ಪೊಲೀಸ್ (Police) ಸೇವೆಯು ಅಗತ್ಯ ಸೇವೆಯ ವರ್ಗಕ್ಕೆ ಬರುತ್ತದೆ. ಇದರಿಂದ ಬಹಳ ದಿನಗಳಿಂದ ರಜೆ ಸಿಗುತ್ತಿಲ್ಲ ಎಂಬ ಬೇಸರ ಪೊಲೀಸ್ ಸಿಬ್ಬಂದಿಯಿಂದ ಕೇಳಿ ಬರುತ್ತಿದೆ. ಕೆಲವು ಉದ್ಯೋಗಿಗಳು ಹೆಚ್ಚಿನ ದಿನಗಳ ರಜೆಯನ್ನು ಪಡೆಯಲು ವಿವಿಧ ತಂತ್ರಗಳು ಮತ್ತು ಸುಳ್ಳುಗಳಿಂದ ರಜೆಗಳನ್ನು ಪಡೆದುಕೊಳ್ಳುತ್ತಾರೆ. ಇನ್ನೂ ಕೆಲವು ಕಂಪೆನಿಗಳಲ್ಲಿ ರಜೆಯೇ ಕೊಡುವುದಿಲ್ಲ. ಆದರೆ, ರಾತ್ರಿ ಹಗಲೂ ಅಂತನೂ ನೋಡದೇ ಚೆನ್ನಾಗಿ ದುಡಿಸಿಕೊಳ್ತಾರೆ. ಇದರಿಂದ ಬೇಸತ್ತ ಉದ್ಯೋಗಿಗಳು (Employee) ಒಂದು ವರ್ಷದ ಮುನ್ನವೇ ಆ ಕೆಲಸದಿಂದ ಪಾರಾಗುತ್ತಾರೆ. ಇಂತಹ ಉದಾಹರಣೆಗಳು ಅದೆಷ್ಟೋ ಕಡೆ ನಡೆದಿದೆ. ಇದೀಗ ಪೊಲೀಸ್ ಪೇದೆಯೊಬ್ಬರು ತಮಾಷೆಯ ರಜೆ ಅರ್ಜಿ ಸಲ್ಲಿಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಅರ್ಜಿಯನ್ನು ಬರೆಯುತ್ತಿರುವ ಪೋಲೀಸರು ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯವರು. ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿರುವ ಪತ್ರದಲ್ಲಿ "ತಾನು ಒಂದು ತಿಂಗಳ ಹಿಂದೆ ಮದುವೆಯಾಗಿದ್ದು, ಇದೀಗ ಕೆಲಸಕ್ಕೆ ಸೇರಿದ್ದರಿಂದ ಪತ್ನಿಗೆ ಬೇಸರವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾನು ಕರೆ ಮಾಡಿದರೂ ಮಾತನಾಡದೆ ಮೊಬೈಲ್ ಅನ್ನು ಅಮ್ಮನ ಕೈಗೆ ಕೊಡುತ್ತಾಳೆ." ಎಂದು ತನ್ನ ಅಳಲನ್ನು ಪತ್ರದ ಮೂಲಕ ಬರೆದಿದ್ದಾರೆ. ಮಹಾರಾಜ್ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯ ಪಿಆರ್ಬಿಯಲ್ಲಿ ನೇಮಕಗೊಂಡ ಕಾನ್ಸ್ಟೆಬಲ್ನ ಈ ಅರ್ಜಿ ವೈರಲ್ ಆಗುತ್ತಿದೆ.
ನೌತನ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ PRB ಯಲ್ಲಿ ಪೋಸ್ಟ್ ಮಾಡಲಾದ ಕಾನ್ಸ್ಟೆಬಲ್ 2016 ರ ಬ್ಯಾಚ್ಗೆ ಸೇರಿದವರು. ಪ್ರಸ್ತುತ ಅವರು ಇಂಡೋ-ನೇಪಾಳ ಗಡಿಯಲ್ಲಿರುವ PRB ಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: ಈ ಸ್ಕೂಟಿಗೆ ಡ್ರೈವರ್ ಬೇಡ್ವಂತೆ, ವೈರಲ್ ಆಗ್ತಿದೆ ವಿಚಿತ್ರ ಘಟನೆಯ ವಿಡಿಯೋ!
ರಜೆಯ ಅರ್ಜಿಯಲ್ಲಿ ಕಾನ್ಸ್ಟೆಬಲ್ ಕಳೆದ ತಿಂಗಳು ಮದುವೆಯಾಗಿರುವುದಾಗಿ ಬರೆದಿದ್ದಾರೆ. ಬಳಿಕ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು. ಈಗ ಮನೆಗೆ ಹೋಗಲು ರಜೆ ಸಿಗುತ್ತಿಲ್ಲ. ಇದು ಪತ್ನಿಯ ಕೋಪಕ್ಕೆ ಕಾರಣವಾಗಿತ್ತು. ಪದೇ ಪದೇ ಕರೆ ಮಾಡಿದರೂ ಪತಿಯೊಂದಿಗೆ ಮಾತನಾಡುವುದಿಲ್ಲ. ಗಂಡನ ಕರೆಯನ್ನು ಸ್ವೀಕರಿಸಿದ ನಂತರ ಅವಳು ಮಾತನಾಡದೆ ತನ್ನ ಅತ್ತೆಗೆ ಅಂದರೆ ಕಾನ್ಸ್ಟೆಬಲ್ನ ತಾಯಿಗೆ ಮೊಬೈಲ್ ನೀಡುತ್ತಾಳೆ.
ಕಾನ್ಸ್ಟೆಬಲ್ ಹೀಗೆ ಬರೆದಿದ್ದಾರೆ, 'ನನ್ನ ಸೋದರಳಿಯ ಹುಟ್ಟುಹಬ್ಬದಂದು ನಾನು ಖಂಡಿತವಾಗಿಯೂ ಮನೆಗೆ ಬರುತ್ತೇನೆ ಎಂದು ನನ್ನ ಹೆಂಡತಿಗೆ ಭರವಸೆ ನೀಡಿದ್ದೇನೆ. ದಯವಿಟ್ಟು ನನಗೆ ಜನವರಿ 10 ರಿಂದ ಏಳು ದಿನಗಳ ಕ್ಯಾಶುಯಲ್ ರಜೆ ನೀಡಿ. ನಾನು ನಿಮಗೆ ಋಣಿಯಾಗಿರುತ್ತೇನೆ’’ ಎಂದು ಪತ್ನಿಯ ಅಸಮಾಧಾನದಿಂದ ಉಂಟಾದ ನೋವನ್ನು ಈ ಪತ್ರದಲ್ಲಿ ಕಾನ್ ಸ್ಟೆಬಲ್ ವ್ಯಕ್ತಪಡಿಸಿರುವಂತಿದೆ.
ತನ್ನ ಸೋದರಳಿಯನ ಹುಟ್ಟುಹಬ್ಬದ ಸಂದರ್ಭದಲ್ಲಿ ಪತ್ನಿಯ ಅಸಮಾಧಾನವನ್ನು ಉಲ್ಲೇಖಿಸಿ ಕಾನ್ಸ್ಟೆಬಲ್ ಏಳು ದಿನಗಳ ರಜೆ ಕೇಳಿದ್ದ. ಆದರೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐದು ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದಾರೆ. ಹೀಗಾಗಿ ಜನವರಿ 10ರಿಂದ ಕಾನ್ಸ್ಟೆಬಲ್ ರಜೆ ಆರಂಭವಾಗಲಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ಮಾತನಾಡಿ, 'ಕರ್ತವ್ಯದಲ್ಲಿರುವ ಪೊಲೀಸರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ರಜೆ ನೀಡಲಾಗುತ್ತದೆ. ರಜೆಯ ಕಾರಣದಿಂದ ಕೆಲಸದಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದೆ. ಈ ವಿಷಯಗಳನ್ನು ಪರಿಗಣಿಸಿ, ನೌತನ್ವಾ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗೆ ಅರ್ಜಿಯನ್ನು ಆಧರಿಸಿ ಐದು ದಿನಗಳ ಕಾಲ ಸಾಂದರ್ಭಿಕ ರಜೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ