ಮಾರ್ಷಲ್ ಆರ್ಟ್ಸ್ ಕಲಿತವರು ಬೇರೆವರಿಗಿಂತಲೂ ಸ್ವಲ್ಪ ವಿಭಿನ್ನವಾಗಿಯೇ ಕಾಣುತ್ತಾರೆ, ಏಕೆಂದರೆ ಈ ಆಟದಲ್ಲಿ ಯೋಚನಾ ಶಕ್ತಿ, ಮಾನಸಿಕ ಸದೃಢತೆ, ದೈಹಿಕ ಬಲ, ಕಲಾತ್ಮಕವಾದ ತಂತ್ರಗಳು ಎಲ್ಲವನ್ನೂ ಹೊಂದಿರುವಂತಹ ಏಕೈಕ ಆಟವಾಗಿದೆ ಎಂದರೆ ತಪ್ಪಾಗುವದಿಲ್ಲ.
ಇಂದು ಎಲ್ಲಾ ವಯೋಮಾನದವರು ಮಾರ್ಷಲ್ ಆರ್ಟ್ಸ್ ಅನ್ನು ಒಂದು ಆಟದಂತೆ ಅಭ್ಯಾಸ ಮಾಡುತ್ತಿದ್ದು, ಇದರಿಂದ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ ಎಂಬ ನಂಬಿಕೆ ಅವರಲ್ಲಿದೆ. ನಿಜವಾಗಿಯೂ ಮಾರ್ಶಿಯಲ್ ಆರ್ಟ್ಸ್ ಕಲಿಯುವುದರಿಂದ ಮತ್ತು ಅಭ್ಯಾಸ ಮಾಡುವುದರಿಂದ ವ್ಯಕ್ತಿಯು ಎಲ್ಲಾ ರೀತಿಯಲ್ಲೂ ಸದೃಢರಾಗುತ್ತಾರೆ.
ಭಾರತೀಯ ಕರಾಟೆ ಅಸೋಸಿಯೇಷನ್ ನಲ್ಲಿ ಸ್ಪೋರ್ಟ್ಸ್ ಕಮೀಷನ್ ಮುಖ್ಯಸ್ಥರಾದ ಯಶಪಾಲ್ ಸಿಂಗ್ ಕಾಲ್ಸಿ ಅವರು "ಮಾರ್ಷಲ್ ಆರ್ಟ್ಸ್ ಅನ್ನು ಇಂದು ಎಷ್ಟೋ ಜನರು ತಮ್ಮ ಹವ್ಯಾಸವಾಗಿ, ಕೆಲವರು ಅವರ ದೈಹಿಕ ಮತ್ತು ಮಾನಸಿಕ ಸದೃಢತೆ ಆಗಲು ಮತ್ತು ಕೆಲವರು ಆಟವಾಗಿ ತೆಗೆದುಕೊಂಡು ಅದರಲ್ಲಿ ಸಾಧನೆ ಮಾಡುವುದಕ್ಕೂ ಕಲಿಯುವುದುಂಟು", ಎಂದು ಹೇಳುತ್ತಾರೆ. ಈ ಕಲೆಯಿಂದ ನಿಮ್ಮ ಜೀವನಕ್ಕೆ ತುಂಬಾ ಪ್ರಯೋಜನಗಳಿವೆ.
ಮಾನಸಿಕವಾಗಿ ಸದೃಢರಾಗುತ್ತೀರಿ
ಮಾರ್ಷಲ್ ಆರ್ಟ್ಸ್ ಕಲಿಯುವುದರಿಂದ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ ಮತ್ತು ನೀವು ಜೀವನದಲ್ಲಿ ಎಂತಹದೇ ಕಷ್ಟವನ್ನು ಎದುರಿಸಿದಾಗ ಆ ಕಷ್ಟವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಿಮಗೆ ಈ ಆಟವು ಹೇಳಿಕೊಡುತ್ತದೆ.
ಇದರಲ್ಲಿ ಎದುರಾಳಿ ನಿಮಗೆ ಯಾವಾಗ ಎಲ್ಲಿ ಹೊಡೆಯುವನು ಎನ್ನುವುದನ್ನು ಊಹಿಸಿ ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಕಲೆಯನ್ನು ಹೇಳಿಕೊಡುತ್ತಾರೆ. ಇದು ಜೀವನಕ್ಕೆ ತುಂಬಾ ಸಹಾಯಕವಾಗುತ್ತದೆ. ಈ ಕಲೆಯು ನಿಮಗೆ ಕಷ್ಟಕರ ಸಂದರ್ಭಗಳಲ್ಲಿ ಹೇಗೆ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎನ್ನುವುದನ್ನು ಸಹ ನಿಮಗೆ ಮನವರಿಕೆಯಾಗುತ್ತದೆ.
ಮಾನಸಿಕ ಒತ್ತಡವು ತುಂಬಾ ಇರುವಂತಹ ಈ ಸ್ಪರ್ಧಾತ್ಮಕ ದಿನಗಳಲ್ಲಿ ಈ ಕಲೆಯನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ನಿಮಗೆ ತುಂಬಾ ಲಾಭಗಳಿವೆ.
ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಈ ಮಾರ್ಷಲ್ ಆರ್ಟ್ಸ್ ಕಲಿಯುವುದರಿಂದ ನಿಮಗೆ ನಿಮ್ಮಲ್ಲಿರುವಂತಹ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಿಮಗೆ ಗೊತ್ತಿರದೆ ನಿಮ್ಮಲ್ಲಿ ಒಂದು ವಿಶಿಷ್ಟವಾದ ಶಕ್ತಿ ಬಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾನೇ ಸದೃಢರಾಗುತ್ತೀರಿ ಎಂದು ತಜ್ಞರು ಹೇಳುತ್ತಾರೆ.
ಹೊಸ ಹೊಸ ಗುರಿಗಳನ್ನು ಬೆನ್ನಟ್ಟಿ ಹೋಗುತ್ತೀರಿ
ಈ ಮಾರ್ಷಲ್ ಆರ್ಟ್ಸ್ ಕಲೆಯು ನಿಮಗೆ ಹಂತ ಹಂತವಾಗಿ ಹೊಸ ಹೊಸ ಗುರಿಗಳನ್ನು ಬೆನ್ನಟ್ಟಿಕೊಂಡು ಹೋಗುವಂತೆ ಮಾಡುತ್ತದೆ, ಇದರಿಂದ ನಿಮಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಇನ್ನಷ್ಟು ಪರಿಪಕ್ವರಾಗುತ್ತೀರಿ.
ಈ ಕಲೆಯನ್ನು ಪ್ರತಿ ಹಂತದಲ್ಲಿಯೂ ಒಂದೊಂದು ಬಣ್ಣದ ಬೆಲ್ಟ್ ಗಳನ್ನು ನೀಡುತ್ತಾ ಅವರಿಗೆ ಒಂದು ರೀತಿಯಲ್ಲಿ ಆಟದಲ್ಲಿ ಭಡ್ತಿ ನೀಡುತ್ತಾ ಅವರಿಗೆ ಹಂತ ಹಂತವಾಗಿ ಮುಂದೆ ಹೋಗಲು ಮತ್ತು ಹೆಚ್ಚು ಆತ್ಮವಿಶ್ವಾಸದಿಂದ ಮುನ್ನುಗ್ಗಲು ಸಹಾಯ ಮಾಡುತ್ತದೆ. ಜೀವನದಲ್ಲಿ ಎಲ್ಲಿಯೂ ನಿಲ್ಲದೆ ಮುನ್ನುಗ್ಗುವುದನ್ನು ಈ ಕಲೆಯು ಹೇಳಿಕೊಡುತ್ತದೆ ಎಂದು ಕರಾಟೆ ಅಸೋಸಿಯೇಷನ್ ನ ಮುಖ್ಯಸ್ಥರು ಹೇಳುತ್ತಾರೆ.
ಶಿಸ್ತನ್ನು ಕಲಿಸುತ್ತದೆ
ಈ ಕಲೆಯನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಒಂದು ರೀತಿಯ ಶಿಸ್ತು ಮೂಡುತ್ತದೆ ಮತ್ತು ತಮ್ಮ ಕೈಯಲ್ಲಿರುವಂತಹ ಕೆಲಸದ ಬಗ್ಗೆ ಅವರಿಗೆ ಆಸಕ್ತಿ ಇದ್ದು ತಮ್ಮ ಮನಸ್ಸನ್ನು ಬೇರೆ ಯಾವ ವಿಷಯಕ್ಕೂ ವಿಚಲಿತವಾಗದೆ ಹತೋಟಿಯಲ್ಲಿಟ್ಟು ಕೊಳ್ಳಬಹುದಾಗಿದೆ. ಈ ಶಿಸ್ತು ನಿಮ್ಮ ಜೀವನದಲ್ಲಿ ತುಂಬಾ ಶಿಸ್ತನ್ನು ತಂದು ಕೊಡುತ್ತದೆ.
ದೈಹಿಕ ಅರೋಗ್ಯ ವೃದ್ಧಿ
ಮಾರ್ಷಲ್ ಆರ್ಟ್ಸ್ ಕಲಿಯುವುದರಿಂದ ನಿಮ್ಮ ದೇಹದಲ್ಲಿರುವಂತಹ ಮೂಳೆಗಳು ಬಲಗೊಳ್ಳುತ್ತವೆ ಮತ್ತು ನೀವು ದೈಹಿಕವಾಗಿ ತುಂಬಾ ಸದೃಢರಾಗುತ್ತೀರಿ. ಇದನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ನೀವು ಪ್ರತಿದಿನ ಹೊಸ ರೀತಿಯ ಶಕ್ತಿಯನ್ನು ಪಡೆದ ಅನುಭವ ನಿಮಗೆ ಆಗುತ್ತದೆ ಮತ್ತು ಇದರಿಂದ ನೀವು ತುಂಬಾ ಒತ್ತಡದಿಂದ ಮುಕ್ತರಾಗುತ್ತೀರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ