Tour: ಭಾರತೀಯ ಪಾಸ್‌ಪೋರ್ಟ್ ಇದ್ರೆ ಸಾಕು, ವೀಸಾ ಇಲ್ಲದೆ ಈ ದೇಶಗಳಿಗೆ ಸುತ್ತಾಡಬಹುದು!

ನಾವು ಇಂದು ನಿಮಗೆ 25 ದೇಶಗಳ ಬಗ್ಗೆ ಹೇಳಲಿದ್ದು ಇಲ್ಲಿಗೆ ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರಷ್ಟೇ ಸಾಕು ನಿಮಗೆ ಇಲ್ಲಿ ವಿಸಾ-ಫ್ರೀ ಪ್ರವೇಶ ಸಿಗಲಿದೆ. ಹಾಗಾಗಿ ಈ ದೇಶಗಳಿಗೆ ಹೋಗಬೇಕೆಂದಾದಲ್ಲಿ ವಿಸಾ ಬಗ್ಗೆ ತಲೆ ಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ.

ವಿಸಾ ಇಲ್ಲದೆ 25 ದೇಶಗಳಿಗೆ ಪ್ರವಾಸ

ವಿಸಾ ಇಲ್ಲದೆ 25 ದೇಶಗಳಿಗೆ ಪ್ರವಾಸ

  • Share this:
ಪಾಸ್‌ಪೋರ್ಟ್ (Passport) ಎಂಬುದು ಆಯಾ ದೇಶಗಳ (Country) ನಾಗರಿಕರು ಆ ದೇಶದ ಪ್ರಜೆಯಾಗಿದ್ದಾರೆ (Citizen) ಎಂಬುದನ್ನು ಅಧಿಕೃತವಾಗಿ ಖಾತರಿಪಡಿಸುವ ದಾಖಲೆಯಾಗಿದೆ (Documentation). ಯಾರೇ ಆಗಲಿ ತಮ್ಮ ದೇಶವನ್ನು ಹೊರತುಪಡಿಸಿ ಇನ್ನೊಂದು ದೇಶಕ್ಕೆ ಹೋಗಬೇಕಾದ ಸಂದರ್ಭ ಬಂದರೆ ಮೊದಲಿಗೆ ಅವರು ತಾವು ಭೇಟಿ (visit) ನೀಡುವ ದೇಶದಿಂದ ವಿಸಾ (Visa) ಪಡೆಯಬೇಕಾಗುತ್ತದೆ. ತದನಂತರವೇ ಅವರು ಆ ದೇಶಕ್ಕೆ ಕಾಲಿಡಬಹುದು. ಇದು ಸಾಮಾನ್ಯವಾಗಿ ರೂಢಿಯಲ್ಲಿರುವ ಪ್ರಕ್ರಿಯೆ (Process). ಒಂದು ದೇಶ ಅದರ ಸ್ಥಾನಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ (International level) ವ್ಯಾಖ್ಯಾನಿಸಬಹುದಾದ ಶಕ್ತಿಯನ್ನು ಪಾಸ್‌ಪೋರ್ಟ್ ಹೊಂದಿರುತ್ತದೆ ಎಂದರೂ ತಪ್ಪಾಗಲಾರದು

ವಿಸಾ ಎಂಬುದು ವಿದೇಶ ಪ್ರವಾಸದಲ್ಲಿ ಬಲು ನಿರ್ಣಾಯಕ ಪಾತ್ರವಹಿಸುವ ಅಂಶವಾಗಿದೆ. ಹಲವಾರು ಸಂದರ್ಭಗಳಲ್ಲಿ ಜನರ ಬಳಿ ಹಣದ ಲಭ್ಯತೆಯಿದ್ದರೂ ಸಹ ವಿಸಾ ಸಿಗದೆ ಅವರು ಬೇರೆ ದೇಶಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ವಿಸಾ ಅನುಮೋದನೆಗಳು ವಿಳಂಬವಾದಾಗಲೂ ಬೇರೆ ದೇಶಗಳಿಗೆ ತೆರಳಿ ರಜೆಯ ಮಜೆಯನ್ನು ಅನುಭವಿಸಬೇಕೆನ್ನುವವರಿಗೆ ಹತಾಶೆಗೊಳಗಾಗಬಹುದು. ಆದರೆ, ನಾವು ಇಂದು ನಿಮಗೆ 25 ದೇಶಗಳ ಬಗ್ಗೆ ಹೇಳಲಿದ್ದು ಇಲ್ಲಿಗೆ ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರಷ್ಟೇ ಸಾಕು ನಿಮಗೆ ಇಲ್ಲಿ ವಿಸಾ-ಫ್ರೀ ಪ್ರವೇಶ ಸಿಗಲಿದೆ. ಹಾಗಾಗಿ ಈ ದೇಶಗಳಿಗೆ ಹೋಗಬೇಕೆಂದಾದಲ್ಲಿ ವಿಸಾ ಬಗ್ಗೆ ತಲೆ ಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ.

1. ಬಾರ್ಬಡೋಸ್
ಕ್ಯಾರಿಬೀಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್ ತನ್ನ ಸುತ್ತಲೂ ಅಟ್ಲಾಂಟಿಕ್ ಸಾಗರದಿಂದ ಸುತ್ತುವರೆದಿದ್ದು ವೈವಿಧ್ಯಮಯತೆಯನ್ನು ಮೈಗೂಡಿಸಿಕೊಂಡಿರುವ ಸ್ವತಂತ್ರ ಬ್ರಿಟಿಷ್ ಕಾಮನ್ವೆಲ್ತ್ ದೇಶವಾಗಿದೆ. ಬಿಳಿ ಮರಳಿನ ಮನಮೋಹಕ ಕಡಲ ತಡಿಗಳಿಗೆ ಹೆಸರುವಾಸಿಯಾದ ಈ ದ್ವೀಪ ರಾಷ್ಟ್ರ ತನ್ನಲ್ಲಿರುವ ಹವಳದ ದಿಬ್ಬಗಳಿಗೂ ಜನಪ್ರಿಯವಾಗಿದೆ.ಹನಿಮೂನ್ ಪ್ರವಾಸಕ್ಕಾಗಲಿ ಅಥವಾ ಕುಟುಂಬ ಇಲ್ಲವೆ ಸ್ನೇಹಿತರೊಂದಿಗೆ ಅದ್ಭುತ ಸಮಯ ಕಳೆಯಲು ರಜಾ ದಿನಗಳ ಮಜಾ ನೀಡುವ ರಾಷ್ಟ್ರ ಇದಾಗಿದ್ದು ಭಾರತೀಯರು ವಿಸಾ ಪಡೆಯದೆಯೇ ಇಲ್ಲಿಗೆ ಪ್ರವೇಶಿಸಬಹುದಾಗಿದೆ.

2. ಬ್ರಿಟೀಷ್ ವಿರ್ಜಿನ್ ಐಲ್ಯಾಂಡ್ಸ್
ಬ್ರಿಟೀಷ್ ವಸಾಹತುಗಳಿಗೆ ಒಳಪಡುವ ಈ ದ್ವೀಪಗಳು ಪೋರ್ಟರಿಕೊದ ಪೂರ್ವ ಭಾಗದಲ್ಲಿ ಕ್ಯಾರಿಬೀಯನ್ ಬಳಿ ನೆಲೆಸಿದೆ. 50 ಪುಟ್ಟ ಪುಟ್ಟ ದ್ವೀಪಗಳನ್ನೊಳಗೊಂಡ ಈ ರಾಷ್ಟ್ರವು ಪ್ರವಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಜಲಕ್ರೀಡೆಗಳು, ಸೇಲಿಂಗ್, ಹಕಿಂಗ್ ಹಾಗೂ ಶಾಪಿಂಗ್ ಚಟುವಟಿಕೆಗಳನ್ನು ಇಲ್ಲಿ ಅಪಾರವಾಗಿ ಆನಂದಿಸಬಹುದಾಗಿದೆ. ಭಾರತೀಯರು ಈ ದ್ವೀಪ ರಾಷ್ಟ್ರವನ್ನು ಒಂದು ತಿಂಗಳುಗಳ ಕಾಲ ವಿಸಾ ಇಲ್ಲದೆಯೇ ಆನಂದಿಸಬಹುದಾಗಿದೆ.

3. ಭೂತಾನ್
ಭಾರತದ ನೆರೆ ರಾಷ್ಟ್ರವಾಗಿರುವ ಭೂತಾನ್ ತನ್ನ ಅನುಪಮ ಪರ್ವತ ಸೌಂದರ್ಯಗಳಿಗಾಗಿ ಹೆಸರುವಾಸಿಯಾಗಿದೆ. ಪರ್ವತಗಳ ಮಧ್ಯದಲ್ಲಿ ಸಾಹಸಭರಿತ ಟ್ರೆಕ್ಕಿಂಗ್, ಹೈಕಿಂಗ್ ನಂತಹ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಇವುಗಳಲ್ಲದೆ ಇಲ್ಲಿ ಐತಿಹಾಸಿಕವಾಗಿಯೂ ಶ್ರೀಮಂತವಾದ ಆ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಮಹತ್ವದ ಸ್ಮಾರಕಗಳನ್ನು ನೋಡಬಹುದು. ಭಾರತೀಯ ವಿಸಾ ಇಲ್ಲದೆ ಆ ದೇಶದಲ್ಲಿ ಹದಿನಾಲ್ಕು ದಿನಗಳ ಕಾಲ ವಾಸಿಸಲು ಅನುಮತಿಸಲಾಗಿದೆ.

4. ಡೊಮಿನಿಕಾ
ಪೂರ್ವ ಕ್ಯಾರಿಬೀಯನ್ ನಲ್ಲಿ ನೆಲೆಸಿರುವ ಚಿಕ್ಕ ದ್ವೀಪ ರಾಷ್ಟ್ರವಾಗಿದೆ ಇದು. ಕ್ಯಾರಿಬೀಯನ್ ಉತ್ತಮವಾಗಿ ಸಂರಕ್ಷಿಸಿಟ್ಟಿರುವ ಅದ್ಭುತ ರಹಸ್ಯ ಎಂದು ಡೊಮಿನಿಕಾ ಬಗ್ಗೆ ಪ್ರಶಂಸೆ ಮಾಡಲಾಗುತ್ತದೆ. ಅಲ್ಲದೆ ಇದನ್ನು ಕ್ಯಾರಿಬೀಯನ್ನಿನ ಪ್ರಾಕೃತಿಕ ದ್ವೀಪ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ ಎಂದರೆ ನೀವೇ ಊಹಿಸಬಹುದು ಇಲ್ಲಿನ ಪ್ರಕೃತಿ ಸೌಂದರ್ಯ ಹೇಗಿರಬಹುದೆಂದು. ದಟ್ಟ ಹಸಿರಿನ ಕಾಡುಗಳು, ಪರ್ವತಗಳು ಹಾಗೂ ಕಡಲ ತಡಿಗಳಿಂದ ಸಂಪದ್ಭರಿತವಾಗಿರುವ ಈ ರಾಷ್ಟ್ರವು ಸ್ವರ್ಗದಂತೆಯೇ ಭಾಸವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿ ಬ್ರಿಟೀಷ್, ಫ್ರೆಂಚ್ ಹಾಗೂ ವೆಸ್ಟ್ ಇಂಡಿಯನ್ ಸಂಸ್ಕೃತಿಗಳ ಮಿಶ್ರಣವಿರುವ ಪ್ರಭಾವವನ್ನು ಕಾಣಬಹುದು.

ಇದನ್ನೂ ಓದಿ:  Sugar: ಸಂಶೋಧನೆಗಳ ಪ್ರಕಾರ ಸಮುದ್ರದ ಕೆಳಭಾಗದಲ್ಲಿ ಇದ್ಯಂತೆ '32 ಬಿಲಿಯನ್ ಕ್ಯಾನ್ ಕೋಕ್'ಗೆ ಸಮಾನವಾದ ಸಕ್ಕರೆ!

5. ಕೂಕ್ ಐಲ್ಯಾಂಡ್ಸ್
ಸೌಥ್ ಪ್ಯಾಸಿಫಿಕ್ ಬಳಿ ನೆಲೆಸಿರುವ ಈ ದ್ವೀಪಗಳ ರಾಷ್ಟ್ರವು ಅಲ್ಲಲ್ಲಿ ಚದುರಿದಂತಹ ಒಟ್ಟು 15 ದ್ವೀಪಗಳ ಒಂದು ಸಮೂಹ ರಾಷ್ಟ್ರವಾಗಿದೆ. ನೀಳ ವರ್ಣದ ಲಗೂನುಗಳು, ದಟ್ಟ ಹಸಿರಿನ ಪರ್ವತಗಳು, ಶ್ವೇತ ವರ್ಣದ ಕಡಲ ತಟಗಳು ಹೀಗೆ ತನ್ನ ವೈಭೋಗದಿಂದ ಜನರನ್ನು ಸದಾ ಆಕರ್ಷಿಸುತ್ತದೆ ಈ ರಾಷ್ಟ್ರ. ಇಲ್ಲಿ ಅನ್ವೇಷಿಸಬಹುದಾದ ಹಲವಾರು ಚಟುವಟಿಕೆಗಳು ಲಭ್ಯವಿದ್ದು ರಜೆಯ ಸಮಯವನ್ನು ಹಾಯಾಗಿ ಕಳೆಯಲು ಆದರ್ಶಮಯವಾಗಿದೆ ಈ ರಾಷ್ಟ್ರ. ಭಾರತೀಯ ಪಾಸ್ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

6. ಎಲ್ ಸಲ್ವಾಡೋರ್
ಇದು ಮಧ್ಯ ಅಮೆರಿಕದಲ್ಲಿರುವ ಒಂದು ಚಿಕ್ಕ ರಾಷ್ಟ್ರ. ರಮಣೀಯ ಪ್ರಾಕೃತಿಕ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ ಹಾಗೂ ಅದ್ಭುತ ಆರ್ಥಿಕತೆಯ ಮಿಶ್ರಣವಾಗಿರುವ ಈ ರಾಷ್ಟ್ರ ಪ್ರವಾಸೋದ್ಯಮದಲ್ಲೂ ಹೆಸರುವಾಸಿ. ಗಿಡ-ಮರಗಳ ಹಸಿರಿನ ದಟ್ಟ ಕಾನನದಿಂದ ಹಿಡಿದು ಶುಭ್ರ ಮರಳಿನ ಕಡಲ ತೀರಗಳವರೆಗೆ ಇಲ್ಲಿ ಎಲ್ಲವೂ ಮನಮೋಹಕವಾಗಿವೆ. ನೀವೊಂದು ಎಂದಿಗೂ ಮರೆಯಲಾರದ ಪ್ರವಾಸ ಯೋಜಿಸುತ್ತಿದ್ದೀರಿ ಎಂದರೆ ಈ ದೇಶವನ್ನೊಮ್ಮೆ ಆಯ್ಕೆ ಮಾಡಿಕೊಳ್ಳಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

7. ಫಿಜಿ
300 ಚಿಕ್ಕ ಪುಟ್ಟ ದ್ವೀಪಗಳ ಒಂದು ಸುಂದರ ರಾಷ್ಟ್ರವಾಗಿ ಫಿಜಿ ಕಂಗೊಳಿಸುತ್ತದೆ. ಓಷಿಯಾನಿಯಾದ ಉಪ ವಿಭಾಗದಲ್ಲಿ ಬರುವ ಮೆಲಾನೇಷಿಯಾದಲ್ಲಿ ಬರುವ ಈ ರಾಷ್ಟ್ರ ತನ್ನಲ್ಲಿರುವ ಮಳೆಗಾಡುಗಳು, ಜಲಪಾತಗಳು, ಹವಳದ ದಿಬ್ಬಗಳು ಹಾಗೂ ಹಗುರವದ ಜ್ವಾಲಾಮುಖಿ ಪರ್ವತಗಳಿಗಾಗಿ ಹೆಸರುವಾಸಿಯಾಗಿದೆ. ಫಿಜಿಯ ಪ್ರತಿಯೊಂದು ದ್ವೀಪಗಳು ಒಂದು ವಿಶೇಷತೆಯನ್ನು ಹೊಂದಿದ್ದು ಭೇಟಿ ನೀಡಲು ಯೋಗ್ಯವಾದ ತಾಣಗಳಾಗಿವೆ. ಕಾಡುಗಳಿಂದ ಹಿಡಿದು ಕಡಲ ತೀರಗಳವರೆಗೆ ಹಲವು ವೈವಿಧ್ಯಮಯಗಳನ್ನು ಇಲ್ಲಿ ಪ್ರವಾಸಿಗರು ಆಸ್ವಾದಿಸಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ನಾಲ್ಕು ತಿಂಗಳು ಕಳೆಯಬಹುದು.

8. ಗಾಂಬಿಯಾ
ಅಟ್ಲಾಂಟಿಕ್ ಕರಾವಳಿ ತೀರಕ್ಕೆ ಹೊಂದಿಕೊಂಡಂತೆ ಪಶ್ಚಿಮ ಆಫ್ರಿಕಾದಲ್ಲಿ ನೆಲೆಸಿರುವ ಪುಟ್ಟ ರಾಷ್ಟ್ರ ಗಾಂಬಿಯಾ. ಆಫ್ರಿಕನ್ ಜನರ ಅದ್ಭುತ ಸಂಪ್ರದಾಯ ಹಾಗೂ ಸಂಸ್ಕೃತಿಗಳ ಪ್ರಭಾವದ ಜೊತೆ ನೈಸರ್ಗಿಕವಾಗಿ ಅದ್ಭುತವಾದ ನದಿಗಳ ಪರಿಸರವನ್ನು ಈ ರಾಷ್ಟ್ರ ಹೊಂದಿದ್ದು ಏನಿಲ್ಲವೆಂದರೂ 500ಕ್ಕೂ ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ. ಜೊತೆಗೆ ಕರಾವಳಿ ತೀರಗಳ ಅದ್ಭುತ ಕಡಲ ತಟಗಳ ವಿಹಂಗಮ ನೋಟಗಳನ್ನು ಇದು ನೋಡುಗರಿಗೆ ಉಣಬಡಿಸುತ್ತದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಆರು ತಿಂಗಳು ಕಳೆಯಬಹುದು.

9. ಗ್ರೆನಡಾ
ಕೆನಡಾ ಅಲ್ಲ ಗ್ರೆನಡಾ ದೇಶವಿದು. ವೆಸ್ಟ್ ಇಂಡೀಸ್ ನಲ್ಲಿ ಬರುವ ಈ ಕ್ಯಾರಿಬೀಯನ್ ಸೌಂದರ್ಯವು ಪರ್ವತಗಳು, ಮಳೆಗಾಡುಗಳು ಹಾಗೂ ದಟ್ಟ ಹಸಿರಿನ ವನ್ಯಸಂಪತ್ತಿನಿಂದ ಕಣ್ಮನ ಸೆಳೆಯುತ್ತದೆ. ಕಡಲ ತಡಿಯ ರಂಗು ರಂಗಿನ ಗ್ರಾಮೀಣ ಪರಿಸರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

ಇದನ್ನೂ ಓದಿ: Explained: ಮೌಂಟ್ ಎವರೆಸ್ಟ್ ಹತ್ತಬೇಕಾ? 25ರಿಂದ 50 ಲಕ್ಷ ರೆಡಿ ಮಾಡಿಕೊಳ್ಳಿ! ಈ ಸಾಹಸ ಇಷ್ಟೊಂದು ದುಬಾರಿ ಯಾಕೆ? 

10. ಹೈಟಿ
ಪ್ರಾಕೃತಿಕ ಸೌಂದರ್ಯ ಹಾಗೂ ತನ್ನ ಸಂಸ್ಕೃತಿಗಾಗಿ ಪ್ರಸಿದ್ಧಿ ಪಡೆದಿರುವ ಹೈಟಿ ತನ್ನ ಹಿಸ್ಪಾನಿಯೋಲಾ ಎಂಬ ದ್ವೀಪವನ್ನು ಡೊಮಿನಿಕನ್ ರಿಪಬ್ಲಿಕ್ ನೊಂದಿಗೆ ಹಂಚಿಕೊಳ್ಳುತ್ತದೆ. ಜಲಪಾತಗಳು, ಕಡಲ ತೀರಗಳು ಹಾಗೂ ಹಲವು ಅದ್ಭುತ ಸ್ಮಾರಕಗಳನ್ನೊಳಗೊಂಡಿರುವ ಈ ರಾಷ್ಟ್ರವು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

11. ಇಂಡೋನೇಷಿಯಾ
ಆಗ್ನೇಯ ಏಷಿಯಾ ಭಾಗದಲ್ಲಿ ಹೆಚ್ಚಾಗಿ ಭೇಟಿ ನೀಡಲ್ಪಡುವ ದೇಶಗಳ ಪೈಕಿ ಒಂದಾಗಿದೆ ಇಂಡೋನೇಷಿಯಾ. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮಧ್ಯದ ಭಾಗದಲ್ಲಿ ಸ್ಥಿತವಿರುವ ಈ ದೇಶವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅಪಾರ ಸಾಮರ್ಥ್ಯ ಹೊಂದಿದೆ. ಈ ರಾಷ್ಟ್ರವು 17,000 ಪುಟ್ಟ ಪುಟ್ಟ ನಡುಗಡ್ಡೆಗಳಿಂದ ಕೂಡಿದ ಒಂದು ಸಮೂಹ ರಾಷ್ಟ್ರವಾಗಿದ್ದು ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ ಹಾಗೂ ಪ್ರಾಕೃತಿಕ ವೈಭೋಗಗಳಿಂದ ಕೂಡಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

12. ಜಮೈಕಾ
ಬಿಳಿ ಮರಳುಗಳ ಕಡಲ ತೀರಗಳು, ಸ್ಫಟಿಕದಂತೆ ಸ್ಪಷ್ಟವಾದ ಜಲ ಇವು ಜಮೈಕಾ ದೇಶದ ಪ್ರಮುಖ ಆಕರ್ಷಣೆ. ಸ್ನಾರ್ಕೆಲಿಂಗ್, ಸ್ಕೂಬಾ ಡವಿಂಗ್, ಸರ್ಫಿಂಗ್ ಇತ್ಯಾದಿ ಜಲಕ್ರೀಡೆಗಳನ್ನು ಇಲ್ಲಿ ಅದ್ಭುತವಾಗಿ ಆನಂದಿಸಬಹುದಾಗಿದೆ. ಹಲವಾರು ಅದ್ದೂರು ರಿಸಾರ್ಟುಗಳು ಇಲ್ಲಿದ್ದು ಪ್ರವಾಸಿಗರು ಅದ್ಭುತವಾಗಿ ಸಮಯವನ್ನು ಇಲ್ಲಿ ಕಳೆಯಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

13. ಮಕಾವು
ದಕ್ಷಿಣ ಚೈನಾದ ಕಡಲ ತಟದಲ್ಲಿ ನೆಲೆಸಿರುವ ಈ ಸುಂದರ ದೇಶವು ತನ್ನ ಐತಿಹಾಸಿಕ ಕೇಂದ್ರಕ್ಕಾಗಿ ಯುನೆಸ್ಕೊದಿಂದ ಮಾನ್ಯತೆ ನೀಡಲಾದ ಪ್ರದೇಶವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ವೈವಿಧ್ಯಮಯ ಖಾದ್ಯಗಳು, ಲಕ್ಸುರಿ ಶಾಪಿಂಗ್ ಮಾಲುಗಳು, ಸಭಾಂಗಣಗಳು, ಹಾಗೂ ಉತ್ತಮ ದರ್ಜೆಯ ರಿಸಾರ್ಟುಗಳು ಈ ಪ್ರದೇಶವನ್ನು ಪ್ರವಸಿಗರ ಸ್ವರ್ಗವನ್ನಾಗಿಸಿದೆ. ಭಾರತೀಯ ಪಾಸ್ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

14. ಮಾರಿಷಿಯಸ್ 
ಲಗೂನುಗಳು, ಹವಳದ ದಿಬ್ಬಗಳು ಹಾಗೂ ಎಕ್ಸಾಟಿಕ್ ಕಡಲ ತೀರಗಳಿಗೆ ಹೆಸರುವಾಸಿಯಾದ ಮಾರಿಷಿಯಸ್ ದ್ವೀಪ ರಾಷ್ಟ್ರವು ಅದ್ಭುತ ಪ್ರವಾಸಿ ದೇಶವಾಗಿದೆ. ಹಿಂದೂ ಮಹಾಸಾಗರದಿಂದ ಸುತ್ತಲೂ ಆವೃತವಾಗಿರುವ ಈ ರಾಷ್ಟ್ರ ಕಡಲ ತೀರಗಳನ್ನಲದೆ ತನ್ನ ಒಳಭಾಗದಲ್ಲಿ ದಟ್ಟ ಹಸಿರಿನಿಂದ ಕೂಡಿದ ವನ್ಯ ಸಂಪತ್ತಿಗೂ ಹೆಸರುವಾಸಿ. ಶಾಪಿಂಗ್, ಜಲಕ್ರೀಡೆಗಳು ಇತ್ಯಾದಿ ಇಲ್ಲಿ ಪ್ರವಾಸಿಗರಿಗೆ ಲಭ್ಯವಿದ್ದು ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

ಇದನ್ನೂ ಓದಿ:   Explained: ಪೆಸಿಫಿಕ್ ಮಹಾಸಾಗರದ ತಳದಲ್ಲಿ ಇದ್ಯಂತೆ 'ಹಳದಿ ಇಟ್ಟಿಗೆಯ ರಸ್ತೆ’! ಸಮುದ್ರ ತಜ್ಞರ ತಂಡದಿಂದ ಪತ್ತೆ

15. ಮೈಕ್ರೋನೇಷಿಯಾ
ಪೆಸಿಫಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಸ್ಥಿತವಿರುವ ಈ ಪುಟ್ಟ ದೇಶ 600 ದ್ವೀಪಗಳ ಒಂದು ಸಮೂಹವಾಗಿದೆ. ಮಾರಿಯಾನಾದ ಲೈಮ್ ಸ್ಟೋನ್ ಪ್ರಸ್ಥಭೂಮಿಗಳಿಂದ ಹಿಡಿದು ಹವಳದ ದಿಬ್ಬಗಳಿರುವ ಕ್ವಾಜಾಲೈನ್ ವರೆಗೂ ಹಲವು ಅದ್ಭುತ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಸ್ವರ್ಗದ ಒಂದು ಭಾಗವೇ ಆದಂತಿರುವ ಈ ಪ್ರದೇಶವು ಸಾಗರದಾಚೆ ಪ್ರವಾಸಕ್ಕೆ ಹೇಳಿ ಮಾಡಿಸಿದ ದೇಶವಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

16. ಮಾನ್ಸೆರಾಟ್
ತನ್ನ ಕಪ್ಪು ಮರಳಿನ ಕಡಲ ತೀರಗಳು ಹಾಗೂ ಹವಳದ ದಿಬ್ಬಗಳಿಗೆ ಹೆಸರುವಾಸಿಯಾಗಿರುವ ಈ ದ್ವೀಪ ರಾಷ್ಟ್ರ ಅದ್ಭುತ ಪ್ರವಾಸಿ ಆಕರ್ಷಣೆಯುಳ್ಳ ಪ್ರದೇಶವಾಗಿದೆ. ದೇಶದ ಉತ್ತರ ಭಾಗವು ಪರ್ವತ ಶೃಂಗಗಳಿಂದ ಅಲಂಕೃತವಾಗಿದ್ದರೆ ದಕ್ಷಿಣ ಭಾಗವು ಮರಭೂಮಿ ರೀತಿಯ ಬಯಲು ಪ್ರದೇಶಗಳಿಂದ ಕಂಗೊಳಿಸುತ್ತದೆ. ಪರಿಸರ ಪ್ರೇಮಿಗಳಿಗೆ ಈ ದೇಶವು ಒಂದು ಆದರ್ಶಮಯವಾದ ಪ್ರವಾಸಿ ಕ್ಷೇತ್ರವಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಆರು ತಿಂಗಳು ಕಳೆಯಬಹುದು.

17. ನೇಪಾಳ
ಹಿಮಾಲಯದ ತಪ್ಪಲಿನಲ್ಲಿ ಹಾಗೂ ಭಾರತಕ್ಕೆ ಹೊಂದಿಕೊಂಡಂತೆ ಇರುವ ನೇಪಾಳವು ಭಾರತೀಯ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ ರಾಷ್ಟ್ರವಾಗಿದೆ. ಈ ದೇಶವು ಕೆಲವು ಜಗದ್ವಿಖ್ಯಾತವಾದಂತಹ ಕಂಚನ್ ಜುಂಗಾ, ಮೌಂಟ್ ಎವರೆಸ್ಟ್, ಅನ್ನಪೂರ್ಣಾದಂತಹ ಪರ್ವತಗಳಿಗೆ ನೆಲೆಯಾಗಿದ್ದು ಹಿಂದೂ ದೇವಾಲಯಗಳಿಂದ ಹಿಡಿದು ಬೌದ್ಧ ಮಠಗಳವರೆಗೂ ಇಲ್ಲಿ ಅನ್ವೇಷಿಸಬಹುದಾಗಿದೆ. ಅಲ್ಲದೆ ಹಲವಾರು ಸಾಹಸಮಯ ಪ್ರವಾಸಿ ಆಕರ್ಷಣೆಗಳೂ ಸಹ ಇಲ್ಲಿ ಲಭ್ಯ. ಭಾರತೀಯರು ನೇಪಾಳದಲ್ಲಿ ಯಾವುದೇ ಅವಧಿಯವರೆಗೆ ನೆಲೆಸಬಹುದಾಗಿದ್ದು ಕನಿಷ್ಠ ಆರು ತಿಂಗಳಿಗೊಮ್ಮೆ ಇಲ್ಲಿನ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು.

18. ನಿಯುವೆ
ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಇದು ಚಿಕ್ಕ ಐಲ್ಯಾಂಡ್ ದೇಶ. ಇಲ್ಲಿ ಅದ್ಭುತವಾದ ಹವಳದ ದಿಬ್ಬಗಳು ಹಾಗೂ ಸಮುದ್ರದಾಳದಲ್ಲಿರುವ ಹಲವಾರು ಅದ್ಭುತ ಗುಹೆಗಳು ಇದರ ಆಕರ್ಷಣೆಯಾಗಿವೆ. ಶ್ರೀಮಂತ ಜಲಜೀವನವನ್ನು ಇಲ್ಲಿ ಕಾಣಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

ಇದನ್ನೂ ಓದಿ:  Explained: ಮನುಷ್ಯ ಬಳಸದ ಸಸ್ಯಗಳೇ ನಾಶವಾಗುತ್ತೆ! ಏನಿದು ಹೊಸ ಸಂಶೋಧನೆ?

19. ಸೇಂಟ್ ಕಿಟ್ಸ್ ಮತ್ತು ನೆವಿಸ್
ಅವಳಿ ದ್ವೀಪಗಳ ಈ ರಾಷ್ಟ್ರವು ಅಟ್ಲಾಂಟಿಕ್ ಸಾಗರ ಮತ್ತು ಕ್ಯಾರಿಬೀಯನ್ ಸಮುದ್ರದ ಮಧ್ಯೆ ಸ್ಥಿತವಿದೆ. ಮೋಡಗಳೊಂದಿಗೆ ಆಟವಾಡುವ ಪರ್ವತಗಳು ಹಾಗೂ ಸುಂದರ ಕಡಲ ಈರಗಳು ಈ ದ್ವೀಪ ರಾಷ್ಟ್ರದ ಆಕರ್ಷಣೆ. ಇದರ ಆರ್ಥಿಕತೆಯು ಗಮನಾರ್ಹವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು ಇದು ಪ್ರವಾಸಿಗರ ಆಕರ್ಷಕ ದೇಶವಾಗಿ ಜನರನ್ನು ಸೆಳೆಯುತ್ತದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

20. ಸೆನೆಗಲ್
ಆಫ್ರಿಕಾ ಖಂಡದ ಪಶ್ಚಿಮ ತೀರಕ್ಕೆ ಹೊಂದಿಕೊಂಡಂತಿರುವ ಈ ದೇಶವು ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಕಡಲ ತೀರಗಳಿಗೆ ಹೆಸರುವಾಸಿಯಾಗಿದೆ. ಫ್ರೆಂಚ್ ವಸಹಾತುವಿನ ಹಲವಾರು ಅದ್ಭುತ ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದ್ದು ಶ್ರೀಮಂತವಾದ ಸ್ಥಳಿಯ ಸಂಸ್ಕೃತಿ ಹಾಗೂ ವನ್ಯಜೀವಿ ಸಂಪತ್ತು ಪ್ರವಾಸಿಗರನ್ನು ಈ ದೇಶಕ್ಕೆ ಆಕರ್ಷಿಸುತ್ತದೆ. ಭಾರತೀಯ ಪಾಸ್ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

21. ಸೆರ್ಬಿಯಾ
ಯುರೋಪ್ ಖಂಡದ ಆಗ್ನೇಯ ಭಾಗದಲ್ಲಿ ಸ್ಥಿತವಿರುವ ಈ ದೇಶವು ಅತ್ಯುತ್ತಮವಾದ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಂದ ಕಂಗೊಳಿಸುತ್ತದೆ ಮತ್ತು ಇಲ್ಲಿನ ಜನರ ಆದರಾತಿಥ್ಯವು ಈ ದೇಶವನ್ನು ಆದರ್ಶ ಪ್ರವಾಸಿ ದೇಶವನ್ನಾಗಿ ಮಾಡುತ್ತದೆ. ನಗರ ಹಾಗೂ ಗ್ರಾಮೀಣ ಶೈಲಿಯ ಎರಡೂ ಸಂಸ್ಕೃತಿಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

22. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಇದೊಂದು ದಕ್ಷಿಣ ಕ್ಯಾರಿಬೀಯನ್ ರಾಷ್ಟ್ರವಾಗಿದೆ. ರಮಣೀಯ ಪ್ರಾಕೃತಿಕ ದೃಶ್ಯಾವಳಿಗಳನ್ನು ಹೊಂದಿರುವ ಈ ದೇಶವು ತನ್ನ 36 ಎಮರಾಲ್ಡ್ ದ್ವೀಪಗಳಿಗಾಗಿ ಹೆಸರುವಾಸಿಯಾಗಿದ್ದು ಬಿಳಿ ಮರಳಿನ ಕಡಲ ತಟಗಳೂ ಸಹ ಆಕರ್ಷಕವಾಗಿವೆ. ಹಲವು ಸಾಹಸಭರಿತ ಜಲಕ್ರೀಡೆಗಳ ಆನಂದವನ್ನು ಇಲ್ಲಿ ಸವಿಯಬಹುದಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.

23. ಟ್ರಿನಿಡಾಡ್ ಮತ್ತು ಟೊಬ್ಯಾಗೊ
ಇದು ವೆನಿಜುವೆಲಾಗೆ ಹತ್ತಿರದಲ್ಲಿರುವ ಒಂದು ಕ್ಯಾರಿಬೀಯನ್ ರಾಷ್ಟ್ರವಾಗಿದೆ. ಇಲ್ಲಿ ಪ್ರವಾಸಿಗರಿಗೆ ಹಲವಾರು ಆಯ್ಕೆಗಳು ಲಭ್ಯವಿದ್ದು ವೈವಿಧ್ಯಮಯ ಅನುಭವ ನೀಡುತ್ತದೆ. ಮಳೆಗಾಡುಗಳು, ಪ್ರಕೃತಿ ಸೌಂದರ್ಯ, ಕಡಲ ತೀರಗಳು ಹಾಗೂ ಹವಳದ ದಿಬ್ಬಗಳು ಇಲ್ಲಿ ಕಣಬಹುದಾದ ಕೆಲವು ಅದ್ಭುತ ಆಕರ್ಷಣೆಗಳಾಗಿವೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

ಇದನ್ನೂ ಓದಿ:  Viral Tree: ಒಂದೇ ಮರದ ಮೇಲೆ 20 ದೇವದಾರು ಮರ! ಅದ್ಭುತವಾಗಿರೋ ಈ ಮರ ನೋಡಿ

24. ಟುನಿಷಿಯಾ
ಆಫ್ರಿಕಾದ ಉತ್ತರದಲ್ಲಿರುವ ಈ ರಾಷ್ಟ್ರವು ತನ್ನ ಇತಿಹಾಸ, ಪ್ರಾಕೃತಿಕ ಸೌಂದರ್ಯಗಳಿಗೆ ಹೆಸರುವಾಸಿ. ಅಷ್ಟೇ ಅಲ್ಲದೆ ಇಲ್ಲಿ ಮೆಡಿಟರೇನಿಯನ್ ಸಮುದ್ರದ ಅದ್ಭುತ ಕಡಲ ತೀರಗಳ ವಿಹಂಗಮ ದೃಶ್ಯಾವಳಿಗಳನ್ನು ಪ್ರವಾಸಿಗರು ಆನಂದಿಸಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಮೂರು ತಿಂಗಳು ಕಳೆಯಬಹುದು.

25. ವನುವಾತು
80 ಪುಟ್ಟ ದ್ವೀಪಗಳಿಂದ ಕೂಡಿರುವ ಈ ಚಿಕ್ಕ ದ್ವೀಪಗಳ ರಾಷ್ಟ್ರವು ಪೆಸಿಫಿಕ್ ಸಾಗರದ ದಕ್ಷಿಣ ಭಾಗದಲ್ಲಿ ಸ್ಥಿತವಿದೆ. ಮಳೆಗಾಡುಗಳು, ಶ್ರೀಮಂತ ಪ್ರಕೃತಿ ಸೌಂದರ್ಯ ಹಾಗೂ ಅದ್ಭುತ ಕಡಲ ತೀರಗಳನ್ನೊಳಗೊಂಡ ಈ ರಾಷ್ಟ್ರದಲ್ಲಿ ಹಲವಾರು ಸಾಹಸಮಯ ಜಲಕ್ರೀಡಾ ಚಟುವಟಿಕೆಗಳೂ ಸಹ ಲಭ್ಯವಿದೆ. ಜಗತ್ತಿನ ಅತಿ ಹತ್ತಿರದ ಈಗಲೂ ಸಕ್ರಿಯವಾಗಿರುವ ಜ್ವಾಲಾಮುಖಿ ಪರ್ವತಕ್ಕಾಗಿ ಹೆಸರುವಾಸಿಯಾಗಿದ್ದು ಅದ್ಭುತ ಪ್ರವಾಸಿ ಅನುಭೂತಿ ನೀಡುತ್ತದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಸಾ ಇಲ್ಲದೆ ಇಲ್ಲಿ ಒಂದು ತಿಂಗಳು ಕಳೆಯಬಹುದು.
Published by:Ashwini Prabhu
First published: