Viral Photo: ಇವನ್ಯಾವ ನಟನೂ ಅಲ್ಲ, ಮಾಡೆಲ್ ಕೂಡ ಅಲ್ಲ ಇವನು ದೆಹಲಿಯ ಭಿಕ್ಷುಕ ಕಣ್ರೀ! ಎಲ್ಲಾ ಕಡೆ ಇವನದ್ದೇ ಸುದ್ದಿ

ದೆಹಲಿಯಲ್ಲಿ ಇರುವಂತಹ ಒಬ್ಬ ಭಿಕ್ಷುಕನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ಮತ್ತು ನೆಟ್ಟಿಗರು ಸಹ ಈತನನ್ನು ನೋಡಿ ‘ಇವನು ಭಿಕ್ಷೆ ಬೇಡುವವನಾ? ಒಳ್ಳೆ ಚಲನಚಿತ್ರದಲ್ಲಿ ನಟಿಸುವ ನಾಯಕನಂತೆ ಇದ್ದಾನೆ’ ಅಂತ ಹೇಳುತ್ತಿದ್ದಾರೆ ನೋಡಿ.

ದೆಹಲಿಯ ಭಿಕ್ಷುಕ

ದೆಹಲಿಯ ಭಿಕ್ಷುಕ

  • Share this:
ಸಾಮಾನ್ಯವಾಗಿ ನಾವು ಈ ರೈಲ್ವೆ ನಿಲ್ದಾಣಗಳಲ್ಲಿ (Railway station), ಬಸ್ ನಿಲ್ದಾಣಗಳಲ್ಲಿ ಮತ್ತು ಈ ದೇವಸ್ಥಾನಗಳ ಬಳಿ ಕೆಲವು ಅಸಹಾಯಕ ಮತ್ತು ವೃದ್ಧ ಭಿಕ್ಷಕರನ್ನು (Beggar) ನೋಡುತ್ತೇವೆ. ಅದರಲ್ಲಿ ಬಹುತೇಕರು ಸುಮ್ಮನೆ ಕುಳಿತು ಭಿಕ್ಷೆ ಬೇಡುತ್ತಿದ್ದರೆ, ಇನ್ನೂ ಕೆಲವು ಜನ ಭಿಕ್ಷಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಊಟಕ್ಕೆ ದುಡ್ಡು (Money) ಕೊಡಿ ಅಂತ ಅಲ್ಲೇ ಸುತ್ತಾಡಿಕೊಂಡು ಭಿಕ್ಷೆ ಬೇಡುತ್ತಾ ಇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಕೆಲವು ಜನರು ಒಳ್ಳೆಯ ಧ್ವನಿಯಲ್ಲಿ ಚಿತ್ರ ಗೀತೆಗಳನ್ನು ಹಾಡುತ್ತಾ ಮಕ್ಕಳನ್ನು (Children) ತಮ್ಮ ಕಂಕುಳ ಜೋಳಿಗೆಯಲ್ಲಿ ಹಾಕಿಕೊಂಡು ಸುಮಧುರವಾಗಿ ಹಾಡುತ್ತಾ ಭಿಕ್ಷೆ ಬೇಡುತ್ತಾ ಇರುವುದನ್ನು ನಾವು ನೋಡಿರುತ್ತೇವೆ.

ಬಹುತೇಕರಿಗೆ ಉಡಲು ಒಳ್ಳೆಯ ಬಟ್ಟೆ ಇರದೇ ತಿನ್ನಲು ಆಹಾರವಿಲ್ಲದೆ ಅವರ ದೇಹವು ಕುಗ್ಗಿ ಹೋಗಿರುತ್ತದೆ. ಅವರಿಗೆ ಸ್ನಾನ ಮಾಡಿಸಿ ಕೂದಲನ್ನು ಕತ್ತರಿಸಿ ಹಾಕಿಕೊಳ್ಳಲು ಒಳ್ಳೆಯ ಬಟ್ಟೆಗಳನ್ನು ಕೊಟ್ಟರೆ, ಅವರು ನೋಡಲು ತುಂಬಾನೇ ಚೆನ್ನಾಗಿ ಕಾಣುತ್ತಾರೆ ಎಂಬಲ್ಲಿ ಎರಡು ಮಾತಿಲ್ಲ.

ಹೀರೋ ತರ ಇರುವ ದೆಹಲಿಯ ಭಿಕ್ಷುಕ
ಈಗೇಕೆ ಭಿಕ್ಷುಕರ ಬಗ್ಗೆ ಇಷ್ಟೆಲ್ಲಾ ಮಾತುಗಳನ್ನು ನಾವು ಆಡುತ್ತಾ ಇದ್ದೇವೆ ಅಂತ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ದೆಹಲಿಯಲ್ಲಿ ಇರುವಂತಹ ಒಬ್ಬ ಭಿಕ್ಷುಕನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ . ನೆಟ್ಟಿಗರು ಸಹ ಈತನನ್ನು ನೋಡಿ ‘ಇವನು ಭಿಕ್ಷೆ ಬೇಡುವವನಾ? ಒಳ್ಳೆ ಚಲನಚಿತ್ರದಲ್ಲಿ ನಟಿಸುವ ನಾಯಕನಂತೆ ಇದ್ದಾನೆ’ ಅಂತ ಹೇಳುತ್ತಿದ್ದಾರೆ ನೋಡಿ.

ಇದನ್ನೂ ಓದಿ: Video: ಬುಲೆಟ್​ ಬೈಕ್​ ಏರಿ ಮಂಟಪಕ್ಕೆ ಹೊರಟ ವಧು! ಕಾಲ ಬದಲಾಗಿದೆ ಕಣ್ರೀಈ ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ವಿಡಿಯೋಗಳು ತುಂಬಾನೇ ಸ್ವಾರಸ್ಯಕರವಾಗಿರುತ್ತವೆ ಎಂದು ಹೇಳಬಹುದು. ಎಷ್ಟೋ ಪ್ರತಿಭಾವಂತ ಜನರು ಈ ಮಾಧ್ಯಮದ ಮೂಲಕ ಬೆಳಕಿಗೆ ಬಂದು ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾರಿಗೆ ಗೊತ್ತು ಈ ಹೊಸ ಪೋಸ್ಟ್ ನಲ್ಲಿ ಕಂಡು ಬರುವ ಸ್ಪುರದ್ರೂಪಿ ಭಿಕ್ಷುಕನ ವಿಷಯದಲ್ಲೂ ಸಹ ಹೀಗೆ ಆಗಬಹುದೇನೋ? ಈ ಭಿಕ್ಷುಕನ ಫೋಟೋವೊಂದು ಅಂತರ್ಜಾಲದಲ್ಲಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿದೆ.

ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದಾರೆ ಈ ಭಿಕ್ಷುಕ
ಈ ಫೋಟೋವನ್ನು ಕವಲ್ಜಿತ್ ಸಿಂಗ್ ಬೇಡಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ‘ದೆಹಲಿಯ ಭಿಕ್ಷುಕ’ ಅಂತ ಶೀರ್ಷಿಕೆ ನೀಡಿದ್ದಾರೆ.  ಅದರ ಜೊತೆಗೆ ‘ಯಾರಿಗೆ ಗೊತ್ತು’ ಅನ್ನೋ ರೀತಿಯಲ್ಲಿ ಇರುವ ವ್ಯಕ್ತಿಯ ಎಮೋಜೀಯನ್ನು ಸಹ ಹಾಕಿದ್ದಾರೆ. ಉದ್ದವಾದ ಗಡ್ಡ ಮತ್ತು ಒಳ್ಳೆಯ ಹೇರ್ ಸ್ಟೈಲ್ ಹೊಂದಿರುವ ಆ ವ್ಯಕ್ತಿ ಮುಖಕ್ಕೆ ಸರಿ ಹೊಂದುವಂತಹ ಒಂದು ಸನ್ ಗ್ಲಾಸ್ ಹಾಕಿಕೊಂಡು ಹೀಗೆ ಎಲ್ಲವೂ ಮಾರ್ಡನ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Emilia Clarke: ಅಯ್ಯೋ, ಈ ನಟಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು 14 ಸಾವಿರ ರೂಪಾಯಿ ಪಾವತಿಸಬೇಕಂತೆ!

ಈ ವ್ಯಕ್ತಿ ಒಂದು ಊರುಗೋಲನ್ನು ಹಿಡಿದುಕೊಂಡು ಜನನಿಬಿಡ ದೆಹಲಿಯ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ ಇಲ್ಲಿಯವರೆಗೆ 20,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ಇವರನ್ನು ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ಸಾಮಾಜಿಕ ಮಾಧ್ಯಮ ಬಳಕೆದಾರರು ಆ ವ್ಯಕ್ತಿಯನ್ನು ಹೃತಿಕ್ ರೋಷನ್ ಮತ್ತು ಆದಿತ್ಯ ರಾಯ್ ಕಪೂರ್ ಅವರಂತಹ ಬಾಲಿವುಡ್ ನಟರೊಂದಿಗೆ ಹೋಲಿಸುತ್ತಿದ್ದಾರೆ. ಈ ವ್ಯಕ್ತಿಯನ್ನು ಮಾಡೆಲಿಂಗ್ ಮಾಡಲು ಪ್ರಯತ್ನಿಸಬಹುದು ಎಂಬ ಅಭಿಪ್ರಾಯವನ್ನು ಸಹ ಅನೇಕರು ಬಲವಾಗಿ ಬೆಂಬಲಿಸುತ್ತಿದ್ದಾರೆ. ಇದನ್ನು ನೋಡಿದ ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಕೆಜಿಎಫ್ 3 ಚಿತ್ರದ ಚಿತ್ರೀಕರಣ ಶುರುವಾಗಿದೆಯೇ” ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು “ಇದು ಯಾವುದಾದರೂ ಚಿತ್ರದ ಶೂಟಿಂಗ್ ಅಲ್ಲವಲ್ಲ” ಅಂತ ಗೊಂದಲದಿಂದ ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: