• Home
  • »
  • News
  • »
  • trend
  • »
  • Jail Life: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!

Jail Life: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

"ನಾನು ಜೈಲು ಮೆಟ್ಟಿಲು ಹತ್ತಿದ ಮಗನೇ ಅಲ್ಲ" ಅಂತ ನೀವು ಮಾತು ಮಾತಿಗೂ ವಾದ ಮಾಡಬಹುದು! ಆದ್ರೆ ಜೈಲು ಮೆಟ್ಟಿಲು ಹತ್ತೋದೇನು, ಜೈಲಿನಲ್ಲೇ ನೀವು ಒಂದು ದಿನ ಇದ್ದು ಬರಬಹುದು! ಅದಕ್ಕಾಗಿ ನೀವು ಯಾವುದೇ ಅಪರಾಧ ಮಾಡೋದು ಬೇಕಿಲ್ಲ, ಬದಲಾಗಿ 500 ರೂಪಾಯಿ ಕೊಟ್ರೆ ಸಾಕು! ಇದೇನಪ್ಪಾ ವಿಚಿತ್ರ ಸುದ್ದಿ ಅಂತೀರಾ? ಹಾಗಿದ್ರೆ ಮುಂದೆ ಓದಿ...

ಮುಂದೆ ಓದಿ ...
  • Share this:

ಉತ್ತರಾಖಂಡ್: ಜೈಲಿಗೆ (Jail) ಹೋಗೋದು ಅಂದ್ರೆ ಸಣ್ಣ ಮಾತಲ್ಲ. ಜೈಲಿಗೆ ಹೋಗಿ ಬಂದವರು ಅಂದ್ರೆ ಸಾಕು ಸಮಾಜ (Society) ಅವರನ್ನು ಒಂದು ರೀತಿಯ ಕೀಳು ದೃಷ್ಟಿಯಲ್ಲಿ ನೋಡುತ್ತದೆ. ಅದ್ರಲ್ಲೂ ಅಪರಾಧ (Crime) ಮಾಡಿ, ಜೈಲಿಗೆ ಹೋಗು ಶಿಕ್ಷೆ (Punishment) ಅನುಭವಿಸಿದವ್ರು ಜೈಲಿಂದ ಹೊರಗೆ ಬಂದ್ರೂ ಸಮಾಜದಲ್ಲಿ ತಲೆ ಎತ್ತಿ ಓಡಾಡುವ ವಾತಾವರಣವೇ ಇರೋದಿಲ್ಲ. ಹೀಗಾಗಿ ಜೈಲಿಗೆ ಹೋಗೋಕೆ ಯಾರೂ ಇಷ್ಟ ಪಡೋದಿಲ್ಲ. ಇನ್ನು "ನಾನು ಜೈಲು ಮೆಟ್ಟಿಲು ಹತ್ತಿದ ಮಗನೇ ಅಲ್ಲ" ಅಂತ ನೀವು ಮಾತು ಮಾತಿಗೂ ವಾದ ಮಾಡಬಹುದು! ಆದ್ರೆ ಜೈಲು ಮೆಟ್ಟಿಲು ಹತ್ತೋದೇನು, ಜೈಲಿನಲ್ಲೇ ನೀವು ಒಂದು ದಿನ ಇದ್ದು ಬರಬಹುದು! ಅದಕ್ಕಾಗಿ ನೀವು ಯಾವುದೇ ಅಪರಾಧ ಮಾಡೋದು ಬೇಕಿಲ್ಲ, ಬದಲಾಗಿ 500 ರೂಪಾಯಿ ಕೊಟ್ರೆ ಸಾಕು! ಇದೇನಪ್ಪಾ ವಿಚಿತ್ರ ಸುದ್ದಿ ಅಂತೀರಾ? ಹಾಗಿದ್ರೆ ಮುಂದೆ ಓದಿ...


ಒಂದು ದಿನ ಜೈಲಿನಲ್ಲಿ ಕಳೆಯೋ ಆಸೆ ಇದೆಯಾ?


ಜೈಲು ಎಂಬ ಶಬ್ದ ಕೇಳಿದ್ರೆ ಮೈ ಜುಂ ಎನ್ನುತ್ತದೆ. ಜೈಲಿನಲ್ಲಿ ಜೀವನ ಹೇಗಪ್ಪಾ, ಕೈದಿಗಳು ಹೇಗೆ ಇರುತ್ತಾರಪ್ಪ ಅಂತ ಯೋಚಿಸಿಯೇ ನಾವು ಭಯಪಡುತ್ತೀವಿ. ಆದ್ರೆ ಜೈಲಿನಲ್ಲಿ ಜೀವನ ಹೇಗಿರುತ್ತದೆ ಅಂತ ನಾವು ಕಲ್ಪಿಸಿಕೊಳ್ಳುವುದು ಬೇಕಿಲ್ಲ, ಬದಲಾಗಿ ನಾವೇ ಒಂದು ದಿನದ ಮಟ್ಟಿಗೆ ಜೈಲಿಗೆ ಹೋಗಿ, ಜೈಲಿನಲ್ಲಿ ಇದ್ದು, ಅಲ್ಲಿನ ಜೀವನ ಹೇಗಿರುತ್ತೆ ಅಂತ ಖುದ್ದು ತಿಳಿದುಕೊಂಡು ಬರಬಹುದು!


ಉತ್ತರಾಖಂಡ್‌ನಲ್ಲಿ ಜೈಲಿನಲ್ಲಿ ಇರಲು ಅವಕಾಶ!


ಅಪರಾಧ ಮಾಡದೇ ಜೈಲುವಾಸ ಅನುಭವಿಸಬೇಕೆಂಬ ಆಸೆ ಇರುವವರ ಕನಸು ನನಸು ಮಾಡಲು ಉತ್ತರಾಖಂಡ್‌ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರವು ಜೈಲಿನ ಅನುಭವವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರವಾಸಿಗರಿಗಾಗಿ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ. ಜೈಲು ಇಲಾಖೆ, ಜೈಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ ನಡೆಸಿದೆ. ಈ ಯೋಜನೆಯ ಪ್ರಕಾರ ಹಣಕೊಟ್ಟು ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ಜೈಲು ವಾಸದ ಅನುಭವ ಪಡೆಯಬಹುದಾಗಿದೆ.


ಇದನ್ನೂ ಓದಿ: Meat: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್


500 ರೂಪಾಯಿ ಕೊಡಿ, ಒಂದು ದಿನ ಜೈಲಲ್ಲಿ ಇರಿ!


500 ರೂಪಾಯಿ ಕೊಟ್ಟು, ಒಂದು ದಿನದ ಮಟ್ಟಿಗೆ ಜೈಲಿನಲ್ಲಿ ಕಳೆಯುವ ಅವಕಾಶವನ್ನು ಉತ್ತರಾಖಂಡ್ ಸರ್ಕಾರ ಸಾರ್ವಜನಿಕರಿಗೆ ನೀಡಿದೆ. ನಿಜವಾದ ಜೈಲಿನ ಜೀವನದ ಅನುಭವವನ್ನು ಬಯಸುವ ಪ್ರವಾಸಿಗರಿಗೆ ವಸತಿ ಒದಗಿಸಲು ಹಿಂದಿನ ಜೈಲಿನ ಪ್ರದೇಶವನ್ನು ಪ್ರಸ್ತುತ ನವೀಕರಿಸಲಾಗುತ್ತಿದೆ. ಅದರಂತೆ 500 ರೂಪಾಯಿ ಕೊಟ್ಟು, ಒಂದು ರಾತ್ರಿ ಜೈಲಿನಲ್ಲಿ ಉಳಿಯಬಹುದಾಗಿದೆ.


ಹಲ್ದಾನಿ ಜೈಲಿನಲ್ಲಿ ವ್ಯವಸ್ಥೆ


ಹಲ್ದಾನಿ ಜೈಲಿನಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಹಲ್ದ್ವಾನಿ ಕಾರಾಗೃಹವನ್ನು 1903 ರಲ್ಲಿ ನಿರ್ಮಿಸಲಾಯಿತು ಮತ್ತು ಅದರ ಒಂದು ಭಾಗವು ಆರು ಸಿಬ್ಬಂದಿ ಕ್ವಾರ್ಟರ್‌ಗಳೊಂದಿಗೆ ಹಳೆಯ ಶಸ್ತ್ರಾಗಾರವನ್ನು ಒಳಗೊಂಡಿದೆ, ಅದನ್ನು ಕೈಬಿಡಲಾಗಿದೆ, ಪ್ರಸ್ತುತ "ಜೈಲು ಅತಿಥಿಗಳನ್ನು" ಸ್ವೀಕರಿಸಲು ಬಳಸಲಾಗುತ್ತಿದೆ.


ಜೈಲಿನ ಸಮವಸ್ತ್ರ, ಜೈಲು ಊಟ!


500 ರೂಪಾಯಿ ನೀಡಿದ ವ್ಯಕ್ತಿಗಳಿಗೆ ಜೈಲು ಬ್ಯಾರಕ್‌ನಲ್ಲಿ ಕೆಲವು ಗಂಟೆಗಳ ಕಾಲ ಕಳೆಯಲು ಅವಕಾಶ ನೀಡಲಾಗುತ್ತದೆ. ಈ "ಪ್ರವಾಸಿ ಕೈದಿಗಳಿಗೆ" ಜೈಲು ಸಮವಸ್ತ್ರ ಮತ್ತು ಜೈಲಿನ ಅಡುಗೆಮನೆಯಲ್ಲಿ ಮಾಡಿದ ಆಹಾರವನ್ನು ನೀಡಲಾಗುತ್ತದೆ" ಎಂದು ಜೈಲಿನ ಅಧೀಕ್ಷಕರು ಹೇಳಿದ್ದಾರೆ.


ಇದನ್ನೂ ಓದಿ: Viral News: ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ; ನೋಡಲು ಸುಂದರವಾಗಿರಬೇಕು, ವಯಸ್ಸು 18-25ರ ಒಳಗಿರಬೇಕು!


ಜ್ಯೋತಿಷಿಗಳಿಂದಲೂ ಶಿಫಾರಸು


ಇನ್ನು ಕೇವಲ ಪ್ರವಾಸಿಗರು ಮಾತ್ರವಲ್ಲ, ಜ್ಯೋತಿಷಿಗಳೂ ಈ ಜೈಲು ವಾಸವನ್ನು ಶಿಫಾರಸು ಮಾಡುತ್ತಿದ್ದಾರಂತೆ. ವ್ಯಕ್ತಿಗಳ ಜೈಲುವಾಸವನ್ನು ಮುನ್ಸೂಚಿಸುವ ಜಾತಕಗಳಲ್ಲಿ "ಬಂಧನ್ ಯೋಗ" ವನ್ನು ತಪ್ಪಿಸುವ ಸಲುವಾಗಿ ಜೈಲಿನಲ್ಲಿ ಸಮಯವನ್ನು ಪೂರೈಸಲು ಜ್ಯೋತಿಷಿಗಳು ಸಲಹೆ ನೀಡಿದ್ದಾರಂತೆ.

Published by:Annappa Achari
First published: