೈಫಲ್ಯದಿಂದ (Kidney Failure) ಬಳಲುತ್ತಿದ್ದ 30 ವರ್ಷದ ಮಹಿಳೆ 6 ವಾರಗಳ ಡಯಾಲಿಸಿಸ್ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಪುಣೆಯ ನೋಬಲ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 2 ರಂದು ಮಹಿಳೆಯೊಬ್ಬರು ನೋಬಲ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ್ದರು. ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ದೇಹವು ಊದಿಕೊಂಡಿತ್ತು ಮತ್ತು ಆಕೆಯ ಮೂತ್ರಪಿಂಡಗಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ ತಕ್ಷಣ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ರಕ್ತ ಪರೀಕ್ಷೆಯ ಫಲಿತಾಂಶಗಳು ಕೂಡ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳ ನಾಶವನ್ನು ತೋರಿಸಿದೆ ಎಂದು ನೋಬಲ್ ಆಸ್ಪತ್ರೆಯ (Noble Hospital Nephrologist) ನೆಫ್ರಾಲಜಿಸ್ಟ್ ಡಾ.ಅವಿನಾಶ್ ಇಗ್ನೇಷಿಯಸ್ ವಿವರಿಸುತ್ತಾರೆ.

ಶಾಶ್ವತ ಮೂತ್ರಪಿಂಡದ ಹಾನಿ
ತನಿಖೆಯ ಸಮಯದಲ್ಲಿ, ನಾವು ಆಕೆಗೆ ಹೆಮೊಲಿಟಿಕ್ ಯುರೆಮಿಕ್ ಸಿಂಡ್ರೋಮ್ (HUS) ರೋಗವಿದೆಯೆಂದು ಕಂಡುಹಿಡಿದೆವು. ಇದು ಸಾಮಾನ್ಯವಾಗಿ ಹಾವಿನ ಕಡಿತದಿಂದ ಉಂಟಾಗುವ ಬಹಳ ಅಪರೂಪದ ಕಾಯಿಲೆ. ಮೂತ್ರಪಿಂಡದ ಬಯಾಪ್ಸಿ ಕೂಡಾ ಅದನ್ನೇ ದೃಢಪಡಿಸಿತು. ಅವಳಿಗೆ ತುರ್ತು ಡಯಾಲಿಸಿಸ್ ಅಗತ್ಯವಿದೆ," ಎಂಬುವುದನ್ನು ಡಾ. ಇಗ್ನೇಷಿಯಸ್ ತಿಳಿಸಿದರು.

HUS ರೋಗನಿರ್ಣಯದ ನಂತರ, ಪ್ಲಾಸ್ಮಾಫೆರೆಸಿಸ್ ಅನ್ನು ತಕ್ಷಣವೇ ಪ್ರಾರಂಭಿಸಲಾಯಿತು, ಏಕೆಂದರೆ ಚಿಕಿತ್ಸೆಯಲ್ಲಿನ ಯಾವುದೇ ವಿಳಂಬವು ಶಾಶ್ವತ ಮೂತ್ರಪಿಂಡದ ಹಾನಿ ಮತ್ತು ಮಾರಣಾಂತಿಕ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಪ್ಲಾಸ್ಮಾಫೆರೆಸಿಸ್ ಸಮಯದಲ್ಲಿ ಕಲುಷಿತ ಪ್ಲಾಸ್ಮಾ ತೆಗೆದುಹಾಕಿ ಆರೋಗ್ಯಕರ ಪ್ಲಾಸ್ಮಾವನ್ನು ಬದಲಾಯಿಸಲು ವಿಶೇಷ ಪ್ಲಾಸ್ಮಾ ಫಿಲ್ಟರ್ಗಳನ್ನು ಬಳಸಲಾಯಿತು. ನಂತರ ಸುಮಾರು 6 ವಾರಗಳ ಕಾಲ ಆಕೆ ಡಯಾಲಿಸಿಸ್‌ನಲ್ಲಿದ್ದರು.

ಇದನ್ನೂ ಓದಿ: Salman Khan: ಸಲ್ಲುಭಾಯ್​ಗೆ 3 ಬಾರಿ ಕಚ್ಚಿತ್ತಂತೆ ಹಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!

ನಿಧಾನಗತಿಯಲ್ಲಿ ಸುಧಾರಣೆ
ಮೂತ್ರದ ಉತ್ಪಾದನೆಯಲ್ಲಿ ನಿಧಾನಗತಿಯಲ್ಲಿ ಸುಧಾರಣೆ ಕಂಡುಬಂದಿದ್ದರಿಂದ 6 ವಾರಗಳ ನಂತರ ಡಯಾಲಿಸಿಸ್ ಅನ್ನು ನಿಲ್ಲಿಸಲು ಸಾಧ್ಯವಾಯಿತು. ಮತ್ತವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅಪರೂಪಕ್ಕೊಮ್ಮೆ ಇಂತಹ ಸನ್ನಿವೇಶ ಎದುರಾಗುತ್ತದೆ. ಇಂಡಿಯನ್ ಜರ್ನಲ್ ಆಫ್ ನೆಫ್ರಾಲಜಿಯಲ್ಲಿ ವರದಿ ಮಾಡಿದಂತೆ HUS ಮತ್ತು ಸಂಪೂರ್ಣ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ, ಈ ಸಮಸ್ಯೆಯು ಪ್ರಪಂಚದಾದ್ಯಂತ ಕೇವಲ 30 ಜನರಿಗೆ ಮಾತ್ರ ಸಂಭವಿಸುತ್ತದೆ. ತೀವ್ರ ನಿಗಾ ಘಟಕದ ವೈದ್ಯ Dr. ZA ಖಾನ್ ಹೇಳುವಂತೆ, ಉಷ್ಣವಲಯದ ದೇಶಗಳಲ್ಲಿ ಹಾವು ಕಡಿತ ಎಂಬುವುದು ಅತ್ಯಂತ ಸಾಮಾನ್ಯವಾದ ಮತ್ತು ಹೆಚ್ಚು ಸಾವು ನೋವುಗಳನ್ನು ತಂದೊಡ್ಡುವ ಅಪಾಯಗಳಲ್ಲಿ ಒಂದಾಗಿದೆ.

ವೈದ್ಯ ಲೋಕಕ್ಕೆ ದೊಡ್ಡ ಸವಾಲು
ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ ಅಂಶದ ಪ್ರಕಾರ, ಪ್ರತಿ ವರ್ಷ ಸುಮಾರು 125,000 ಜನರು ವಿಷಕಾರಿ ಹಾವು ಕಡಿತದಿಂದ ಸಾಯುತ್ತಾರೆ. ಅದರಲ್ಲಿ 10,000 ಮಂದಿ ಕೇವಲ ಭಾರತದಲ್ಲೇ ಸಾವನ್ನಪ್ಪುತ್ತಿದ್ದಾರೆ. ಇದಲ್ಲದೆ, "ನಮ್ಮ ಈ ರೋಗಿಯಲ್ಲಿ, ಮೂತ್ರಪಿಂಡದ ವೈಫಲ್ಯದ ಕಾರಣವು ಥ್ರಂಬೋಟಿಕ್ ಮೈಕ್ರೋಆ್ಯಂಜಿಯೋಪತಿ (ಟಿಎಂಎ) ಯೊಂದಿಗೆ ಸಂಬಂಧ ಹೊಂದಿರಬಹುದು, ಅಂದರೆ ಮೂತ್ರಪಿಂಡಗಳಿಗೆ ರಕ್ತ ಪೂರೈಸುವ ಸೂಕ್ಷ್ಮ ರಕ್ತ ನಾಳಗಳ ಉರಿಯೂತ ಮತ್ತು ಈ ನಾಳಗಳ ಗೂಡುಗಳನ್ನು ನಿರ್ಬಂಧಿಸುವ ಸೂಕ್ಷ್ಮ ಹೆಪ್ಪುಗಟ್ಟುವಿಕೆ ಎಂದು ಅವರು ವಿವರಿಸಿದರು. ಹಾವು ಕಡಿತ ಮತ್ತು ಮೂತ್ರಪಿಂಡ ವೈಫಲ್ಯದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ, ವೈದ್ಯರು ತುಂಬಾ ಎಚ್ಚರಿಕೆ ವಹಿಸಬೇಕು. HUS ರೋಗನಿರ್ಣಯವು ವೈದ್ಯ ಲೋಕಕ್ಕೆ ಒಡ್ಡಿದ ತುಂಬಾ ದೊಡ್ಡ ಸವಾಲು ಆದರೆ ಅದೃಷ್ಟವಶಾತ್ ಅದನ್ನು ಗುರುತಿಸಬಹುದು ಮತ್ತು ದೃಢೀಕರಿಸಬಹುದು.

ಇದನ್ನೂ ಓದಿ: ಕಚ್ಚಿದ ವಿಷಕಾರಿ ಹಾವನ್ನ ಹಿಡಿದು ಕಚ್ಚಿದ; ಮುಂದಾಗಿದ್ದು ವಿಚಿತ್ರ

ಉಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಹಾವು ಕಡಿತದಿಂದ ಮರಣ ಹೊಂದುತ್ತಿದ್ದಾರೆ . ಹಾವು ಕಚ್ಚಿರುವ ಲಕ್ಷಣಗಳು ಬಾಹ್ಯ ನೋಟಕ್ಕೆ ಪತ್ತೆ ಆಗದ ಪಕ್ಷದಲ್ಲಿ ಊತ ಮತ್ತು ಉರಿಯೂತದ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಲಕ್ಷಣಗಳಿಂದ ಹಾವು ಕಡಿತದ ಬಗ್ಗೆ ಶಂಕಿಸಬಹುದಾಗಿದೆ .
Published by:vanithasanjevani vanithasanjevani
First published: