• Home
  • »
  • News
  • »
  • trend
  • »
  • Viral Video: ತಂದೆ ಮಗನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು ಈ ದೈತ್ಯ ತಿಮಿಂಗಲ! ವೀಡಿಯೋ ನೋಡಿದ್ರೆ ನಿಮಗೂ ಭಯವಾಗುತ್ತೆ

Viral Video: ತಂದೆ ಮಗನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು ಈ ದೈತ್ಯ ತಿಮಿಂಗಲ! ವೀಡಿಯೋ ನೋಡಿದ್ರೆ ನಿಮಗೂ ಭಯವಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಂದೆ ಮಗನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು ಈ ದೈತ್ಯ ತಿಮಿಂಗಲ ವೀಡಿಯೋ ನೋಡಿದ್ರೆ ನಿಮಗೂ ಭಯವಾಗುತ್ತೆ. ಬೆಚ್ಚಿ ಬೀಳಿಸುವ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.

  • Share this:

ಈ ಸಮುದ್ರಗಳ (Sea) ತೀರದ ಕಡೆಗೆ ವೇಗವಾಗಿ (Fast) ಧುಮ್ಮಿಕ್ಕಿ ಬರುವ ಎತ್ತರದ ಅಲೆಗಳು (High Waves) ಮತ್ತು ತೀರಕ್ಕೆ ಬಂದು ಅಪ್ಪಳಿಸಿ ಹಾಗೆಯೇ ಶಾಂತವಾಗುವ ಅಲೆಗಳನ್ನು ನೋಡುವುದೇ ಮನಸ್ಸಿಗೆ ಒಂದು ಹಿತ ( A Treat for the mind) ಅಂತ ಹೇಳಿದರೆ ತಪ್ಪಾಗುವುದಿಲ್ಲ.ಬರೀ ಸಮುದ್ರಗಳೇ ಅಲ್ಲ, ಈ ಶಾಂತವಾಗಿರುವ ನದಿಗಳು (Rivers) ಮತ್ತು ಕೆರೆಗಳನ್ನು ನೋಡಿದರೂ ಸಹ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನ (Peace of mind) ಸಿಗುತ್ತೆ ಅಂತ ಅನೇಕರು ಹೇಳುವುದನ್ನು ಸಹ ನಾವೆಲ್ಲಾ ಕೇಳಿರುತ್ತೇವೆ. ಆದರೆ ಈ ನೀರಿನಾಳದಲ್ಲಿ ಅಷ್ಟೇ ಭಯಾನಕ (Tribble) ಸಹ ಇರುತ್ತದೆ ಅಂತ ನಮಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳನ್ನು ನೋಡಿದರೆ ಅರ್ಥವಾಗುತ್ತದೆ.ಹೌದು. ನೀರಿನಾಳದಲ್ಲಿ ದೈತ್ಯ ಮೀನುಗಳು,(Big fish) ಮೊಸಳೆಗಳು ( Crocodile) ಮತ್ತು ಇನ್ನಿತರೆ ಜಲಚರಡ್ಡ ದೊಡ್ಡ ಹಡಗಿನಲ್ಲಿ(Ship)ಸಮುದ್ರದಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ಅಲ್ಲಿ ಆ ಜಲಚರಗಳು( Aquatics) ನಮ್ಮನ್ನು ಹೇಗೆ ಮತ್ತು ಯಾವಾಗ ಬೆಚ್ಚಿ ಬೀಳಿಸುತ್ತವೆ ಅಂತ ಊಹೆ ಮಾಡುವುದಕ್ಕೂ ಸಹ ಆಗುವುದಿಲ್ಲ. ಕೆಲವೊಮ್ಮೆ ಈ ಹಠಾತ್ ದಾಳಿಗಳು ( Sudden attack) ಮಾರಣಾಂತಿಕ ಸಹ ಆಗಬಹುದು ಅಂತ ಅನೇಕ ಸಂದರ್ಭಗಳಲ್ಲಿ ನಾವು ನೋಡಿರುತ್ತೇವೆ.


ಸಾಂದರ್ಭಿಕ ಚಿತ್ರ


ದೈತ್ಯ ತಿಮಿಂಗಿಲ ಹೇಗೆ ಹಡಗಿನ ಬಳಿ ಬಂದಿದೆ ನೋಡಿ..


ಇಲ್ಲಿಯೂ ಸಹ ಅಂತಹದೇ ಒಂದು ಬೆಚ್ಚಿ ಬೀಳಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ತಂದೆ ಮತ್ತು ಮಗ ಇಬ್ಬರೂ ಬುಧವಾರ ಹಡಗಿನಲ್ಲಿ ಸಮುದ್ರದಲ್ಲಿ ಹೋದಾಗ ದೈತ್ಯಾಕಾರದ ಹಂಪ್ಬ್ಯಾಕ್ ತಿಮಿಂಗಿಲ ಎಂದರೆ ಕನ್ನಡದಲ್ಲಿ ಬೂದು ತಿಮಿಂಗಲ ಕಣ್ಣಿಗೆ ಕಾಣಿಸದಂತೆ ನೀರಿನಾಳದಲ್ಲಿ ಹಡಗಿನ ಸಮೀಪ ಬಂದು ಥಟ್ಟನೆ ನೀರಿನಿಂದ ಹೊರಗೆ ಬಂದಿತ್ತು.


ವರದಿಯ ಪ್ರಕಾರ, ಈ ಘಟನೆ ನಡೆದಿದ್ದು ಬೆಲ್ಮರ್ ಬಳಿಯ ನ್ಯೂಜೆರ್ಸಿಯ ಕರಾವಳಿಯಲ್ಲಿ ಅಂತ ಹೇಳಲಾಗುತ್ತಿದೆ. ಈ ದೈತ್ಯ ತಿಮಿಂಗಲನ್ನು ನೋಡಿ ತಂದೆ ಮಗನ ಜೀವ ಒಂದು ಕ್ಷಣ ಬಾಯಿಗೆ ಬಂದದ್ದಂತೂ ಸುಳ್ಳಲ್ಲ.


ಇದನ್ನೂ  ಓದಿ: Shark Video: ಶಾರ್ಕ್ ಏನಾದ್ರೂ ನುಂಗಿದ್ರೆ ಬಾಯಿ ಒಳಗೆ ಹೇಗಿರುತ್ತೆ? ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

View this post on Instagram


A post shared by Zach Piller (@zachpiller18)
ಈ ವೀಡಿಯೋವನ್ನು ಹಂಚಿಕೊಂಡಿದ್ದು ಜಾಕ್ ಪಿಲ್ಲರ್!


ಆ ಭಯಾನಕ ಕ್ಷಣದ ವೀಡಿಯೋವನ್ನು ಮಗ ಜಾಕ್ ಪಿಲ್ಲರ್ ಸೆರೆಹಿಡಿದಿದ್ದು, ಮೂರು ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾನೆ. "ಎಪಿಕ್ ತಿಮಿಂಗಿಲದ ತುಣುಕು. ನಮ್ಮ ದೋಣಿಯ ಬದಿಗೆ ಹೊಡೆದಿರುವುದು" ಎಂದು ಪಿಲ್ಲರ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.


ಈ ವೀಡಿಯೋ ಕ್ಲಿಪ್ ತುಣುಕು ನೀರಿನಲ್ಲಿ ಉದ್ರಿಕ್ತ ಚಲನೆಯೊಂದಿಗೆ ಪ್ರಾರಂಭವಾಗುತ್ತವೆ ಮತ್ತು ಒಂದು ಸೆಕೆಂಡಿನಲ್ಲಿಯೇ ಸಾವಿರಾರು ಸಣ್ಣ ಮೀನುಗಳು ನೀರಿನಿಂದ ಒಮ್ಮಿಂದೊಮ್ಮೆಲೆ ಹೊರ ಬರುವುದನ್ನು ಕಾಣಬಹುದು, ನಂತರ ಇವರಿಬ್ಬರ ದೋಣಿಯ ಬದಿಯಲ್ಲಿ ತಿಮಿಂಗಿಲದ ದೊಡ್ಡ ತಲೆ ಹೊರಗೆ ಎದ್ದು ನಿಂತಂತೆ ಕಾಣುತ್ತದೆ.


ಈ ದೈತ್ಯ ತಿಮಿಂಗಲು ಹಾಗೆ ಹಠಾತ್ತನೆ ನೀರಿನ ಮೇಲ್ಮೈಯನ್ನು ಭೇದಿಸುವುದನ್ನು ನೋಡಿದ ನಂತರ ಪಿಲ್ಲರ್ ಜೋರಾಗಿ ಕಿರುಚಿರುವುದನ್ನು ಈ ವೀಡಿಯೋದಲ್ಲಿ ನಾವು ಕೇಳಬಹುದು. "ಅದನ್ನು ವೀಡಿಯೋದಲ್ಲಿ ನಾನು ಸೆರೆಹಿಡಿದಿದ್ದೇನೆ" ಎಂದು ಅವರು ಹೇಳಿದರು. ತಿಮಿಂಗಿಲದ ತಲೆಯು ಹಾಗೆಯೇ ಮೇಲಕ್ಕೆ ಚಿಮ್ಮಿ, ಕ್ಷಣಮಾತ್ರದಲ್ಲಿಯೇ ಮತ್ತೆ ಸಮುದ್ರದ ನೀರಿನೊಳಗೆ ಹೋಯಿತು.


ಇದನ್ನೂ  ಓದಿ: Biggest Shark: ಜಗತ್ತಿನ ಅತಿ ದೊಡ್ಡ ಶಾರ್ಕ್ ಮಾಂಸಹಾರಿಯಲ್ಲ! ಹಾಗಿದ್ದರೆ ಇದು ತಿನ್ನೋದೆನನ್ನು?


ಬೆಚ್ಚಿ ಬೀಳಿಸಿದ ಘಟನೆಯ ಬಗ್ಗೆ ಪಿಲ್ಲರ್ ಏನ್ ಹೇಳ್ತಾರೆ?


ಪಿಲ್ಲರ್ ಅವರ ಪ್ರಕಾರ, ಸಣ್ಣ ಮೀನುಗಳು ವರ್ಷದ ಈ ಸಮಯದಲ್ಲಿ ದಡದ ಬಳಿ ಹೇರಳವಾಗಿರುತ್ತವೆ, ಇದು ತಿಮಿಂಗಿಲಗಳನ್ನು ಆಕರ್ಷಿಸುತ್ತದೆ. ಬುಧವಾರ ಹವಾಮಾನವು ಅತ್ಯಂತ ಆಹ್ಲಾದಕರವಾಗಿದ್ದು ನೀರು ಶಾಂತವಾಗಿತ್ತು ಎಂದು ಅವರು ಔಟ್ಲೆಟ್ ಗೆ ತಿಳಿಸಿದರು.


ತಂದೆ ಮಗ ಇಬ್ಬರೂ ತಮ್ಮ 18 ಅಡಿ ಎತ್ತರದ ಸ್ಟಾರ್ ಕ್ರಾಫ್ಟ್ ನಲ್ಲಿ ಸವಾರಿ ಮಾಡುತ್ತಿದ್ದರು. ಸೀವರ್ಲ್ಡ್ ಸ್ಯಾನ್ ಡಿಯಾಗೋ ಪ್ರಾಣಿಶಾಸ್ತ್ರೀಯ ಕಾರ್ಯಾಚರಣೆಗಳ ಉಪಾಧ್ಯಕ್ಷ ಎರಿಕ್ ಒಟ್ಜೆನ್ ಘಟನೆಗೆ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ದಡದ ಬಳಿ ಸಣ್ಣ ಮೀನುಗಳನ್ನು ತಿನ್ನುವ ಹಂಪ್ಬ್ಯಾಕ್ ತಿಮಿಂಗಿಲಗಳು ಹೀಗೆ ದೋಣಿಯ ಬಳಿ ಬಂದಿರುವುದು ತುಂಬಾನೇ ಅಸಾಮಾನ್ಯವಾಗಿದೆ ಎಂದು ಹೇಳಿದರು.

First published: