Guinness World Record: 37 ಕೆಜಿ, 18 ಅಡಿ ಉದ್ದದ ಪೆನ್ ನಿರ್ಮಿಸಿ ದಾಖಲೆ ಬರೆದ ಹೈದರಾಬಾದ್ ವ್ಯಕ್ತಿ

ಹೈದರಾಬಾದ್‌ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ್‌ ಎಂಬುವವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ. ಶ್ರೀನಿವಾಸ್ ಮತ್ತು ಅವರ ತಂಡವು 2011 ರಲ್ಲಿ ಮಾಡಿದ ದಾಖಲೆಯ ಬಾಲ್ ಪಾಯಿಂಟ್ ಪೆನ್ನಿನ ವೀಡಿಯೊ ಶೇರ್ ಮಾಡಲಾಗಿದೆ.

ಗಿನ್ನೆಸ್ ರೆಕಾರ್ಡ್ ಪೆನ್

ಗಿನ್ನೆಸ್ ರೆಕಾರ್ಡ್ ಪೆನ್

 • Share this:
  ಖಡ್ಗಕ್ಕಿಂತ (Sword) ಲೇಖನಿ (Pen) ಹರಿತ ಎಂಬ ಮಾತಿದೆ. ಈಗ ಅಕ್ಷರಗಳ (Letters) ಗಾತ್ರವೂ ಮತ್ತು ಅದರ ತೂಕವೂ (Weight) ಹೆಚ್ಚೇ.  ಒಂದು ಬರವಣಿಗೆ (Writing) ಎಲ್ಲವನ್ನೂ ಹೇಳಬಲ್ಲದು. ಹೈದರಾಬಾದ್‌ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ್‌ ಎಂಬುವವರು ಸೋಮವಾರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ. ಶ್ರೀನಿವಾಸ್ ಮತ್ತು ಅವರ ತಂಡವು 2011 ರಲ್ಲಿ ಮಾಡಿದ ದಾಖಲೆಯ ಬಾಲ್ ಪಾಯಿಂಟ್ ಪೆನ್ನಿನ ವೀಡಿಯೊ ಶೇರ್ ಮಾಡಲಾಗಿದೆ. ಹೈದರಾಬಾದ್‌ನ ಆಚಾರ್ಯ ಮಕುನೂರಿ ಶ್ರೀನಿವಾಸ್ ಹಾಗೂ ಅವರ ತಂಡ 37 ಕೆಜಿ 23 ಗ್ರಾಂ ತೂಗುವ ಪೆನ್ನೊಂದನ್ನು ನಿರ್ಮಿಸಿದೆ.

  37 ಕೆಜಿ 23 ಗ್ರಾಂ ತೂಗುವ ಪೆನ್ನಿನ ವಿಡಿಯೋವನ್ನು ಹಂಚಿಕೊಂಡ ಗಿನ್ನೆಸ್ ಬುಕ್ ಆಫ್‌ ರೆಕಾರ್ಡ್‌

  ಗಿನ್ನೆಸ್ ಬುಕ್ ಆಫ್‌ ರೆಕಾರ್ಡ್‌ ತನ್ನ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ಪೆನ್ನಿನ ವಿಡಿಯೋವನ್ನು ಹಂಚಿಕೊಂಡಿದೆ.  ಪೆನ್ನಿನ ಹಿತ್ತಾಳೆಯ ಹೊರ ಕವಚ ಒಂಬತ್ತು ಕಿಲೋ ಗ್ರಾಂ ತೂಕ ಹೊಂದಿದೆ. ಈ ಬಾಲ್‌ ಪೆನ್‌ 5.5 ಮೀಟರ್ ಅಗಲವಿದ್ದು, 18 ಅಡಿ ಉದ್ದ ಹೊಂದಿದೆ. ಏಪ್ರಿಲ್ 24, 2011 ರಂದು ಹೈದರಾಬಾದ್‌ನಲ್ಲಿ ಈ ಪೆನ್‌ನ್ನು ಮೌಲ್ಯಮಾಪನ ಮಾಡಲಾಗಿತ್ತು.

  ಇನ್ಸ್ಟಾಗ್ರಾಮ್ ರೀಲ್ ಶ್ರೀನಿವಾಸ್ ತನ್ನ ತಂಡದೊಂದಿಗೆ ದೈತ್ಯಾಕಾರದ ಬಾಲ್ ಪಾಯಿಂಟ್ ಪೆನ್ ಹೊತ್ತೊಯ್ಯುತ್ತಿರುವ ದೃಶ್ಯವನ್ನು ತೋರಿಸಿದೆ. ವಿಡಿಯೋದಲ್ಲಿ ಪುರುಷರ ತಂಡವು ಹೇಗೆ ಪೆನ್ನು ಹಿಡಿದು ದೊಡ್ಡದಾದ ಬಿಳಿ ಕಾಗದದ ಮೇಲೆ ಬರೆಯುತ್ತಿದ್ದಾರೆ ಎಂಬ ದೃಶ್ಯವನ್ನು ತೋರಿಸಿದೆ.  ಇದನ್ನೂ ಓದಿ: ಪ್ರಶಸ್ತಿ ಸ್ವೀಕರಿಸಲು ಬಾಲಕಿ ವೇದಿಕೆಗೆ ಬಂದಿದ್ದಕ್ಕೆ ಕೆಂಡಾಮಂಡಲರಾದ ಮುಸ್ಲಿಂ ವಿದ್ವಾಂಸಕ

  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಶೀರ್ಷಿಕೆಯಲ್ಲಿ ವಿಶ್ವದ ಅತಿದೊಡ್ಡ ಬಾಲ್‌ಪಾಯಿಂಟ್ ಪೆನ್ 5.5 ಮೀಟರ್ ಅಥವಾ 18 ಅಡಿ ಉದ್ದ ಇದೆ. ಪೆನ್ 37.23 ಕೆಜಿಗಿಂತ ಸ್ವಲ್ಪ ಹೆಚ್ಚು ತೂಕ ಹೊಂದಿದೆ. ಪೆನ್ನನ್ನು ಶ್ರೀನಿವಾಸ್ ವಿನ್ಯಾಸಗೊಳಿಸಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ ಹೇಳಿದೆ.


  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಿವಿಧ ಪೆನ್‌ಗಳು

  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಇದುವರೆಗೆ ಜನರು ಮಾಡಿರುವ ವಿವಿಧ ಪೆನ್‌ಗಳನ್ನು ಬಹಿರಂಗ ಪಡಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಫಿಶರ್ ಸ್ಪೇಸ್ ಪೆನ್ ಕಂ USA ಮಾಡಿದ ಸ್ಪೇಸ್ ಪೆನ್  ಅತ್ಯಂತ ವಿಭಿನ್ನ ಪೆನ್ ಆಗಿದೆ.

  ವಿಸ್ಕೋ-ಎಲಾಸ್ಟಿಕ್ ಶಾಯಿ ವಿತರಿಸಲು ವಿಶೇಷ ಸಾರಜನಕ-ಒತ್ತಡದ ಕಾರ್ಟ್ರಿಡ್ಜ್‌ ಬಳಕೆ ಮಾಡುತ್ತದೆ. ಈ ಪೆನ್ನುಗಳು ಸಂಪೂರ್ಣವಾಗಿ ತಲೆಕೆಳಗಾಗಿ ಕಾರ್ಯ ನಿರ್ವಹಿಸುತ್ತವೆ. ಮತ್ತು ತೀವ್ರವಾದ ಶಾಖ ಮತ್ತು ಶೀತ, ನೀರೊಳಗಿನ ಮತ್ತು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆ ಒಳಗೊಂಡಂತೆ ವ್ಯಾಪಕ ಪರಿಸರ ಪರಿಸ್ಥಿತಿ ಅಡಿ ಕೆಲಸ ಮಾಡುತ್ತವೆ.

  ಅಪೊಲೊ 7 ಮಿಷನ್‌ನಲ್ಲಿ ಬಾಹ್ಯಾಕಾಶದಲ್ಲಿ ಸ್ಪೇಸ್ ಪೆನ್ ಅನ್ನು ಮೊದಲ ಬಾರಿಗೆ 1968 ರಲ್ಲಿ ಬಳಕೆ ಮಾಡಲಾಯ್ತು. ಜೊತೆಗೆ ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ ಒಳಗೊಂಡಂತೆ ಗಗನಯಾತ್ರಿಗಳಿಗೆ ಪ್ರಮಾಣಿತ ಪೆನ್ ಆಗಿ ಇದು ಮಾರ್ಪಟ್ಟಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವರದಿ ಮಾಡಿದೆ.

  ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶದ ಅಧ್ಯಯನಕ್ಕೆ ಸಿಎಂ ಬೊಮ್ಮಾಯಿ‌ ಸೂಚನೆ

  ಪೆನ್ ಕುರಿತು ವಿವಿಧ ರೀತಿಯ ಕಾಮೆಂಟ್ ಗಳು

  ಶ್ರೀನಿವಾಸ್ ಅವರು ತಯಾರು ಮಾಡಿರುವ ಪೆನ್ ಕ್ಷಿಪಣಿಯಂತೆ ಕಾಣುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪೆನ್ ಅದರ ತುದಿಯೊಂದಿಗೆ ಸಣ್ಣ ಲೋಹದ ಚೆಂಡಿನ ರೋಲಿಂಗ್ ಮೂಲಕ ಬಳಕೆ ಮಾಡುವ ವೇಳೆ ಶಾಯಿ ವಿತರಣೆ ಮಾಡುತ್ತದೆ. ತುಂಬಾ ಜನರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೆನ್ನಿನ ಶಾಯಿಯು ಒಂದು ಹಂತದಲ್ಲಿ ಸೋರಿಕೆಯಾದರೆ ಏನಾಗುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
  Published by:renukadariyannavar
  First published: