IIFL Finance: ವಾಟ್ಸಾಪ್​​​ನಲ್ಲಿ ಕೇವಲ ಒಂದು ಮೆಸೇಜ್ ಕಳುಹಿಸಿ ₹10 ಲಕ್ಷದವರೆಗೆ ಸಾಲ ಪಡೆಯಿರಿ; ಸಂಪೂರ್ಣ ಮಾಹಿತಿ ಇಲ್ಲಿದೆ

Rs 10 lakh loan in 5 minutes: ತಂತ್ರಜ್ಞಾನವನ್ನು ಬಳಸಿಕೊಂಡು, ಐಐಎಫ್ಎಲ್  ವ್ಯಾಪಾರಿಗಳಿಗೆ ಸುಲಭವಾಗಿ ವ್ಯಾಪಾರ ಸಾಲಗಳನ್ನು ನೀಡುತ್ತಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಕೇವಲ ಒಂದು ವಾಟ್ಸಾಪ್​​ ಮೆಸೇಜ್​. ನಂಬಲು ಕಷ್ಟವಾದರೂ ಇದು ಸತ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
how to take IIFL Finance business loan: ಹೊಸ ಉದ್ಯಮವನ್ನು ಪ್ರಾರಂಭಿಸಲು ಯೋಚಿಸಿದ್ದೀರಾ? ಈಗಾಗಲೇ ನಡೆಯುತ್ತಿರುವ ಬ್ಯುಸಿನೆಸ್​​​ನ ಮತ್ತಷ್ಟು ವಿಸ್ತರಿಸಲು ಬಯಸುತ್ತಿದ್ದೀರಾ? ಅಂಥವರಿಗೆ ಇಲ್ಲಿದೆ ನೋಡಿ ಒಳ್ಳೆಯ ಸುದ್ದಿ. ಐಐಎಫ್ಎಲ್ ಫೈನಾನ್ಸ್ (IIFL Finance ) ₹10 ಲಕ್ಷದವರೆಗಿನ ವ್ಯಾಪಾರ ಸಾಲವನ್ನು ನೀಡುತ್ತಿದೆ. ಸಾಧಾರಣವಾಗಿ ಸಾಲ ಪಡೆಯುವುದು ಅಷ್ಟೇನು ಸುಲಭದ ಕೆಲಸವಲ್ಲ. ಅರ್ಜಿ ಸಲ್ಲಿಸಿದ ಎಷ್ಟೋ ದಿನಗಳ ನಂತರವೂ ಸಾಲ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಇದು ಕೆಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದರೆ ತಂತ್ರಜ್ಞಾನ KYC  ಅಪ್‌ಡೇಟ್‌ನೊಂದಿಗೆ, ಪರಿಶೀಲನೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು, ಐಐಎಫ್ಎಲ್  ವ್ಯಾಪಾರಿಗಳಿಗೆ ಸುಲಭವಾಗಿ ವ್ಯಾಪಾರ ಸಾಲಗಳನ್ನು ನೀಡುತ್ತಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಕೇವಲ ಒಂದು ವಾಟ್ಸಾಪ್​​ ಮೆಸೇಜ್​. ನಂಬಲು ಕಷ್ಟವಾದರೂ ಇದು ಸತ್ಯ.

ಅತ್ಯಂತ ಬೇಗ ಸಾಲ ನೀಡುವುದೇ ಗುರಿ

ಕೇವಲ WhatsAppAll ಮೂಲಕ ನೀವು ಅರ್ಜಿ ಸಲ್ಲಿಸಿದರೆ, ಸಾಲ ಮಂಜೂರು ಮಾಡಲಾಗುತ್ತಿದೆ. ವ್ಯಾಪಾರಿಗಳು ವಾಟ್ಸಾಪ್ ಮೂಲಕ 10 ಲಕ್ಷದವರೆಗಿನ ವ್ಯಾಪಾರ ಸಾಲವನ್ನು ಪಡೆಯಬಹುದು. IIFL ಫೈನಾನ್ಸ್ ವ್ಯಾಪಾರಿಗಳಿಗೆ ವ್ಯಾಪಾರ ಸಾಲ ಪ್ರಕ್ರಿಯೆಯನ್ನು ಸುಲಭಗೊಳಿಸಲು WhatsApp ಮೂಲಕ ತ್ವರಿತ ಸಾಲವನ್ನು ನೀಡುತ್ತಿದೆ. ಈ ಯೋಜನೆಯ ಮೂಲಕ, ಗ್ರಾಹಕರು ಗರಿಷ್ಠ 10 ಲಕ್ಷದವರೆಗೆ ವ್ಯಾಪಾರ ಸಾಲವನ್ನು ಪಡೆಯಬಹುದು.

5 ನಿಮಿಷಗಳಲ್ಲಿ 10 ಲಕ್ಷ ಸಾಲ 

ಭಾರತೀಯರು ವಾಟ್ಸಾಪ್ ಮೂಲಕ ಚಾಟ್ ಮಾಡಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರು ವಾಟ್ಸಾಪ್ ಮೂಲಕ ಕೇವಲ ಐದು ನಿಮಿಷಗಳಲ್ಲಿ 10 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು. ವಾಟ್ಸಾಪ್ ಮೂಲಕ ಉದ್ಯಮ ಸಾಲ ನೀಡಿದ ಭಾರತದ ಮೊದಲ ಸಂಸ್ಥೆ ನಮ್ಮದು ಎಂದು ಎಂದು ಐಐಎಫ್ಎಲ್ ಫೈನಾನ್ಸ್ ಘೋಷಿಸಿದೆ.

ಭಾರತೀಯರಿಗೆ ಏನಿಷ್ಟವೋ ಅದರಿಂದಲೇ ಸಹಾಯ 

ಭಾರತದಲ್ಲಿ 45 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಮೂಲಕ ಚಾಟ್ ಮಾಡುವುದು ಮಾತ್ರವಲ್ಲ ... ವ್ಯಾಪಾರಿಗಳು ಕೂಡ ವ್ಯಾಪಾರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಐಐಎಫ್ಎಲ್ ವಾಟ್ಸಾಪ್ ಮೂಲಕ ಸಾಲ ನೀಡಲು ಹಣಕಾಸು ಕ್ಷೇತ್ರವನ್ನು ಪ್ರವೇಶಿಸಿದೆ. ಈ ಕಂಪನಿಯ AIBot ಬಳಕೆದಾರರು ನೀಡಿದ ವಿವರಗಳನ್ನು ವಿಶ್ಲೇಷಿಸುತ್ತದೆ ಮತ್ತು ಸಾಲದ ಕೊಡುಗೆಗಳನ್ನು ನೀಡುತ್ತದೆ. ಕೆವೈಸಿ, ಬ್ಯಾಂಕ್ ಖಾತೆ ಪರಿಶೀಲನೆ, ಆದೇಶ ಇತ್ಯಾದಿ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ.

ಇದನ್ನೂ ಓದಿ: Income Tax Refund: ತೆರಿಗೆ ರಿಟರ್ನ್ಸ್​​ಗೆ ಅರ್ಜಿ ಸಲ್ಲಿಸಿದ್ದೀರಾ? ಯಾವಾಗ ಹಣ ಬರುತ್ತೆ ಎಂದು ತಿಳಿಯಲು ಹೀಗೆ ಮಾಡಿ

ವಾಟ್ಸಾಪ್ ಮೂಲಕ ವ್ಯಾಪಾರ ಸಾಲ ಪಡೆಯುವುದು ಹೇಗೆ? 

ವಾಟ್ಸಾಪ್ ಮೂಲಕ ಬ್ಯುಸಿನೆಸ್ ಲೋನ್ ಪಡೆಯುವ ಮೊದಲು ಸಾಲಗಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ 9019702184 ಸಂಖ್ಯೆಯನ್ನು ಸೇವ್​ ಮಾಡಿಕೊಳ್ಳಬೇಕು. ನಂತರ HEY ಎಂದು ಟೈಪ್ ಮಾಡಿ ಮತ್ತು ಸಂದೇಶ ಕಳುಹಿಸಿ. ಮೂಲ ವಿವರಗಳನ್ನು ನಮೂದಿಸಬೇಕು. ಅದರ ನಂತರ ಕೆವೈಸಿ ಪ್ರಕ್ರಿಯೆ, ಬ್ಯಾಂಕ್ ಖಾತೆ ಪರಿಶೀಲನೆ, ಕಡ್ಡಾಯ ನೋಂದಣಿ ಇತ್ಯಾದಿಗಳನ್ನು ವಾಟ್ಸಾಪ್‌ನಲ್ಲಿ ಮಾಡಲಾಗುತ್ತದೆ. ನಂತರ ಸಾಲ ಮಂಜೂರು ಮಾಡಲಾಗುತ್ತದೆ. ಹಣವನ್ನು ನೇರವಾಗಿ ಸಾಲಗಾರನ ಖಾತೆಗೆ ಜಮಾ ಮಾಡಲಾಗುತ್ತದೆ.

ಇನ್ನೇಕೆ ತಡ ಕೈನಲ್ಲಿರುವ ವಾಟ್ಸಪ್​​ನಿಂದ ಒಂದು ಮೆಸೇಜ್​ ಮಾಡಿ. ಹಣದ ಕಾರಣಕ್ಕೆ ನೆನಗುದಿಗೆ ಬಿದ್ದಿರುವ ನಿಮ್ಮ ಉದ್ಯಮದ ಕನಸ್ಸನ್ನು ಕ್ಷಣಾರ್ಧದಲ್ಲಿ ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಿ.
Published by:Kavya V
First published: