• Home
  • »
  • News
  • »
  • trend
  • »
  • ವಿಶ್ವದ ಚಿತ್ತ ಸೆಳೆದಿದ್ದ ಅವಳಿ ಸಹೋದರಿಯರು - ಅವಳಿ ಸಹೋದರರ ಕುಟುಂಬಕ್ಕೆ ಮೊದಲ ಮಗುವಿನ ಆಗಮನ!

ವಿಶ್ವದ ಚಿತ್ತ ಸೆಳೆದಿದ್ದ ಅವಳಿ ಸಹೋದರಿಯರು - ಅವಳಿ ಸಹೋದರರ ಕುಟುಂಬಕ್ಕೆ ಮೊದಲ ಮಗುವಿನ ಆಗಮನ!

ಅವಳಿ ಸಹೋದರಿಯರು - ಅವಳಿ ಸಹೋದರರು

ಅವಳಿ ಸಹೋದರಿಯರು - ಅವಳಿ ಸಹೋದರರು

ಕಳೆದ ವರ್ಷ ಈ ಅವಳಿ ಸಹೋದರಿಯರು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎನ್ನುವ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಈ ಹಿಂದೆ ಟಿಎಲ್​ಸಿ ಡಾಕ್ಯುಮೆಂಟರಿಯಲ್ಲಿ 'ಟ್ವಿನ್​ಸೇನ್ ವೆಡ್ಡಿಂಗ್​' ಎನ್ನುವ ಡಾಕ್ಯುಮೆಂಟರಿಯಲ್ಲಿ ತಾವಿಬ್ಬರು ಒಟ್ಟಿಗೆ ಒಂದೇ ಸಮಯದಲ್ಲಿ ಗರ್ಭಿಣಿಯಾಗಲು ಬಯಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.

ಮುಂದೆ ಓದಿ ...
  • Share this:

2018ರ ಆಗಸ್ಟ್‌ನಲ್ಲಿ ಅಮೆರಿಕದ ಬ್ರಿಟ್ನಿ ಮತ್ತು ಬ್ರಿಯಾನ ಡೀನ್​ ಎನ್ನುವ ಅವಳಿ ಸಹೋದರಿಯರು, ಜೋಶ್​ ಮತ್ತು ಜೆರೆಮಿ ಸ್ಯಾಲಿಯರ್ಸ್​ ಎನ್ನುವ ಅವಳಿ ಸಹೋದರರನ್ನು ವಿವಾಹವಾಗಿದ್ದು ಸಖತ್ ವೈರಲ್​ ಆಗಿತ್ತು. ಓಹಿಯೋದಾ ಟ್ವಿನ್ಸ್​​ ಬರ್ಗ್​ನಲ್ಲಿ ನಡೆದ ಟ್ವಿನ್ಸ್​ ಡೇಸ್​​ ಟ್ವೈಸ್ ಅಪಾನ್​ ಎ ಟೈಂ ನಲ್ಲಿ ಈ ಅವಳಿ ಸಹೋದರಿಯವರು ಮದುವೆಯಾಗಿ ಇಂಟ್​ರ್​​ನೆಟ್​ನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಈ ಅವಳಿ ಜೋಡಿಗಳು ಮದುವೆಯಾದ ದಿನದಿಂದಲೂ ಸೆಲೆಬ್ರಿಟಿಗಳಂತೆ ಈ ಜೋಡಿಗಳನ್ನು ನೋಡಲಾಗುತ್ತಿದೆ. ಅವರ ಹುಟ್ಟೂರು ಮತ್ತು ಆನ್​ಲೈನ್​ನಲ್ಲಿ ಈ ಜೋಡಿಗಳದ್ದೇ ಹವಾ.


ಕಳೆದ ವರ್ಷ ಈ ಅವಳಿ ಸಹೋದರಿಯರು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎನ್ನುವ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಈ ಹಿಂದೆ ಟಿಎಲ್​ಸಿ ಡಾಕ್ಯುಮೆಂಟರಿಯಲ್ಲಿ 'ಟ್ವಿನ್​ಸೇನ್ ವೆಡ್ಡಿಂಗ್​' ಎನ್ನುವ ಡಾಕ್ಯುಮೆಂಟರಿಯಲ್ಲಿ ತಾವಿಬ್ಬರು ಒಟ್ಟಿಗೆ ಒಂದೇ ಸಮಯದಲ್ಲಿ ಗರ್ಭಿಣಿಯಾಗಲು ಬಯಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ನಮ್ಮ ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತೇವೆ ಎಂದು ತಮ್ಮ ಬಯಕೆಯನ್ನು ಸಹ ಹಂಚಿಕೊಂಡಿದ್ದರು.


ಅವಳಿ ಸಹೋದರಿಯರು ಮತ್ತು ಅವರ ಗಂಡಂದಿರು ಇನ್​ಸ್ಟಾಗ್ರಾಂನಲ್ಲಿ ಆಗಸ್ಟ್ 14, 2020 ಕ್ಕೆ ಶುಭ ಸುದ್ದಿಯನ್ನು ಕೊಟ್ಟಿದ್ದರು. ಅವಳಿ ಜವಳಿ ಕುಟುಂಬ ಹೊಸ ಜೀವದ ನಿರೀಕ್ಷೆಯಲ್ಲಿದ್ದರು. ' ಗರ್ಭಧಾರಣೆಯ ಈ ಸಮಯವನ್ನು ಅನುಭವಿಸುತ್ತಿರುವುದು ನಿಜಕ್ಕೂ ರೋಮಾಂಚನಕಾರಿಯಾದ ಅನುಭವ ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತವೆ' ಎಂದಿದ್ದರು. 'ನಮ್ಮ ಮಕ್ಕಳು ಕೇವಲ ಕಸಿನ್ಸ್​ ಮಾತ್ರವಲ್ಲ, ಅನುವಂಶೀಯತೆಯ ಪ್ರತೀಕ ಮತ್ತು ಅವರು ಅದನ್ನು ದ್ವಿಗುಣಗೊಳಸುತ್ತಾರೆ 'ಎಂದು ಪೋಸ್ಟ್ ಶೇರ್ ಮಾಡಿದ್ದರು.




ಬ್ರಿಟ್ನಿ ಮತ್ತು ಜೋಶ್​ ಇತ್ತೀಚೆಗೆ ತಮ್ಮ ಗಂಡು ಮಗುವನ್ನು ಬರಮಾಡಿಕೊಂಡರು. ಜೋಶ್​ ಜನವರಿಯಲ್ಲಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಜೊತೆಗಿರುವ ತಮ್ಮ ಹಾಗೂ ತಮ್ಮ ಪತ್ನಿಯ ಕೊಲಾಜ್‌​ ಫೋಟೋವನ್ನು ಶೇರ್​ ಮಾಡಿದ್ರು. ಜೆಟ್​​ ಸ್ಯಾಲಿಯರ್ಸ್​ ಎಂದು ಅದಕ್ಕೆ ಕ್ಯಾಪ್ಷನ್​ ಕೊಟ್ಟಿದ್ದರು.




'ಬ್ರಿಟ್ನಿ ಮೊದಲ ಮಗುವಿಗೆ ಜನ್ಮ ನೀಡಿರುವುದು ಬಹಳ ಖುಷಿಯ ಸಂಗತಿಯಾಗಿದೆ, ಒಬ್ಬ ಸಂಪೂರ್ಣನಾದ, ಸದೃಢನಾದ ಮಗ ನಮ್ಮವನಾಗಿದ್ದಾನೆ. ನಿಮ್ಮೆಲ್ಲರಿಗೂ ಪರಿಚಯಿಸುತ್ತಿದ್ದೇವೆ ಜೆಟ್​​ ಸ್ಯಾಲಿಯರ್ಸ್'​​ ಎಂದು ಖುಷಿ ಹಂಚಿಕೊಂಡಿದ್ದಾರೆ. 'ಬ್ರಿಟ್ನಿಯೂ ಕೂಡ ಸುಖ ಪ್ರಸವವನ್ನು ಕಂಡಳು. ನನಗೆ ನನ್ನ ಕುಟುಂಬದ ಬಗ್ಗೆ ಸಂತಸವಾಗುತ್ತಿದೆ. ಜೆಟ್​ನ ತಂದೆ ಎನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ' ಎಂದಿದ್ದಾರೆ.




ಇನ್​​ಸ್ಟಾಗ್ರಾಂನಲ್ಲಿ ಇನ್ನೊಂದು ಫೋಟೋ ಕೊಲಾಜ್​ ಮಾಡಿದ್ದು, ಬ್ರಿಟ್ನಿ ಬೇಬಿ ಜೆಟ್​​ ಜೊತೆಗಿದ್ದು, ಬ್ರಿಯಾನ ತಮ್ಮ ಬೇಬಿ ಬಂಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯೂ ಬೇಬಿ ಜೆಟ್​ ಮತ್ತು ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರಿಗೆ ಖುಷಿಯನ್ನು ಹಂಚುತ್ತಿದ್ದಾರೆ.

Published by:Harshith AS
First published: