• Home
  • »
  • News
  • »
  • trend
  • »
  • IAS Officer: ಅಂದುಕೊಳ್ಳೋದೇ ಒಂದು, ಆಗೋದೇ ಒಂದು! ಯಾಕೆ ಅಂತೀರಾ? ಐಎಎಸ್​ ಹಾಕಿರೋ ಫೋಟೋ ನೋಡಿ

IAS Officer: ಅಂದುಕೊಳ್ಳೋದೇ ಒಂದು, ಆಗೋದೇ ಒಂದು! ಯಾಕೆ ಅಂತೀರಾ? ಐಎಎಸ್​ ಹಾಕಿರೋ ಫೋಟೋ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ದೊಡ್ಡ ಕೈಗಾರಿಕೋದ್ಯಮಿಗಳು, ಸಿನೆಮಾ ನಟರು, ಕ್ರೀಡಾಪಟುಗಳು ಮತ್ತು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪ್ರಭಾವಿ ವ್ಯಕ್ತಿಗಳು ಸಹ ಇಂತಹ ಜೀವನಕ್ಕೆ ಸಂಬಂಧಪಟ್ಟಂತಹ ಪೋಸ್ಟ್ ಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ. ನೀವು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಇತ್ತೀಚೆಗೆ ಇಂತಹದೇ ಒಂದು ಪೋಸ್ಟ್ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ.

ಮುಂದೆ ಓದಿ ...
  • Share this:

    ಅವನ ಅನ್ನೋ ಪದದ ನಿಜವಾದ ಅರ್ಥ ತಿಳಿಯುವುದು ಅನೇಕ ಅನುಭವಗಳಿಂದ (Experience) ಕಲಿಯುವ ಪಾಠದಿಂದ ಅಂತ ಹೇಳಬಹುದು. ಜೀವನ ಅನ್ನೋದು ಎಲ್ಲರಿಗೂ ಒಂದೇ ರೀತಿಯಾಗಿ ಇರುವುದಿಲ್ಲ, ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಜನರು ಸಿಗುತ್ತಾರೆ, ಅನುಭವಗಳಾಗುತ್ತವೆ ಮತ್ತು ಜೀವನದಲ್ಲಿ ನಡೆಯುವ ಘಟನೆಗಳು ಸಹ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಹೀಗೆ ಜೀವನದ ಬಗ್ಗೆ ಅನೇಕ ರೀತಿಯ ನುಡಿಮುತ್ತುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಫೋಟೋಗಳು (Photos) ಮತ್ತು ವೀಡಿಯೋಗಳನ್ನು (Videos) ನಾವು ನೋಡುತ್ತೇವೆ. ಎಲ್ಲವೂ ಗೊತ್ತಿದ್ದರೂ ಸಹ ಬೇರೆಯವರು ಅದನ್ನು ಹೇಳಿದಾಗ ನಮಗೆ ಮನಸ್ಸಿಗೆ ಮುಟ್ಟುತ್ತದೆ. ಈಗಂತೂ ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಜೀವನದ ಬಗ್ಗೆ ಹೇಳುವ ನೀತಿ ಮಾತುಗಳ ಪೋಸ್ಟ್ ಗಳನ್ನು(Post) ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.


    ಈಗೆಲ್ಲಾ ಈ ವಾಟ್ಸಪ್ ಗಳಲ್ಲಿ ಜನರು ಬೆಳಿಗ್ಗೆ ಎದ್ದ ತಕ್ಷಣ ಇಂತಹ ಅನೇಕ ಬರಹಗಳನ್ನು ಮತ್ತು ಪೋಸ್ಟ್ ಗಳನ್ನು ತಮ್ಮ ಸ್ಟೇಟಸ್ ಹಾಕಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಒಳ್ಳೆಯ ವೀಡಿಯೋಗಳನ್ನು ಸಹ ತಮ್ಮ ಆಪ್ತರಿಗೆ ಕಳುಹಿಸುತ್ತಾ ಒಳ್ಳೆಯ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತಾರೆ.


    ಕೆಲವು ದೊಡ್ಡ ಕೈಗಾರಿಕೋದ್ಯಮಿಗಳು, ಸಿನೆಮಾ ನಟರು, ಕ್ರೀಡಾಪಟುಗಳು ಮತ್ತು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪ್ರಭಾವಿ ವ್ಯಕ್ತಿಗಳು ಸಹ ಇಂತಹ ಜೀವನಕ್ಕೆ ಸಂಬಂಧಪಟ್ಟಂತಹ ಪೋಸ್ಟ್ ಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ. ನೀವು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಇತ್ತೀಚೆಗೆ ಇಂತಹದೇ ಒಂದು ಪೋಸ್ಟ್ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ.


    ಪೋಸ್ಟ್ ನಲ್ಲಿ Motivation ಹಂಚಿಕೊಂಡ ಐಎಎಸ್ ಅಧಿಕಾರಿ!


    ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟ್ ಗಳನ್ನು ನೀವು ಒಮ್ಮೆಯಾದರೂ ನೋಡಿರಬಹುದು. ಅವರು ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಯಾವುದೇ ಸಮಯದಲ್ಲಿಯೂ ವೈರಲ್ ಆಗುವ ವಿಷಯವನ್ನು ಜನರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.


    ಅಕ್ಟೋಬರ್ 14 ರಂದು, ಅವರು ತಮ್ಮ ಸೈಟ್ ನಲ್ಲಿ ಚಿಂತನ-ಪ್ರಚೋದಕ ಪೋಸ್ಟ್ ಅನ್ನು ಹಂಚಿಕೊಂಡರು ಮತ್ತು ಅದು ನಿಮಗೆ ತುಂಬಾನೇ ಸರಿಯಾದ ವಿಷಯ ಅಂತ ಅನ್ನಿಸುವುದರಲ್ಲಿ ಯಾವುದೇ ಸಂಶಯವಿಲ್ಲ.


    ಐಎಎಸ್ ಅಧಿಕಾರಿ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ?


    ಅವನೀಶ್ ಶರಣ್ ಅವರು ಟ್ವಿಟ್ಟರ್ ನಲ್ಲಿ ಜೀವನದ ಒಂದು ಸತ್ಯವನ್ನು ಹಂಚಿಕೊಂಡಿದ್ದಾರೆ. ಅವರು "ಮೈ ಪ್ಲ್ಯಾನ್” ಎಂದರೆ ನನ್ನ ಯೋಜನೆ ಮತ್ತು "ಗಾಡ್ಸ್ ಪ್ಲ್ಯಾನ್” ಎಂದರೆ ದೇವರ ಯೋಜನೆಯ ರೇಖಾಚಿತ್ರವನ್ನು ಹಂಚಿಕೊಂಡರು.


    ಮೊದಲನೆಯದನ್ನು ಕೊನೆಯವರೆಗೆ ಒಂದು ನೇರವಾದ ರೇಖೆಯಾಗಿ ಚಿತ್ರಿಸಲಾಗಿತ್ತಾದರೂ, ಎರಡನೆಯದನ್ನು ಬಹಳಷ್ಟು ಬ್ಲಾಕ್ ಗಳನ್ನು ಹೊಂದಿರುವ ಕಠಿಣ ಮಾರ್ಗವೆಂದು ತೋರಿಸಲಾಯಿತು.


    "ಕೆಲವೊಮ್ಮೆ ದೇವರು ನಾವು ಯೋಚಿಸುವ ರೀತಿಯಲ್ಲಿ ಕೆಲಸಗಳನ್ನು ಈಡೇರಿಸುವುದಿಲ್ಲ. ಹಾಗಂತ ದೇವರ ಮೇಲೆ ಕೋಪ ಮಾಡಿಕೊಳ್ಳಬೇಡಿ. ಏಕೆಂದರೆ ದೇವರು ನಿಮ್ಮ ಯೋಜನೆಯನ್ನು ಈಡೇರಿಸಿಲ್ಲ ಅಂತ ಹೇಳಿದರೆ, ದೇವರು ನಿಮ್ಮ ಜೀವನಕ್ಕಾಗಿ ಪರಿಪೂರ್ಣ ಯೋಜನೆಯನ್ನು ಹೊಂದಿದ್ದಾನೆ ಎಂದರ್ಥ" ಎಂದು ರೇಖಾಚಿತ್ರದಲ್ಲಿರುವ ಪಠ್ಯವು ಹೇಳುತ್ತದೆ.


    "ಲೈಫ್ ಲೆಸನ್” ಎಂದರೆ “ಜೀವನದ ಪಾಠ" ಅಂತ ಶರಣ್ ಅವರು ತಮ್ಮ ಪೋಸ್ಟ್ ಗೆ ಶೀರ್ಷಿಕೆಯೊಂದನ್ನು ಬರೆದುಕೊಂಡಿದ್ದಾರೆ.


    ಈ ಪೋಸ್ಟ್ ತ್ವರಿತವಾಗಿ ನೆಟ್ಟಿಗರಿಂದ ಸಾಕಷ್ಟು ಗಮನ ಸೆಳೆಯಿತು, ಅವರು ಆ ಚಿತ್ರ ಮತ್ತು ಅದರ ಸಂದೇಶವನ್ನು ಒಪ್ಪಿಕೊಂಡರು. "ತುಂಬಾ ನಿಜ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ದೇವರು ನನಗಾಗಿ ಪರಿಪೂರ್ಣ ಯೋಜನೆಯನ್ನು ಏಕೆ ಸಿದ್ಧಪಡಿಸಬೇಕು? ದೇವರು ತನ್ನ ಪರಿಪೂರ್ಣ ಯೋಜನೆಯಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು