• Home
  • »
  • News
  • »
  • trend
  • »
  • Trending Photos: ಹಾಳಾಗಿರುವ ಈ ಸೂಟ್ಕೇಸ್ ನೋಡಿದ್ರೆ ಭಯ ಹುಟ್ಟೋದಂತು ಗ್ಯಾರಂಟಿ, ಸೂಟ್ಕೇಸ್‌ನಲ್ಲಿ ಏನಿದೆ ಗೊತ್ತಾ?

Trending Photos: ಹಾಳಾಗಿರುವ ಈ ಸೂಟ್ಕೇಸ್ ನೋಡಿದ್ರೆ ಭಯ ಹುಟ್ಟೋದಂತು ಗ್ಯಾರಂಟಿ, ಸೂಟ್ಕೇಸ್‌ನಲ್ಲಿ ಏನಿದೆ ಗೊತ್ತಾ?

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

ಸಾಮಾನ್ಯವಾಗಿ ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಬಸ್ ರೈಲು ಮತ್ತು ವಿಮಾನದಲ್ಲಿ ಕುಳಿತುಕೊಂಡು ಪ್ರಯಾಣಿಸುವಾಗ ನಾವು ಸೀಟ್ ‌ಮೇಲೆ ಕುಳಿತುಕೊಂಡಿದ್ದರೂ ಸಹ ನಮ್ಮ ಮನಸ್ಸು ಮಾತ್ರ ನಾವು ತೆಗೆದುಕೊಂಡು ಬಂದ ಲಗೇಜ್ ಗಳ ಮೇಲೆಯೇ ಇರುತ್ತದೆ. ಅದರೆ ನೀವು ಇಲ್ಲಿ ನೋಡುತ್ತಿರುವ ಲಗೇಜ್ ಮಾತ್ರ ನೀವು ಯಾವತ್ತು ನೋಡಿರಲ್ಲಿಕ್ಕೆ ಇಲ್ಲ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ನಾವು ಒಂದು ಊರಿನಿಂದ (Village) ಇನ್ನೊಂದು ಊರಿಗೆ ಬಸ್ (Bus), ರೈಲು (Train) ಮತ್ತು ವಿಮಾನದಲ್ಲಿ (Airplane) ಕುಳಿತುಕೊಂಡು ಪ್ರಯಾಣಿಸುವಾಗ ನಾವು ಸೀಟ್ (Seat)‌ ಮೇಲೆ ಕುಳಿತುಕೊಂಡಿದ್ದರೂ ಸಹ, ನಮ್ಮ ಮನಸ್ಸು ಮಾತ್ರ ನಾವು ತೆಗೆದುಕೊಂಡು ಬಂದ ಲಗೇಜ್ ಗಳ ಮೇಲೆಯೇ ಇರುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಹೌದು ಬಸ್ ಮತ್ತು ರೈಲಿನಲ್ಲಿ ನಾವು ಪ್ರಯಾಣಿಸುವಾಗ ಅಲ್ಲಿ ಲಗೇಜ್ ಅನ್ನು ನಮ್ಮ ಕಣ್ಣಿಗೆ ಕಾಣಿಸುವಂತೆ ಇರಿಸಿಕೊಳ್ಳಬಹುದು. ಹಾಗಾಗಿ ಈ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಸಾಗುತ್ತದೆ ಅಂತ ಹೇಳಬಹುದು.  ಅದರೆ ಇಲ್ಲಿ ನೀವು ನೋಡೋ ಲಗೇಜ್ (Luggage) ಮಾತ್ರ ಭಯಂಕರವಾಗಿ ಕಾಣಿಸಿಕೊಳ್ಳುತ್ತಿದೆ. ನೀವು ಒಮ್ಮೆ ಈ ಲಗೇಜ್​​ನ ಕಥೆ  ಕೇಳಿ.


ಆದರೆ ಅದೇ ವಿಮಾನದಲ್ಲಿ ಪ್ರಯಾಣಿಸುವಾಗ ಮಾತ್ರ ನಮ್ಮ ಲಗೇಜ್ ವಿಮಾನ ಹತ್ತುವ ಮುಂಚೆ ನೋಡಕ್ಕೆ ಸಿಕ್ಕಿದ್ದು, ನಾವು ಹೋಗಬೇಕಾದ ಊರಿನ ವಿಮಾನ ನಿಲ್ದಾಣ ಬಂದು ತಲುಪಿದಾಗಲೇ ಮತ್ತೆ ನೋಡೋಕೆ ಸಿಗೋದು.


ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಬಹುತೇಕ ಸಂದರ್ಭಗಳಲ್ಲಿ ನಮ್ಮ ಲಗೇಜ್ ಗಳು ತುಂಬಾನೇ ಸುರಕ್ಷಿತವಾಗಿರುತ್ತವೆ. ಆದರೆ ವಿಮಾನ ನಿಲ್ದಾಣದಲ್ಲಿ ನಮ್ಮ ಲಗೇಜ್ ನಮ್ಮ ಕೈ ಸೇರುವುದಕ್ಕೆ ಕೆಲವೊಮ್ಮೆ ತಡವಾಗುವುದು ಮತ್ತು ನಮ್ಮಲ್ಲಿರುವಂತಹ ಬ್ಯಾಗ್​ನ ಬಣ್ಣ ಬೇರೆಯವರ ಬ್ಯಾಗ್ ನ ಬಣ್ಣಕ್ಕೆ ಹೋಲುವುದರಿಂದ ನಮ್ಮ ಮತ್ತು ಅವರ ಬ್ಯಾಗ್​ಗಳು ಅದಲು ಬದಲು ಆಗುವ ಸಾಧ್ಯತೆಗಳು ಸಹ ಹೆಚ್ಚಿರುತ್ತವೆ ಅಂತ ಹೇಳಬಹುದು. ಆದರೆ ಕೆಲವೊಮ್ಮೆ ಆ ಲಗೇಜ್ ಗಳನ್ನು ವಿಮಾನದಲ್ಲಿ ಹಾಕುವಾಗ ಮತ್ತು ಅದನ್ನು ಕೆಳಕ್ಕೆ ಇಳಿಸುವಾಗ ಸಿಬ್ಬಂದಿಗಳ ನಿರ್ಲಕ್ಷವೋ ಏನೋ ಲಗೇಜ್ ಗಳು ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ.


ಸೂಟ್ಕೇಸ್ ಪೂರ್ತಿಯಾಗಿ ಕಿತ್ತೋದ ರೀತಿಯಲ್ಲಿ ಕಂಡುಬಂದಿದೆ


ಹೀಗೆ ಒಂದು ದೊಡ್ಡ ಸೂಟ್ಕೇಸ್ ವಿಮಾನದಿಂದ ಹೊರತೆಗೆದಾಗ ಪೂರ್ತಿಯಾಗಿ ಅದರ ಮೇಲಿನ ಆ ಕವರ್ ಸುಟ್ಟುಹೋದ ರೀತಿಯಲ್ಲಿ ಕಂಡುಬಂದಿದ್ದು, ಈಗ ಆ ಫೋಟೋವನ್ನು ರೆಡ್ಡಿಟ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸಿದ ಒಬ್ಬ ಪ್ರಯಾಣಿಕರ ಸೋದರಳಿಯ ಹಾನಿಗೊಳಗಾದ ಸೂಟ್ಕೇಸ್ ನ ಫೋಟೋವನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ವಿಮಾನದ ಪ್ರಯಾಣದ ನಂತರ ನನ್ನ ಮಾವನ ಸೂಟ್ಕೇಸ್" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಸೂಟ್ಕೇಸ್ ಮೇಲಿನಿಂದ ಕೆಳಗಿನವರೆಗೆ, ಅದರ ಬದಿ ಸಂಪೂರ್ಣವಾಗಿ ಹಾಳಾಗಿತ್ತು, ಮತ್ತು ಮುಂಭಾಗದ ಜಿಪ್ ಭಾಗವನ್ನು ಚೂರು ಚೂರು ಮಾಡಿ ತೆರೆದಿಡಲಾಗಿದೆ.


ಇದನ್ನೂ ಓದಿ: China Mosquitos: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


ತುಂಬಾನೇ ವೈರಲ್ ಆಗಿದೆ ಈ ಹಾಳಾಗಿರೋ ಸೂಟ್ಕೇಸ್ ಫೋಟೋ


ಪ್ರಯಾಣಿಸುವಾಗ ವ್ಯಕ್ತಿಯ ದುರಾದೃಷ್ಟದ ಪರಿಣಾಮವಾಗಿ, ಸೂಟ್ಕೇಸ್ ನ ವೈರಲ್ ಪೋಸ್ಟ್ ಪ್ರಯಾಣಿಕರಲ್ಲಿ ತಮ್ಮ ಲಗೇಜ್ ಗಳು ಏನಾಗಿರಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ. ಅಂದಿನಿಂದ, ಆಘಾತಕ್ಕೊಳಗಾದ ಸಾಮಾಜಿಕ ಮಾಧ್ಯಮ ಬಳಕೆದಾರರು 97,000 ಕ್ಕೂ ಹೆಚ್ಚು ಪ್ರತ್ಯುತ್ತರಗಳನ್ನು ಮತ್ತು ಫೋಟೋಗೆ 4,600 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಬರೆದಿದ್ದಾರೆ.
ಸೂಟ್ಕೇಸ್ ನ ಸ್ಥಿತಿಯನ್ನು ನೋಡಿದ ತಕ್ಷಣ, ಅಂತರ್ಜಾಲದ ಬಳಕೆದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಒಂದು ನಿಮಿಷ ಸಹ ತಡ ಮಾಡಲಿಲ್ಲ. "ಯಾರೋ ಒಬ್ಬರು ಈ ಸೂಟ್ಕೇಸ್ ಅನ್ನು ಜಗಿಯುವ ಆಟಿಕೆಯಾಗಿ ಬಳಸಿದ್ದಾರೆ" ಎಂದು ಒಬ್ಬರು ತಮಾಷೆಯಾಗಿ ಬರೆದಿದ್ದಾರೆ.


ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ವಿಮಾನವು ಲ್ಯಾಂಡ್ ಆಗಿದೆಯೇ, ಅಥವಾ ಅವರು ಅದನ್ನು ದಾರಿಯಲ್ಲಿ ಎಸೆದಿದ್ದಾರೆಯೇ?" ಅವರು ಅದನ್ನು ಬೆಂಕಿಯ ಮೇಲೆ ಹೊತ್ತಿಸಿದ್ದಾರೆಯೇ? ವಿಮಾನವು ಲಗೇಜ್​ನ ಮೇಲೆ ಅಪ್ಪಳಿಸಿದೆಯೇ?"ಎಂದು ರೆಡ್ಡಿಟ್ ಬಳಕೆದಾರರೊಬ್ಬರು ವ್ಯಂಗ್ಯವಾಗಿ ಕೇಳಿದರು.


"ನಾನು ಅನೇಕ ವರ್ಷಗಳಿಂದ ವಿಮಾನಯಾನ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಇದು ಹೇಗಿದೆಯೆಂದರೆ ಟ್ರಕ್‌ ಡ್ರೈವರ್ ಆಕಸ್ಮಿಕವಾಗಿ ಲಗೇಜ್ ಗಳನ್ನು ಹೊತ್ತೋಯ್ಯುವಾಗ ಈ ಸೂಟ್ಕೇಸ್ ಮೇಲೆ ಗಾಡಿ ಓಡಿಸಿರಬಹುದು. ಏಕೆಂದರೆ ಅವರು ಲಗೇಜ್ ಒಯ್ಯುವ ವಾಹನ ತೆಗೆದುಕೊಂಡು ವಿಮಾನ ನಿಲ್ದಾಣದಲ್ಲಿ ಹೋಗುತ್ತಿರುತ್ತಾರೆ. ಇದು ಕೆಲವು ಬಾರಿ ಸಂಭವಿಸುವುದನ್ನು ನಾನು ನೋಡಿದ್ದೇನೆ" ಎಂದು ಬರೆದಿದ್ದಾರೆ.

First published: