I Die Like Real Men ಎಂದವನಿಗೆ ಹೈದರಾಬಾದ್​ ಪೊಲೀಸರು ಕೊಟ್ಟರು ಸಕ್ಕತ್​ ಪಂಚ್​!

news18
Updated:May 4, 2018, 11:48 PM IST
I Die Like Real Men ಎಂದವನಿಗೆ ಹೈದರಾಬಾದ್​ ಪೊಲೀಸರು ಕೊಟ್ಟರು ಸಕ್ಕತ್​ ಪಂಚ್​!
Image : FB
news18
Updated: May 4, 2018, 11:48 PM IST
ಹೈದರಾಬಾದ್​: ಅಪ್ರಾಪ್ತ ವಯಸ್ಕರು ರಸ್ತೆಯಲ್ಲಿ ವಾಹನ ಓಡಿಸಿದರೆ ಅವರ ಪೋಷಕರನ್ನು ಬಂಧಿಸುವ ಕಾರ್ಯಕ್ಕೆ ಚಾಲನೆ ನೀಡಿ ಫೇಮಸ್​ ಆಗಿದ್ದ ಹೈದರಾಬಾದ್​ ಪೊಲೀಸರು ಇದೀಗ ವ್ಯಂಗ್ಯ ಫೇಸ್​ಬುಕ್​ ಪೋಸ್ಟ್​ನಿಂದ ಮತ್ತೊಮ್ಮೆ ಫೇಮಸ್​ ಆಗಿದ್ದಾರೆ.

ಹೌದು! ಚಾಲಕರ ಸುರಕ್ಷತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್​ ಇರುವ ಬೆಂಗಳೂರು ಪೊಲೀಸರ ಹಾದಿಯನ್ನೇ ಅನುಸರಿಸಲು ಮುಂದಾಗಿರುವ ಹೈದರಾಬಾದ್ ಪೊಲೀಸರು, 'ಹೆಲ್ಮೆಟ್​ ಹಾಕದೇ ಬೈಕ್​ ಓಡಿಸುತ್ತೇನೆ. ಅಪಘಾತದಲ್ಲಿ ಸತ್ತರೆ ರಿಯಲ್​ ಮ್ಯಾನ್​ ರೀತಿಯಲ್ಲಿ ಸಾಯುತ್ತೇನೆ' ಎಂದು ಸ್ಟಿಕ್ಕರ್​ ಅಂಟಿಸಿ ಬೈಕ್​ ಓಡಿಸುತ್ತಿದ್ದವನ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ಹೈದರಾಬಾದ್ ಪೊಲೀಸರು ವಾರ್ನಿಂಗ್​ ನೀಡಿದ್ದಾರೆ.



ಕೃಷ್ಣ ರೆಡ್ಡಿ ಎಂಬವರಿಗೆ ಸೇರಿದ ಬೈಕ್​ನ ಚಾಲಕ ''No Helmet! I Die Like Real Men.” ಎಂದು ಬರೆಸಿಕೊಂಡಿದ್ದ. ಸಾರ್ವಜನಿಕರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೈದರಾಬಾದ್ ಪೊಲೀಸರಿಗೆ ಈ ಚಿತ್ರ ಕಣ್ಣಿಗೆ ಬಿದ್ದಿದ್ದು, ಕೂಡಲೇ ಬೈಕ್​ ನಂಬರ್​ ಪತ್ತೆ ಹಚ್ಚಿ ವ್ಯಂಗ್ಯವಾಗಿ 'ನೀವಿನ್ನೂ ಹೆಚ್ಚಿನ ಕಾಲ ಬದುಕಬೇಕು ಎಂಬ ಆಸೆ ನಮಗಿದೆ, ನಾವು ನಿಮ್ಮನ್ನ “LIVE LIKE REAL MEN” ನೋಡಲು ಇಚ್ಚಿಸುತ್ತೇವೆ. ಹೀಗಾಗಿ ದಯಮಾಡಿ ಹೆಲ್ಮೆಟ್​ ಧರಿಸಿ' ಎಂದು ಬೈಕ್​ನ ದಾಖಲೆ ಸಹಿತ ಪೇಸ್​ಬುಕ್ ಪೋಸ್ಟ್​ ಮಾಡಿ ಸ್ವೀಟ್​ ವಾರ್ನಿಂಗ್​ ನೀಡಿದ್ದಾರೆ.

ಸದ್ಯ ಹೈದರಾಬಾದ್​ ಪೊಲೀಸರ ಈ ಪೋಸ್ಟ್​ ವೈರಲ್​ ಆಗಿದೆ. ಇದರೊಂದಿಗೆ ಕೆಲ ದಿನಗಳ ಹಿಂದೆ ಡ್ರೈವಿಂಗ್​ ಲೈಸೆನ್ಸ್ ಇಲ್ಲದೇ ಗಾಡಿ ಚಲಾಯಿಸಿ ಸಿಕ್ಕಿಬಿದ್ದಿದ್ದ 26 ಮಕ್ಕಳ ಪೋಷಕರ ಮೇಲೆ ಪೊಲೀಸರು ದಂಢ ಕಟ್ಟುವಂತೆ ಆದೇಶಿಸಿದ್ದರು. ಈ ನಡೆಗೂ ಕೂಡಾ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ಕೇಳಿಬಂದಿದೆ.
First published:May 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ