ಜಾಹೀರಾತುಗಳಿಗೂ (Advertisement) ಸಿನಿಮಾ (Cinema) ತಾರೆಯರಿಗೂ ಸಿಕ್ಕಾಪಟ್ಟೆ ನಂಟು. ಬಹುಷಃ, ಬಹಳಷ್ಟು ತಾರೆಯರು ಸಿನಿಮಾಗಳಿಗಿಂತಲೂ ಜಾಹಿರಾತುಗಳಲ್ಲೇ ಹೆಚ್ಚು ಹಣ ಗಳಿಸುತ್ತಾರೆ. ಜಾಹೀರಾತುಗಳ ನಿರೂಪಣೆ (Narrative of ads), ಸಂಗೀತ (Song), ಸ್ಲೋಗನ್ಗಳು (Slogan), ಜೊತೆಗೆ ಅದರಲ್ಲಿ ಬರುವ ನಮ್ಮ ನೆಚ್ಚಿನ ತಾರೆಯರು ಆ ಉತ್ಪನ್ನದ (Product) ಕಡೆಗೆ ನಮ್ಮನ್ನು ಆಕರ್ಷಿಸುತ್ತಾರೆ ಎಂಬುವುದನ್ನು ಒಪ್ಪದೆ ಇರಲು ಸಾಧ್ಯವೆ? ಆದರೆ, ಟೂತ್ ಪೇಸ್ಟ್ (Tooth paste) ಕೊಳ್ಳಿ, ಚಾಕಲೇಟ್ (Chocolate) ತಿನ್ನಿ, ಕ್ರೀಂ ಹಚ್ಚಿ ಎನ್ನುವ ಈ ತಾರೆಯರು ನಿಜಕ್ಕೂ ಅದನ್ನು ಬಳಸುತ್ತಾರೆಯೇ? ಬೇರೆಯವರ ಸಂಗತಿ ಹೇಗೋ ಏನೋ , ಆದರೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಮಾತ್ರ ಈ ವಿಷಯದಲ್ಲಿ ಮಹಾ ಸುಳ್ಳಿ ಎನ್ನುತ್ತಿದ್ದಾರೆ ನೆಟ್ಟಿಗರು.
ವೈಯುಕ್ತಿಕ ನಂಬಿಕೆಗಳಿಗೆ ವಿರುದ್ಧವಾದ ಜಾಹೀರಾತುಗಳಲ್ಲಿ ಆಲಿಯಾ ಭಟ್
ಆಲಿಯಾ ಬಾಲಿವುಡ್ನ ಜನಪ್ರಿಯ ತಾರೆಯಾಗಿರುವುದರಿಂದ , ಬಹುಸಂಖ್ಯೆ ಉತ್ಪನ್ನ ಮತ್ತು ಸೇವೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಯ ಸಂಗತಿ ಏನಲ್ಲ. ಆದರೆ, ಆಲಿಯಾ ಭಟ್ , ತಮ್ಮ ವೈಯುಕ್ತಿಕ ನಂಬಿಕೆಗಳಿಗೆ ವಿರುದ್ಧವಾದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಅಲಿಯಾ ಭಟ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?
ಟ್ವಿಟ್ಟರ್ ಬಳಕೆದಾರರೊಬ್ಬರು , ಆಕೆ ಕಾಣಿಸಿಕೊಳ್ಳುವ ಜಾಹಿರಾತುಗಳು, ಆಕೆಯ ವೈಯುಕ್ತಿಕ ಆರೋಗ್ಯ ಅಭ್ಯಾಸಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಕಲಂಕ್ ಸಿನಿಮಾದ ಪ್ರಚಾರಕ್ಕೆಂದು ಆಲಿಯಾ ಭಟ್ ಮತ್ತು ಸಿನಿಮಾ ತಂಡದವರು , ದ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರ ವಿಡಿಯೋ ಅದು. ಅದಕ್ಕೆ ಆಲಿಯಾ ಭಟ್ ಅವರ ವಿವಿಧ ಜಾಹಿರಾತುಗಳ ಕ್ಲಿಪಿಂಗ್ಗಳನ್ನು ಕೂಡ ಜೋಡಿಸಲಾಗಿದೆ.
ದ ಕಪಿಲ್ ಶರ್ಮಾ ಶೋ ನಲ್ಲಿ ಆಲಿಯಾ ಭಟ್ ತಾನು ಸಕ್ಕರೆ ಸೇವಿಸುವುದಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು. ಆ ಶೋನಲ್ಲಿ ವ್ಯಕ್ತಿಯೊಬ್ಬ ಆಲಿಯಾಗೆ ಚಹಾ ತಂದು ಕೊಡುತ್ತಾನೆ. ಆಲಿಯಾ ಅದರಲ್ಲಿ ಸಕ್ಕರೆ ಹಾಕಿದೆಯೇ ಎಂದು ಪ್ರಶ್ನಿಸುತ್ತಾರೆ. ಚಹಾ ತಂದು ಕೊಟ್ಟಾತ ಮತ್ತು ಕಪಿಲ್ ಶರ್ಮಾ ಹೌದೆಂದು ಉತ್ತರಿಸಿದಾಗ, ತನಗೆ ಆ ಚಹಾ ಬೇಡ ಎನ್ನುತ್ತಾರೆ. ಬಳಿಕ, ತಾನು ಸಕ್ಕರೆ ತಿನ್ನುವುದಿಲ್ಲ ಮತ್ತು ಸಕ್ಕರೆ ಏಕೆ ಒಳ್ಳೆಯದಲ್ಲ ಎಂಬುದರ ಬಗ್ಗೆ ವಿವರಿಸುತ್ತಾರೆ.
ಸಕ್ಕರೆ ಅಗತ್ಯವಿದ್ದರೆ ಹಣ್ಣುಗಳ ರೂಪದಲ್ಲಿ ಸೇವಿಸಬೇಕು
ಒಂದು ವೇಳೆ ಸಕ್ಕರೆ ಅಗತ್ಯವಿದ್ದರೆ, ಅದನ್ನು ಹಣ್ಣುಗಳ ರೂಪದಲ್ಲಿ ಸೇವಿಸಬೇಕು ಎಂದು ಆ ವಿಡಿಯೋದಲ್ಲಿ ಆಲಿಯಾ ಹೇಳುತ್ತಾರೆ. ಆದರೆ, ಆಲಿಯಾ ನಿಜ ಜೀವನದಲ್ಲಿ ಪಾಲಿಸುವ ಈ ಸಕ್ಕರೆಯ ಕುರಿತ ನಿಯಮಕ್ಕೆ, ಆಕೆಯ ಜಾಹಿರಾತುಗಳು ಸಂಪೂರ್ಣ ವಿರುದ್ಧವಾಗಿವೆ ಎಂಬುದನ್ನು ಇದೇ ವಿಡಿಯೋದಲ್ಲಿನ ಆಲಿಯಾ ಜಾಹೀರಾತುಗಳ ಕ್ಲಿಪ್ಪಿಂಗ್ಗಳಲ್ಲಿ ನೋಡಬಹುದು. ಯಾಕೆಂದರೆ, ಫ್ರೂಟಿ, ಕೋಕ- ಕೋಲಾ, ಡಾರ್ಕ್ ಫ್ಯಾಂಟಸಿ ಚಾಕೋ ಫಿಲ್ಸ್ ಮತ್ತು ಪರ್ಕ್ ಖಂಡಿತಾ ಹಣ್ಣುಗಳಂತೂ ಅಲ್ಲ ಅಲ್ಲವೇ?
ಇದನ್ನೂ ಓದಿ: Niveditha Gowda: Mrs.India ಟ್ರೈನಿಂಗ್ ನಲ್ಲಿ ಕಿರುತೆರೆಯ ಗೊಂಬೆ ನಿವೇದಿತಾ ಗೌಡ
ಹೀಗಾಗಿ ನೆಟ್ಟಿಗರು ಆಲಿಯಾ ಹೇಳುವುದೊಂದು, ಮಾಡುವುದೊಂದು ಎಂದು ಕಿಡಿಕಾರಿದ್ದಾರೆ. ಸಕ್ಕರೆ ತಿನ್ನುವುದಿಲ್ಲ ಎಂದಾದರೆ ಈ ರೀತಿಯ ಸಕ್ಕರೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಏಕೆ ಪ್ರಚೋಧಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕ್ಷಮೆಯಾಚಿಸಿದ್ದ ಅಕ್ಷಯ್ ಕುಮಾರ್
ಈ ಹಿಂದೆ ತಂಬಾಕು ಕಂಪೆನಿ ಒಂದರ ಉತ್ಪನ್ನಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ನಟ ಅಕ್ಷಯ್ ಕುಮಾರ್ ಅವರನ್ನು ಖಂಡಿಸಲಾಗಿತ್ತು. ಅವರು ತಮ್ಮ ಆ ಉತ್ಪನ್ನದ ಕುರಿತ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯ ಮಾಡಲಾಗಿತ್ತು.
ಇದನ್ನೂ ಓದಿ: Rocking Star Yash: ಅಂದು ಬರಿಗಾಲಲ್ಲಿ ಬಂದಿದ್ದ ರಾಕಿಂಗ್ ಸ್ಟಾರ್ ಶೂ ಕಲೆಕ್ಷನ್ ನೋಡಿದ್ರೆ ವ್ಹಾವ್ ಎನ್ನದೇ ಇರೋದಿಲ್ಲ
“ ನನ್ನನ್ನು ಕ್ಷಮಿಸಿ. ನಾನು ನನ್ನ ಅಭಿಮಾನಿಗಳು ಮತ್ತು ಹಿತೈಶಿಗಳಲ್ಲಿ ಕ್ಷಮೆ ಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡುತ್ತಿರುವ ಪ್ರತಿಕ್ರಿಯೆ ನನ್ನ ಮೇಲೆ ತೀವ್ರ ಪ್ರಭಾವ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಮತ್ತು ಅನುಮೋದಿಸುವುದೂ ಇಲ್ಲ, ವಿಮಲ್ ಇಲೈಚಿ ಜೊತೆಗಿನ ನನ್ನ ಒಡನಾಟದ ಬಗ್ಗೆ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ನಮ್ರತೆಯಿಂದ ನಾನು ಹಿಂದೆ ಸರಿಯುತ್ತೇನೆ. ನಾನು ಸಂಪೂರ್ಣ ಜಾಹೀರಾತು ಶುಲ್ಕವನ್ನು ಯೋಗ್ಯ ಉದ್ದೇಶಕ್ಕಾಗಿ ದಾನ ಮಾಡಲು ನಿರ್ಧರಿಸಿದ್ದೇನೆ” ಎಂದು ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಂನಲ್ಲಿ ಕ್ಷಮೆ ಯಾಚಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ