TikTok: ಹೀಗೆ ಮಾಡಿದ್ರೆ ನಿಮ್ಮ ಟಿಕ್​ಟಾಕ್ ಖಾತೆ ರದ್ದಾಗಬಹುದು ಎಚ್ಚರ!

ಟಿಕ್​ಟಾಕ್ ಅಶ್ಲೀಲತೆಯನ್ನು ವಿಜ್ರಂಭಿಸುತ್ತಿದೆ ಎನ್ನುವ ಕಾರಣಕ್ಕೆ​ ಸಂಸ್ಥೆಯ ಮೇಲೆ ಕೋರ್ಟ್​​ ನಿಷೇಧ ಹೇರಿತ್ತು. ನಂತರ ನಿರ್ಬಂಧ ಹಿಂಪಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗುವುದಿಲ್ಲ ಎಂದು ಸಂಸ್ಥೆ ಹೇಳಿತ್ತು. ಇದಾದ ನಂತರ ಸಂಸ್ಥೆ ನಿಯಮಗಳನ್ನು ಬಿಗಿ ಗೊಳಿಸಿದೆ.

Rajesh Duggumane | news18
Updated:July 10, 2019, 9:33 AM IST
TikTok: ಹೀಗೆ ಮಾಡಿದ್ರೆ ನಿಮ್ಮ ಟಿಕ್​ಟಾಕ್ ಖಾತೆ ರದ್ದಾಗಬಹುದು ಎಚ್ಚರ!
ಸಾಂದರ್ಭಿಕ ಚಿತ್ರ
Rajesh Duggumane | news18
Updated: July 10, 2019, 9:33 AM IST
ಟಿಕ್​ಟಾಕ್​ ಆ್ಯಪ್​ ತುಂಬಾನೇ ಖ್ಯಾತಿ ಪಡೆದುಕೊಂಡಿದೆ. ಇನ್ನು, ಟಿಕ್​ಟಾಕ್​ ವಿಡಿಯೋಗಳನ್ನು ಮಾಡಿ ಖ್ಯಾತಿ ಪಡೆದುಕೊಂಡವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ, ಖ್ಯಾತಿ ಪಡೆಯುವ ಭರದಲ್ಲಿ ಕೆಲವರು ಅಸಂಬದ್ಧ ವಿಡಿಯೋಗಳು ಪೋಸ್ಟ್​ ಮಾಡಿದ ಉದಾಹರಣೆಗಳಿವೆ. ಆದರೆ, ಈ ರೀತಿ ಮಾಡಿದರೆ ನಿಮ್ಮ ಟಿಕ್​ಟಾಕ್​ ಖಾತೆ ಬ್ಯಾನ್​ ಆಗಲೂಬಹುದು! ಇದಕ್ಕೆ ಜಾರ್ಖಂಡದಲ್ಲಿ ನಡೆದ ಘಟನೆಯೇ ಸಾಕ್ಷಿ.

ಜೂನ್​ 18ರಂದು ಜಾರ್ಖಂಡದಲ್ಲಿ ತಬ್ರೇಜ್​ ಅನ್ಸಾರಿ ಎಂಬಾತನ ಮೇಲೆ ಗುಂಪೊಂದು ದಾಳಿ ಮಾಡಿತ್ತು. ಈ ವೇಳೆ ಗುಂಪಿನಲ್ಲಿದ್ದವರು ಅನ್ಸಾರಿ ಬಳಿಯಿಂದ ಜೈ ಶ್ರೀರಾಮ್​, ಜೈ ಹನುಮಾನ್​ ಹೇಳುವಂತೆ ಒತ್ತಾಯಿಸಿದ್ದರು. ನಂತರ ಆತ ಮೃತಪಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ವಿಡಿಯೋ ಮಾಡಿ ಹಾಕಿದವರ ಖಾತೆಯನ್ನು ಈಗ ರದ್ದು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟಿಕ್​ಟಾಕ್​ ಸಂಸ್ಥೆ, “ಟಿಕ್​ಟಾಕ್​ನಲ್ಲಿ ಇಂಥ ವಿಡಿಯೋ ಹರಿಬಿಡುವುದನ್ನು ನಾವು ಸಹಿಸುವುದಿಲ್ಲ. ನಮ್ಮ ಸಂಸ್ಥೆಯ ನಿಯಮಗಳನ್ನು ಮೀರಿದರೆ ಅಂಥವರ ಖಾತೆಯನ್ನು ನಾವು ತಕ್ಷಣಕ್ಕೆ ರದ್ದು ಮಾಡುತ್ತೇವೆ,” ಎಂದು ತಿಳಿಸಿದೆ.

ಇದನ್ನೂ ಓದಿ: ಬಾಟಲಿ ಮುಚ್ಚಳ ಹಾರಿಸಲು ಅಮೆರಿಕದ ಈ ಗಾಯಕಿ ಹೀಗಾ ಮಾಡೋದು?

ಟಿಕ್​ಟಾಕ್ ಅಶ್ಲೀಲತೆಯನ್ನು ವಿಜ್ರಂಭಿಸುತ್ತಿದೆ ಎನ್ನುವ ಕಾರಣಕ್ಕೆ​ ಸಂಸ್ಥೆಯ ಮೇಲೆ ಕೋರ್ಟ್​​ ನಿಷೇಧ ಹೇರಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗುವುದಿಲ್ಲ ಎನ್ನುವ ಭರವಸೆಯನ್ನು ಸಂಸ್ಥೆ ನೀಡಿದಮೇಲೆ ನಿಷೇಧ ಹಿಂಪಡೆಯಲಾಗಿತ್ತು. ಈ ಬೆಳವಣಿಗೆ ನಂತರ ಟಿಕ್​ಟಾಕ್​ ತನ್ನ ನಿಯಮವನ್ನು ಕಠಿಣಗೊಳಿಸಿದೆ. ಹಾಗಾಗಿ ಟಿಕ್​ಟಾಕ್​ ವಿಡಿಯೋ ಮಾಡಿ ಪೋಸ್ಟ್​​ ಮಾಡುವ ಮೊದಲ ಕೊಂಚ ಎಚ್ಚರದಿಂದ ಇರುವುದು ಒಳಿತು.

First published:July 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...