• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Forest Road: ಕಾಡಿನ ದಾರಿಯಲ್ಲಿ ಹೋಗುವಾಗ ನಿಮ್ಮ ಸ್ಪೀಡ್​ ಮೇಲೆ ಕಂಟ್ರೋಲ್ ಇರಲಿ, ಏಕೆ ಅಂತೀರಾ? ಈ ವಿಡಿಯೋ ನೋಡಿ

Forest Road: ಕಾಡಿನ ದಾರಿಯಲ್ಲಿ ಹೋಗುವಾಗ ನಿಮ್ಮ ಸ್ಪೀಡ್​ ಮೇಲೆ ಕಂಟ್ರೋಲ್ ಇರಲಿ, ಏಕೆ ಅಂತೀರಾ? ಈ ವಿಡಿಯೋ ನೋಡಿ

ವಾಹನ ಸವಾರರೇ ಎಚ್ಚರ!

ವಾಹನ ಸವಾರರೇ ಎಚ್ಚರ!

ನಾವೆಲ್ಲಾ ರಾತ್ರಿ ಹೊತ್ತು ಕಾರು ವೇಗವಾಗಿ ಓಡಿಸಿಕೊಂಡು ಹೋಗುವುದರ ಫಲಿತಾಂಶ ಇದು. ವೈರಲ್​ ಆದ ವಿಡಿಯೋ ನೋಡಿ.

  • Share this:

ಸಾಮಾನ್ಯವಾಗಿ ನಾವು ಬೆಳಿಗ್ಗೆ ಕಾರಿನಲ್ಲಿ (Car) ಅಥವಾ ಬೈಕ್  (Bike) ಮೇಲೆ ಸ್ವಲ್ಪ ನಾವಿರುವ ಊರಾಚೆಗೆ ಹೋದರೆ ಸಾಕು, ಅಲ್ಲಿ ರಸ್ತೆಯ ಮೇಲೆ ಅನೇಕ ಕಪ್ಪೆಗಳು, ಹಾವುಗಳು ಮತ್ತು ಕೆಲವು ಸಾರಿ ಈ ನಾಯಿಗಳು ಮತ್ತು ರಸ್ತೆ ಅಕ್ಕ ಪಕ್ಕ ಸ್ವಲ್ಪ ಕಾಡಿದ್ದರೆ, ಅಲ್ಲಿ ಮೊಲಗಳು (Rabit) ಮತ್ತು ಅಳಿಲುಗಳು ಸತ್ತು ಬಿದ್ದಿರುವುದನ್ನು ನಾವು ನೋಡುತ್ತೇವೆ. ಇದೇನ್ ಆಶ್ಚರ್ಯ? ನಿನ್ನೆ ಸಂಜೆ, ರಾತ್ರಿ ರಸ್ತೆಯ ಮೇಲೆ ಓಡಾಡುವಾಗ ಇದ್ಯಾವುದು ಪ್ರಾಣಿಗಳು ಸತ್ತು ಬಿದ್ದಿರಲಿಲ್ಲ, ಆದರೆ ಬೆಳಿಗ್ಗೆ ಬೆಳ್ಳಿಗೆ ನೋಡಿದರೆ ಇಷ್ಟೊಂದು ಮುಗ್ದ ಪ್ರಾಣಿಗಳ  (Animals) ಮಾರಣಹೋಮ ನಡೆದಿದೆ ಅಂತ ನಮಗೆ ಅನ್ನಿಸದೆ ಇರದು. ಆದರೆ ಈ ಪ್ರಾಣಿಗಳ ಮಾರಣಹೋಮಕ್ಕೆ ನಾವೇ ಕಾರಣ.


ನಮ್ಮ ಕಾರಿನ ವೇಗ ಮೂಕ ಪ್ರಾಣಿಗಳಿಗೆ ತಂದೊಡ್ಡುತ್ತೆ ಅಪಾಯ


ಹೌದು,  ನಾವೆಲ್ಲಾ ರಾತ್ರಿ ಹೊತ್ತು ಕಾರು ವೇಗವಾಗಿ ಓಡಿಸಿಕೊಂಡು ಹೋಗುವುದರ ಫಲಿತಾಂಶ ಇದು. ರಸ್ತೆ ಮೇಲಿನ ನಮ್ಮ ಅತಿಯಾದ ವೇಗ ಈ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು. ತುಂಬಾ ನಿಧಾನವಾಗಿ ಓಡಿಸಿಕೊಂಡು ಹೋದರೆ ಊರನ್ನು ತಲುಪುವುದು ಹೇಗೆ ಅಂತ ಕೆಲವರ ವಾದ ಇರಬಹುದು. ಆದರೆ ನಿಮ್ಮ ಕಾರಿನ, ಬೈಕಿನ ಬೇಗ ನಿಮ್ಮ ನಿಯಂತ್ರಣದಲ್ಲಿರಲಿ ಅನ್ನೋದಷ್ಟೇ ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ.


ಅದರಲ್ಲೂ ಈ ಕಾಡಿನಲ್ಲಿರುವ ರಸ್ತೆಗಳ ಮೂಲಕ ಅನೇಕರು ರಾತ್ರಿ ತಮ್ಮ ಕಾರನ್ನು ತುಂಬಾನೇ ವೇಗವಾಗಿ ಓಡಿಸಿಕೊಂಡು ಹೋಗುತ್ತಾರೆ. ಅನೇಕ ಬಾರಿ ಕತ್ತಲಲ್ಲಿ ಪ್ರಾಣಿಗಳು ತಮ್ಮ ಮರಿಗಳೊಂದಿಗೆ ರಸ್ತೆಯ ಒಂದು ಬದಿಯ ಕಾಡಿನಿಂದ ಇನ್ನೊಂದು ಬದಿಯಲ್ಲಿರುವ ಕಾಡಿಗೆ ಹೋಗುತ್ತಿರುತ್ತವೆ.



ಅವುಗಳಿಗೆ ನೀವು ಕಣ್ಣಿಗೆ ನೇರವಾಗಿ ಹಾಕುವ ದೊಡ್ಡ ದೊಡ್ಡ ಕಾರಿನ ಲೈಟ್ ಗಳು ಅಥವಾ ಜೋರಾಗಿ ಬಿಟ್ಟು ಬಿಡದೆ ಹೊಡೆಯುವ ಹಾರ್ನ್ ಗಳು ಕೆಲವೊಮ್ಮೆ ಈ ಮೂಕ ಪ್ರಾಣಿಗಳ ಗಮನಕ್ಕೆ ಬಾರದೇ ಸಹ ಇರಬಹುದು. ಆದ್ದರಿಂದ ಬುದ್ದಿಜೀವಿ ಅಂತ ಅನ್ನಿಸಿಕೊಳ್ಳುವ ನಾವುಗಳು ಸ್ವಲ್ಪ ಕಾಡಿನ ರಸ್ತೆಯಲ್ಲಿ ಹೋಗುವಾಗ ನಮ್ಮ ಕಾಲನ್ನು ಕಾರಿನ ಎಕ್ಸಲೆಟರ್ ಮೇಲೆ ಸ್ವಲ್ಪ ಹಗುರವಾಗಿ ಒತ್ತಬೇಕು, ಎಂದರೆ ವೇಗದ ಮೇಲೆ ನಿಯಂತ್ರಣವಿರಬೇಕು ಅಂತ ಅರ್ಥ.


ಐಎಫ್‌ಎಸ್ ಅಧಿಕಾರಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ನೋಡಿ


ರಾತ್ರಿಯಲ್ಲಿ ವೇಗವಾಗಿ ಚಲಿಸುವ ಕಾರುಗಳು ಕಾಡು ಪ್ರಾಣಿಗಳಿಗೆ ಡಿಕ್ಕಿ ಹೊಡೆದಿರುವ ಸುದ್ದಿಗಳನ್ನು ನಾವು ಆಗಾಗ್ಗೆ ನೋಡುತ್ತಲೇ ಮತ್ತು ಕೇಳುತ್ತಲೇ ಇರುತ್ತೇವೆ. ನಮ್ಮ ನಿರ್ಲಕ್ಷ್ಯ ಮತ್ತು ವೇಗದ ಮೇಲಿನ ನಿಯಂತ್ರಣದ ಕೊರತೆಯಿಂದಾಗಿ, ಅನೇಕ ಮುಗ್ಧ ಪ್ರಾಣಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ.


ಈಗ, ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ಕಾಡಿನ ಮೂಲಕ ಹಾದು ಹೋಗುವ ರಸ್ತೆಗಳಲ್ಲಿ ವೇಗವಾಗಿ ಚಲಿಸುವಾಗ ಮೂಕ ಪ್ರಾಣಿಗಳು ಎಂತಹ ಅಪಾಯದಲ್ಲಿರುತ್ತವೆ ಅಂತ ತೋರಿಸುವ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಚಿಂತೆ ಇಲ್ಲದವರಿಗೆ ಕಾರಲ್ಲೂ ನಿದ್ದೆ! ತಂದೆ ಮತ್ತು ಮಾವನ ನಿದ್ದೆಯ ಫೋಟೋ ಶೇರ್‌ ಮಾಡಿದ ವ್ಯಕ್ತಿ


ಕೆಲವು ವಾರಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಪನ್ನಾ-ಕಟ್ನಿ ರಸ್ತೆಯಲ್ಲಿನ ಒಂದು ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿತ್ತು. ಆ ವೀಡಿಯೋ ಈಗ ವೈರಲ್ ಆಗಿದ್ದು, ಅದನ್ನು ಈಗ ನಂದಾ ಹಂಚಿಕೊಂಡಿದ್ದಾರೆ. ಪನ್ನಾ ಹುಲಿ ಮೀಸಲು ಪ್ರದೇಶವು ಹುಲಿ ಆವಾಸಸ್ಥಾನವಾಗಿದೆ ಮತ್ತು ಇದು ಉತ್ತರ ಮಧ್ಯಪ್ರದೇಶದ ವಿಂಧ್ಯ ಬೆಟ್ಟದಲ್ಲಿದೆ. ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ರಾತ್ರಿ ಹೊತ್ತು ರಸ್ತೆ ದಾಟುವುದನ್ನು ಕಾಣಬಹುದು. ಒಂದು ಕಾರು ಅದೇ ರಸ್ತೆಯಲ್ಲಿ ಜೋರಾಗಿ ಬರುತ್ತದೆ, ಆ ಕಾರಿನ ಹೆಡ್ ಲೈಟ್ ಗಳ ಹಠಾತ್ ಬೆಳಕು ಈ ಹುಲಿ ಮರಿಗಳ ಮೇಲೆ ಬಿದ್ದು, ಅವುಗಳ ತಕ್ಷಣವೇ ಹೆದರಿ ರಸ್ತೆಯ ಇನ್ನೊಂದು ಬದಿಗೆ ವೇಗವಾಗಿ ಓಡಿ ಹೋಗುವುದನ್ನು ಸಹ ಇದರಲ್ಲಿ ನೋಡಬಹುದು.


ಇದನ್ನೂ ಓದಿ: TikTok ಮಾಡುವ ಉತ್ಸಾಹದಲ್ಲಿ ಪ್ರಾಣನೇ ಹೋಗ್ತಾ ಇತ್ತು! ಏನಿದು ಮ್ಯಾಟರ್​?


ಈ ವೀಡಿಯೋ ನೀಡುವ ಸಂದೇಶವನ್ನು ಅರ್ಥ ಮಾಡಿಕೊಳ್ಳಿ


ಅದೃಷ್ಟವಶಾತ್, ತಾಯಿ ಹುಲಿ ಮತ್ತು ಅದರ ಮರಿಗಳು ಸುರಕ್ಷಿತವಾಗಿ ರಸ್ತೆಯನ್ನು ದಾಟಿದವು, ಆದರೆ ಅನೇಕ ಬಾರಿ ಈ ಮರಿಗಳು ಅಷ್ಟು ಅದೃಷ್ಟಶಾಲಿಗಳಾಗಿರುವುದಿಲ್ಲ.


top videos



    "ದಯವಿಟ್ಟು ನಿಧಾನವಾಗಿ ವಾಹನ ಚಲಾಯಿಸಿ ಮತ್ತು ವನ್ಯಜೀವಿ ಆವಾಸಸ್ಥಾನಗಳ ಮೂಲಕ ಹಾದು ಹೋಗುವಾಗ ಅತ್ಯಂತ ಜಾಗರೂಕರಾಗಿರಿ" ಎಂದು ನಂದಾ ತಮ್ಮ ಶೀರ್ಷಿಕೆಯಲ್ಲಿ ವಿನಂತಿಸಿದ್ದಾರೆ. ಈ ವಿಡಿಯೋ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಅಂತಹ ರಸ್ತೆಗಳಲ್ಲಿ ಕಾರುಗಳನ್ನು ನಿಧಾನವಾಗಿ ಓಡಿಸಬೇಕು ಅಂತ ಅನೇಕರು ಹೇಳಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು