Viral Video: ಹಿಮಾಲಯನ್ ಕಪ್ಪು ಕರಡಿಯ ರಕ್ಷಣೆ..! ಗೂಡಿನಿಂದ ಕಾಡಿಗೆ ಓಡಿದ ಕರಡಿಯ ನೋಡಿ ಭಾವುಕರಾದ ನೆಟ್ಟಿಗರು

ಹಿಮಾಲಯದ ಕಪ್ಪು ಕರಡಿಯನ್ನು ಕಾಪಾಡುವ ಅದ್ಭುತ ವಿಡಿಯೋ ತುಣುಕೊಂದು ನೆಟ್ಟಿಗರ ಹೃದಯ ಗೆದ್ದಿದೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಹಿಮಾಲಯನ್ ಕಪ್ಪು ಕರಡಿ

ಹಿಮಾಲಯನ್ ಕಪ್ಪು ಕರಡಿ

  • Share this:
ಕಾಡಿನಿಂದ (Forest) ನಾಡಿಗೆ ಬಂದು ಕಾಡುಪ್ರಾಣಿಗಳು (Wild Animals) ಸಿಕ್ಕಿಹಾಕಿಕೊಳ್ಳುವ ಘಟನೆ ನಡೆಯುತ್ತಲೇ ಇರುತ್ತದೆ. ಆಹಾರ (Food) ಹುಡುಕುತ್ತಲೋ ಅಥವಾ ದಾರಿ ತಪ್ಪಿಯೋ ಕಾಡು ಪ್ರಾಣಿಗಳು ಏನಾದರೂ ನಾಡಿಗೆ ಬಂದರೆ ಮರಳಿ ಹೋಗಲು ಪರದಾಡುತ್ತವೆ. ಬೆಳೆ (Crop) ಹಾಳು ಮಾಡಿದ್ದಕ್ಕೋ ಇ್ನನೇನೋ ಕಾರಣಕ್ಕೆ ಗ್ರಾಮಸ್ಥರೂ ಅದನ್ನು ಓಡಿಸುತ್ತಾರೆ. ಅಂತೂ ಊರಿನ ಕಡೆಗೇನಾದರೂ ಕಾಡಿನ ಪ್ರಾಣಿ ಬಂದು ಸಿಕ್ಕಿಹಾಕಿಕೊಂಡರೆ ಅದು ಪರದಾಡುವುದಂತೂ ತಪ್ಪುವುದಿಲ್ಲ. ಇನ್ನು ಕರಡಿಯಂತಹ (Bear) ಪ್ರಾಣಿ ಬಂದರೆ ಅದರ ಮುಂದೆ ಹೋಗುವುದಕ್ಕೂ ಜನರು ಭಯಪಡುತ್ತಾರೆ. ಕಲ್ಲು ಕೋಲುಗಳಿಂದ ಅದನ್ನು ಬೆದರಿಸುತ್ತಾರೆ. ಇಂಥಹ ಘಟನೆಗಳು (Incidents) ನಡೆಯುತ್ತಲೇ ಇರುತ್ತವೆ. ಕೊನೆಗೆ ಅರಣ್ಯಾಧಿಕಾರಿಗಳ (Forest Officers) ಗಮನಕ್ಕೆ ಬಂದಾಗ ಮಾತ್ರ ಇವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಹೊರಗೆ ಬಿಡಲು ಸಾಧ್ಯವಾಗುತ್ತದೆ. ಈಗ ಇಂತಹದ್ದೇ ಘಟನೆಯೊಂದು ನಡೆದಿದ್ದು ಘಟನೆಯ ವಿಡಿಯೋ (Video) ಎಲ್ಲೆಡೆ ವೈರಲ್ ಆಗಿದೆ.

ಹಿಮಾಲಯದ ಕಪ್ಪು ಕರಡಿಯನ್ನು ಕಾಪಾಡುವ ಅದ್ಭುತ ವಿಡಿಯೋ ತುಣುಕೊಂದು (Video Clip) ನೆಟ್ಟಿಗರ ಹೃದಯ ಗೆದ್ದಿದೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ (Twitter) ಹಂಚಿಕೊಂಡಿರುವ ವೀಡಿಯೊ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಗೂಡನ್ನು ಕಾಡಿಗೆ ಒಯ್ದ ಅಧಿಕಾರಿಗಳು

ಕೆಲವು ಸ್ಥಳೀಯ ಗ್ರಾಮಸ್ಥರು ಪ್ರಾಣಿಯನ್ನು ಸೂಕ್ಷ್ಮವಾಗಿ ವೀಕ್ಷಿಸಲು ಪ್ರಯತ್ನಿಸುತ್ತಿರುವಾಗ ಅರಣ್ಯ ಅಧಿಕಾರಿಗಳ ಗುಂಪು ಎಚ್ಚರಿಕೆಯಿಂದ ಕರಡಿ ಇದ್ದ ಗೂಡನ್ನು ಕಾಡಿಗೆ ಒಯ್ಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ಗೂಡಿನ ಬಾಗಿಲು ತೆರೆಯಲಾಗಿದೆ. ಬಾಗಿಲಿ ತೆರೆದ ಕೂಡಲೇ ಕರಡಿ ಕಾಡಿಗೆ ನುಗ್ಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಕರಡಿಯ ಸ್ವಾತಂತ್ರ್ಯದ ಕ್ಷಣವು ನೋಡುಗರನ್ನು ಭಾವುಕರನ್ನಾಗಿಸುತ್ತದೆ.

ಪೋಸ್ಟ್ ಶೇರ್ ಮಾಡಿದ ಅಧಿಕಾರಿ

ಸ್ವಾತಂತ್ರ್ಯ ಹೇಗಿದೆ!! ಹಿಮಾಲಯದ ಕಪ್ಪು ಕರಡಿ ಸಿಲುಕಿಕೊಂಡಿತ್ತು. ಇಂದು ಬೆಳಗ್ಗೆ ನಮ್ಮ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಜನರು ಮತ್ತು ಪ್ರಾಣಿಗಳಿಗೆ ಯಾವುದೇ ಗಾಯಗಳಿಲ್ಲದೆ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ. ತಂಡದ ಕೆಲಸ” ಎಂದು ಕಸ್ವಾನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Bear: ಸಿಕ್ಕ-ಸಿಕ್ಕ ಮನೆಗಳಿಗೆಲ್ಲಾ ನುಗ್ಗುತ್ತೆ ಈ ಕರಡಿ, ಯಾರಾದ್ರೂ ಗಾಂಚಾಲಿ ಆಡುದ್ರೆ ಕಥೆ ಮುಗೀತು!

“ವಿವಿಧ ತಂಡಗಳು ರಕ್ಷಣೆಗಾಗಿ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ಸ್ಥಳವನ್ನು ತಲುಪಿದವು. ಸ್ಥಳವು ಅರಣ್ಯದಿಂದ ಬಹಳ ದೂರದಲ್ಲಿದೆ, ಆದ್ದರಿಂದ ಕರಡಿಯನ್ನು ರಕ್ಷಿಸಲಾಯಿತು. ವೈದ್ಯಕೀಯ ತಪಾಸಣೆಯ ನಂತರ ಪ್ರಾಣಿಯನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು, ”ಎಂದು ಅವರು ಹೇಳಿದ್ದಾರೆ.

ವೀಡಿಯೊವನ್ನು 44 ಸಾವಿರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಹಲವಾರು ಕಮೆಂಟ್​ಗಳೂ ಬಂದಿವೆ. ಅರಣ್ಯಾಧಿಕಾರಿಗಳ ತಂಡಕ್ಕೆ ಜನರು ಧನ್ಯವಾದ ಅರ್ಪಿಸಿದರು. ಬಹಳಷ್ಟು ಜನರು ವಿಡಿಯೋವನ್ನು ರೀಟ್ವೀಟ್ ಮಾಡಿದ್ದು ಮಾತ್ರವಲ್ಲದೆ ಇದನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Bear Attack: ಕರಡಿ ಇವನ ಮುಖಕ್ಕೆ ಪರಚಿ ಹೋಯ್ತು, 300 ಹೊಲಿಗೆ, 4 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಕೊನೆಗೂ ಬದುಕುಳಿದ ವ್ಯಕ್ತಿ!

ಬೇಸಿಗೆಯಲ್ಲಿ, ಕಪ್ಪು ಕರಡಿಗಳನ್ನು ನೇಪಾಳ, ಚೀನಾ, ಭೂತಾನ್, ಭಾರತ ಮತ್ತು ಟಿಬೆಟ್‌ನಲ್ಲಿ 10,000 ರಿಂದ 12,000 ಅಡಿ (3,000 ರಿಂದ 3,700 ಮೀ) ಎತ್ತರದಲ್ಲಿ ಮರದ ರೇಖೆಯ ಸಮೀಪದಲ್ಲಿ ಬೆಚ್ಚಗಿನ ಪ್ರದೇಶಗಳಲ್ಲಿ ಕಾಣಬಹುದು. ಚಳಿಗಾಲದಲ್ಲಿ, ಅವುಗಳು ಹೆಚ್ಚು ಉಷ್ಣವಲಯದ ಕಾಡುಗಳಿಗೆ 5,000 ಅಡಿ (1,500 ಮೀಟರ್‌ಗಳು) ಕಡಿಮೆ ಸಾಗುತ್ತವೆ.
Published by:Divya D
First published: