Poison Rice: ಸರಿಯಾಗಿ ಬೇಯಿಸದೇ ಇದ್ರೆ ಅನ್ನ ವಿಷವಾಗುತ್ತದೆ! ಅನ್ನ ಮಾಡುವುದು ಹೇಗೆ? ತಜ್ಞರು ವಿವರಿಸಿದ್ದಾರೆ

Right Way to cook rice: ಹಾಗಾದರೆ, ನಾವು ಏನು ಮಾಡಬೇಕು? ಅಕ್ಕಿಯನ್ನು ತಿನ್ನುವುದನ್ನು ನಿಲ್ಲಿಸಬೇಕೆ? ಇಲ್ಲ. ಅದನ್ನು ಸರಿಯಾಗಿ ಬೇಯಿಸುವುದು ಹೇಗೆ ಎಂಬುದನ್ನು ಕಲಿಯಬೇಕು. ಅದಕ್ಕೂ ಮುನ್ನ ಆರ್ಸೆನಿಕ್ ಹಾಗೂ ಅದು ಹೇಗೆ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂಬುದನ್ನು ತಿಳಿಯೋಣ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Right Method to Cook Rice: ಭಾರತೀಯರು ಮೊದಲೇ ಆಹಾರ ಪ್ರಿಯರು. ಅದರಲ್ಲೂ ಅಕ್ಕಿಯನ್ನು ಅತಿ ಹೇರಳವಾಗಿ ಭಾರತದಲ್ಲಿ ಬಳಸಲಾಗುತ್ತೆ. ಅಕ್ಕಿ ಇಲ್ಲದೆ ಅಡುಗೆಯೇ ಕಂಪ್ಲೀಟ್ ಆಗುವುದಿಲ್ಲ. ವಿಧ ವಿಧದ ರುಚಿಕರವಾದ ಅಡುಗೆ ಮಾಡಿದ್ದರು, ಸ್ವಲ್ಪ ಬಿಸಿ ಬಿಸಿ ಅನ್ನಕ್ಕೆ ಸಾಂಬಾರು (Rice and Sambar) ಅಥವಾ ಮೊಸರನ್ನು ಹಾಕಿ ತಿನ್ನದೆ ಇದ್ದರೆ, ಊಟ ಸಂಪೂರ್ಣವಾಗುವುದಿಲ್ಲ. ಅಷ್ಟರಮಟ್ಟಿಗೆ ಸೌತ್ ಇಂಡಿಯಾದಲ್ಲಿ ಅಕ್ಕಿಯನ್ನ ಬಳಕೆ ಮಾಡಲಾಗುತ್ತದೆ. ಚಿತ್ರಾನ್ನ, ಪಲಾವ್, ವಾಂಗಿಬಾತ್, ಬಿಸಿಬೇಳೆ ಬಾತ್ , ಟೊಮ್ಯಾಟೋ ಬಾತ್, ಫ್ರೈಡ್ ರೈಸ್ (Rice recipes) ಹೀಗೆ ಅಕ್ಕಿಯನ್ನು ಬಳಸಿ ಡಿಫ್ರೆಂಟ್ ಡಿಫ್ರೆಂಟ್ ಅಡುಗೆಯನ್ನು ಮಾಡಲಾಗುತ್ತೆ. ಆದರೆ ನಾವು ಬಾಯಿ ಚಪ್ಪರಿಸಿ ತಿನ್ನುವ ಅನ್ನ ಎಷ್ಟು ಸೇಫ್(Safety)? ಅಕ್ಕಿಯನ್ನ ಬಳಕೆ ಮಾಡುವ ಮುನ್ನ ಸರಿಯಾದ ಕ್ರಮ ಬಳಸುತ್ತಿದ್ದೇವಾ? ಸರಿಯಾದ ರೀತಿಯಲ್ಲಿ ಕುಕ್ ಮಾಡುತ್ತಿದ್ದೇವಾ? ಇಲ್ಲವಾದರೆ, ದಯವಿಟ್ಟು ಎಚ್ಚೆತ್ತುಕೊಳ್ಳಿ. ಯಾಕಂದ್ರೆ ಸರಿಯಾದ ರೀತಿಯಲ್ಲಿ ಅಕ್ಕಿಯನ್ನು ತೊಳೆಯದೆ, ಸರಿಯಾಗಿ ಬೇಯಿಸದೇ ಇದ್ದರೆ ಕ್ಯಾನ್ಸರ್ (Cancer) ಹಾಗೂ ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ.

  ಈಗ ಪ್ರತಿಯೊಂದು ಅಡುಗೆ ವಸ್ತುಗಳಲ್ಲೂ ಕೆಮಿಕಲ್ (Chemicals) ಬಳಸಿರುವುದು ಕಹಿ ಸತ್ಯ. ಅದು ತಿಳಿದಿದ್ದರೂ ನಾವು ಎಚ್ಚೆತ್ತುಕೊಳ್ಳದೆ ನಮ್ಮ ದೇಹಕ್ಕೆ ಕೆಮಿಕಲ್ ಗಳನ್ನ ಸೇರಿಸುತ್ತಿದ್ದೇವೆ. ನೀವು ತುಂಬಾ ಇಷ್ಟಪಡುವ ಆಹಾರವು ನಿಮ್ಮ ದೇಹದಲ್ಲಿ ವಿಷತ್ವವನ್ನು ಉಂಟುಮಾಡಬಹುದು, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಂತಹ ರೋಗಗಳಿಗೆ ಕಾರಣವಾಗಬಹುದು. ಇಂಗ್ಲೆಂಡಿನ ಕ್ವೀನ್ಸ್ ಯೂನಿವರ್ಸಿಟಿ ಬೆಲ್ ಫಾಸ್ಟ್, ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಮಣ್ಣಿನಲ್ಲಿರುವ ಕೈಗಾರಿಕಾ ವಿಷಗಳು ಮತ್ತು ಕೀಟನಾಶಕಗಳಿಂದ ಬರುವ ರಾಸಾಯನಿಕವು ಅಕ್ಕಿಯಲ್ಲಿ ಸೇರುತ್ತಿವೆ. ಈ ಕೆಮಿಕಲ್ ಗಳು ನಮ್ಮ ದೇಹಕ್ಕೆ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರೀತಿಯ ಅಕ್ಕಿಯೂ ಆರ್ಸೆನಿಕ್ (Arsenic) ವಿಷಕ್ಕೆ ಕಾರಣವಾಗುತ್ತಿದೆ.

  ಹಾಗಾದರೆ, ನಾವು ಏನು ಮಾಡಬೇಕು? ಅಕ್ಕಿಯನ್ನು ತಿನ್ನುವುದನ್ನು ನಿಲ್ಲಿಸಬೇಕೆ? ಇಲ್ಲ. ಅದನ್ನು ಸರಿಯಾಗಿ ಬೇಯಿಸುವುದು ಹೇಗೆ ಎಂಬುದನ್ನು ಕಲಿಯಬೇಕು. ಅದಕ್ಕೂ ಮುನ್ನ ಆರ್ಸೆನಿಕ್ ಹಾಗೂ ಅದು ಹೇಗೆ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂಬುದನ್ನು ತಿಳಿಯೋಣ.

  ಇದನ್ನೂ ಓದಿ: Brown Rice: ನಿಮಗೆ ಗೊತ್ತಿರ್ಲಿ...ಬ್ರೌನ್ ರೈಸ್‍ನಲ್ಲೂ ಇದೆ ಅಡ್ಡ ಪರಿಣಾಮಗಳು!

  ಏನಿದು ಆರ್ಸೆನಿಕ್ "ವಿಷ"? ಈ ಬಗ್ಗೆ ಇರಲಿ ಎಚ್ಚರ

  ಆರ್ಸೆನಿಕ್ ಎಂಬ ರಾಸಾಯನಿಕವು ಹಲವು ಖನಿಜ(Minerals)ಗಳಲ್ಲಿ ಇರುತ್ತವೆ. ಕೈಗಾರಿಕಾ ಕೀಟನಾಶಕಗಳು ಮತ್ತು ಕೀಟನಾಶಕಗಳನ್ನು ತಯಾರಿಸಲು ಬಳಸುವ ಅತ್ಯಂತ ಸಾಮಾನ್ಯ ಅಂಶ ಆರ್ಸೆನಿಕ್. ಹಲವು ದೇಶಗಳ ಅಂತರ್ಜಾಲದಲ್ಲಿ ಅತಿ ಹೆಚ್ಚು ಆರ್ಸೆನಿಕ್ ವಿಷವು ಸೇರಿಕೊಂಡಿದೆ. ಇಲ್ಲಿಯೂ ಕೂಡ ಊಟ ಅಥವಾ ನೀರಿನ ಮೂಲಕ ಆರ್ಸೆನಿಕ್ ವಿಷವನ್ನು ನಮ್ಮ ದೇಹಕ್ಕೆ ಸೇರಿಕೊಂಡು ಅಪಾಯ ತಂದೊಡ್ಡಲಿದೆ. ವಾಂತಿ, ಕಿಬ್ಬೊಟ್ಟೆ ನೋವು ಮತ್ತು ಅತಿಸಾರ, ಕ್ಯಾನ್ಸರ್, ಚರ್ಮದ ಗಾಯಗಳ ರೂಪದಲ್ಲಿ ಆರ್ಸೆನಿಕ್ ಕಾಣಿಸಿಕೊಳ್ಳಬಹುದು. ಇನ್ನು ಈ ಆರ್ಸೆನಿಕ್ ವಿಷ ಅಕ್ಕಿಯಲ್ಲಿ ಹೆಚ್ಚಿರುತ್ತೆ. ಅಕ್ಕಿ ತಿನ್ನುವ ಮೊದಲು ಅದರ ಕಡೆ ಹೆಚ್ಚಿನ ಗಮನ ಕೊಡಬೇಕು. ಚೆನ್ನಾಗಿ ತೊಳೆದು, ಸರಿಯಾದ ಕ್ರಮದಲ್ಲಿ ಬೇಯಿಸಿ ತಿನ್ನದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

  ಆರ್ಸೆನಿಕ್ ವಿಷವನ್ನು ತಡೆಗಟ್ಟುವುದು ಹೇಗೆ?

  ಕ್ವೀನ್ಸ್ ಯೂನಿವರ್ಸಿಟಿ ಬೆಲ್ ಫಾಸ್ಟ್ ನ ಸಂಶೋಧನೆಯ ಪ್ರಕಾರ, ಅಕ್ಕಿಯನ್ನು ತಿನ್ನುವ ಮೊದಲು, ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಇಡಬೇಕು. ಬಳಿಕ ಮತ್ತೆ ನೀರಿನಲ್ಲಿ ಅಕ್ಕಿಯನ್ನು ತೊಳೆದು ಬೇಯಿಸಬೇಕು. ಹೀಗೆ ಮಾಡಿದಾಗ ವಿಷದ ಮಟ್ಟವು ಶೇಕಡ 80ರಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.

  ಮೂರು ರೀತಿಯಲ್ಲಿ ನಡೆದಿತ್ತು ಸಂಶೋಧನೆ

  1. ಮೊದಲನೆಯದಾಗಿ 1 ಕಪ್ ಅಕ್ಕಿಗೆ, ಎರಡು ಕಪ್ ನೀರು ಸೇರಿಸಿ ಬೇಯಿಸಲಾಯಿತು. ಈ ಪ್ರಕ್ರಿಯೆಯಲ್ಲಿ ವಿಷವು ಕಡಿಮೆಯಾಗಿದ್ದು ಕಂಡುಬಂದಿಲ್ಲ.

  2. ಎರಡನೆಯದಾಗಿ 1 ಕಪ್ ಅಕ್ಕಿಗೆ, 5 ಕಪ್ ನೀರು ಬೆರೆಸಿ ಚೆನ್ನಾಗಿ ಬೇಯಿಸಿ, ನಂತರ ಅಕ್ಕಿಯನ್ನು ಪರೀಕ್ಷೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಆರ್ಸೆನಿಕ್ ವಿಷವು ಕಡಿಮೆಯಾಗಿದ್ದು ಕಂಡುಬಂದಿತ್ತು.

  3. ಮೂರನೆಯದಾಗಿ 1 ಕಪ್ ಅಕ್ಕಿಯನ್ನು ರಾತ್ರಿಪೂರ ನೆನೆಸಿಡಲಾಗಿತ್ತು. ಬಳಿಕ ಅಕ್ಕಿಯನ್ನು ಪರೀಕ್ಷಿಸಿದಾಗ ಶೇಕಡ 80ರಷ್ಟು ಆರ್ಸೆನಿಕ್ ವಿಷವು ಕಡಿಮೆಯಾಗಿತ್ತು.

  ಅದಕ್ಕೆ ಎಷ್ಟೇ ಗಡಿಬಿಡಿ ಇದ್ದರು ಅಕ್ಕಿಯನ್ನು ಕನಿಷ್ಠ ಪಕ್ಷ 3ರಿಂದ4 ಗಂಟೆಗಳ ಕಾಲ ನೆನೆಸಿ, ಬಳಿಕ ಉಪಯೋಗಿಸುವುದನ್ನು ಮರೆಯಬೇಡಿ.

  ಅಕ್ಕಿ ಅಥವಾ ಅನ್ನದ ಬಗ್ಗೆ ಮತ್ತಷ್ಟು ವಿಚಾರ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

  (ವರದಿ - ವಾಸುದೇವ್.ಎಂ)
  Published by:Soumya KN
  First published: