• Home
  • »
  • News
  • »
  • trend
  • »
  • Smart Bed: ನಿದ್ರೆ ಮೇಲೆ ಕಣ್ಣಿಡಲು ಬರ್ತಿದೆ ಸ್ಮಾರ್ಟ್ ಬೆಡ್, ನೆಮ್ಮದಿಯಾಗಿ ಮಲಗಲು ಸೆನ್ಸಾರ್ ಹಾಸಿಗೆ ಬೆಸ್ಟ್​

Smart Bed: ನಿದ್ರೆ ಮೇಲೆ ಕಣ್ಣಿಡಲು ಬರ್ತಿದೆ ಸ್ಮಾರ್ಟ್ ಬೆಡ್, ನೆಮ್ಮದಿಯಾಗಿ ಮಲಗಲು ಸೆನ್ಸಾರ್ ಹಾಸಿಗೆ ಬೆಸ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಚಲನೆ, ಭಂಗಿ ಮತ್ತು ಉಸಿರಾಟದ ಮಾದರಿಯಂತಹ ನಿದ್ರೆಯ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡಲು ಸ್ಮಾರ್ಟ್ ಬೆಡ್ ಶೀಘ್ರದಲ್ಲೇ ಬಳಕೆ ಬರಲಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಲ್ಲಾ ತಯಾರಿ ನಡೆಸುತ್ತಿದೆ.

  • Share this:

ನಿದ್ರೆ (Sleep) ಮನುಷ್ಯನಿಗೆ ಆಹಾರಕ್ಕಿಂತ ಅಗತ್ಯವಾಗಿದೆ. ನಿದ್ರೆ ಉತ್ತಮವಾಗಿದ್ದರೆ ಆರೋಗ್ಯವು (Health) ಉತ್ತಮವಾಗಿರುತ್ತದೆ. ಒಬ್ಬರಿಗೆ ಪ್ರತಿನಿತ್ಯ 7-8 ತಾಸು ನಿದ್ರೆಯ ಇವಶ್ಯಕತೆ ಇರುತ್ತದೆ. ನಿದ್ರಾ ಹೀನತೆಯೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ (Health Problem) ಕಾರಣವಾಗುತ್ತದೆ. ಅದರಲ್ಲೂ ಮಾನಸಿಕ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ರಾತ್ರಿ ಎಷ್ಟು ಚೆನ್ನಾಗಿ ನಿದ್ರೆ () ಮಾಡುತ್ತೇವೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ಹೈದರಾಬಾದ್ ಸಂಶೋಧಕರು ಸ್ಮಾರ್ಟ್ ಬೆಡ್ (Smart Bad) ಒಂದನ್ನು ಆವಿಷ್ಕರಿಸಿದ್ದಾರೆ. ಈ ಸ್ಮಾರ್ಟ್ ಬೆಡ್ ನೀವು ನಿದ್ರಿಸುವಾಗ ನಿಮ್ಮ ಚಲನೆ, ಭಂಗಿ ಮತ್ತು ಉಸಿರಾಟದ ಮಾದರಿ ಎಲ್ಲವನ್ನೂ ಪರೀಕ್ಷಿಸಲು ಸಹಾಯ (Help) ಮಾಡುತ್ತದೆ.


ಶೀಘ್ರದಲ್ಲೇ ಸ್ಮಾರ್ಟ್ ಬೆಡ್ ಬಳಕೆಗೆ


ದೇಹದ ಚಲನೆ, ಭಂಗಿ ಮತ್ತು ಉಸಿರಾಟದ ಮಾದರಿಯಂತಹ ನಿದ್ರೆಯ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡಲು ಸ್ಮಾರ್ಟ್ ಬೆಡ್ ಶೀಘ್ರದಲ್ಲೇ ಬಳಕೆಗೆ ಬರಲು ಎಲ್ಲ ರೀತಿಯ ತಯಾರಿ ನಡೆಸುತ್ತಿದೆ. ಹಾಸಿಗೆಯ ವಿಶೇಷತೆಯೆಂದರೆ ಇದು ಸೆನ್ಸಾರ್‌ಗಳ ಒಂದು ಶ್ರೇಣಿಯಾಗಿದ್ದು, ನೀವು ಈ ಹಾಸಿಗೆ ಮೇಲೆ ಮಲಗಿ ನಿದ್ದೆ ಮಾಡುವಾಗ ನಿಮ್ಮನ್ನು ಪರಿಶೀಲಿಸುವ ಕಾರ್ಯ ನಡೆಸುತ್ತದೆ ಮತ್ತು ಇದು ಹಳೆಯ ಹಾಸಿಗೆಯ ಮೇಲೂ ಸಹ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ಸಂಶೋಧಕರು.


ಹೈದರಾಬಾದ್ ಸಂಶೋಧಕರಿಂದ ಸೆನ್ಸಾರ್ ಹಾಸಿಗೆ ಅಭಿವೃದ್ಧಿ


ಕಳೆದ ಏಳು ವರ್ಷಗಳಿಂದ ಈ ಸ್ಮಾರ್ಟ್ ಬೆಡ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿರುವ ಹೈದರಾಬಾದ್‌ನ ಬಿಟ್ಸ್‌ ಪಿಲಾನಿ ಸಂಶೋಧಕರು ಈಗ ಅದನ್ನು ಬಿಡುಗಡೆ ಮಾಡಲು ಪೇಟೆಂಟ್‌ಗಾಗಿ ಕಾಯುತ್ತಿದ್ದಾರೆ. ಸಂಶೋಧನೆಯನ್ನು ಅಡ್ವಾನ್ಸ್ಡ್ ಮೆಟೀರಿಯಲ್ಸ್ ಇಂಟರ್‌ಫೇಸ್‌ಗಳಲ್ಲಿ ಪ್ರಕಟಿಸಲಾಗಿದೆ. ಈ ಸೆನ್ಸಾರ್ ಹಾಸಿಗೆಯು ನೀವು ನಿದ್ದೆ ಮಾಡುವಾಗ ನಿಮ್ಮನ್ನು ಪರಿಶೀಲಿಸುವ ಕೆಲಸವನ್ನು ಮಾಡುತ್ತದೆ ಎಂದು ಸಂಶೋಧಕರ ತಂಡ ತಿಳಿಸಿದೆ.


ಇದನ್ನೂಓದಿ: Pregnancy Stress: ಗರ್ಭಿಣಿಯರು ಒತ್ತಡ ನಿವಾರಿಸಲು ಇಷ್ಟು ಮಾಡಿದ್ರೆ ಸಾಕಂತೆ


“ನಾವು ಸಂವೇದಕಗಳ ಒಂದು ಶ್ರೇಣಿಯನ್ನು ಬಳಸುತ್ತೇವೆ. ನಿಯತಾಂಕಗಳನ್ನು ಅವಲಂಬಿಸಿ ಇದನ್ನು ಒಬ್ಬರೇ ಅಥವಾ ಬಹು ವ್ಯಕ್ತಿಗಳು ಬಳಸುತ್ತಾರೆಯೇ ಎಂಬುದನ್ನು ಅವಲಂಬಿಸಿ, ಸಂವೇದಕಗಳ ಸಂಖ್ಯೆಯು ಬದಲಾಗುತ್ತದೆ'' ಎಂದು ಸಂಶೋಧಕ ತಂಡದಲ್ಲಿ ಒಬ್ಬರಾದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರೀಕ್ಷಿತ್ ಸಹತಿಯಾ ಹೇಳಿದರು. ಇವರು ಈ ಸ್ಮಾರ್ಟ್ ಹಾಸಿಗೆಯನ್ನು ತಮ್ಮ ವಿದ್ಯಾರ್ಥಿ ವಿವೇಕ್ ಅಡೆಪು ಅವರೊಂದಿಗೆ ಸೇರಿಕೊಂಡು ಅಭಿವೃದ್ಧಿಪಡಿಸಿದರು.


ಒಂದು ಪ್ರತ್ಯೇಕ ಸಂವೇದಕದ (ಸೆನ್ಸಾರ್) ಲ್ಯಾಬ್ ವೆಚ್ಚವು 20 ರೂ. ಆಗಿದ್ದರೆ, ಅದು ಮಾರುಕಟ್ಟೆಯಲ್ಲಿ ಸುಮಾರು 50-60 ರೂ. ವೆಚ್ಚವಾಗುತ್ತದೆ. ಹಾಸಿಗೆಯ ಗಾತ್ರವನ್ನು ಅವಲಂಬಿಸಿ ಸಂವೇದಕಗಳ ಒಂದು ಶ್ರೇಣಿಯು 64×64 ಅಥವಾ 128×128 ಆಗಬಹುದು ಎಂದು ಸಹತಿಯಾ ಹೇಳಿದರು. ಬಳಕೆದಾರರು 200 ರೂ. ವೆಚ್ಚದ ನಿಯಂತ್ರಕವನ್ನು ಸಹ ಖರೀದಿಸಬೇಕಾಗುತ್ತದೆ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಡೇಟಾವನ್ನು ಮೇಲ್ವಿಚಾರಣೆ ಮಾಡಬಹುದು ಎಂದು ಅವರು ಹೇಳಿದರು.


ನಿದ್ರಿಸುತ್ತಿರುವ ಭಂಗಿ ತಿಳಿಸುತ್ತೆ


“ಇಲ್ಲಿ ಬಳಕೆದಾರನು ಆರಂಭದಲ್ಲಿ ಎತ್ತರ, ತೂಕ ಇತ್ಯಾದಿ ಮೂಲಭೂತ ವಿವರಗಳನ್ನು ಸೆಲ್ಯೂಲರ್ ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಈ ಸ್ಮಾರ್ಟ್ ಬೆಡ್ ಮೇಲೆ ಕುಳಿತಾಗ ಅಥವಾ ಮಲಗಿದಾಗ, ಒತ್ತಡ ಸಂವೇದಕಗಳು ಸ್ಥಾನವನ್ನು ನಕ್ಷೆ ಮಾಡುತ್ತವೆ ಮತ್ತು ನೀವು ನಿದ್ರಿಸುತ್ತಿರುವ ಭಂಗಿ ಸರಿಯಾಗಿದೆಯೇ ಅಥವಾ ಸರಿಪಡಿಸಿಕೊಳ್ಳುವ ಅಗತ್ಯವಿದೆಯೇ ಎಂದು ಹೇಳುತ್ತದೆ” ಎಂಬುದರ ಬಗ್ಗೆ ಸಾಹತಿಯಾ ಹೇಳಿದರು.


ಹಾಸಿಗೆಯು ಉಸಿರಾಟದ ಮಾದರಿಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಆದರೆ ಬಳಕೆದಾರರು ನಿದ್ರಿಸುವಾಗ ಮಾಸ್ಕ್ ಅನ್ನು ಧರಿಸಬೇಕಾಗಿರುವುದರಿಂದ ಇದು ಸ್ವಲ್ಪ ಅನಾನುಕೂಲವಾಗಬಹುದು ಎಂದು ಅವರು ಹೇಳಿದರು. ಶಿಶುಗಳು ಅಥವಾ ವಯಸ್ಸಾದವರ ಹಾಸಿಗೆ ಒದ್ದೆಯಾದಾಗ ಎಚ್ಚರಗೊಳಿಸಲು ಮನೆಯಲ್ಲಿ ಇದನ್ನು ಬಳಸಬಹುದು ಮತ್ತು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಇದನ್ನು ಬಳಸಬಹುದು ಎಂದುಸಂಶೋಧಕರು ತಿಳಿಸಿದ್ದಾರೆ.


ಇದನ್ನೂ ಓದಿ: Health Tips: ನಿದ್ದೆ ಮಾಡುವಾಗಲೂ ಒಳಉಡುಪು ಧರಿಸಿಯೇ ಇರುತ್ತೀರಾ? ಇದರಿಂದಾಗುವ ಆರೋಗ್ಯ ಸಮಸ್ಯೆ ಒಂದೆರಡಲ್ಲ


ಕೆಲಸದ ಒತ್ತಡ, ಬ್ಯುಸಿ ಲೈಫ್‌ನಲ್ಲಿ ನಿದ್ರೆಯ ಕೊರತೆ


ಅನುಭವಿಸುತ್ತಿರುವವರಿಗೆ ಸರಿಯಾದ ನಿದ್ರೆ ಮಾಡಲು ಈ ಸೆನ್ಸಾರ್ ಹಾಸಿಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಶೀಘ್ರದಲ್ಲೇ ಮಾರುಕಟ್ಟೆಗೆ ಸೆನ್ಸಾರ್ ಹಾಸಿಗೆ ಬರಲಿದ್ದು, ಇದರ ಉಪಯೋಗ ನೀವು ಪಡೆಯಬಹುದು.

Published by:ಪಾವನ ಎಚ್ ಎಸ್
First published: