ಗಣಿತದ ಈ ಸಮಸ್ಯೆ ಬಿಡಿಸಿದರೆ ಸಾಕು ನೀವು ಕೋಟ್ಯಾಧಿಪತಿ ಆಗಬಹುದು..!

ಗಣಿತದ ಅಗಾಧ ಪ್ರತಿಭೆ ಆಗಿದ್ದರೆ ನೀವೂ ಸಹ ಈ ಪ್ರಾಬ್ಲಂಗಳನ್ನು ಉತ್ತರಿಸಲು ಒಂದು ಕೈ ನೋಡಬಹುದು

 ಗಣಿತದ ಅಗಾಧ ಪ್ರತಿಭೆ ಆಗಿದ್ದರೆ ನೀವೂ ಸಹ ಈ ಪ್ರಾಬ್ಲಂಗಳನ್ನು ಉತ್ತರಿಸಲು ಒಂದು ಕೈ ನೋಡಬಹುದು

ಗಣಿತದ ಅಗಾಧ ಪ್ರತಿಭೆ ಆಗಿದ್ದರೆ ನೀವೂ ಸಹ ಈ ಪ್ರಾಬ್ಲಂಗಳನ್ನು ಉತ್ತರಿಸಲು ಒಂದು ಕೈ ನೋಡಬಹುದು

  • Share this:

ಗಣಿತ ಹಲವರಿಗೆ ಕಬ್ಬಿಣದ ಕಡಲೆಯೇ ಸರಿ. ಹಲವು ಗಣಿತದ ಪ್ರಾಬ್ಲಂಗಳಿಗೆ ಉತ್ತರಿಸುವುದು ಹಲವರಿಗೆ ಬಹಳ ಕಷ್ಟವಾಗಿರುತ್ತದೆ. ಶಾಲೆ, ಕಾಲೇಜುಗಳಲ್ಲಿ ಗಣಿತ ಸಬ್ಜೆಕ್ಟ್‌ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ಹಲವು ವಿದ್ಯಾರ್ಥಿಗಳನ್ನು ನಾವು ಕಾಣಬಹುದು. ಆದರೆ, ಈ ಗಣಿತದ ಪ್ರಾಬ್ಲಂಗಳಿಗೆ ಅಥವಾ ಪ್ರಶ್ನೆಗಳನ್ನು ಉತ್ತರಿಸಿದರೆ ನಿಮಗೆ ಲಕ್ಷಾಂತರ ರೂ. ಹಣ ಕೊಡ್ತೀವಿ ಅಂದ್ರೆ ನೀವು ಏನು ಮಾಡ್ತೀರಾ..? ಈಗ ಯಾಕೆ ಈ ಪ್ರಶ್ನೆ ಅಂತೀರಾ..? ಏಕೆಂದರೆ, 2000 ರಲ್ಲೇ ಯುಎಸ್‌ನಲ್ಲಿನ ಕ್ಲೇ ಮ್ಯಾಥಮ್ಯಾಟಿಕ್ಸ್ ಇನ್ಸ್ಟಿಟ್ಯೂಟ್, ಮಿಲೇನಿಯಮ್ ಪ್ರಶಸ್ತಿ ಘೋಷಿಸಿದ್ದರೂ ಇದನ್ನು ಯಾರೂ ಪರಿಹರಿಸಿಲ್ಲ. ಇದು ಏಳು ಗಣಿತ ಸಮಸ್ಯೆಗಳ ಸಂಕಲನವಾಗಿದ್ದು, ಅವುಗಳನ್ನು ಪರಿಹರಿಸುವ ಯಾರಿಗಾದರೂ ಸಂಸ್ಥೆ ದೊಡ್ಡ ನಗದು ಬಹುಮಾನ ಘೋಷಿಸಿದೆ. ಈ ಸಮಸ್ಯೆಗಳನ್ನು ವೈಜ್ಞಾನಿಕ ಸಲಹಾ ಮಂಡಳಿಯು ಆಯ್ಕೆ ಮಾಡಿದೆ. ಈ ಮಂಡಳಿಯ ಪ್ರಕಾರ, ಈ ಸಮೀಕರಣಗಳಿಗೆ ಹಲವು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ.


ಈ ಸಮಸ್ಯೆಗಳು ತುಂಬ ಕಠಿಣವಾಗಿದೆ. ಇದೇ ಕಾರಣಕ್ಕಾಗಿ ಈ ಸಮೀಕರಣಕ್ಕೆ ಮಿಲಿಯನೇರ್‌ ಆಗಬಹುದಾದಷ್ಟು ಬಹುಮಾನ ಘೋಷಿಸಲಾಗಿದೆ ಎಂದು ಹೇಳಬೇಕಾಗಿಲ್ಲ. ಆದರೆ ಈ ಸಮೀಕರಣಗಳನ್ನು ಪರಿಹರಿಸಲಾಗುವುದಿಲ್ಲ ಎಂದು ಇದರ ಅರ್ಥವಲ್ಲ. ಈ ಹಿನ್ನೆಲೆ ನೀವು ಈ ಸಮೀಕರಣಗಳಿಗೆ ಉತ್ತರಿಸುವುದಾದರೆ ಮಿಲಿಯನೇರ್ ಆಗುವ ಸಾಧ್ಯತೆ ಇದೆ.

ಅವುಗಳಲ್ಲಿ ಒಂದು ಪಾಯಿಂಕೇರ್ ಕಂಜೆಕ್ಟರ್‌ ಅನ್ನು ಗಣಿತಶಾಸ್ತ್ರಜ್ಞ ಗ್ರಿಗೋರಿ ಪೆರೆಲ್ಮನ್ 2006ರಲ್ಲಿ ಪರಿಹರಿಸಿದರು. ಆದರೆ, ಇನ್ನೂ 6 ಪ್ರಾಬ್ಲಂಗಳಿಗೆ ಯಾರೂ ಪರಿಹರಿಸಲಾಗಿಲ್ಲ. ಯಾರಾದರೂ ಅಂತಿಮವಾಗಿ ಉಳಿದ ಸಮೀಕರಣಗಳನ್ನು ಪರಿಹರಿಸುತ್ತಾರೆ ಮತ್ತು ಬಹುಮಾನದ ಹಣ ಗೆಲ್ಲುತ್ತಾರೆ ಎಂದು ಸಂಶೋಧಕರು ಹಾಗೂ ಗಣಿತ ತಜ್ಞರು ಆಶಾವಾದಿಗಳಾಗಿದ್ದಾರೆ. ಪ್ರತಿ ಸಮಸ್ಯೆಯನ್ನು ಭೇದಿಸುವುದರಿಂದ ನಿಮಗೆ 1 ಮಿಲಿಯನ್ ಡಾಲರ್‌ 7.4 ಕೋಟಿ ರೂ. ಸಿಗುತ್ತದೆ. ಇನ್ನು, ಈ ಬಹುಮಾನ ಸಿಗಬೇಕಾದರೆ ನಿಮ್ಮ ಉತ್ತರವು ಪೀರ್-ರಿವ್ಯೂ ಆಗಿರಬೇಕು ಎಂಬ ಎಚ್ಚರಿಕೆ ಇದೆ.


 ಗಣಿತದ ಅಗಾಧ ಪ್ರತಿಭೆ ಆಗಿದ್ದರೆ ನೀವೂ ಸಹ ಈ ಪ್ರಾಬ್ಲಂಗಳನ್ನು ಉತ್ತರಿಸಲು ಒಂದು ಕೈ ನೋಡಬಹುದು ಮತ್ತು ಮಿಲಿಯನ್ ಡಾಲರ್ ಬಹುಮಾನ ಪಡೆಯಬಹುದು.


ಬೃಹತ್ ನಗದು ಮೊತ್ತಕ್ಕೆ ಯೋಗ್ಯವಾದ ಆರು ಬಗೆಹರಿಯದ ಗಣಿತದ ಸಮೀಕರಣಗಳನ್ನು ನೋಡೋಣ.

ಇದನ್ನು ಓದಿ: ನಿಮ್ಮ ಸಂಬಳದಲ್ಲಿ ತೆರಿಗೆ ಉಳಿಸಲು ಇಲ್ಲಿದೆ 5 ಮಾರ್ಗಗಳು

1) ನೇವಿಯರ್-ಸ್ಟೋಕ್ಸ್ ಈಕ್ವೇಷನ್ಸ್‌
ಈ ಸಮೀಕರಣವು ನೀರು ಮತ್ತು ಗಾಳಿಯಂತಹ ದ್ರವಗಳ ಹರಿವನ್ನು ನಿಯಂತ್ರಿಸುತ್ತದೆ. ಪರಿಹಾರಗಳು ಅಸ್ತಿತ್ವದಲ್ಲಿದೆಯೇ ಮತ್ತು ಅವು ಅನನ್ಯವಾಗಿದೆಯೇ..? ಎಂಬಂತಹ ಪ್ರಶ್ನೆಗಳಿಗೆ ಪುರಾವೆಗಳಿಲ್ಲ, ನೀವು ನೇವಿಯರ್-ಸ್ಟೋಕ್ಸ್ ಸಮೀಕರಣಗಳನ್ನು ಅರ್ಥಮಾಡಿಕೊಂಡರೆ ಆಧುನಿಕ ಜೆಟ್‌ನಲ್ಲಿನ ಪ್ರಕ್ಷುಬ್ಧತೆಗೆ ವಿವರಣೆಯನ್ನು ಕಂಡುಕೊಳ್ಳಬಹುದು ಎಂದು ಗಣಿತ ಮತ್ತು ಭೌತವಿಜ್ಞಾನಿಗಳು ನಂಬುತ್ತಾರೆ.

2) ಯಾಂಗ್-ಮಿಲ್ಸ್ ಮತ್ತು ಮಾಸ್ ಗ್ಯಾಪ್
ಈ ಹಿಂದೆ ಅನೇಕ ಪ್ರಯೋಗಗಳು ಮತ್ತು ಕಂಪ್ಯೂಟರ್ ಸಿಮ್ಯುಲೇಶನ್‌ಗಳು ಸಾಮೂಹಿಕ ಅಂತರದ ಅಸ್ತಿತ್ವವನ್ನು ಸೂಚಿಸಿವೆ. ಶಾಸ್ತ್ರೀಯ ತರಂಗಗಳು ಬೆಳಕಿನ ವೇಗದಲ್ಲಿ ಚಲಿಸಿದರೂ, ಕ್ವಾಂಟಮ್ ಕಣಗಳು ಸಕಾರಾತ್ಮಕ ದ್ರವ್ಯರಾಶಿಗಳನ್ನು ಹೊಂದಿರುತ್ತವೆ ಎಂದು ಭೌತವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೂ, ಇದನ್ನು ಸೈದ್ಧಾಂತಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲಾಗಿಲ್ಲ.


3) ದಿ ರೀಮನ್ ಹೈಪೋಥಿಸಿಸ್‌
ಈ ಬಗೆಹರಿಯದ ಸಂಖ್ಯೆಯ ಸಮೀಕರಣವು ಅವಿಭಾಜ್ಯ ಸಂಖ್ಯೆಗಳ ವಿತರಣೆಯ ಫಲಿತಾಂಶಗಳನ್ನು ಸೂಚಿಸುತ್ತದೆ.


4) ಬಿರ್ಚ್ ಮತ್ತು ಸ್ವಿನ್ನರ್ಟನ್ - ಡೈಯರ್ ಕಂಜೆಕ್ಟರ್‌
ಇದು ಪರಿಹರಿಸಲು ಅಥವಾ ಉತ್ತರಿಸಲು ಅತ್ಯಂತ ಕಷ್ಟಕರವಾದ ಗಣಿತದ ಸಮಸ್ಯೆಗಳಲ್ಲಿ ಒಂದಾಗಿದ್ದು, ಸಂಖ್ಯೆ ಸಿದ್ಧಾಂತಕ್ಕೆ ಸಂಬಂಧಿಸಿದೆ.

5) ಹಾಡ್ಜ್ ಕಂಜೆಕ್ಟರ್‌ ಅಥವಾ ಕಲ್ಪನೆ
ಈ ಪ್ರಾಬ್ಲಂ ಆಲ್ಜೀಬ್ರಾಯಿಕ್‌ ಜಾಮೆಟ್ರಿ (ಬೀಜಗಣಿತದ ರೇಖಾಗಣಿತಕ್ಕೆ) ಸಂಬಂಧಿಸಿದ್ದು, ನಾನ್ - ಸಿಂಗ್ಯುಲರ್ ಸಂಕೀರ್ಣ ಬೀಜಗಣಿತ ವಿಧದ ಬೀಜಗಣಿತದ ಸ್ಥಳಶಾಸ್ತ್ರಕ್ಕೆ (ಟೋಪೋಲಜಿ) ಸಂಬಂಧಿಸಿದೆ.


6) ಪಿ ವರ್ಸಸ್ ಎನ್‌ಪಿ
ಈ ಸಮೀಕರಣವು ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದೆ ಮತ್ತು ಸಮಸ್ಯೆಯ ಪರಿಹಾರವು ಕರೆಕ್ಟ್‌ನೆಸ್‌ ಅನ್ನು ಪರೀಕ್ಷಿಸುವುದು ಸುಲಭವಾದರೆ ಸಮಸ್ಯೆಯನ್ನು ಪರಿಹರಿಸಲು ಸುಲಭವಾಗಬೇಕು ಎಂಬ ನಿಯಮದ ಪ್ರಕಾರ ಇರುತ್ತದೆ. P ತುಲನಾತ್ಮಕವಾಗಿ ಸುಲಭವಾದ ಸಮಸ್ಯೆಗಳ ಒಂದು ಗುಂಪಾಗಿದ್ದರೆ ಮತ್ತು NP ಬಹಳ ಕಠಿಣವಾದ ಸಮೀಕರಣಗಳ ಒಂದು ಗುಂಪಾಗಿದ್ದರೆ, P=NP ಎಂದರೆ ಕಠಿಣ ಸಮಸ್ಯೆಗಳು ತುಲನಾತ್ಮಕವಾಗಿ ಸರಳ ಪರಿಹಾರಗಳನ್ನು ಹೊಂದಿರುತ್ತವೆ.


First published: