ತಮ್ಮ ಕಾರು ಚಾಲಕ, ಮನೆಗೆಲಸದವರಿಗೆ ಕೋಟ್ಯಂತರ ರೂ. ನೀಡಿದ ಬ್ಯಾಂಕ್​​ನ CEO V.Vaidyanathan

ಐಡಿಎಫ್‍ಸಿ ಫಸ್ಟ್ ಬ್ಯಾಂಕ್‍ನ (IDFC FIRST Bank) ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ವೈದ್ಯನಾಥನ್  ಅವರು ತಮ್ಮ ಚಾಲಕ, ತರಬೇತುದಾರ, ಮನೆಗೆಲಸದವರಿಗೆ 5,30,000 ಡಾಲರ್ ಮೌಲ್ಯದ ಷೇರುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿ. ವೈದ್ಯನಾಥನ್

ವಿ. ವೈದ್ಯನಾಥನ್

 • Share this:
  ಪರೋಪಕಾರ, ಲೋಕಪ್ರೀತಿ ಪ್ರತಿ ಮನುಷ್ಯನಲ್ಲೂ ಅಂತರ್ಗತವಾಗಿರುವ ಮಾನವೀಯ ಗುಣ(Humanity). ಆದರೆ, ಕೆಲವರ ಇಂತಹ ಪರೋಪಕಾರ, ಲೋಕಪ್ರೀತಿ ಅಚ್ಚರಿ ಮೂಡಿಸುವಷ್ಟರ ಮಟ್ಟಿಗೆ ವಿಶಾಲವಾಗಿರುತ್ತದೆ. ಕೆಲವರಲ್ಲಿ ಸಹಾಯದ ಗುಣ (Helping Nature) ಎಷ್ಟಿರುತ್ತದೆ ಎಂದರೆ ಅವರು ಮಾಡುವ ಸಹಾಯ ಎಲ್ಲೆಡೆ ತಾನಾಗಿಯೇ ಅದರ ತೀವ್ರತೆಯಿಂದಲೇ ಸದ್ದು ಮಾಡುವಂತಿರುತ್ತದೆ. ಇಂತಹದೇ ಅಚ್ಚರಿಯ ನಡೆಯ ಮೂಲಕ ಎಲ್ಲರನ್ನೂ ತಬ್ಬಿಬ್ಬಾಗಿಸಿರುವವರು ಐಡಿಎಫ್‍ಸಿ ಫಸ್ಟ್ ಬ್ಯಾಂಕ್‍ನ (IDFC FIRST Bank) ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ವೈದ್ಯನಾಥನ್  ಅವರು ತಮ್ಮ ಚಾಲಕ, ತರಬೇತುದಾರ, ಮನೆಗೆಲಸದವರಿಗೆ 5,30,000 ಡಾಲರ್ ಮೌಲ್ಯದ ಷೇರುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಭಾರತದಲ್ಲಿ ಮತ್ತೊಂದು ಪರೋಪಕಾರಿ ನಿದರ್ಶನಕ್ಕೆ ಸಾಕ್ಷಿಯಾಗಿದ್ದಾರೆ.

  ಇದನ್ನೂ ಓದಿ: Viral Video: ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ... ಕಾಮಿಡಿ ವಿಡಿಯೋ ಸಖತ್ ವೈರಲ್

  ಶೇ. 38ರಷ್ಟು ಪಾಲು ಇತರರಿಗೆ 

  ಖಾಸಗಿ ಹಣಕಾಸು ವಲಯದ ವಿ. ವೈದ್ಯನಾಥನ್ ತಾವು ಹೊಂದಿರುವ ಷೇರುಗಳ ಮೌಲ್ಯದ ಶೇ. 3.7ರಷ್ಟು ಮೌಲ್ಯದ 9,00,000 ಷೇರುಗಳನ್ನು ಕೊಡುಗೆ ನೀಡಿದ್ದಾರೆ. ಈ ಕೊಡುಗೆಯನ್ನು ಪಡೆದಿರುವವರು ಆ ನಿಧಿಯನ್ನು ಮನೆ ಖರೀದಿ ಮಾಡಲು ಬಳಸಲಿದ್ದಾರೆ ಎಂದು ಷೇರು ಕೇಂದ್ರದಲ್ಲಿನ ವಿನಿಮಯಗೊಂಡ ದಾಖಲೆಗಳು ಹೇಳುತ್ತಿವೆ. ಈ ಷೇರು ಮೌಲ್ಯವು ಸೋಮವಾರ ಮುಕ್ತಾಯಗೊಂಡ ಮಾರುಕಟ್ಟೆ ವಹಿವಾಟನ್ನು ಆಧರಿಸಿದೆ. 54 ವರ್ಷದ ವೈದ್ಯನಾಥನ್ ಅವರು ಕಳೆದ ಜನವರಿ 2018ರಿಂದ ತಮ್ಮ ಪಾಲಿನ ಷೇರುಗಳ ಪೈಕಿ ಒಟ್ಟಾರೆ ಶೇ. 38ರಷ್ಟನ್ನು ಇತರರಿಗೆ ಕೊಡುಗೆ ನೀಡಿದ್ದಾರೆ. ಮೊದಲಿಗೆ ಕ್ಯಾಪಿಟಲ್ ಫಸ್ಟ್ ಎಂಬ ಹಣಕಾಸು ಸಂಸ್ಥೆಯ ಮುಖ್ಯಸ್ಥರಾಗಿದ್ದ ಅವರು ನಂತರ ಷೇರು ಕೇಂದ್ರದಲ್ಲಿ ಪಟ್ಟಿಯಾಗಿರುವ ಐಡಿಎಫ್‍ಸಿ ಬ್ಯಾಂಕ್‍ನೊಂದಿಗೆ ತಮ್ಮ ಹಣಕಾಸು ಸಂಸ್ಥೆಯನ್ನು ವಿಲೀನಗೊಳಿಸಿ ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ಅನ್ನು ರಚಿಸಿದ್ದರು. ಅವರು ನೀಡಿರುವ ಕೊಡುಗೆಯ ಪೈಕಿ 2020ರಲ್ಲಿ ತನ್ನ ಮಾಜಿ ಗಣಿತದ ಶಿಕ್ಷಕರಿಗೆ ಕೊಡ ಮಾಡಿರುವ ಕೊಡುಗೆಯೂ ಸೇರಿದೆ.

  ಗಣಿತದ ಶಿಕ್ಷಕರು 500 ರೂ. 

  ವೈದ್ಯನಾಥನ್ ಅವರು ಉನ್ನತ ಶಾಲೆಯೊಂದಕ್ಕೆ ಪ್ರವೇಶಾವಕಾಶ ಪಡೆದರೂ ಆ ಶಾಲೆಗೆ ತಲುಪಲು ಅವರ ಬಳಿ ದುಡ್ಡಿಲ್ಲದೆ ಇದ್ದಾಗ ಗಣಿತದ ಶಿಕ್ಷಕರು  500 ರೂ. ನೀಡಿದ್ದರು. ಅದಕ್ಕೆ ಪ್ರತಿಯಾಗಿ 2020ರಲ್ಲಿ ವೈದ್ಯನಾಥನ್ ಮರಳಿ ತನ್ನ ಶಿಕ್ಷಕರಿಗೆ ಕೊಡುಗೆ ನೀಡಿದ್ದಾರೆ. ಡಿಸೆಂಬರ್ 18, 2018 ರಂದು ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಅದರ ಶೇರು ಮೌಲ್ಯವು ಶೇ. 5ರಷ್ಟು ಹೆಚ್ಚಳಗೊಂಡಿದೆ. 2020 ರಲ್ಲಿ ಕೊರೊನಾ ಸಾಂಕ್ರಾಮಿಕ ಕಾರಣಕ್ಕೆ ಹಿನ್ನಡೆ ಅನುಭವಿಸಿದ್ದ ಬ್ಯಾಂಕ್ ಮತ್ತೆ ಚೇತರಿಸಿಕೊಂಡಿದ್ದು, ವೈದ್ಯನಾಥನ್ ಅವರನ್ನು 2024ರವರೆಗೆ ಮತ್ತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಮರು ನೇಮಕ ಮಾಡಲಾಗಿದೆ.

  ಇದನ್ನೂ ಓದಿ: Viral Video: ಏನಪ್ಪಾ ಇವ್ನು, 6 ಭಾಷೆಯಲ್ಲಿ ಸುದ್ದಿ ಕೊಡ್ತಾನೆ! 'ಜೇಮ್ಸ್ ಬಾಂಡ್' ಅಂತಿದ್ದಾರೆ ನೆಟ್ಟಿಗರು

  ಮನೆಗೆಲಸದವರಿಗೆ, ಕಾರು ಚಾಲಕನಿಗೆ ಸಹಾಯ 

  ವೈದ್ಯನಾಥನ್ ಅವರು ತರಬೇತುದಾರ ರಮೇಶ್ ರಾಜು ಅವರಿಗೆ ಮೂರು ಲಕ್ಷ ಷೇರುಗಳು, ಅವರ ಮನೆಗೆಲಸದವರಾದ ಪ್ರಂಜಲ್ ನಾರ್ವೇಕರ್‍ ಮತ್ತು ಚಾಲಕ ಅಲ್ಗರ್ ಸಾಮಿ ಸಿ. ಮುನಪರ್ ಅವರಿಗೆ 2 ಲಕ್ಷ ಷೇರುಗಳು ಮತ್ತು ತಲಾ 1 ಲಕ್ಷ ಷೇರುಗಳನ್ನು ತಮ್ಮ ನೆರವು ಸಿಬ್ಬಂದಿಯಾದ ದೀಪಕ್ ಪಠಾರೆ ಮತ್ತು ಮನೆ ಸೇವಕ ಸಂತೋಷ್ ಜೋಗಳೆ ಅವರಿಗೆ ಕೊಡುಗೆ ನೀಡಿದ್ದಾರೆ. ಸೋಮವಾರ ಮುಕ್ತಾಯವಾದ ಷೇರು ಮಾರುಕಟ್ಟೆಯ ಷೇರು ಮೌಲ್ಯದ ಆಧಾರದಲ್ಲಿ ಬಿಎಸ್‍ಇ ಸೂಚ್ಯಂಕ ದರ 43.90 ರೂ. ಇದ್ದು, ವೈದ್ಯನಾಥನ್ ನೀಡಿರುವ 9 ಲಕ್ಷ ಷೇರುಗಳ ಕೊಡುಗೆಯ ಮೌಲ್ಯವು 3.951 ರೂ. ಕೋಟಿ ಆಗಿದೆ. ಇದರೊಂದಿಗೆ ರುಕ್ಮಣಿ ಸಾಮಾಜಿಕ ಕಲ್ಯಾಣ ದತ್ತಿ ನಿಧಿಗೆ ಅದರ ಸಾಮಾಜಿಕ ಚಟುವಟಿಕೆಗಳಿಗೆ ನೆರವು ನೀಡಲು 2 ಲಕ್ಷ ಷೇರುಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
  Published by:Kavya V
  First published: