• Home
  • »
  • News
  • »
  • trend
  • »
  • Tour Travel: ಅಮೆರಿಕಾದಿಂದ ಭಾರತಕ್ಕೆ ರೋಡ್​ ಟ್ರಿಪ್​, 22 ಸಾವಿರ ಕಿ.ಮೀ ಪ್ರಯಾಣ!

Tour Travel: ಅಮೆರಿಕಾದಿಂದ ಭಾರತಕ್ಕೆ ರೋಡ್​ ಟ್ರಿಪ್​, 22 ಸಾವಿರ ಕಿ.ಮೀ ಪ್ರಯಾಣ!

ರೋಡ್ ಟ್ರಿಪ್

ರೋಡ್ ಟ್ರಿಪ್

ಕೆಲವರು ಕ್ರೇಜಿ ಅನ್ನೋ ಥರದಲ್ಲಿ ರೋಡ್‌ ಟ್ರಿಪ್‌ ಮಾಡ್ತಾರೆ. ಬೇರೆ ಬೇರೆ ಸ್ಥಳಗಳಿಗೆ ರಸ್ತೆ ಮೂಲಕ ಪ್ರಯಾಣಿಸಲು ಉತ್ಸುಕರಾಗಿರುತ್ತಾರೆ. ರಸ್ತೆಯ ಮೂಲಕ ದೇಶದೊಳಗೆ ಪ್ರಯಾಣಿಸುವುದು ತುಂಬಾ ಸುಲಭದ ಕೆಲಸ ಅದರೆ ದೇಶದಿಂದ ದೇಶಕ್ಕೆ ತಿರುಗಾಡುವುದು ಸ್ವಲ್ಪ ಕಷ್ಟದ ಕೆಲಸ ಅದ್ರೆ ಇಲ್ಲೋಂದು ಇಟ್ರೆಸ್ಟಿಂಗ್ ಸ್ಟೋರಿ ಇದೆ ನೋಡಿ.

ಮುಂದೆ ಓದಿ ...
  • Share this:

ಕೆಲವರು ಕ್ರೇಜಿ (Craze) ಅನ್ನೋ ಥರದಲ್ಲಿ ರೋಡ್‌ ಟ್ರಿಪ್‌ (Road trip) ಮಾಡ್ತಾರೆ. ಬೇರೆ ಬೇರೆ ಸ್ಥಳಗಳಿಗೆ ರಸ್ತೆ ಮೂಲಕ ಪ್ರಯಾಣಿಸಲು ಉತ್ಸುಕರಾಗಿರುತ್ತಾರೆ. ರಸ್ತೆಯ ಮೂಲಕ ದೇಶದೊಳಗೆ ಪ್ರಯಾಣಿಸುವುದು ತುಂಬಾ ಸುಲಭದ ಕೆಲಸ. ಮತ್ತಿದು ಕನಿಷ್ಠ ಅಗತ್ಯತೆಗಳನ್ನು ಒಳಗೊಂಡಿರುತ್ತದೆ. ಆದ್ರೆ ಒಂದು ದೇಶದಿಂದ ಬೇರೆ ದೇಶಗಳಿಗೆ ರೋಡ್‌ ಟ್ರಿಪ್‌ ಮಾಡುವಾಗ ಇದು ಬೇರೆಯೇ ಆಗಿರುತ್ತದೆ. ಹೌದು, ನಾವು ಕಾರಿನಲ್ಲಿ(Car) ದೇಶ-ದೇಶದ ರಸ್ತೆ ಪ್ರವಾಸವನ್ನು ಮಾಡುವ ಬಗ್ಗೆ ಯೋಚಿಸಿದಾಗ, ಸಾಮಾನ್ಯವಾಗಿ ಪರವಾನಗಿಗಳು, ವೀಸಾಗಳು ಇತ್ಯಾದಿಗಳನ್ನು ಪಡೆಯುವ ವಿಷಯದಲ್ಲಿ ಬಹಳಷ್ಟು ತೊಂದರೆಗಳು (Problems) ಎದುರಾಗುತ್ತವೆ. ಈ ರೀತಿಯ ಪ್ರಯಾಣ ದೈಹಿಕವಾಗಿ ಮತ್ತು ಆರ್ಥಿಕವಾಗಿ ತುಂಬಾ ಬೇಡಿಕೆಯದಾಗಿರುತ್ತವೆ. ಇದನ್ನು ಕೈಗೊಳ್ಳೋದಕ್ಕೆ ನೀವು ಮಾನಸಿಕವಾಗಿ (Mentally) ಹಾಗೂ ದೈಹಿಕವಾಗಿ (Physically) ಸ್ಟ್ರಾಂಗ್‌ ಆಗಿರಲೇ ಬೇಕು.


ಲಖ್ವಿಂದರ್‌ ಸಿಂಗ್ ಅನ್ನೋರು ಅಮೆರಿಕದಿಂದ ರೋಡ್‌ ಟ್ರಿಪ್‌ ಮೂಲಕ ಭಾರತಕ್ಕೆ ಬಂದಿದ್ದಾರೆ. ಅವರು ತಮ್ಮ ವಿಶಿಷ್ಟ ಅನುಭವವನ್ನು 'ರೈಡ್ ಅಂಡ್ ಡ್ರೈವ್' ಮೂಲಕ YouTube ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.


53 ದಿನ, 22 ಸಾವಿರ ಕಿ.ಮೀ, 23 ದೇಶ!


53 ವರ್ಷದ ಲಖ್ವಿಂದರ್ ಈ ರೋಡ್‌ ಟ್ರಿಪ್‌ ಗಾಗಿಯೇ ಅವರು ಹೊಚ್ಚ ಹೊಸ ಟೊಯೋಟಾ ಟಕೋಮಾ ಮಧ್ಯಮ ಗಾತ್ರದ ಪಿಕ್-ಅಪ್ ಟ್ರಕ್‌ ಅನ್ನು $60,000 USD ಗೆ ಖರೀದಿಸಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ರಾಜಧಾನಿ ಸ್ಯಾಕ್ರಮೆಂಟೊದಲ್ಲಿರುವ ಅವರ ನಿವಾಸದಿಂದ ಪ್ರವಾಸ ಪ್ರಾರಂಭವಾಗಿತ್ತು. ಅಮೆರಿಕದಿಂದ ಇಲ್ಲಿಗೆ 22,000 ಕಿಲೋಮೀಟರ್‌ಗಳನ್ನು ಕ್ರಮಿಸಿ ಮತ್ತು 23 ದೇಶಗಳನ್ನು ದಾಟಿ, USA ಯಿಂದ ಪಂಜಾಬ್‌ ನ ಜಲಂಧರ್‌ಗೆ ರಸ್ತೆಯ ಮೂಲಕ ಪ್ರಯಾಣಿಸಲು ಅವರು 53 ದಿನಗಳನ್ನು ತೆಗೆದುಕೊಂಡಿದ್ದಾರೆ.


ರೋಡ್ ಟ್ರಿಪ್


ಅವರ ಪ್ರಕಾರ, ಯುರೋಪ್‌ನಲ್ಲಿನ ರಸ್ತೆಗಳು ನಿಜವಾಗಿಯೂ ಉತ್ತಮವಾಗಿವೆ. ಜರ್ಮನಿಯ ಕುಖ್ಯಾತ ಆಟೋಬಾನ್ ಯಾವುದೇ ವೇಗದ ಮಿತಿಗಳಿಲ್ಲದೆ ಅತ್ಯುತ್ತಮವಾಗಿತ್ತು. ಅವರು ತಮ್ಮ ವಾಹನವನ್ನು 250 ಕಿಮೀ ವರೆಗೆ ಓಡಿಸಿದ್ದರು. ಅವರು ತಮ್ಮ ಪ್ರಯಾಣದ ಉದ್ದಕ್ಕೂ 4 ವೇಗದ ದಂಡವನ್ನು ಪಾವತಿಸಿದ್ದಾರೆ, ಸೆರ್ಬಿಯಾದಲ್ಲಿ 1, ಟರ್ಕಿಯಲ್ಲಿ 2 ಮತ್ತು ಪಾಕಿಸ್ತಾನದಲ್ಲಿ 1, ಆದರೆ ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ ಯುರೋಪ್‌ನಲ್ಲಿನ ಚಲನ್‌ಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ.


ಖರ್ಚಾಗಿದ್ದು 1 ಕೋಟಿ


ಕೋವಿಡ್‌ ಸಮಯದಲ್ಲಿ ಲಾಕ್‌ಡೌನ್‌ನ 2 ತಿಂಗಳ ಅವಧಿಯಲ್ಲಿ ಅವರು ಯುಎಸ್‌ಎಯಿಂದ ತನ್ನ ತಾಯ್ನಾಡು ಭಾರತಕ್ಕೆ ಪ್ರಯಾಣಿಸುವ ಮೂಲಕ ವಿಶಿಷ್ಟವಾದದ್ದನ್ನು ಮಾಡಲು ನಿರ್ಧರಿಸಿದಾಗ ರೋಡ್ ಟ್ರಿಪ್‌ನ ಕಲ್ಪನೆ ಅವರಿಗೆ ಇಷ್ಟವಾಯ್ತು. ಅಲ್ದೇ, ಇಡೀ ಪ್ರಯಾಣವನ್ನು ಯೋಜಿಸಲು ಅವರಿಗೆ 3 ವರ್ಷಗಳು ಬೇಕಾದವು. ದಾಖಲೀಕರಣ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, ವೀಸಾ ಪಡೆಯಲು ಇರಾನ್ ಅತ್ಯಂತ ಕಠಿಣ ದೇಶವಾಗಿದೆ. ಇದೇ ಸುಮಾರು 1.5 ವರ್ಷಗಳನ್ನು ತೆಗೆದುಕೊಂಡಿತು ಎನ್ನುತ್ತಾರೆ.


ಇದನ್ನೂ ಓದಿ: Halloween day: ಹ್ಯಾಲೋವೀನ್ ʼಸ್ಕೇರಿ ವೀಕೆಂಡ್ʼ! ಭಯಾನಕವಾಗಿತ್ತು ಇವರ ವೇಷಭೂಷಣ


ಅಂದಹಾಗೆ, ಇಡೀ ರಸ್ತೆ ಪ್ರವಾಸದ ವೆಚ್ಚವು ಸುಮಾರು 1 ಕೋಟಿ ರೂ. ಗಳಾಗಿದ್ದು, ಅದನ್ನು ಅವರೇ ಭರಿಸಿದ್ದಾರೆ. ಇಂಧನ ವೆಚ್ಚದ ಬಗ್ಗೆ ಕೇಳಿದಾಗ, ಅವರು ದಾಖಲೆಯನ್ನು ಇರಿಸಿಕೊಳ್ಳಲು ಚಿಂತಿಸಲಿಲ್ಲ ಮತ್ತು ಇಂಧನ ಬಿಲ್‌ಗಳಿಗಾಗಿ ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದ್ದಾರೆ.


ಇನ್ನು, ದಾಖಲೆಗಾಗಿ, ಕಾರನ್ನು USA ನಿಂದ UK ಗೆ ಹಡಗಿನ ಮೂಲಕ ಸಾಗಿಸಲಾಯಿತು. ಆದರೆ ಲಂಡನ್‌ನಿಂದ ಪ್ಯಾರಿಸ್‌ಗೆ ಇಂಗ್ಲಿಷ್ ಚಾನೆಲ್ ಅನ್ನು ದಾಟುವ ಪ್ರಯಾಣ 37-38 ನಿಮಿಷಗಳಲ್ಲಿ ಕಾರನ್ನು ರೈಲಿನಲ್ಲಿ ಸಾಗಿಸುವ ಮೂಲಕ ತಲುಪಿತು. ಅಂಹಾಗೆ ಲಖ್ವಿಂದರ್‌ ಅವರು ಎಲ್ಲಾ ದೇಶಗಳಿಗೆ ಒಂದೇ ಪ್ರವೇಶ ವೀಸಾವನ್ನು ಮಾತ್ರ ಪಡೆದುಕೊಂಡಿದ್ದರು. ಆದ್ದರಿಂದ ಅವರು ರಸ್ತೆಯ ಮೂಲಕ USA ಗೆ ಹಿಂತಿರುಗಲು ಸಾಧ್ಯವಿಲ್ಲ ಎನ್ನುತ್ತಾರೆ.


ಇದನ್ನೂ ಓದಿ: Video Viral: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ


ತಮ್ಮ ವಾಹನದ ಮೇಲಿನ ಚಿತ್ರ ಬಗ್ಗೆ ಹೇಳುವ ಅವರು, ಸಂಪೂರ್ಣ ಮಾರ್ಗವನ್ನು ಸಾಧ್ಯವಾದಷ್ಟು ಸರಳವಾಗಿ ವಿವರಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸುತ್ತಾರೆ.

Published by:Precilla Olivia Dias
First published: