ಶಿಲಾಯುಗದ ಸಮಾಜದಲ್ಲಿ (Old Age) ಬಹುತೇಕ ಭಾಗಗಳಲ್ಲಿ ಬಹುಪತ್ನಿತ್ವ ಆಗ್ತಾ ಇದರು. ಈಗ ಕಾನೂನುಬಾಹಿರ ಇದುವೇ ಅಭ್ಯಾಸವಾಗಿದೆ. ಹೆಚ್ಚಿನ ದೇಶಗಳಲ್ಲಿ ಔಪಚಾರಿಕ ವಿಚ್ಛೇದನದ ನಂತರವೇ ನೀವು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಬಹುದು. ಆದಾಗ್ಯೂ, ಬುಡಕಟ್ಟು ಸಂಪ್ರದಾಯಗಳನ್ನು ಅನುಸರಿಸುವ ದೇಶಗಳಲ್ಲಿ ಬಹುಪತ್ನಿತ್ವ (Polygamy)ಕಾನೂನುಬಾಹಿರವಲ್ಲ. ಆಗಿನ ಕಾಲದ ರಾಜರು ಈ ರೀತಿಯಾಗಿ ಮದುವೆ ಆಗ್ತಾ ಇದ್ರು. ಯಾಕಂದ್ರೆ, ಒಂದೇ ಹೆಂಡತಿಯ ಜೊತೆ ಇದ್ದು ಬೇಜಾರಾದಾಗ ಅಥವಾ ಮೊದಲನೆಯ ಹೆಂಡತಿ ಸತ್ತು ಹೋದಾಗ, ಬಂಜೆತನವಾಗಿದ್ರೆ ರಾಜರು ತನ್ನ ವಂಶವನ್ನು ಬೆಳೆಸುವ ಉದ್ಧೇಶದಿಂದ ಈ ರೀತಿಯಾಗಿ ಹಲವಾರು ಮದುವೆ ಆಗ್ತಾ ಇದ್ರು.
ಆದ್ರೆ ಈಗಿನ ಕಾಲದಲ್ಲಿಯೂ ಈ ರೀತಿಯಾಗಿ ಮದುವೆ ಆಗೋದು ವಿರಳ ಅನ್ಬೋದು. ಆದ್ರೆ ಇದಕ್ಕೆ ವಿರುದ್ಧವಾಗಿ ಇದೀಗ ಒಂದು ಘಟನೆ ನಡೆದಿದೆ. ಈ ವಿಷಯವನ್ನು ಇಂದಿನ ಗಂಡಂದಿರು ಫಾಲೋ ಮಾಡ್ಬೇಡಿ. ಕೀನ್ಯಾದಲ್ಲಿ ಯುವಕನೊಬ್ಬ ಏಕಕಾಲಕ್ಕೆ ಒಂದಲ್ಲ ಎರಡಲ್ಲ ಮೂರು ಮಹಿಳೆಯರನ್ನು ಮದುವೆಯಾಗಿ ಒಗ್ಗಟ್ಟಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಮೂವರೂ ಸಹೋದರಿಯರಂತೆ ಕಾಣುವುದು ಹೆಚ್ಚುವರಿ ಬೋನಸ್ ಆಗಿದೆ. ಕೀನ್ಯಾದ ಯುವಕ ಸ್ಟೀವೊ ಮೊದಲು ಕ್ಯಾತ್ ಎಂಬ ಹುಡುಗಿಯನ್ನು ಭೇಟಿಯಾಗುತ್ತಾನೆ. ಕೀತ್ ನಂತರ ಅವರು ಈವ್ ಮತ್ತು ಮೇರಿ ಎಂಬ ಇಬ್ಬರು ಸಹೋದರಿಯರನ್ನು ಹೊಂದಿದ್ದಾರೆಂದು ಬಹಿರಂಗಪಡಿಸಿದರು.
ಇದನ್ನೂ ಓದಿ: ಈ ದೇಶದಲ್ಲಿ ರೆಡ್ ಇಂಕ್ ಬಳಸೋದು ತುಂಬಾ ಡೇಂಜರ್! ಸತ್ಯ ಕೇಳಿದರೆ ಬೆಚ್ಚಿ ಬೀಳುತ್ತೀರಿ!
ಕೇಟ್ನ ಸಹೋದರಿಯರನ್ನು ಭೇಟಿಯಾದ ಸ್ಟೀವೋಗೆ ಅವರ ಮೇಲೂ ಆಕರ್ಷಣೆ ಆಯಿತು. ತಾನೇಕೆ ಮೂವರೂ ಸಹೋದರಿಯರನ್ನು ಮದುವೆಯಾಗಬಾರದು ಎಂದು ಅವರು ಯೋಚಿಸಿದರು. ಮೂವರೂ ಸಹೋದರಿಯರ ಬಳಿ ಈ ಬಗ್ಗೆ ಆತ ಹೇಳಿದಾಗ ಕೇಟ್ಗೆ ಮೊದಲು ಇದು ಇಷ್ಟವಾಗಲಿಲ್ಲ.
ಆದರೆ, ಮೂವರೂ ಅಕ್ಕ-ತಂಗಿಯರು ಒಟ್ಟಿಗೇ ಇರಬಹುದು ಎಂಬ ಕಾರಣಕ್ಕೆ ಮೂವರೂ ಸೇರಿ ಆತನನ್ನು ಮದುವೆಯಾಗಲು ನಿರ್ಧರಿಸಿದರು.
ಎಲ್ಲಾ ಮೂವರು ಸಹೋದರಿಯರು ಸುವಾರ್ತೆ ಸಂಗೀತದಲ್ಲಿ ತರಬೇತಿ ಪಡೆದ ಸಂಗೀತಗಾರರು. ಸ್ಟೀವೊ ಮೊದಲು ಕ್ಯಾತ್ ಅವರನ್ನು ಭೇಟಿಯಾದರು ಮತ್ತು ನಂತರ ಅವರ ಇಬ್ಬರು ಸಹೋದರಿಯರೊಂದಿಗೆ ಮಾತನಾಡಿದರು. ಆಗ ಸ್ಟೀವೊಗೆ ತಾನು ಮದುವೆಯಾದರೆ ಒಬ್ಬ ಮಹಿಳೆಯನ್ನು ಮಾತ್ರವಲ್ಲ, ಮೂವರನ್ನೂ ಮದುವೆಯಾಗಬೇಕು ಎಂದು ಅನಿಸಿತು. ದೇವರ ಬಳಿ ಕೇಳಿದಾಗ ಅವರೂ ಕೂಡ ಒಪ್ಪಿದ್ರು ಅಂತ ಹೇಳುತ್ತಾರೆ.
Man marries set of identical triplets because the girls can’t stay away from each other🤯🤯🤯 pic.twitter.com/xNw1JTLbjf
— 🇨🇲🇳🇬TheGdMother™️🇨🇲🇳🇬 (@NjangiGuru) May 24, 2022
ಸ್ಟೀವ್ ಪ್ರತಿ ಹೆಂಡತಿಗೆ ವೇಳಾಪಟ್ಟಿಯನ್ನು ಇಟ್ಟುಕೊಳ್ಳುತ್ತಾನೆ, ಮೇರಿಗೆ ಸೋಮವಾರಗಳನ್ನು, ಕ್ಯಾತ್‌ಗಾಗಿ ಮಂಗಳವಾರ ಮತ್ತು ಈವ್‌ಗಾಗಿ ಬುಧವಾರಗಳನ್ನು ನಿಗದಿಪಡಿಸುತ್ತಾನೆ. ಸ್ಟೀವ್ನನ್ನು ಮದುವೆಯಾದ ಮೂವರು ಸಹೋದರಿಯರಿಗೆ ಇನ್ನೆಂದೂ ನಮ್ಮ ಸಂಸಾರಕ್ಕೆ ಮತ್ತೊಬ್ಬ ಹೆಣ್ಣನ್ನು ಸೇರಿಸುವ ಯೋಚನೆಯಿಲ್ಲ ಎಂದು ಹೇಳಿದ್ದಾರೆ.
ಆತನಿಗೆ ನಾವೇ ಮೂವರೂ ಸಾಕು ಎಂದು ನಿರ್ಧರಿಸಿ ‘ನೋ ಎಂಟ್ರಿ’ಯನ್ನು ನಿಷೇಧಿಸಿದ್ದಾರೆ. ನಮ್ಮ ಊರಿನ ಯುವಕರು ಹೆಣ್ಣು ಬೇಕು ಮದುವೆಯಾಗಲು ಎಂದು ತಪಸ್ಸು ಮಾಡುತ್ತಿರುವ ಈ ಕಾಲದಲ್ಲಿ ಈತ ಮೂವರನ್ನು ಮದುವೆ ಆಗಿದ್ದಾನೆ. ಹಾಗೆಯೇ ಉತ್ತಮ ಜೀವನವನ್ನು ನಡೆಸುತ್ತಾ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ