Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

ಹವಾಮಾನ ಹಾಗೂ ನೈಸರ್ಗಿಕ ಶಕ್ತಿ ಕುರಿತಂತೆ ಚಿಂತನೆ ನಡೆಸುವ ಎಂಬರ್ (Ember) ಎಂಬ ಸಂಸ್ಥೆಯು ಹೇಳಿರುವಂತೆ ಜಗತ್ತಿನಲ್ಲಿ 50 ದೇಶಗಳು ಅವುಗಳಿಗೆ ಬೇಕಾಗಿರುವ ಒಟ್ಟು ಶಕ್ತಿಯ ಹತ್ತನೇ ಒಂದು ಭಾಗದಷ್ಟು ಶಕ್ತಿಯನ್ನು ಅವು ಗಾಳಿ ಹಾಗೂ ಸೌರಶಕ್ತಿ ಮೂಲಗಳಿಂದಲೇ ಪಡೆಯುತ್ತಿವೆ ಎಂಬುದಾಗಿ ವರದಿ ಮಾಡಿದೆ.

ಸೌರ ವಿದ್ಯುತ್ ಘಟಕಗಳ ಸಂಗ್ರಹ ಚಿತ್ರ

ಸೌರ ವಿದ್ಯುತ್ ಘಟಕಗಳ ಸಂಗ್ರಹ ಚಿತ್ರ

 • Share this:
  ಕಳೆದ ಕೆಲ ವರ್ಷಗಳಿಂದ ಜಾಗತಿಕ ತಾಪಮಾನದಲ್ಲಿ (Global warming) ಹೆಚ್ಚಳವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಮನುಷ್ಯ ತನಗೇನೂ ಆಗುವುದೇ ಇಲ್ಲ ಎಂಬ ಮನಸ್ಥಿತಿಯಲ್ಲಿ ಮುಂದುವರೆಯುತ್ತಲೇ ಇದ್ದಾನೆ. ಆದರೂ, ಜಗತ್ತಿನ ಹಲವಾರು ಸಂಸ್ಥೆಗಳು ಈ ಬಗ್ಗೆ ಮುಂದೆ ಆಗಬಹುದಾದ ಕೆಟ್ಟ ಪರಿಸ್ಥಿತಿಗಳ ಬಗ್ಗೆ ಆಲೋಚಿಸಿದ್ದು, ಇಂದಿನಿಂದಲೇ ಗಂಭೀರವಾಗಿ ಹೆಜ್ಜೆಗಳನ್ನು ಇಡುತ್ತಿರುವುದು ಅಷ್ಟೇ ಸತ್ಯವಾದ ಮಾತು. ಏಕೆಂದರೆ, ಇದೀಗ ಹೊರಬಿದ್ದಿರುವ ವಾಯು (wind) ಹಾಗೂ ಸೌರ ಶಕ್ತಿಗಳ (solar energy) ಕುರಿತಾದ ಅಂಕಿ-ಅಂಶಗಳು (Statistics) ಈ ಅಂಶವನ್ನು ದೃಢಪಡಿಸುತ್ತವೆ ಎಂದರೂ ತಪ್ಪಿಲ್ಲ. ಇತ್ತೀಚಿಗಷ್ಟೇ ಮಾಡಲಾಗಿರುವ ಹೊಸ ಅಧ್ಯಯನವೊಂದರ ಪ್ರಕಾರ, 2021 ರಲ್ಲಿ ಪ್ರಥಮ ಬಾರಿಗೆ ಜಾಗತಿಕ ಮಟ್ಟದಲ್ಲಿ ಗಾಳಿ ಹಾಗೂ ಸೌರಶಕ್ತಿಗಳನ್ನು ಬಳಸಿಕೊಂಡು ಶೇ. 10 ರಷ್ಟು ವಿದ್ಯುತ್ ಶಕ್ತಿಯನ್ನು (Electrical energy) ಸೃಷ್ಟಿಸಲಾಗಿರುವ ಸಂಗತಿ ಹೊರಬಿದ್ದಿದೆ.

  ಎಂಬರ್ ಸಂಸ್ಥೆಯ ವರದಿ

  ಹವಾಮಾನ ಹಾಗೂ ನೈಸರ್ಗಿಕ ಶಕ್ತಿ ಕುರಿತಂತೆ ಚಿಂತನೆ ನಡೆಸುವ ಎಂಬರ್ (Ember) ಎಂಬ ಸಂಸ್ಥೆಯು ಹೇಳಿರುವಂತೆ ಜಗತ್ತಿನಲ್ಲಿ 50 ದೇಶಗಳು ಅವುಗಳಿಗೆ ಬೇಕಾಗಿರುವ ಒಟ್ಟು ಶಕ್ತಿಯ ಹತ್ತನೇ ಒಂದು ಭಾಗದಷ್ಟು ಶಕ್ತಿಯನ್ನು ಅವು ಗಾಳಿ ಹಾಗೂ ಸೌರಶಕ್ತಿ ಮೂಲಗಳಿಂದಲೇ ಪಡೆಯುತ್ತಿವೆ ಎಂಬುದಾಗಿ ವರದಿ ಮಾಡಿದೆ.

  ಕೋವಿಡ್ ಚೇತರಿಕೆ ಬಳಿಕ ವಿದ್ಯುತ್‌ಚ್ಛಕ್ತಿಗೆ ಬೇಡಿಕೆ

  2021 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ವಿಶ್ವದ ಆರ್ಥಿಕತೆ ಚೇತರಿಸಿಕೊಂಡಂತೆ, ಈ ಸಂದರ್ಭದಲ್ಲಿ ವಿದ್ಯುತ್ ಶಕ್ತಿಗೆ ಬೇಡಿಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದ ಪ್ರಥಮ ಬಾರಿಗೆ 1985ರ ನಂತರ ಕಲ್ಲಿದ್ದಲಿಗೆ ಹೆಚ್ಚಿನ ಬೇಡಿಕೆ ಬಂದಿದ್ದನ್ನು ಗಮನಿಸಬಹುದಾಗಿದೆ.

  ಇದನ್ನೂ ಓದಿ: Golden Taxi: ಇಲ್ಲಿ ನೋಡ್ರೀ ಚಿನ್ನದ ಟ್ಯಾಕ್ಸಿ! ಇದ್ರಲ್ಲಿ ಒಂದ್ ರೈಡ್ ಹೋಗ್ಬೇಕಾ, ಜಸ್ಟ್ 7 ಲಕ್ಷ ಕೊಡಿ!

   ಸೌರ ಹಾಗೂ ಗಾಳಿ ಶಕ್ತಿ ಉತ್ಪಾದನೆ ಹೆಚ್ಚಳ

  ಜಗತ್ತಿನಲ್ಲೇ 2021ರಲ್ಲಿ ಪ್ರಥಮ ಬಾರಿಗೆ ಗಾಳಿ, ಸೌರ ಹಾಗೂ ಇತರೆ ನೈಸರ್ಗಿಕ ಮೂಲಗಳನ್ನು ಬಳಸಿ ಉತ್ಪಾದಿಸಲಾದ ವಿದ್ಯುತ್ ಶಕ್ತಿಯ ಪ್ರಮಾಣವು 38% ರಷ್ಟಿದ್ದು ಇದರಲ್ಲಿ ಪ್ರಥಮ ಬಾರಿಗೆ 10% ರಷ್ಟು ವಿದ್ಯುತ್ ಅನ್ನು ಸೌರ ಪ್ಯಾನಲ್‌ಗಳು ಹಾಗೂ ವಿಂಡ್ ಟರ್ಬೈನ್‌ಗಳಿಂದ ಉತ್ಪಾದಿಸಲಾಗಿದೆ ಎಂಬುದಾಗಿ ವರದಿ ಹೇಳಿದೆ. 2015 ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿದಾಗಿನಿಂದ, ಇಲ್ಲಿಯವರೆಗೆ ಸೌರ ಹಾಗೂ ಗಾಳಿ ಶಕ್ತಿಯ ಉತ್ಪಾದನೆ ದುಪ್ಪಟ್ಟಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

  ಸಹಜ ಶಕ್ತಿಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡಿರುವ ದೇಶಗಳೆಂದರೆ ನೆದರ್ಲ್ಯಾಂಡ್, ಆಸ್ಟ್ರೇಲಿಯಾ ಮತ್ತು ವಿಯೆಟ್ನಾಂ. ಇವು ತಮ್ಮ ಹತ್ತನೇ ಒಂದು ಭಾಗದಷ್ಟು ಶಕ್ತಿಯನ್ನು ಪಳೆಯುಳಿಕೆ ಇಂಧನಗಳ ಬದಲಾಗಿ ಶುದ್ಧ ಎನರ್ಜಿ ಮೂಲಗಳಿಂದಲೇ ಉತ್ಪಾದಿಸುತ್ತಿರುವುದಾಗಿ ವರದಿಯಲ್ಲಿ ದಾಖಲಿಸಲಾಗಿದೆ.

  ನೆದರ್‌ಲ್ಯಾಂಡ್‌ ಬಗ್ಗೆ ಮೆಚ್ಚುಗೆ

  ನೆದರ್‌ಲ್ಯಾಂಡ್‌ ಶುದ್ಧ ಶಕ್ತಿಯನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಎಂಬರ್ ಸಂಸ್ಥೆಯ ಹೆನ್ನಾ ಬ್ರಾಡ್ಬೆಂಟ್ ಹೇಳಿದ್ದಾರೆ. ಉತ್ತರ ಅಕ್ಷಾಂಶಕ್ಕೆ ಹತ್ತಿರವಾಗಿರುವ ಈ ದೇಶದಲ್ಲಿ ಪರಿಸರಕ್ಕೆ ಅನುಗುಣವಾಗಿ ಅದಕ್ಕೆ ಪೂರಕವಾದ ನೀತಿಯನ್ನು ರೂಪಿಸಿದೆ. ಅದರ ಫಲಶೃತಿಯಾಗಿ ಇಂದು ದೇಶವು ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ತನ್ನ ಶಕ್ತಿಯ ಮೂಲವನ್ನಾಗಿ ಬದಲಾಯಿಸಲು ಸಮರ್ಥವಾಗಿರುವುದಾಗಿ ಬಣ್ಣಿಸಿದ್ದಾರೆ.

  ವಿಯಟ್ನಾಂನಿಂದ ಸಾಧನೆ

  ವಿಯಟ್ನಾಮ್ ಸಹ ಈ ವಿಷಯದಲ್ಲಿ ಅದ್ಭುತ ಸಾಧನೆ ತೋರಿದೆ. ಅದರಲ್ಲೂ ವಿಶೇಷವಾಗಿ ಸೌರಶಕ್ತಿ ಬಳಕೆಗೆ ಸಂಬಂಧಿಸಿದಂತೆ ಒಂದೇ ವರ್ಷದಲ್ಲಿ ಅದು 300% ಏರಿಕೆಯನ್ನು ದಾಖಲಿಸಿರುವುದೇ ಅದರ ಸಾಧನೆಗೆ ಹಿಡಿದಿರುವ ಕೈಗನ್ನಡಿ ಎನ್ನಲಾಗಿದೆ. ವಿಯೆಟ್ನಾಮ್‌ ಸರ್ಕಾರ ರೂಪಿಸಿರುವ ವಿದ್ಯುತ್ ಖರೀದಿಸುವ ಯೋಜನೆಯು ಬಹಳಷ್ಟು ನಾಗರಿಕರಿಗೆ ಹಾಗೂ ಸೇವಾದಾರರಿಗೆ ಅನುಕೂಲವಾಗಿದ್ದು, ಬಹಳಷ್ಟು ಜನರು ತಾವು ಉತ್ಪಾದಿಸುವ ಶಕ್ತಿಯನ್ನು ಸರ್ಕಾರಕ್ಕೆ ಮಾರುವುದು ಜನಪ್ರಿಯವಾಗಿದೆ ಎಂದು ಎಂಬರ್ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.

  ಚೀನಾ, ಭಾರತದಲ್ಲಿ ಕಲ್ಲಿದ್ದಲಿಗೆ ಬೇಡಿಕೆ

  ಇನ್ನೊಂದೆಡೆ ಕಲ್ಲಿದ್ದಲಿನ ಬೇಡಿಕೆಯು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ಹೇಳಿರುವ ಎಂಬರ್, ವಿಶೇಷವಾಗಿ ಏಷ್ಯಾದ ಚೀನಾ ಹಾಗೂ ಭಾರತದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲಿನ ಬೇಡಿಕೆ ಸಾಕಷ್ಟಿದೆ ಎಂದಿದೆ. ಆದರೂ ಕಲ್ಲಿದ್ದಲಿಗಿಂತಲೂ ಒಂದು ಪ್ರತಿಶತದಷ್ಟು ಹೆಚ್ಚು ಬೇಡಿಕೆ ನೈಸರ್ಗಿಕ ಅನಿಲ ಬೇಡಿಕೆ ಗಳಿಸಿದೆ ಎನ್ನಲಾಗಿದೆ. ಸಂಸ್ಥೆಯ ಡೇವ್ ಜೋನ್ಸ್ ಹೇಳುವ ಪ್ರಕಾರ ಅನಿಲದ ಬೇಡಿಕೆ ಕಳೆದ ವರ್ಷ ಹೇಗಿತ್ತೆಂದರೆ ಕಲ್ಲಿದ್ದಲಿಗಿಂತ ಅನಿಲದ ಬೆಲೆ ಹೆಚ್ಚಾಗಿತ್ತು ಎಂಬುದಾಗಿ ವಿವರಿಸುತ್ತಾರೆ.

  ನೈಸರ್ಗಿಕ ಅನಿಲಗಳಿಗೂ ಭಾರೀ ಬೇಡಿಕೆ

  ಕಳೆದ ವರ್ಷಕ್ಕೆ ಹೋಲಿಸಿದರೆ ಇಂದು ಯುರೋಪ್ ಹಾಗೂ ಏಷ್ಯಾದ ಬಹುಭಾಗದಲ್ಲಿ ನೈಸರ್ಗಿಕ ಅನಿಲದ ಬೇಡಿಕೆ ಎಷ್ಟು ಹೆಚ್ಚಾಗಿದೆ ಎಂದರೆ ಬೆಲೆಯಲ್ಲಿ ಹತ್ತು ಪಟ್ಟು ಏರಿಕೆಯನ್ನು ಕಾಣಬಹುದಾಗಿದೆ ಎಂದಿದ್ದಾರೆ. ಪ್ರಸ್ತುತ ವಿದ್ಯಮಾನಗಳಿಂದ ಈಗಾಗಲೇ ಜಾಗತಿಕ ತಾಪಮಾನದಲ್ಲಿ ಹೆಚ್ಚಳವಾಗುತ್ತಿರುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದ್ದು ಏನಿಲ್ಲವೆಂದರೂ ಕಳೆದ ಒಂದು ಶತಮಾನದಲ್ಲಿ ಜಾಗತಿಕ ತಾಪಮಾನದಲ್ಲಿ ಸರಾಸರಿ 1.5 ಡಿಗ್ರಿ ಸೆಂಟಿಗ್ರೇಡ್ ಏರಿಕೆಯಾಗಿದೆ.

  ಇದನ್ನೂ ಓದಿ: Viral News: ಈ ನಾಯಿ 'ಸಲಿಂಗಕಾಮಿ'ಯಂತೆ! ಯಾರಿಗೂ ಬೇಡದ ಶ್ವಾನವನ್ನು ಸಾಕುತ್ತಿದ್ದಾರೆ 'ಗೇ' ದಂಪತಿ!

  ಇದು ಮುಂದುವರಿದಲ್ಲಿ ಭೂಮಿಯು ಸಹಿಸಲಾಗದ ನಷ್ಟ ಅನುಭವಿಸುವ ಸಾಧ್ಯತೆಯಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶುದ್ಧ ಶಕ್ತಿಗಳತ್ತ ಮುಖ ಮಾಡುವುದು ಸದ್ಯದ ಸಮಯದ ಅತಿ ಆದ್ಯತೆಯ ಬೇಡಿಕೆಯಾಗಿದೆ. ವಿಜ್ಞಾನಿಗಳು ಅಂದಾಜಿಸಿರುವಂತೆ ಸೌರ ಹಾಗೂ ಗಾಳಿ ಶಕ್ತಿಗಳು ವರ್ಷಕ್ಕೆ ಸರಾಸರಿ 20% ರಷ್ಟು ಜಾಗತಿಕವಾಗಿ ಏರುತ್ತ ಹೋದರೆ 2030ರವರೆಗೆ ಒಂದು ಉತ್ತಮವಾದ ಪರಿಸರದಲ್ಲಿ ನಮ್ಮನ್ನು ನಾವು ಸುರಕ್ಷಿತವಾದ ರೇಖೆಯಲ್ಲಿ ಇರಿಸಬಹುದಾಗಿದೆ ಎನ್ನಲಾಗಿದೆ.
  Published by:Annappa Achari
  First published: