• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ವೈರಲ್​ ಆಯ್ತು ಐಎಎಸ್​ ಅಧಿಕಾರಿ ಲವ್​ ಕಹಾನಿ; ದಿನಪತ್ರಿಕೆಯಲ್ಲಿ ಬಂದ ಫೋಟೋ ಹಿಂದಿನ ಕಥೆ ಹೇಳಿದ ಮ್ಯಾಜಿಸ್ಟೇಟರ್​​

ವೈರಲ್​ ಆಯ್ತು ಐಎಎಸ್​ ಅಧಿಕಾರಿ ಲವ್​ ಕಹಾನಿ; ದಿನಪತ್ರಿಕೆಯಲ್ಲಿ ಬಂದ ಫೋಟೋ ಹಿಂದಿನ ಕಥೆ ಹೇಳಿದ ಮ್ಯಾಜಿಸ್ಟೇಟರ್​​

ಚಾಂದನಿ ಚಂದ್ರನ್​

ಚಾಂದನಿ ಚಂದ್ರನ್​

ಐಎಎಸ್​ ಅಧಿಕಾರಿಯೊಬ್ಬರು ಮುಕ್ತವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೇಮಕಥೆ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

  • Share this:

ಪ್ರೇಮಕಥೆಗಳೆ ಹಾಗೇ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಅಂತಹ ಅಪರೂಪದ ಐಎಎಸ್​ ಅಧಿಕಾರಿಯೊಬ್ಬರ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ತ್ರಿಪುರಾದ ಕಂಚನಪುರ ಸಬ್​ ಡಿವಿಶನ್​ ಮ್ಯಾಜಿಸ್ಟ್ರೇಟ್​ ಚಾಂದನಿ ಚಂದ್ರನ್​ ಪ್ರೇಮಕಥೆಗೆ ಜನರು ಮನಸೋತಿದ್ದಾರೆ. ಐಎಎಸ್ ಅಧಿಕಾರಿಯಾಗುವ ಗುರಿಯ​ ಕನಸಿನೊಂದಿಗೆ ನಡೆದ ಪ್ರೇಮಕಥೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಮಳೆ ಹವಾಮಾನ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾಗುವ ಫೋಟೋಗಳಲ್ಲಿ ಸಾಮಾನ್ಯವಾಗಿ ಕೆಲವು ಓದುಗರ ಗಮನಸೆಳೆಯುವಂತೆ ಮಾಡುತ್ತದೆ. ಅದರಲ್ಲೂ ಒಂದೇ ಛತ್ರಿಯಲ್ಲಿ ಇಬ್ಬರು ಜೋಡಿಗಳು ಮಳೆಯಲ್ಲಿ ಸಾಗುವ ಫೋಟೋಗಳು ಬೇಗನೇ ಕಣ್ಣಿಗೆ ಬೀಳುತ್ತವೆ. ಟೈಮ್ಸ್​ ಆಫ್​ ಇಂಡಿಯಾದಲ್ಲಿ ಕಳೆದ ಐದು ವರ್ಷಗಳ ಹಿಂದೆ ಕಂಡು ಬಂದಿದ್ದ ಈ ಫೋಟೋ ಕೂಡ ಮೆಚ್ಚುಗೆ ಪಡೆದಿತ್ತು. ಅದು ಮತ್ಯಾರ ಫೋಟೋ ಅಲ್ಲ. 2017ರ ಐಎಎಸ್​ ಬ್ಯಾಚ್​ನ ಅಧಿಕಾರಿ ಚಾಂದಿನಿ ಚಂದ್ರನ್​ ಅವರ ಫೋಟೋ. ಈ ಅದ್ಭುತ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಚಾಂದಿನಿ ತಮ್ಮ ಪ್ರೇಮ್​ ಕಹಾನಿ ಹಂಚಿಕೊಂಡಿದ್ದಾರೆ.



ಐಎಎಸ್​ ಅಧಿಕಾರಿಯಾಗಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ನಾನು 2015ರಲ್ಲಿ ಪರೀಕ್ಷೆ ಬರೆದಿದ್ದು, 2016ರ ಮೇ 10ರಂದು ಫಲಿತಾಂಶಕ್ಕೆ ಎದುರು ನೋಡುತ್ತಿದ್ದೆ. ಫಲಿತಾಂಶ ಏನಾಗಲಿದೆ ಎಂಬ ಚಿಂತೆಗೆ ಒಳಗಾಗಿದ್ದೆ.  ಈ ಒತ್ತಡದಿಂದ ಮುಕ್ತವಾಗಲಿ ನನ್ನ ಬಾಯ್​ಫ್ರೆಂಡ್​ ಜೊತೆ ಸುತ್ತಾಡಲು ಹೋಗಿದ್ದೆ. ಆ ವೇಳೆ ಸುರಿದ ಮಳೆಯಲ್ಲಿ ಇಬ್ಬರು ಒಂದೇ ಕೊಡೆ ಹಿಡಿದು ಸಾಗುತ್ತಿದ್ದೆವು. ಈ ಫೋಟೋ ಮಾರನೇ ದಿನ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.


ಇದನ್ನು ಗಮನಿಸಿದ ನನ್ನ ಬಾಯ್​ ಫ್ರೆಂಡ್​ ಅರುಣ್​ ಸುದರ್ಶನ್​ ಪತ್ರಿಕೆಗೆ ಕರೆ ಮಾಡಿ ಚೆನ್ನಾಗಿ ತರಾಟೆ ತೆಗೆದುಕೊಂಡಿದ್ದರು. ಮದುವೆಯಾಗದ ನಮ್ಮ ಫೋಟೋ ಈ ರೀತಿ ಬಂದರೆ ಹೇಗೆ ಎಂದು ಕಿರುಚಾಡಿದ್ದರು. ಆದರೆ, ನಾನು ಮಾತ್ರ ಈ ಫೋಟೋ ನಮ್ಮ ಮುಂದಿನ ಭವಿಷ್ಯದ ಮುನ್ಸೂಚನೆ ಎಂಬುದನ್ನು ಅರಿತಿದೆ. ಈ ಘಟನೆ ನಡೆದ ಐದು ವರ್ಷದ ಬಳಿಕ ನಾವಿಬ್ಬರು ಈಗ ಸತಿಪತಿ ಆಗಿದ್ದೇವೆ. ಈ ಫೋಟೋ ನಿಜಕ್ಕೂ ನನ್ನ ಜೀವನದ ಅವಿಸ್ಮರಣೀಯ ಘಟನೆಯಲ್ಲಿ ಒಂದು. ಐದು ವರ್ಷದ ಬಳಿಕವೂ ಈ ಫೋಟೋದ ಕಾಪಿಯನ್ನು ಫೋಟೋಗ್ರಾಫರ್​ ನೀಡಿದ್ದು, ಅವರಿಗೆ ತಮ್ಮ ಹೃದಯ ಪೂರ್ವಕ ಧನ್ಯವಾದ ಎಂದು ತಿಳಿಸಿದ್ದಾರೆ.


ಇದನ್ನು ಓದಿ: ಮದುವೆಯಾಗುವುದಾಗಿ ವಂಚಿಸಿದ; ಪ್ರಶ್ನಿಸಿದ ಕುಟುಂಬವನ್ನೇ ಜಮೀನಿನಲ್ಲಿ ಹೂತು ಹಾಕಿದ


2016ರಲ್ಲಿ ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡುವಲ್ಲಿ ವಿಫಲವಾದ ಚಾಂದಿನಿ 2017 ಐಎಎಸ್​ ಬ್ಯಾಚ್​ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಇದರಲ್ಲಿ ಅಕ್ರಮವೇನು ಇಲ್ಲ. ಈ ಫೋಟೋದಿಂದ ನಮ್ಮ ಮರೆಯದ ನೆನಪುಗಳ ಮಾತುಕತೆ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.







ಐಎಎಸ್​ ಅಧಿಕಾರಿಯೊಬ್ಬರು ಮುಕ್ತವಾಗಿ ಈ ರೀತಿ ತಮ್ಮ ಲವ್​ ಕಹಾನಿ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಇತರೆ ಐಎಎಸ್​ ಅಧಿಕಾರಿಗಳು ಕೂಡ, ನಿಜಕ್ಕೂ ಅದ್ಭುತ ನಿಮ್ಮ ಲವ್​ ಸ್ಟೋರಿ. ಹೀಗೆ ಸದಾ ಖುಷಿಯಿಂದ ಜೀವನ ನಡೆಸಿ ಎಂದು ಹಾರೈಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: