ಸದ್ಯ ಮದುವೆಗಳು ನಡೆಯುತ್ತಿದ್ದು, ಎಲ್ಲೆಡೆ ಮದುವೆಯ ವೈಬ್ (Vibe) ಕಾಣಿಸುತ್ತಿದೆ. ಮದುವೆ ವಿಚಾರಕ್ಕೆ ಬಂದರೆ ಎಲ್ಲರ ಕಣ್ಣು ವಧು-ವರರ ಮೇಲಿರುತ್ತದೆ. ಅವರ ಫೋಟೋಗಳು, ಚುಂಬನ, ಒಬ್ಬರನ್ನೊಬ್ಬರು ಎತ್ತುವುದು ಹೀಗೆ ಹಲವು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಗಮನ ಸೆಳೆಯುತ್ತಿವೆ. ಇದರಲ್ಲಿ ಹಲವು ತಮಾಷೆ, ಆಘಾತಕಾರಿ ಮತ್ತು ಅಚ್ಚರಿಯ ವೀಡಿಯೋಗಳು ಹೊರಬರುತ್ತವೆ. ಅದೇ ರೀತಿ ಪತಿ ಪತ್ನಿಯರ ಮತ್ತೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ (Video) ನೊಢ್ತಾ ಇದ್ರೆ ಅಬ್ಬಬ್ಬಾ ಯಾವ ಹರಸಾಹಸನೂ ಬೇಡ ಅಂತ ಸುಮ್ಮನೆ ಇರಬಹುದು.
ಈಗಿನ ಕಾಲದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಮದುವೆ ಅಂದರೆ ನಾಚಿಕೊಳ್ಳುವುದು, ಹೆದರುವುದು ಎಲ್ಲಾ ಕಮ್ಮಿ. ಯಾಕಂದ್ರೆ ಮೊದಲೇ ಒಬ್ಬರನ್ನೊಬ್ಬರು ನೋಡಿಕೊಂಡಿರುತ್ತಾರೆ ಮತ್ತು ಮೊಬೈಲ್ಗಳು ಬಂದಿರುವುದರಿಂದ ಅದರಲ್ಲೇ ಮಾತಾಡಿಕೊಂಡಿರುತ್ತಾರೆ. ನಾಚಿಕೊಂಡರೇ ಉಳಿದವರು ಆಶ್ಚರ್ಯವಾಗುವ ಯುಗದಲ್ಲಿ ನಾವು ಇದ್ದೇವೆ.
ಸದ್ಯ ಪತಿ ಪತ್ನಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ವೀಡಿಯೊದಲ್ಲಿ, ವರನಿಗೆ ವಧುವನ್ನು ಕರೆದುಕೊಂಡು ಹೋಗುವಂತೆ ಅವನ ಸ್ನೇಹಿತರು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಕೊನೆಗೆ ಪತಿ ಹುಡುಗಿ, ಹೆಂಡತಿ, ಹುಡುಗಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನ ಮಾಡುತ್ತಾನೆ. ಆದರೆ, ಆ ಹುಡುಗಿ ತುಂಬಾ ನಾಚಿಕೊಳ್ಳುತ್ತಾಳೆ. ಎಷ್ಟು ಎತ್ತಲು ವರನು ಪ್ರಯತ್ನಿಸಿದರೂ ಕೂಡ ಆತನಿಗೆ ಪ್ರತಿಕ್ರಿಯಿಸುವುದೇ ಇಲ್ಲ. ಆದರೂ ಕೂಡ ವರನು ಎತ್ತುತ್ತಾನೆ.
ಇದನ್ನೂ ಓದಿ: ಅತ್ತೆಗಾಗಿ ಡ್ಯಾನ್ಸ್ ಮಾಡಿದ ಸೊಸೆಮುದ್ದು! ಸಖತ್ ವೈರಲ್ ಆಯ್ತು ವಿಡಿಯೋ
ಅದರ ನಂತರ ಆಗುವದೇ ಒಂದು ದೊಡ್ಡ ಅವಗಢ. ಗಂಡ ಹೆಂಡತಿಯ ತೂಕವನ್ನು ತಾಳಲಾರದೇ ದುಬುಕ್ಕನೇ ಕೆಳಗೆ ಇಬ್ಬರೂ ಒಟ್ಟಿಗೆ ಕೆಳಗೆ ಬೀಳುತ್ತಾರೆ. ಮೊದಲಿಗೆ, ವರನು ವಧುವನ್ನು ಎತ್ತಲು ಎರಡು ಬಾರಿ ಪ್ರಯತ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅದರ ನಂತರವೂ ಅವನು ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಒಂದು ಅಲಂಕೃತಗೊಂಡ ವೇದಿಕ ಮೇಲೆ ಇಬ್ಬರೂ ನಿಂತಿರುತ್ತಾರೆ. ಅಲ್ಲಿ ನಡೆಯುವ ಸಂಪೂರ್ಣ ಘಟನೆ ಇದು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದಿವೆ.
@HasnaZarooriHai ಹೆಸರಿನ ಐಡಿ ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ "ಧೈರ್ಯದಿಂದ ವರ್ತಿಸಿ" ಎಂಬ ತಮಾಷೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು 'ಜನರು ಏನು ಹೇಳುತ್ತಾರೆಂದು ಹೋಗಬೇಡಿ' ಎಂಬ ಕಮೆಂಟ್ ಮಾಡಲಾಗಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ, ಜನರು ನಿಮ್ಮ ತಪ್ಪುಗಳನ್ನು ನೋಡಿ ನಗಲು ಸಿದ್ಧರಾಗಿದ್ದಾರೆ' ಎಂದೂ ಹೇಳಿದ್ದಾರೆ. ಕೇವಲ 30 ಸೆಕೆಂಡ್ಗಳ ಈ ವಿಡಿಯೋ ಸುಮಾರು 9 ಸಾವಿರ ವೀಕ್ಷಣೆಗಳನ್ನು ಪಡೆದಿದೆ, ನೂರಾರು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
लोगो के कहने पर ना चले अपने सामर्थ्य अनुसार ही कार्य करे,
लोग आपकी गलतियों पर हसने को तैयार खड़े हैं। pic.twitter.com/bHKFgobkXu
— Hasna Zaroori Hai (@HasnaZarooriHai) January 2, 2023
ಇದೇ ರೀತಿಯಾಗಿ ಅದೆಷ್ಟೋ ಘಟನೆಗಳು ಮದುವೆ ಸಮಾರಂಭಗಳಲ್ಲಿ ನಡೆದಿರುತ್ತದೆ. ಆದರೆ, ಯಾವುದೂ ಕೂಡ ಬೆಳಕಿಗೆ ಬಂದಿರುವುದಿಲ್ಲ. ಇದೀಗ ವೈರಲ್ ಆಗ್ತಾ ಇರುವ ಸುದ್ದಿ ಅಂತೂ ನಮ್ಮ ಬೆವರನ್ನು ಸುರಿಸಿ ಬಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ