ಪತ್ನಿಯಿಂದ ಸಾಲ ಪಡೆದು ಖರೀದಿಸಿದ ಲಾಟರಿಗೆ ಸಿಕ್ತು ಬಂಪರ್ ಬಹುಮಾನ: ಹೈದರಾಬಾದ್​ ರೈತ ಈಗ ಕೋಟಿಗೊಬ್ಬ..!

ಉದ್ಯೋಗವಿಲ್ಲದೆ ರಿಕ್ಕಲಾ ವಿಲಾಸ್ ಭಾರತಕ್ಕೆ ಮರಳಿದ್ದರು. ಇದಕ್ಕೂ ಮುನ್ನ ಹೆಂಡತಿಯಿಂದ 20 ಸಾವಿರ ಸಾಲ ಪಡೆದಿದ್ದ ವಿಲಾಸ್, ಆ ಹಣದಿಂದ ಲಾಟರಿ ಟಿಕೆಟ್​​ ಖರೀದಿಸಿದ್ದರು.

zahir | news18-kannada
Updated:August 6, 2019, 5:41 PM IST
ಪತ್ನಿಯಿಂದ ಸಾಲ ಪಡೆದು ಖರೀದಿಸಿದ ಲಾಟರಿಗೆ ಸಿಕ್ತು ಬಂಪರ್ ಬಹುಮಾನ: ಹೈದರಾಬಾದ್​ ರೈತ ಈಗ ಕೋಟಿಗೊಬ್ಬ..!
ಸಾಂದರ್ಭಿಕ ಚಿತ್ರ
  • Share this:
ಅದೃಷ್ಟ ಎಂಬುದು ಯಾರಿಗೆ ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಅದು ಸಾಲದ ರೂಪದಲ್ಲೂ ಬರುತ್ತೆ ಎಂಬುದಕ್ಕೆ  ಕೋಟಿ ಗೆದ್ದ ಭಾರತೀಯ ರೈತನೊಬ್ಬ ಸಾಕ್ಷಿ. ಹೌದು ದುಬೈನಲ್ಲಿ ಉದ್ಯೋಗದ ಹುಡುಕಾಟದಲ್ಲಿ ಹೈದರಾಬಾದ್​ ಮೂಲದ ರಿಕ್ಕಲಾ ವಿಲಾಸ್ ಇದೀಗ ಕೋಟಿಗೊಬ್ಬ.

ಒಂದಷ್ಟು ಕನಸಿನೊಂದಿಗೆ ಗಲ್ಫ್​ ರಾಷ್ಟ್ರಕ್ಕೆ ಕಾಲಿಟ್ಟಿದ್ದ ವಿಲಾಸ್​ಗೆ ಉದ್ಯೋಗದಲ್ಲಿ ಅದೃಷ್ಟ ಕೈ ಹಿಡಿಯಲಿಲ್ಲ. 45 ದಿನಗಳ ಕಾಲ ಯುಎಇಯಲ್ಲಿ ಕೆಲಸದ ಹುಡುಕಾಟದಲ್ಲಿದ್ದರು. ಇದರ ನಡುವೆ ಕಟ್ಟಡ ನಿರ್ಮಾಣ ಹಾಗೂ ಚಾಲಕರಾಗಿಯೂ ಕೆಲಸ ಮಾಡಿದ್ದರು. ಆದರೆ ಅದ್ಯಾವುದು ಪರ್ಮನೆಂಟ್ ಆಗಿರಲಿಲ್ಲ.

ಹೀಗಾಗಿ ಉದ್ಯೋಗವಿಲ್ಲದೆ ರಿಕ್ಕಲಾ ವಿಲಾಸ್ ಭಾರತಕ್ಕೆ ಮರಳಿದ್ದರು. ಇದಕ್ಕೂ ಮುನ್ನ ಹೆಂಡತಿಯಿಂದ 20 ಸಾವಿರ ಸಾಲ ಪಡೆದಿದ್ದ ವಿಲಾಸ್, ಆ ಹಣದಿಂದ ಲಾಟರಿ ಟಿಕೆಟ್​​ ಖರೀದಿಸಿದ್ದರು. ಇದೀಗ ಬಿಗ್ ರಾಫೆಲ್ ಡ್ರಾದಲ್ಲಿ ಅದೇ ಟಿಕೆಟ್​ಗೆ ಬಂಪರ್ ಬಹುಮಾನ ಬಂದಿದೆ. ವಿಲಾಸ್ ಖರೀದಿಸಿದ ಲಾಟರಿಗೆ 15 ಮಿಲಿಯನ್ ಯುಎಸ್ ಡಾಲರ್ ಮೊತ್ತ ಹೊಡೆದಿದೆ. ಅಂದರೆ ಭಾರತದಲ್ಲಿ ಇದರ ಮೌಲ್ಯ ಬರೋಬ್ಬರಿ 28.43 ಕೋಟಿ ರೂ.

ಈ ಬಗ್ಗೆ ಆಗಸ್ಟ್​ 3 ರಂದು ಕರೆ ಮಾಡಿ ತಿಳಿಸಿರುವ ಬಿಗ್ ರಾಫೆಲ್ ಲಾಟರಿ ಸಂಘಟಕರು 4 ಮಿಲಿಯನ್ ಅಮೆರಿಕ್ ಡಾಲರ್​ ಬಹುಮಾನ ಗೆದ್ದಿದ್ದೀರಾ, ಅದನ್ನು ಸ್ವೀಕರಿಸಲು ಆಗಮಿಸಿ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಲಾಸ್​ಗೆ ಕೆಲಸದಲ್ಲಿ ಕೈ ಕೊಟ್ಟಿದ್ದ ಅದೃಷ್ಟ ಲಕ್ಷ್ಮಿ ಲಾಟರಿ ಮೂಲಕ ಕೈ ಹಿಡಿದಿದೆ ಎನ್ನಬಹುದು.

ಇದನ್ನೂ ಕ್ಲಿಕ್ ಮಾಡಿ: ಅಪ್ಪನ ಮಗಳು ಅಪ್ಪನೇ..! ಖತರ್ನಾಕ್ ಪ್ಲ್ಯಾನ್​ ರೂಪಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ..! ವಿಡಿಯೋ ವೈರಲ್

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...