• Home
  • »
  • News
  • »
  • trend
  • »
  • Viral Video: ಸಖತ್‌ ವೈರಲ್‌ ಆಗ್ತಿರೋ ನೂತನ ಕೊಡಲಿ ವಿನ್ಯಾಸದ ವಿಡಿಯೋ, ನೀವು ನೋಡಿ ಬೆರಗಾಗ್ತಿರಾ!

Viral Video: ಸಖತ್‌ ವೈರಲ್‌ ಆಗ್ತಿರೋ ನೂತನ ಕೊಡಲಿ ವಿನ್ಯಾಸದ ವಿಡಿಯೋ, ನೀವು ನೋಡಿ ಬೆರಗಾಗ್ತಿರಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Axe news: ಹೊಸ ಹೊಸ ಆವಿಷ್ಕಾರಗಳ ಮೆಷಿನ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಲೇ ಇರುತ್ತವೆ. ಇದರಿಂದ ಇನ್ಫ್ಯೂಯನ್ಸ್ ಆಗ್ತಾರೆ ಜನ. ಇದೀಗ ಇದೇ ಕ್ಯಾಟಗರಿಗೆ ಹೊಸ ಆವಿಷ್ಕಾರದಲ್ಲಿ ಮಾಡೆಲ್​ ಬಂದು ಟ್ರೆಂಡ್​ಲ್ಲಿ ಇದೆ. ನೀವು ನೋಡಿ

  • Trending Desk
  • Last Updated :
  • New Delhi, India
  • Share this:

ಕೊಡಲಿ (Ax) ಒಂದು ಅತ್ಯಂತ ಸರಳ ಉಪಕರಣ ಎಂದು ನಮಗೆಲ್ಲರಿಗೂ ತಿಳಿದಿರುವ ಸಂಗತಿ ಆಗಿದೆ. ಸರಳ ಉಪಕರಣಕ್ಕೆ ಮತ್ತೊಂದು ಹೆಸರೇ ಕೊಡಲಿ ಎಂದರೆ ಅತಿಶೋಕ್ತಿಯಲ್ಲ. ಈ ಉಪಕರಣವನ್ನು ಇನ್ನಷ್ಟು ಉತ್ತಮ ಮತ್ತು ಪರಿಣಾಮಕಾರಿಯಾಗಿಸಲು ಯಾವುದೇ ಬದಲಾವಣೆಗಳ ಅಗತ್ಯವಿಲ್ಲ ಎಂದು ನಮ್ಮಲ್ಲಿ ಹೆಚ್ಚಿನವರು ಯೋಚನೆ ಮಾಡುತ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ ಮತ್ತೊಬ್ಬರು ಕೊಡಲಿಯನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕತ್ತರಿಸಲು ಬೇಕಾದ ಉಪಕರಣವನ್ನಾಗಿ (Tool) ಮಾಡಲು ಅವಕಾಶವಿದ್ದರೆ ಎಷ್ಟು ಚೆನ್ನ ಎಂದೆನಿಸುತ್ತದೆ. ಹಾಗಿದ್ರೆ ಈ ರೀತಿಯ ಕೊಡಲಿಯನ್ನು ಯಾರಾದರೂ ವಿನ್ಯಾಸ ಮಾಡಿದ್ದಾರೆಯೇ ಎಂದು ನೀವು ಪ್ರಶ್ನೆ ಕೇಳಿದರೆ ಅದ್ಕೆ ಉತ್ತರ ಹೌದು ಎಂದಾಗಿರುತ್ತದೆ.


ಹೌದು.ಹೊಸ ಕೊಡಲಿಯ ವಿನ್ಯಾಸವನ್ನು ಭೌತವಿಜ್ಞಾನ ಸಂಶೋಧಕರೊಬ್ಬರು ಕಂಡು ಹಿಡಿದಿದ್ದಾರೆ. ಆ ಹೊಸ ಕೊಡಲಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗ್ತಿದೆ. ಅದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ.


ಪುರಾತನ ಕಾಲದ ಅತ್ಯಂತ ಸರಳ ಉಪಕರಣ


ಪುರಾತನ ಕಾಲದಿಂದಲೂ ಗಿಡ-ಮರಗಳನ್ನು ಕಡಿಯಲು ಈ ಸರಳ ಉಪಕರಣ ಕೊಡಲಿಯನ್ನೆ ಬಳಸುತ್ತಾರೆ. ಇದು ಸಹಸ್ರಾರು ವರ್ಷಗಳಿಂದ ಬಳಸಲ್ಪಟ್ಟಿರುವ ಒಂದು ಮೂಲ ಉಪಕರಣ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: ಮೃತಪಟ್ಟ ಅಪ್ಪನ ಫೋಟೋ ಹಿಡಿದು ಮದುವೆ ಮಂಟಪಕ್ಕೆ ಬಂದ ವಧು, ಇದಕ್ಕೆ ಹೇಳೋದು ಜೊತೆಗಿರದ ಜೀವ ಎಂದೆಂದಿಗೂ ಜೀವಂತ!


1.6 ಮಿಲಿಯನ್ ವರ್ಷಗಳ ಹಿಂದೆಯೇ ಮಾನವಕುಲವು ಬಳಸಿದ ಅತ್ಯಂತ ಹಳೆಯ ಸಾಧನಗಳಲ್ಲಿ ಕೊಡಲಿಯು ಒಂದು ಎಂದು ಇತಿಹಾಸಗಳ ಪುರಾವೆಗಳು ಹೇಳುತ್ತವೆ. ಇದು ಆಧುನಿಕ ದಿನದ ಜೀವನದಲ್ಲಿಯೂ ಸಹ ಅನೇಕ ಕೆಲಸಗಳಲ್ಲಿ ಬಳಕೆಯಾಗುತ್ತಿರುವ ವಿಶೇಷ ಉಪಕರಣವಾಗಿದೆ.


1.5 ಮಿಲಿಯನ್ ವರ್ಷಗಳವರೆಗೆ ಹ್ಯಾಂಡಲ್ ಇಲ್ಲದ ಶಿಲಾಯುಗದ ಕೈ ಕೊಡಲಿಯನ್ನು ಬಳಸಲಾಗುತ್ತಿತ್ತು. ನಂತರ ಆಧುನಿಕ ಕೊಡಲಿ ಬಳಕೆಗೆ ಬಂದಿತು. ಹ್ಯಾಂಡಲ್‌ ಕೊಡಲಿಯನ್ನು ಕ್ರಿ.ಪೂ. 6,000 ಗಳಿಂದ ಮಾತ್ರ ಬಳಸಲಾಗುತ್ತಿದೆ ಎಂಬುದು ಆಶ್ಚರ್ಯ ತರುವ ವಿಷಯವೇ ಸರಿ.


ಕೊಡಲಿಯನ್ನು ಬಳಸಿದ ಮೊದಲ ವ್ಯಕ್ತಿ ಹೋಮೋ ಎರ್ಗಾಸ್ಟಾರ್


ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರ ಪ್ರಕಾರ, ಕೊಡಲಿಯನ್ನು ಬಳಸಿದ ಮೊದಲ ವ್ಯಕ್ತಿ ಹೋಮೋ ಎರ್ಗಾಸ್ಟಾರ್ ಎಂಬ ವ್ಯಕ್ತಿ ಎಂಬುದು ವಿಶೇಷ ಆಗಿದೆ. ಕೊಡಲಿಯ ಇತಿಹಾಸ ತಿಳಿಯಲು ನಾವು ಮತ್ತೆ ಇತಿಹಾಸವನ್ನು ಅಧ್ಯಯನ ಮಾಡಬೇಕಾಗುತ್ತದೆ.


ಈ ಕೊಡಲಿಯು ಪುರಾತನ ಕಾಲದಿಂದಲೂ ಮರ ಕಡಿಯುವುದಕ್ಕೆ ಬಳಕೆ ಮಾಡುವ ಒಂದು ಉತ್ತಮ ಮತ್ತು ಸುಲಭ ಉಪಕರಣ ಆಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬೇಕೆಂದು ಇಲ್ಲೊಬ್ಬ ವಿಜ್ಞಾನಿ ಅದಕ್ಕೆ ಆಧುನಿಕ ಸ್ಪರ್ಶವನ್ನು ನೀಡಿದ್ದಾನೆ. ನೂತನ ಆಧುನಿಕ ಕೊಡಲಿಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿರೋದು ಸತ್ಯ.


ಫಿನ್ನಿಷ್ ದೇಶದ ಸಂಶೋಧಕ ಹೆಕ್ಕಿ ಕರ್ನಾ ಅವರೇ ಈ ಆಧುನಿಕ ಕೊಡಲಿ ಅನ್ವೇಷಿಸಿದ ಅನ್ವೇಷಕ. ಈ ಹೊಸ ಕೊಡಲಿ ವಿನ್ಯಾಸವು ಈಗ ಭಾರೀ ವೈರಲ್ ಆಗಿದೆ.


ಈ ನೂತನ ಕೊಡಲಿಯ ವಿನ್ಯಾಸದ ವೈರಲ್‌ ವಿಡಿಯೋ ನೋಡಿರುವ Amazon ಸಂಸ್ಥೆಯ CEO ಜೆಫ್ ಬೆಜೋಸ್ ಅವರು ಇದು ಅದ್ಬುತವಾದ ಕೊಡಲಿ ವಿನ್ಯಾಸ ಎಂದು ಹೇಳಿ, ಇದರಿಂದ ನಾನು ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದೇನೆ. ಇದು ಅತ್ಯಂತ ಹೊಸ ಆವಿಷ್ಕಾರ ಆಗಿದೆ. ಆದರೆ ನೀವು ಇನ್ನೂ ಈ ಕೊಡಲಿಯನ್ನು ಸುಧಾರಿಸಬಹುದು! ಡ್ಯಾಮ್‌” ಎಂದು ಉದ್ಗರಿಸಿದ್ದಾರೆ.


'ಮಾಸ್ಸಿಮೊ' ಎಂಬ ಸಾಮಾಜಿಕ ಬಳಕೆದಾರ ಈ ವಿಡಿಯೋದ ಕ್ಲಿಪ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.
ಭೌತಶಾಸ್ತ್ರದ ಸಿದ್ದಾಂತ ಅನ್ವಯ


ಈ ನೂತನ ಕೊಡಲಿಯ ಹೆಸರು Vipukirves Leveraxe ಎಂಬುದಾಗಿದೆ. ಈ ಹೊಸ ಕೊಡಲಿಯ ವಿನ್ಯಾಸವನ್ನು ರಚಿಸಲು ಸಂಶೋಧಕ ಹೆಕ್ಕಿ ಅವರು ಇದಕ್ಕೆ ಸರಳವಾದ ಭೌತಶಾಸ್ತ್ರದ ಸಿದ್ದಾಂತವನ್ನು ಅನ್ವಯಿಸಿದ್ದಾರೆ. ಈ ಹೊಸ ಕೊಡಲಿಯು ಮರದ ತುಂಡುಗಳನ್ನು ವೇಗವಾಗಿ ಕತ್ತರಿಸುತ್ತದೆ ಮತ್ತು ಬಳಕೆದಾರರಿಗೆ ಕೆಲಸವನ್ನು ಕಡಿಮೆ ಮಾಡುವುದರ ಜೊತೆಗೆ ಇದು ಅತ್ಯಂತ ಸುರಕ್ಷಿತವಾದ ವಿಧಾನವಾಗಿದೆ.


ಇದನ್ನೂ ಓದಿ: ಬೆಂಗಳೂರಿನ ಬಿಲಿಯನೇರ್‌ ಸ್ಟ್ರೀಟ್‌ ನಲ್ಲಿ ನಂದನ್‌ ನಿಲೇಕಣಿ ಬಹುಕೋಟಿ ಆಸ್ತಿ ಖರೀದಿ!


ಈ ಹೊಸ ಉಪಕರಣವು ಹ್ಯಾಂಡಲ್‌ನಲ್ಲಿ ಲೋಹದ ಬೆಣೆಯನ್ನು ಜೋಡಿಸುವ ಸಾಂಪ್ರದಾಯಿಕ ಕೊಡಲಿಯಂತೆ ಕಾಣುವುದಿಲ್ಲ.


ಚಲನ ಶಕ್ತಿ ಬಳಕೆ


ಇಂಜಿನಿಯರಿಂಗ್ ಪ್ರಕಾರ, ಲೆವೆರಾಕ್ಸ್ ಕೊಡಲಿಯು ಮರದೊಳಗೆ ತೂರಿಕೊಳ್ಳುತ್ತದೆ. ಈ ಕೊಡಲಿಗೆ ಅನ್ವಯಿಸಲಾದ ಸಿದ್ದಾಂತ ಎಂದರೆ ಅದು ಚಲನ ಶಕ್ತಿ(kinetic energy). ಈ ಚಲನ ಶಕ್ತಿಯಿಂದ ಉಳಿದ ಭಾಗವು ಸುತ್ತಲೂ ತಿರುಗುತ್ತದೆ. ಕಡಿಮೆ ಬಲವನ್ನು ಬಳಸಿ ಮರವನ್ನು ಕಡಿಯುವುದು ಈ ಕೊಡಲಿ ವಿನ್ಯಾಸ ಗುರಿಯಾಗಿದೆ.

First published: