Viral News: ಏಳೇಳು ಜನ್ಮಕ್ಕೂ ಇಂತ ಹೆಂಡ್ತಿಯರು ಬೇಡಪ್ಪಾ! ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ನೊಂದ ಪತಿಯರು

ವಟ ಸಾವಿತ್ರಿ ವೃತದಂದು ಅಶ್ವತ್ಥ್ ಮರಕ್ಕೆ ದಾರ ಸುತ್ತಿ, ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸ್ತಾರೆ. ಆದರೆ ಇಲ್ಲಿ ಪತಿಯರೇ ಪೂಜೆ, ವೃತ ಮಾಡಿದ್ದಾರೆ. ಅರಳಿ ಮರ ಸುತ್ತಿ, ದಾರ ಸುತ್ತಿ, ಪ್ರಾರ್ಥನೆ ಮಾಡಿದ್ದಾರೆ. ಅರೇ ಎಷ್ಟು ಒಳ್ಳೆ ಗಂಡಂದಿರಪ್ಪಾ ಅಂತ ನೀವು ಖುಷಿಯಾಗ್ಬೇಡಿ, ಅಸಲಿ ವಿಚಾರ ಬೇರೇನೇ ಇದೆ.

ಹೆಂಡತಿಯರ ವಿರುದ್ಧ ಗಂಡಂದಿರ ಪೂಜೆ

ಹೆಂಡತಿಯರ ವಿರುದ್ಧ ಗಂಡಂದಿರ ಪೂಜೆ

  • Share this:
ಮಹಾರಾಷ್ಟ್ರ: ಮಹಿಳೆಯರು (Women) ತಮ್ಮ ಗಂಡಂದಿರ (Husband) ಸಲುವಾಗಿ ಅನೇಕ ಪೂಜೆ (Worship), ವೃತ ಇತ್ಯಾದಿಗಳನ್ನು ಮಾಡುತ್ತಾರೆ. ಏಳೇಳು ಜನ್ಮಕ್ಕೂ ಇವರೇ ನನ್ನ ಗಂಡನಾಗಲಿ, ನನ್ನ ಗಂಡನ ಆಯುಷ್ಯ ಜಾಸ್ತಿಯಾಗಲಿ, ಅವರ ಆರೋಗ್ಯ (Health) ವೃದ್ಧಿಯಾಗಲಿ ಅಂತ ಆಲದ ಮರ, ಅರಳಿ ಮರ, ಅಶ್ವತ್ಥ್ ವೃಕ್ಷಕ್ಕೆಲ್ಲ ಪೂಜೆ ಮಾಡುತ್ತಾರೆ. ವಟ ಸಾವಿತ್ರಿ ವೃತದಂದು (Vata Savithri Vruth) ಅಶ್ವತ್ಥ್ ಮರಕ್ಕೆ ದಾರ ಸುತ್ತಿ, ಪೂಜೆ ಮಾಡಿ, ಪ್ರಾರ್ಥನೆ (Prayer) ಸಲ್ಲಿಸ್ತಾರೆ. ಆದರೆ ಇಲ್ಲಿ ಪತಿಯರೇ ಪೂಜೆ, ವೃತ ಮಾಡಿದ್ದಾರೆ. ಅರಳಿ ಮರ ಸುತ್ತಿ, ದಾರ ಸುತ್ತಿ, ಪ್ರಾರ್ಥನೆ ಮಾಡಿದ್ದಾರೆ. ಅರೇ ಎಷ್ಟು ಒಳ್ಳೆ ಗಂಡಂದಿರಪ್ಪಾ ಅಂತ ನೀವು ಖುಷಿಯಾಗ್ಬೇಡಿ, ಅಸಲಿ ವಿಚಾರ ಇಲ್ಲೇ ಇರೋದು. ಹೀಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ ಗಂಡಸರು ಏಳೇಳು ಜನ್ಮಕ್ಕೂ ಇವಳೇ ನನ್ನ ಹೆಂಡ್ತಿಯಾಗಲಿ, ಆಕೆ ಆರೋಗ್ಯ ಹೆಚ್ಚಾಗಲಿ, ಆಯುಷ್ಯ ವೃದ್ಧಿಸಲಿ ಅಂತೇನೂ ಪ್ರಾರ್ಥನೆ ಮಾಡಿಲ್ಲ. ಬದಲಾಗಿ ಏಳೇಳು ಜನ್ಮಕ್ಕೂ ನಮಗೆ ಇಂತ ಹೆಂಡತಿಯರು ಬೇಡಪ್ಪಾ ಅಂತ ಪ್ರಾರ್ಥನೆ ಮಾಡಿದ್ದಾರೆ.

ಇಂತ ಹೆಂಡತಿಯರು ಬೇಡಪ್ಪ ಅಂತ ಗಂಡಂದಿರ ಪೂಜೆ

ತಮ್ಮ ಹೆಂಡತಿಯರ ವಿರುದ್ಧ ನೊಂದ ಪುರುಷರ ಗುಂಪು ಮಹಾರಾಷ್ಟ್ರದಲ್ಲಿ ಆಂದೋಲನವನ್ನು ನಡೆಸಿತು. ನಾವು ನಮ್ಮ ಮನೆಯಲ್ಲಿ ಅನ್ಯಾಯಕ್ಕೆ ಒಳಗಾಗಿದ್ದೇವೆ ಅಂತ ಆರೋಪಿಸಿದ್ದಾರೆ. ವಟ ಸಾವಿತ್ರಿ ವೃತದಂದು ಮಹಿಳೆಯರು ಅರಳಿ ಮರ ಸುತ್ತಿ, ಅದಕ್ಕೆ ದಾರ ಸುತ್ತಿ ಪ್ರಾರ್ಥನೆ ಮಾಡುವಂತೆ ಇವರೂ ಮರ ಸುತ್ತಿದ್ದಾರೆ. ಇಂತ ಹೆಂಡತಿಯರು ನಮಗೆ ಏಳೇಳೂ ಜನ್ಮಕ್ಕೂ ಬೇಡಪ್ಪಾ ಅಂತ ಪ್ರಾರ್ಥಿಸಿದ್ದಾರೆ.

ಔರಂಗಾಬಾದ್‌ನಲ್ಲಿ ನಡೆಯಿತು ಪತ್ನಿ ಪೀಡಿತರ ಪೂಜೆ

ಪತ್ನಿಯರಿಂದ ಶೋಷಣೆಗೆ ಒಳಗಾದ ಪುರುಷರು ಅರಳಿ ಮರದ ಸುತ್ತಲೂ 108 ಪ್ರದಕ್ಷಿಣಾಕಾರವಾಗಿ ಸುತ್ತು ಹಾಕಿ, ಅದೇ ಹೆಂಡತಿ ಮತ್ತೆ ಬೇಡಪ್ಪ ಅಂತ  ಪ್ರಾರ್ಥಿಸಿದರು. ಈ ಹಿಂದೆ ಪತ್ನಿಯರಿಂದ ದೌರ್ಜನ್ಯಕ್ಕೆ ಒಳಗಾದ ಹಲವು ಪುರುಷರು ಪತ್ನಿ ಪೀಡಿತರ ಆಶ್ರಮ ಸ್ಥಾಪಿಸಿದ್ದರು. ಇದೀಗ ಅದೇ ಆಶ್ರಮದ ವತಿಯಿಂದ ಈ ರೀತಿಯ ವಿಶೇಷ ಪೂಜೆ ಮಾಡಲಾಗಿದೆ.

ಇದನ್ನೂ ಓದಿ: Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ವಟ ಸಾವಿತ್ರಿ ವೃತಕ್ಕೂ ಮುನ್ನವೇ ಪತಿಯರಿಂದ ಪೂಜೆ

ಇಂದು ವಟ ಸಾವಿತ್ರಿ ವೃತವಿತ್ತು. ಆದರೆ ವಟ ಸಾವಿತ್ರಿ ವೃತಕ್ಕೂ ಮುನ್ನವೇ ಪುರುಷರೆಲ್ಲ ಸೇರಿ ಈ ರೀತಿಯ ವಿಶೇಷ ಪೂಜೆ ಮಾಡಿದ್ದಾರೆ. "ಆದ್ದರಿಂದ, ಅದಕ್ಕೂ ಒಂದು ದಿನ ಮೊದಲು, ನಾವು ಇಲ್ಲಿ ಒಂದು ಪೀಪಲ್ ಮರವನ್ನು ಪೂಜಿಸಿದ್ದೇವೆ, ಮತ್ತೆ ಅದೇ ಜೀವನ ಸಂಗಾತಿಯನ್ನು ಪಡೆಯಬಾರದು ಎಂದು ಪ್ರಾರ್ಥಿಸುತ್ತೇವೆ" ಎಂದು ಆಶ್ರಮದ ಸಂಸ್ಥಾಪಕ ಭರತ್ ಫುಲಾರೆ  ಹೇಳಿದ್ದಾರೆ.

ಮಹಿಳಾ ಪರ ಇರುವ ಕಾನೂನುಗಳ ದುರುಪಯೋಗ

"ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವು ಕಾನೂನುಗಳನ್ನು ಮಾಡಲಾಗಿದೆ, ಆದರೆ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ. “ಈಗ, ಪುರುಷರು ಎದುರಿಸುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಕಾನೂನುಗಳನ್ನು ಮಾಡುವ ಅವಶ್ಯಕತೆಯಿದೆ. ಹೀಗಾಗಿ ಈ ಆಂದೋಲನ ನಡೆಸಿದ್ದೇವೆ ಅಂತ ಭರತ್ ಫುಲಾರೆ ಹೇಳಿದ್ದಾರೆ.

ಇದನ್ನೂ ಓದಿ: Marriage High Drama: ಇನ್ನೇನು ತಾಳಿ ಕಟ್ಬೇಕು, ಅಷ್ಟರಲ್ಲಿ ಮದುವೆನೇ ಕ್ಯಾನ್ಸಲ್ ಆಯ್ತು!

ಇಂದು ವಟ ಸಾವಿತ್ರಿ ವೃತ

ವಟ ಸಾವಿತ್ರಿ ಉಪವಾಸವನ್ನು ಅಥವಾ ವ್ರತವನ್ನು ಇಂದು ಆಚರಿಸಲಾಯ್ತು. ಇಂದು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಆಲದ ಮರವನ್ನು ವಿಧಿ - ವಿಧಾನಗಳಂತೆ ಪೂಜಿಸಲಾಗುತ್ತದೆ ಮತ್ತು ಆಲದ ಮರಕ್ಕೆ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ವಟ ಸಾವಿತ್ರಿ ವ್ರತದ ದಿನದಂದು ಉಪವಾಸವನ್ನು ಇಟ್ಟುಕೊಳ್ಳುತ್ತಾರೆ.
Published by:Annappa Achari
First published: