'ಪ್ರಾಣಿಗಳೇ ಗುಣದಲಿ ಮೇಲು... ಮಾನವನದಕಿಂತ ಕೀಳು...' ಅಣ್ಣಾವ್ರ ಈ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೀರಿ.. ಈ ಮಾತು ಸತ್ಯವೂ ಹೌದು. ಪ್ರಾಣಿಗಳಿಗಿರುವ ಗುಣ, ಮುಗ್ಧತೆ, ಬುದ್ದಿವಂತಿಕೆ, ಮಾನವೀಯತೆ, ಸೂಕ್ಷ್ಮತೆ, ಸಂವೇದನಾಶೀಲತೆ ಮಾನವನಲ್ಲಿ ತುಸು ಕಡಿಮೆಯೇ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ 'ದಯೆಯೇ ಧರ್ಮದ ಮೂಲವಯ್ಯಾ' ಎಂಬ ಮಾತನ್ನು ಮರೆತು ಸ್ವಾರ್ಥದ ಬದುಕು ಸಾಗಿಸುತ್ತಿದ್ದಾನೆ.
ಪರಿಸರ ಸಂರಕ್ಷಣೆ ಮಾಡಿ ಎಂದು ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳನ್ನು ತಂದು ಜಾಗೃತಿ ಮೂಡಿಸಿದರೂ ಮನುಷ್ಯ ಮಾತ್ರ ಜಾಣ ಕಿವುಡನಂತೆ ವರ್ತಿಸುತ್ತಿದ್ದಾನೆ. ಆದರೆ ಇಲ್ಲೊಂದು ಆನೆ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಆನೆಯ ಈ ಸೂಕ್ಷ್ಮ ಮನೋಭಾವನೆ, ಬುದ್ದಿವಂತಿಕೆ, ಪರಿಸರ ಕಾಳಜಿಗೆ ಹ್ಯಾಟ್ಸ್ಪ್ ಹೇಳಲೇಬೇಕು. ನೆಲದಲ್ಲಿ ಬಿದ್ದಿರುವ ಕಸವನ್ನು ಕಸದ ತೊಟ್ಟಿಗೆ ಹಾಕುತ್ತಿರುವ ಆನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Elephant caught throwing away litter into a trash can at a safari outpost pic.twitter.com/vOe8FTk65e
— Nature is Lit🔥 (@NaturelsLit) July 12, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ