Porn: “ನೀಲಿ ಚಿತ್ರಗಳನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರನ್ನು ಜಡ್ಜ್ ಮಾಡಬೇಡಿ: ಸೋಮಿ ಅಲಿ

ನೀಲಿ ಚಿತ್ರಗಳನ್ನು ಮೆಚ್ಚುವ ಜನರನ್ನು ಸಮರ್ಥಿಸಿಕೊಂಡರೂ, ನೀಲಿ ಚಿತ್ರಗಳ ಉದ್ಯಮದಿಂದ ಯಾವುದೇ ಕಲಾವಿದರಿಗೆ ಹಾನಿಯಾಗುವುದಕ್ಕೆ ಅವರಿಗೆ ಸ್ವೀಕಾರವಿಲ್ಲ. “ಅದನ್ನು ಹೊರತು ಪಡಿಸಿದರೆ, ನನಗೆ ನೀಲಿ ಚಿತ್ರಗಳ ಬಗ್ಗೆ ಯಾವುದೇ ವಿರೋಧವಿಲ್ಲ” ಎನ್ನುತ್ತಾರೆ ಅವರು.

ಸೋಮಿ ಅಲಿ

ಸೋಮಿ ಅಲಿ

  • Share this:

    ನೀಲಿ ಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿರುವ ಆರೋಪದ ಮೇಲೆ, ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಬಂಧಿಸಿರುವುದು ಬಾಲಿವುಡ್ ಸೇರಿದಂತೆ ಬಹಳಷ್ಟು ಮಂದಿಗೆ ಶಾಕ್ ನೀಡಿದೆ. ಕೆಲವರು ರಾಜ್ ಕುಂದ್ರಾರನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಇನ್ನು ಕೆಲವರು ಅವರ ಬೆಂಬಲಕ್ಕೆ ಮುಂದಾಗಿದ್ದಾರೆ. ಬಾಲಿವುಡ್ ಮಾಜಿ ನಟಿ ಸೋಮಿ ಅಲಿ ಈ ಇಡೀ ಪ್ರಕರಣದಿಂದ ಅಚ್ಚರಿಗೊಂಡಿದ್ದು, ಕಾಮಸೂತ್ರ ರಚನೆಗೊಂಡ ಈ ದೇಶದಲ್ಲಿ ನೀಲಿ ಚಿತ್ರಗಳಿಗೆ ನಿಷೇಧವಿರುವುದು ಏಕೆ ಎಂದು ಸೋಜಿಗ ವ್ಯಕ್ತಪಡಿಸಿದ್ದಾರೆ.


    ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿದ ಅವರು, ಕೇವಲ ಸೆಕ್ಸ್ ಅಥವಾ ನೀಲಿ ಚಿತ್ರಗಳ ಬಗ್ಗೆ ಮಾತಾನಾಡುವುದರ ಮೇಲಿನ ನಿಷೇಧವು ಅದರ ಬಗ್ಗೆ ಹೆಚ್ಚು ಕೂತೂಹಲ ಮೂಡಿಸುತ್ತದೆ ಎಂದರು. ನೀಲಿ ಚಿತ್ರಗಳನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸುವ ಜನರನ್ನು ತಾನು ಜಡ್ಜ್ ಮಾಡುವುದಿಲ್ಲ ಎಂದು ವಿವರಿಸುತ್ತಾ, “ಅಲ್ಲಿ ಯಾವುದೇ ರೀತಿಯ ಒತ್ತಾಯ ಇರಬಾರದು ಎಂಬುವುದು ಮುಖ್ಯ. ಅದನ್ನು ಹೊರತುಪಡಿಸಿ, ಯಾರಾದರೂ ಈ ವೃತ್ತಿ ಆಯ್ಕೆ ಮಾಡಿಕೊಂಡರೆ, ಅದು ನನಗಾಗಲಿ ಅಥವಾ ಇನ್ಯಾರಿಗೋ ಆಗಲಿ ಸಂಬಂಧಿಸಿದ ವ್ಯವಹಾರವಲ್ಲ” ಎಂದು ಹೇಳಿದ್ದಾರೆ. ನೀಲಿ ಚಿತ್ರಗಳಲ್ಲಿ ತೊಡಗಿಕೊಂಡಿರುವ ಅಥವಾ ಅದನ್ನು ತಮ್ಮ ವೃತ್ತಿಯನ್ನಾಗಿ ತೆಗೆದುಕೊಂಡಿರುವ ವ್ಯಕ್ತಿಗಳನ್ನು ನಾನು ವಿರೋಧಿಸುವುದಿಲ್ಲ ಎಂದು ಸೋಮಿ ಅಲಿ ಹೇಳಿದ್ದಾರೆ.


    ಇತ್ತೀಚೆಗೆ, ಒಟಿಟಿ ಫ್ಲಾಟ್‍ಫಾರಂ ವೀಕ್ಷಕರು, ನಿರ್ದೇಶಕರು ಮತ್ತು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿದೆ. ಏಕೆಂದರೆ , ಬೆಳ್ಳಿತೆರೆಗೆ ಹೋಲಿಸಿದರೆ ಒಟಿಟಿ ಫ್ಲಾಟ್‍ಫಾರಂಗಳಲ್ಲಿ ಸೆನ್ಸಾರ್ ಸಮಸ್ಯೆ ಇರುವುದಿಲ್ಲ. ವೆಬ್ ಸರಣಿಗಳಲ್ಲಿ ಹಸಿಬಿಸಿ ದೃಶ್ಯಗಳು ಸಾಮಾನ್ಯವಾಗುತ್ತಿರುವ ಕಾರಣ, ಒಟಿಟಿ ಫ್ಯಾಟ್‍ಫಾರಂಗಳನ್ನು ಕೂಡ ಸೆನ್ಸಾರ್‍ಶಿಪ್ ಅಡಿಗೆ ತರಬೇಕು ಎಂದು ಚರ್ಚೆಗಳು ಆರಂಭವಾಗಿದೆ.


    ದೇಶದ ಜನರು ಲೈಂಗಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲು ಆರಂಭಿಸಬೇಕಾದ ಸಮಯವಿದು ಎನ್ನುವುದು ಸೋಮಿ ಅವರ ಅಭಿಪ್ರಾಯ. ಅವರ ಪ್ರಕಾರ,  ಪ್ರೀತಿಯಲ್ಲಿ ಅನ್ಯೋನ್ಯತೆ ಇಲ್ಲದಿದ್ದರೆ ಅರ್ಥವಿಲ್ಲ, ಹಾಗಾಗಿ ಸಿನಿಮಾ ಅಥವಾ ವೆಬ್‍ಸರಣಿಗಳಲ್ಲಿ ಪ್ಯಾಶನ್ ದೃಶ್ಯಗಳನ್ನು ತೋರಿಸುವುದು ರೂಢಿಯಾಗಬೇಕು. ನೋ ಮೋರ್ ಟಿಯರ್ಸ್ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಸೋಮಿ, ಇದು ಜನರು ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾದ ಮತ್ತು ಜೀವಿಗಳಲ್ಲಿ ಲೈಂಗಿಕತೆ ಸಾಮಾನ್ಯ ಎಂಬುದನ್ನು ಒಪ್ಪಿಕೊಳ್ಳಬೇಕಾದ ಸಮಯವಿದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ನಾನು ಸಿಎಂ ಆಗಿದ್ದವನು; ನೂತನ ಸಂಪುಟದಲ್ಲಿ ಸಚಿವನಾಗಿ ಮುಂದುವರೆಯಲ್ಲ: ಜಗದೀಶ್​ ಶೆಟ್ಟರ್​

    ಮಾಜಿ ನಟಿ, ನೀಲಿ ಚಿತ್ರಗಳನ್ನು ಮೆಚ್ಚುವ ಜನರನ್ನು ಸಮರ್ಥಿಸಿಕೊಂಡರೂ, ನೀಲಿ ಚಿತ್ರಗಳ ಉದ್ಯಮದಿಂದ ಯಾವುದೇ ಕಲಾವಿದರಿಗೆ ಹಾನಿಯಾಗುವುದಕ್ಕೆ ಅವರಿಗೆ ಸ್ವೀಕಾರವಿಲ್ಲ. “ಅದನ್ನು ಹೊರತು ಪಡಿಸಿದರೆ, ನನಗೆ ನೀಲಿ ಚಿತ್ರಗಳ ಬಗ್ಗೆ ಯಾವುದೇ ವಿರೋಧವಿಲ್ಲ” ಎನ್ನುತ್ತಾರೆ ಅವರು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: