• Home
  • »
  • News
  • »
  • trend
  • »
  • ಈ ವಿಶೇಷ ಸಂಖ್ಯೆಯ 10 ರೂ ನೋಟು ಇದ್ದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ!

ಈ ವಿಶೇಷ ಸಂಖ್ಯೆಯ 10 ರೂ ನೋಟು ಇದ್ದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ!

10 ರೂಪಾಯಿ ನೋಟು

10 ರೂಪಾಯಿ ನೋಟು

786 ಎಂಬ ಡಿಜಿಟಲೈಸ್​ ಆಗಿರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಈ ನೋಟಿನ ಸಂಖ್ಯೆ 1 ರಿಂದ 2000 ರೂಪಾಯಿಗಳವರೆಗೆ ಯಾವುದೇ ಟಿಪ್ಪಣಿಯಲ್ಲಿರಬಹುದು.

  • Share this:

    ಈಗಿನ ಕಾಲದಲ್ಲಿ 10 ರೂ ಏನು ಸಾಮಾನ್ಯ ಎಂದು ನಾವು ಅಂದು ಬಿಡಬಹುದು ಆದರೆ, ಆ ಹತ್ತು ರೂಪಾಯಿಯೇ ನಿಮ್ಮನ್ನು ಕೋಟ್ಯಾಧೀಪತಿಯಾಗಿ ಮಾಡಲಿದೆ. ಅಚ್ಚರಿಯಾದರೂ ಹೌದು. ಈ ವಿಶೇಷ ಸರಣಿ ಸಂಖ್ಯೆಯ 10 ರೂಪಾಯಿ ನಿಮ್ಮ ಬಳಿ ಇದೆ ಎಂದರೇ ನೀವು ಕೋಟ್ಯಾಧೀಪತಿಯದಂತೆ ಲೆಕ್ಕ. ಭಾರತದಲ್ಲಿ ನೋಟಿ ಮುದ್ರಿಸುವಾಗ ವಿಶೇಷ ಸರಣಿ, ವಿಶೇಷ ಸಂಖ್ಯೆ ಅಥವಾ ವಿಶೇಷ ಸಹಿಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ. ಅಂತಹ ನೋಟುಗಳನ್ನು ಅಪರೂಪದ ನೋಟುಗಳಾಗಿ ಪರಿಗಣಿಸಲಾಗಿ, ವಿಶೇಷ ವರ್ಗದಲ್ಲಿ ಇಡಲಾಗುತ್ತದೆ. ಅಂತಹದೇ ಒಂದು ಅಪರೂಪದ ವಿಶಿಷ್ಟ ಸರಣಿಯ ನೋಟಿಗೆ ಈಗ ಬೆಲೆ ಬಂದಿದೆ. ಇಂತಹ ನೋಟನ್ನು ಹಲವು ವೆಬ್​ಸೈಟ್​ಗಳು ಹರಾಜು ಮಾಡುತ್ತವೆ. ಅಂತಹದ್ದೇ ಒಂದು ಅಪರೂಪದ ಸಂಖ್ಯೆ ಹೊಂದಿರುವ 10 ರೂ ನೋಟಿಗೆ ಈಗ ಡಿಮ್ಯಾಂಡ್​ ಬಂದಿದೆ.


    786 ಎಂಬ ಡಿಜಿಟಲೈಸ್​ ಆಗಿರುವ ನೋಟಿಗೆ ಈಗ ಬೇಡಿಕೆ ಬಂದಿದೆ. ಈ ನೋಟಿನ ಸಂಖ್ಯೆ 1 ರಿಂದ 2000 ರೂಪಾಯಿಗಳವರೆಗೆ ಯಾವುದೇ ಟಿಪ್ಪಣಿಯಲ್ಲಿರಬಹುದು. ಇಂತಹ ನೋಟುಗಳು ಹೆಚ್ಚಿನ ಬೆಲೆಗೆ ಮಾರಾಟಗೊಳ್ಳುತ್ತವೆ.


    ಇದನ್ನು ಓದಿ: ಕೊರೋನಾ ಹಿನ್ನಲೆ ಚಾಮರಾಜನಗರ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಎಚ್​ಎಸ್​​ ದೊರೆಸ್ವಾಮಿ ಅಂತ್ಯಕ್ರಿಯೆ


    ಭಾರತದ ರೂಪಾಯಿಗಳನ್ನು ಇಬೇನಲ್ಲಿ ಬಿಡ್​ ಮಾಡಲಾಗುತ್ತದೆ. ಇಬೇಯ ಟಿಪ್ಪಣಿಗಳನ್ನು ಕಾಲಕಾಲಕ್ಕೆ ಬಿಡ್​ ಮಾಡುತ್ತಿದ್ದು, ಇದರಲ್ಲಿ ಯಾರು ಬೇಕಾದರೂ ಕೂಡ ಭಾಗಿಯಾಗಬಹುದಾಗಿದೆ. ಮೇಲೆ ಹೇಳಿದರಂತೆ ಈ ವಿಶಿಷ್ಠ ಸಂಖ್ಯೆಯ ನಂಬರಿನ ನೋಟ್​ ನಿಮ್ಮ ಬಳಿ ಇದ್ದರೆ ಜಾಕ್​ಪಾಟ್​ ಗೆಲ್ಲುವ ಅದೃಷ್ಟಶಾಲಿ ನೀವಾಗಬಹುದು.


    ಇದನ್ನು ಓದಿ: ನರ್ಸ್ ಕೈಯಿಂದ ಜಾರಿ ಬಿದ್ದು ನವಜಾತ ಗಂಡ ಮಗು ಸಾವು; ಗ್ರಾಮಸ್ಥರಿಂದ ತರಾಟೆ


    ನೋಟುಗಳ ಮೇಲಿನ ಅಂಕಿಗಳ ಸರಣಿಗಳಿ ಒಂದೇ ಆಗಿದ್ದರೆ, ಆ ನೋಟಿನ ಬೆಲೆ 330 ರೂಪಾಯಿಗೆ ಮಾರಾಟ ಮಾಡವಾಗಿದೆ. ಬಲು ಅಪರೂಪದ ಅಂದರೆ 1951ರಕ್ಕಿ ಮುದ್ರಿಸಿದ್ದ ನೀಟು 99,999 ರೂಪಾಯಿಗೆ ಮಾರಾಟವಾಗಿದೆ.


    ಇದೇ ರೀತಿ ವಿಶಿಷ್ಠ ಸರಣಿಯ ನೋಟುಗಳನ್ನು ಹಲವು ಕಾಲಘಟ್ಟಗಳಲ್ಲಿ ಮುದ್ರಿಸಲಾಗಿದ್ದು, ಇವು ಇನ್ನು ಕೂಡ ಬೇಡಿಕೆ ಪಡೆದಿವೆ. ಇಂತಹ ವಿಶಿಷ್ಠ ನೋಟುಗಳು ಬಲು ದುಬಾರಿ ಕೂಡ. ಇನ್ನು 1917ರಲ್ಲಿ ಬ್ರಿಟಿಷರ ಸಮಯದಲ್ಲಿ ಮುದ್ರಣಗೊಂಡಿದ್ದ 1 ರೂ ಮುಖ ಬೆಲೆ 111111 ರಿಂದ 888888 ಸರಣಿ ಇರು ನೋಟುಗಳ ಬೆಲೆ 2,399 ರೂ ಇದೆ. ಬ್ರಿಟಿಷರ ಅವಧಿಯಲ್ಲಿ ಮದ್ರಿಸಿದ್ದ ಕೆಲ ನೋಟುಗಳು ಈ ವೆಬ್​ ತಾಣದಲ್ಲಿ 80 ಸಾವಿರ ರೂಗೆ ಕೂಡ ಮಾರಾಟ ವಾಗಿದೆ.

    Published by:Seema R
    First published: