Community Forest: ಐಐಟಿ ಹಳೆ ವಿದ್ಯಾರ್ಥಿ ಉದ್ಯೋಗ ತೊರೆದು 160 ರೈತರೊಂದಿಗೆ 400 ಎಕರೆ ಸಾಮೂಹಿಕ ಅರಣ್ಯ ಕೃಷಿ ಮಾಡಿ ಗೆದ್ದ ಯಶೋಗಾಥೆ!

ಕೂರ್ಗ್ ಮತ್ತು ಹೈದರಾಬಾದ್‌ನ ಪೂಮಾಲೆಯಲ್ಲಿ 400 ಎಕರೆ ಭೂಮಿಯಲ್ಲಿ ಸುಮಾರು 160 ಸದಸ್ಯರು ಅರಣ್ಯ ಕೃಷಿ ಮಾಡಲಾಗುತ್ತಿದ್ದಾರೆ. "ಮುಂಬೈ ಮತ್ತು ಚಿಕ್ಕಮಗಳೂರು ಬಳಿ ಇನ್ನೂ ಎರಡು ಸಾಮೂಹಿಕ ಯೋಜನೆಗಳನ್ನು ರೂಪಿಸಲಾಗಿದೆ,

ಸುನಿತ್ ರೆಡ್ಡಿ

ಸುನಿತ್ ರೆಡ್ಡಿ

 • Share this:
  ಹೈದರಾಬಾದಿನ ಉದ್ಯಮಿ ಸುನಿತ್ ರೆಡ್ಡಿ (Sunith Reddy) ಅವರು 'ಸುಸ್ಥಿರ ಜೀವನಶೈಲಿ'ಯಿಂದ ಬದುಕುವ ಕನಸಿನೊಂದಿಗೆ ನಗರ ಜೀವನದಿಂದ ಹೊರಗೆ ಹೋಗಲು ಬಯಸಿದ್ದರು. ಯಾವಾಗಲೂ ಕಿಕ್ಕಿರಿದ ನಗರ ಪ್ರದೇಶಗಳು ಮತ್ತು ಒತ್ತಡದ ಜೀವನಶೈಲಿಗಳಾದ ದೀರ್ಘ ಪ್ರಯಾಣದ ಸಮಯಗಳು ಮತ್ತು ಅನಾರೋಗ್ಯಕರ ಆಹಾರವು ನಗರ ಜೀವನ ಶೈಲಿಯನ್ನು ಅಸಹನೀಯವಾಗಿಸುತ್ತದೆ ಎಂದು ಸುನಿತ್ ರೆಡ್ಡಿ ಅವರು ಹೇಳುತ್ತಾರೆ. "ಅನೇಕರಂತೆ, ನಾನು ದಣಿದ ನಗರದ ಜೀವನದಿಂದ ಬೇಸತ್ತಿದ್ದೇನೆ ಮತ್ತು ಅದನ್ನು ತ್ಯಜಿಸಲು ಹಾಗೂ ದೂರದ ಸ್ಥಳಕ್ಕೆ ಹೋಗಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಕೃಷಿಯತ್ತ ಸಾಗಲು ನಿರ್ಧಾರ ತೆಗೆದುಂಡೆ" ಎಂದು ಅವರು ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  2015-16ರ ಸುಮಾರಿಗೆ, ಅವರು ಬೆಂಗಳೂರಿನ ಸಮೀಪದ ಒಂದು ಸಣ್ಣ ಭೂಮಿಯಲ್ಲಿ ಸಾವಯವ ಕೃಷಿ ಆರಂಭಿಸಿದರು. ಆದರೆ ಶೀಘ್ರದಲ್ಲೇ, ಆರಂಭಿಕ ಬಿಕ್ಕಟ್ಟಿನ ವಾಸ್ತವವು ಅರಿವಾಯಿತು. "ನಾನು ಸಣ್ಣ- ಪ್ರಮಾಣದ ಕೃಷಿಯ ಆರ್ಥಿಕ ಸವಾಲುಗಳನ್ನು ಕಲಿತಿದ್ದೇನೆ. ನಾನು ಪ್ರತ್ಯೇಕವಾಗಿ ರೈತರನ್ನು ಸಹ ಸಂಪರ್ಕಿಸಿದೆ. ಅನೇಕರು ಕೃಷಿ ಭೂಮಿಯನ್ನು ಖರೀದಿಸಿದರು ಮತ್ತು ವಾರಾಂತ್ಯದ ರೈತರಾದರು. ಕೆಲವರು ಅದನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದರು. ಆದರೆ ಕೆಲವು ವರ್ಷಗಳ ನಂತರ ಕೃಷಿ ಮೇಲೆ ಅವರ ಉತ್ಸಾಹ ಕಳೆಗುಂದಿದ ಕಾರಣ ಅನೇಕರು ಬಸವಳಿದರು. ಮರುಕಳಿಸುವ ವೆಚ್ಚಗಳು, ಉದ್ಯೋಗಿಗಳನ್ನು ನಿರ್ವಹಿಸುವುದು ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಯಿತು. ಮತ್ತು ಇತರ ಸವಾಲುಗಳನ್ನು ಎದುರಿಸಿದವು, ”ಎಂದು ಅವರು ವಿವರಿಸುತ್ತಾರೆ. "ಇದಲ್ಲದೆ, ನಾವು ಸುಗ್ಗಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ ಸಹ,  ಗಮನಾರ್ಹ ಲಾಭವನ್ನು ನೀಡಲಿಲ್ಲ" ಎಂದು ಅವರು ಹೇಳುತ್ತಾರೆ.

  ಬಳಿಕ 2017 ರಲ್ಲಿ, ಸುನಿತ್ ಜೀವನವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಂಡರು. ಸಮಾನ ಮೌಲ್ಯ ಹೊಂದಿರುವ ಸಮಾನ ಮನಸ್ಕರಿಗಾಗಿ ಯಶಸ್ವಿ ಸಮುದಾಯ ಅರಣ್ಯ ಯೋಜನೆಯನ್ನು ಮುಂದುವರಿಸಲು ಅವರು ತಮ್ಮ ಕೆಲಸವನ್ನು ತೊರೆದರು.

  ಸುಸ್ಥಿರ ಸಮುದಾಯವನ್ನು ನಿರ್ಮಾಣ

  ಐಐಟಿ- ಮದ್ರಾಸ್ ಹಳೆಯ ವಿದ್ಯಾರ್ಥಿಯಾಗಿರುವ ಸುನಿತ್ ಹೇಳುವಂತೆ, ಆರಂಭದಲ್ಲಿ, ಅವರ ಸ್ನೇಹಿತ ಶೌರ್ಯ ಚಂದ್ರ ಮತ್ತು ಇತರ ಐದು ಮಂದಿ ಈ ಗುಂಪಿನ ಸದಸ್ಯರಾದರು. ಅವರು ತಮ್ಮ ಯೋಜನೆಯನ್ನು ಆರಂಭಿಸಲು ಹೈದರಾಬಾದಿನಲ್ಲಿ 10 ಎಕರೆ ಜಾಗವನ್ನು ನೋಡಲು ಆರಂಭಿಸಿದರು. "ಭೂಮಿಯನ್ನು ಖರೀದಿಸಿ ಸಣ್ಣ ಸಣ್ಣ ತಪ್ಪುಗಳ ಮೇಲೆ ಗಮನ ಕೇಂದ್ರಿಕರಿಸಿ ಕೆಲಸ ಮಾಡಿ ಫಲಿತಾಂಶಗಳನ್ನು ಕಂಡೆವು. ಆರಂಭಿಕ ಯಶಸ್ಸಿನಿಂದ ಪ್ರೇರೇಪಿಸಲ್ಪಟ್ಟ ನಾವು ಕೃಷಿಯನ್ನು ಮುಂದುವರಿಸಿದೆವು. ಅಂತಿಮವಾಗಿ, ಹೆಚ್ಚಿನ ಜನರು ಸೇರಿಕೊಂಡರು, ಮತ್ತು ಒಂದು ವರ್ಷದೊಳಗೆ, ನಮ್ಮ ಸಂಖ್ಯೆಯು ಹೆಚ್ಚಾಯಿತು. ಈ ಕ್ರಮಕ್ಕೆ ನಾವು 'ಬಿಫಾರೆಸ್ಟ್' ಎಂದು ನಾಮಕರಣ ಮಾಡಿದ್ದೆವು ಎಂದು ವಿವರಿಸಿದರು.

  "ನಾವು ಸುಸ್ಥಿರ ಆಹಾರ ಅರಣ್ಯವನ್ನು ನಿರ್ಮಾಣ ಮಾಡಿದೆವು. ಮತ್ತು ಆಹಾರ, ನೀರು ಮತ್ತು ವಿದ್ಯುತ್ ಭದ್ರತೆಗೆ ಕಾರಣವಾಗುವ ಪುನರುತ್ಪಾದಕ ಕೃಷಿ ವಿಧಾನಗಳ ಆಧಾರದ ಮೇಲೆ ಸಾಮೂಹಿಕವಾಗಿ ಒಡೆತನದ ವಾಸಸ್ಥಳಗಳನ್ನು ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ.

  ಸಾಂಪ್ರದಾಯಿಕ ಯೋಜನೆಗಳಿಗಿಂತ ಭಿನ್ನವಾಗಿ, ಇಲ್ಲಿನ ಭೂಮಿಯು ಸಾಮೂಹಿಕ ಒಡೆತನದಲ್ಲಿದೆ, ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜಲಮೂಲಗಳು, ಬೆಟ್ಟಗಳು, ಜಲಪಾತಗಳು, ಹೊಲಗಳು, ಅರಣ್ಯಗಳು ಮತ್ತು ಇತರ ವಲಯಗಳಂತಹ ಎಲ್ಲಾ ಸಂಪನ್ಮೂಲಗಳಿಗೆ ಸಮಾನ ಪ್ರವೇಶವನ್ನು ಹೊಂದಿದ್ದಾರೆ ಎಂದು ಅವರು ಹೇಳುತ್ತಾರೆ. "ಸಮುದಾಯದ ಸದಸ್ಯರು ಪ್ರತಿ ಸಾಮೂಹಿಕವನ್ನು ಹೇಗೆ ನಡೆಸುತ್ತಾರೆ ಎಂಬುದರ ಕುರಿತು ಚಾರ್ಟರ್ಡ್ ಕೋರ್ಸ್ ಅನ್ನು ನಿರ್ಧರಿಸುತ್ತಾರೆ ಮತ್ತು ಪ್ರತಿ ಸಾಮೂಹಿಕ ಕೃಷಿಯಿಂದ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಬರುವ ಆದಾಯದ ಪ್ರಮಾಣಾನುಗುಣವಾದ ಪಾಲನ್ನು ಪಡೆಯುತ್ತಾರೆ" ಎಂದು ಸುನಿತ್ ಹೇಳುತ್ತಾರೆ.

  ಇದನ್ನು ಓದಿ: Canva: ಸ್ಟಾರ್ಟಪ್‌ ಆರಂಭಿಸಿ 12 ಬಿಲಿಯನ್ ಡಾಲರ್‌ ಸಂಪತ್ತು ಮಾಡಿಕೊಂಡ ಗಂಡ-ಹೆಂಡತಿ!

  ಕೂರ್ಗ್ ಮತ್ತು ಹೈದರಾಬಾದ್‌ನ ಪೂಮಾಲೆಯಲ್ಲಿ 400 ಎಕರೆ ಭೂಮಿಯಲ್ಲಿ ಸುಮಾರು 160 ಸದಸ್ಯರು ಅರಣ್ಯ ಕೃಷಿ ಮಾಡಲಾಗುತ್ತಿದ್ದಾರೆ. "ಮುಂಬೈ ಮತ್ತು ಚಿಕ್ಕಮಗಳೂರು ಬಳಿ ಇನ್ನೂ ಎರಡು ಸಾಮೂಹಿಕ ಯೋಜನೆಗಳನ್ನು ರೂಪಿಸಲಾಗಿದೆ, ಇದು ಸೇರಿದರೆ ಇವರ ಸಮುದಾಯ ಅರಣ್ಯ ಕೃಷಿ ಭೂ ಪ್ರದೇಶವನ್ನು 1,000 ಎಕರೆಗೆ ವಿಸ್ತರಿಸುತ್ತದೆ" ಎಂದು ಅವರು ಹೇಳುತ್ತಾರೆ. ಇಲ್ಲಿ ಕಾಫಿ, ಮೊರಿಂಗಾ, ರಾಗಿ, ಬಾಳೆಹಣ್ಣು ಮತ್ತು ಬಹು-ಬೆಳೆ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ.
  Published by:HR Ramesh
  First published: