Musical Road: ಈ ರಸ್ತೆಯ ಮೇಲೆ ಡ್ರೈವ್ ಮಾಡುತ್ತಾ ಹೋದವರಿಗೆ ಇಂಪಾದ ಸಂಗೀತ ಕೇಳಿಸುತ್ತದೆಯಂತೆ!

ನಿಮ್ಮ ರಸ್ತೆ ಪ್ರಯಾಣವನ್ನು ಉತ್ಸಾಹಭರಿತವಾಗಿಸುವ ಅಂತಹ ಒಂದು ವಿಷಯದ ಬಗ್ಗೆ ನಿಮಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗುವುದಂತೂ ಗ್ಯಾರಂಟಿ. ನೀವು ನಿಮ್ಮ ಕಾರನ್ನು ಡ್ರೈವ್ ಮಾಡುತ್ತಾ ಹೋದರೆ ಸಾಕು ರಸ್ತೆ ಸಂಗೀತವನ್ನು ನುಡಿಸುತ್ತದೆ. ಹೌದು.. ನೀವು ಇದನ್ನು ಸರಿಯಾಗಿಯೇ ಓದಿದ್ದೀರಿ. ಸಾಮಾನ್ಯ ಜನರ ಪರಿಭಾಷೆಯಲ್ಲಿ ಹೇಳುವುದಾದರೆ, ನೀವು ಈ ರಸ್ತೆಯ ಮೇಲೆ ಚಾಲನೆ ಮಾಡಿದಾಗ, ರಸ್ತೆಯಲ್ಲಿ ಮಧುರವಾದ ಸಂಗೀತ ನಿಮಗೆ ಕೇಳಿ ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮ್ಯೂಸಿಕಲ್ ರೋಡ್

ಮ್ಯೂಸಿಕಲ್ ರೋಡ್

  • Share this:
ಸಾಮಾನ್ಯವಾಗಿ ನಾವು ಯಾವುದೋ ದೂರದ ಊರಿಗೆ ಪ್ರವಾಸಕ್ಕೆ (Tour) ಅಂತ ಹೋಗಲು ಪ್ಲ್ಯಾನ್ ಮಾಡಿಕೊಂಡರೆ ಮೊದಲು ನಮ್ಮ ಕಾರಿನಲ್ಲಿ (Car) ಇಂಪಾದ ಹಾಡುಗಳನ್ನು (Song) ನಮ್ಮ ಪೆನ್‌ಡ್ರೈವ್ ಗಳಲ್ಲಿ ಸಂಗ್ರಹಿಸಿಕೊಳ್ಳುತ್ತೇವೆ. ಪ್ರಯಾಣದ ಉದ್ದಕ್ಕೂ ಆ ಇಂಪಾದ ಸಂಗೀತವನ್ನು ಕೇಳುತ್ತಾ ಹೋದರೆ ನಮಗೆ ಆ ಪ್ರಯಾಣದ (Travel) ದೂರ ಅಷ್ಟೊಂದು ಆಯಾಸಕರವಾಗಿರುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ನಮ್ಮ ಪ್ರಯಾಣದ ರಸ್ತೆಯು (Road) ಹೆಚ್ಚು ಆರಾಮದಾಯಕವಾದಷ್ಟೂ, ಪ್ರಯಾಣವು ಹೆಚ್ಚು ವಿನೋದಮಯವಾಗುತ್ತದೆ. ನಮ್ಮ ಪ್ರಯಾಣವನ್ನು ಹೆಚ್ಚು ವಿನೋದಮಯವಾಗಿಸಲು ಏನೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೋ ಅದನ್ನೆಲ್ಲಾ ನಾವು ಮಾಡಿಕೊಳ್ಳುತ್ತೇವೆ.

ಸಾಮಾನ್ಯವಾಗಿ ನಾವು ಕಾರು ಓಡಿಸುವಾಗ ಒಳಗೆ ಇಂಪಾದ ಸಂಗೀತ ಇರದೆ ಇದ್ದರೆ ನಮಗೆ ಆ ರಸ್ತೆ ಪ್ರಯಾಣ ಕೇವಲ ರಸ್ತೆಯಲ್ಲಿರುವ ಸಣ್ಣ ಪುಟ್ಟ ತಗ್ಗುಗಳಲ್ಲಿ ಕಾರಿನ ಚಕ್ರ ಇಳಿದಾಗ ಆ ಶಬ್ದ ಮಾತ್ರ ನಮಗೆ ಕೇಳಿಸುತ್ತಾ ಇರುತ್ತದೆ.

ಕಾರನ್ನು ಡ್ರೈವ್ ಮಾಡುತ್ತಾ ಹೋದ್ರೆ ಸಾಕು ರಸ್ತೆ ಸಂಗೀತ ನುಡಿಸುತ್ತದೆ
ನಿಮ್ಮ ರಸ್ತೆ ಪ್ರಯಾಣವನ್ನು ಉತ್ಸಾಹಭರಿತವಾಗಿಸುವ ಅಂತಹ ಒಂದು ವಿಷಯದ ಬಗ್ಗೆ ನಿಮಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗುವುದಂತೂ ಗ್ಯಾರಂಟಿ. ನೀವು ನಿಮ್ಮ ಕಾರನ್ನು ಡ್ರೈವ್ ಮಾಡುತ್ತಾ ಹೋದರೆ ಸಾಕು ರಸ್ತೆ ಸಂಗೀತವನ್ನು ನುಡಿಸುತ್ತದೆ. ಹೌದು.. ನೀವು ಇದನ್ನು ಸರಿಯಾಗಿಯೇ ಓದಿದ್ದೀರಿ. ಸಾಮಾನ್ಯ ಜನರ ಪರಿಭಾಷೆಯಲ್ಲಿ ಹೇಳುವುದಾದರೆ, ನೀವು ಈ ರಸ್ತೆಯ ಮೇಲೆ ಚಾಲನೆ ಮಾಡಿದಾಗ, ರಸ್ತೆಯಲ್ಲಿ ಮಧುರವಾದ ಸಂಗೀತ ನಿಮಗೆ ಕೇಳಿ ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಟ್ವಿಟ್ಟರ್ ನಲ್ಲಿ ವೈರಲ್ ಆಯಿತು ರಸ್ತೆಯ ವಿಡಿಯೋ  
ಸೈನ್ಸ್‌ಗರ್ಲ್ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಅಂತಹ ಒಂದು ವಿಡಿಯೋ ಇತ್ತೀಚೆಗೆ ನೆಟ್ಟಿಗರ ಗಮನವನ್ನು ಸೆಳೆದಿದೆ. ಈ ವೀಡಿಯೋದಲ್ಲಿ, ಕಾರು ರಸ್ತೆಯ ಮೇಲೆ ಚಿತ್ರಿಸಲಾದ ಬಿಳಿ ಬಣ್ಣದ ಸಾವಿರಾರು ದೊಡ್ಡ ದೊಡ್ಡ ಗೆರೆಗಳ ಮೇಲೆ ಚಲಿಸುತ್ತಿದ್ದಂತೆ, ಅದು ಹಿತವಾದ ಸಂಗೀತವನ್ನು ಸೃಷ್ಟಿಸುತ್ತದೆ. ಈ ವಿಡಿಯೋಗೆ ಇದುವರೆಗೆ 21,000ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ ಎಂದು ಹೇಳಬಹುದು.

ಇದನ್ನೂ ಓದಿ: Travel: ಜೀವನದಲ್ಲಿ ಒಮ್ಮೆಯಾದ್ರೂ ಪ್ರಯಾಣ ಮಾಡಲೇಬೇಕಾದ ಭಾರತದ 10 ಸುಂದರ ರೈಲು ಮಾರ್ಗಗಳಿವು

ಗ್ರೂವ್ ಗಳು ಅಥವಾ ರಂಬಲ್ ಸ್ಟ್ರಿಪ್ ಗಳನ್ನು ನಿರ್ದಿಷ್ಟ ಮಧ್ಯಂತರಗಳಲ್ಲಿ ಹೊಂದಿಸಲಾಗಿದೆ ಮತ್ತು ಒಂದು ನಿರ್ದಿಷ್ಟ ವೇಗದ ಮಿತಿಯಲ್ಲಿ ಅವುಗಳ ಮೇಲೆ ಕಾರು ಚಾಲನೆ ಮಾಡುವುದರಿಂದ ಸಂಗೀತವು ಉತ್ಪತ್ತಿಯಾಗುತ್ತದೆ. ಈ ವಿಡಿಯೋದಲ್ಲಿ ತೋರಿಸಲಾದ ಆ ರಸ್ಥೆ ಹಾಗೂ ಸ್ಥಳ ಯವುದೆಂದು ತಿಳಿದುಬಂದಿಲ್ಲ.

ಇದರ ಉದ್ದೇಶವೇನು?
ಸಾಮಾನ್ಯವಾಗಿ ರಸ್ತೆಗಳಲ್ಲಿ ಸೆಂಟರ್ ಲೈನ್ ರಂಬಲ್ ಸ್ಟ್ರಿಪ್ ಗಳು ತಮ್ಮ ವಾಹನವು ತಮ್ಮ ಲೇನ್ ಗಳ ಅಂಚಿಗೆ ತುಂಬಾ ಹತ್ತಿರವಾಗುತ್ತಿದೆ ಎಂದು ಅಜಾಗರೂಕ ಚಾಲಕರನ್ನು ಎಚ್ಚರಿಸಲು ಮತ್ತು ವೇಗದ ಎಚ್ಚರಿಕೆಯ ಸಂಕೇತವಾಗಿ ಕೆಲಸ ಮಾಡುತ್ತವೆ. ಈ ಸಂಗೀತ ಮಾರ್ಗವು ಅವರಿಗೆ ಸಂಗೀತವನ್ನು ನುಡಿಸುವುದರಿಂದ ಇದು ಚಾಲಕರನ್ನು ಚಾಲನೆ ಮಾಡುವಾಗ ಎಚ್ಚರವಾಗಿರಿಸುತ್ತದೆ ಮತ್ತು ಮನಸ್ಸಿಗೆ ಒಂದು ರೀತಿಯ ಹಿತವನ್ನು ಸಹ ನೀಡುತ್ತದೆ ಎಂದು ಹೇಳಬಹುದು.ಈ ಉಪಯುಕ್ತ ಗ್ರೂವ್ ಗಳನ್ನು ರಸ್ತೆಯ ಬದಿಯಲ್ಲಿ ಹಾಕುವುದರಿಂದ ಇದು ಚಾಲಕರಿಗೆ ಅವುಗಳ ಮೇಲೆ ಚಾಲನೆ ಮಾಡುವ ಅಥವಾ ಅವುಗಳನ್ನು ದಾಟಿಕೊಂಡು ಚಾಲನೆ ಮಾಡುವ ಆಯ್ಕೆಯನ್ನು ಇದು ನೀಡುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:  Aati Kalenja: ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ

ಇದಲ್ಲದೆ, ಅವುಗಳನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ಹಾರ್ಮೋನಿಯಸ್ ರೋಡ್ಸ್ ಮತ್ತು ಸಿಂಗಿಂಗ್ ಸ್ಟ್ರೀಟ್ಸ್ ಎಂದು ಸಹ ಕರೆಯುತ್ತಾರೆ ಮತ್ತು ಪ್ರಪಂಚದಾದ್ಯಂತ ಹಲವಾರು ದೇಶಗಳ ರಸ್ತೆಗಳಲ್ಲಿ ಇದನ್ನು ನಾವು ಕಾಣಬಹುದು. ಡೆನ್ಮಾರ್ಕ್, ನ್ಯೂ ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಈ ರೀತಿಯ ಸಂಗೀತ ನುಡಿಸುವ ರಸ್ತೆಗಳನ್ನು ನೋಡಬಹುದು. ಜಪಾನಿನಲ್ಲಿ, ಇಂತಹ ರಸ್ತೆಗಳು ಹಲವಾರು ಇವೆ ಮತ್ತು ಸ್ಥಳೀಯರು ಅವುಗಳನ್ನು ಮೆಲೋಡಿ ರಸ್ತೆಗಳು ಎಂದು ಸಹ ಕರೆಯುತ್ತಾರೆ.
Published by:Ashwini Prabhu
First published: