Rape: ಹೆಂಡತಿಯನ್ನು ರೇಪ್ ಮಾಡಲು ಸ್ನೇಹಿತನನ್ನು ಮನೆಗೆ ಕರೆಸಿಕೊಂಡ ಗಂಡ! ಮುಂದೇನಾಯ್ತು ಗೊತ್ತಾ?

ದಂಪತಿಗೆ ಮದುವೆಯಾಗಿ 23 ವರ್ಷಗಳಾಗಿವೆ ಮತ್ತು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಇದರ ಹೊರತಾಗಿಯೂ ಪತಿ ಮನಸ್ಥಿತಿ ಬೇರೆಯಾಗಿತ್ತು. ಆತನಿಗೆ ತನ್ನ ಪತ್ನಿ ಬೇರೊಬ್ಬನೊಂದಿಗೆ ಮಲಗಿದ್ದನ್ನು ನೋಡಬೇಕಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸ್ವಂತ ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಸಂಚು ರೂಪಿಸಿದ್ದ  ಗಂಡನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ. ವಾಸ್ತವವಾಗಿ, ವ್ಯಕ್ತಿಗೆ ತನ್ನ ಹೆಂಡತಿ ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದಿರುವುದನ್ನು ಕಣ್ಣಾರೆ ನೋಡಬೇಕೆಂಬ ಆಸೆಯಿತ್ತು. ಇದಕ್ಕಾಗಿ ಪತಿ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡು  ತನ್ನ ಪತ್ನಿಯೊಂದಿಗೆ ಮಲಗಲು ಹೇಳುತ್ತಾನೆ. ಆದರೆ ಪತ್ನಿಗೆ ಮಾತ್ರ ತನ್ನ ಗಂಡ ಇಂತಹ ಮನಸ್ಥಿತಿ ಹೊಂದಿದ್ದಾನೆ ಎಂದು ತಿಳಿದಿರಲಿಲ್ಲ. ಮಾತ್ರವಲ್ಲದೆ ಸಂಚು ರೂಪಿಸಿ ಸ್ನೇಹಿತರಿಂದ ಅತ್ಯಾಚಾರ ಮಾಡಲು ಬಯಸುತ್ತಾನೆ ಎಂಬುದು ಆಕೆಗೆ ಗೊತ್ತಿರಲಿಲ್ಲ.

    ಎರಡು ವರ್ಷಗಳ ನಂತರ ಗಂಡನಿಗೆ ಅವಕಾಶ ಸಿಕ್ಕಿತು

    ಸಿಂಗಾಪುರದಲ್ಲಿ ಈ ಘಟನೆ ನಡೆದಿದೆ. ದಂಪತಿಗೆ ಮದುವೆಯಾಗಿ 23 ವರ್ಷಗಳಾಗಿವೆ ಮತ್ತು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಇದರ ಹೊರತಾಗಿಯೂ ಪತಿ ಮನಸ್ಥಿತಿ ಬೇರೆಯಾಗಿತ್ತು. ಆತನಿಗೆ ತನ್ನ ಪತ್ನಿ ಬೇರೊಬ್ಬನೊಂದಿಗೆ ಮಲಗಿದ್ದನ್ನು ನೋಡಬೇಕಾಗಿತ್ತು. ಇದಕ್ಕಾಗಿ ತನ್ನ ಸ್ನೇಹಿತರ ಬಳಿ ಹೇಳಿ ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಪ್ಲಾನ್​ ರೂಪಿಸಿದ್ದ. ಇದೇ ಅವಕಾಶಕ್ಕಾಗಿ ಅನೇಕ ಸಮಯದಿಂದ ಕಾದು ಕುಳಿತ್ತಿದ್ದ. ನಂತರ ಎರಡು ವರ್ಷಗಳ ನಂತರ ಅವಕಾಶ ಬಂದಾಗ 48 ವರ್ಷದ ಪತಿ ಈ ರೀತಿಯ ಕೃತ್ಯ ಮಾಡಿದ್ದಾನೆ.

    ಮದ್ಯದೊಂದಿಗೆ ನಿದ್ರೆಯ ಮಾತ್ರೆ ಬೆರೆಸಿದ

    ಪತಿ ಮದ್ಯದಲ್ಲಿ ನಿದ್ರೆಯ ಮಾತ್ರೆಯನ್ನು ಬೆರೆಸಿ ಹೆಡತಿಗೆ ನೀಡಿದ್ದಾನೆ. ಇಬ್ಬರೂ ಮಲಗುವ ಕೋಣೆಗೆ ಬಂದಾಗ, ಗಂಡ ತನ್ನ ಹೆಂಡತಿ ಕಣ್ಣಿಗೆ ಬಟ್ಟೆ ಕಟ್ಟುತ್ತಾನೆ. ಆಕೆ ನಿದ್ರೆಯ ಮಾತ್ರೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಆದರೆ, ಅಪರಿಚಿತ ವ್ಯಕ್ತಿ ರೂಮಿಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ ತಕ್ಷಣ ಮಹಿಳೆಗೆ ಎಚ್ಚರವಾಗಿದೆ. ಜೋರಾಗಿ ಬೊಬ್ಬೆ ಹೊಡೆದಿದ್ದಾಳೆ. ವ್ಯಕ್ತಿ ಗಾಬರಿಗೊಂಡು ಓಡಿ ಹೋಗಿದ್ದಾನೆ. ಇಡೀ ವಿಷಯ ಬೆಳಕಿಗೆ ಬಂದ ನಂತರ ಮಹಿಳೆ ತನ್ನ ಪತಿ ವಿರುದ್ಧ ದೂರು ನೀಡಿದ್ದಾಳೆ.

    ಗುರುವಾರಂದು ಸಿಂಗಾಪುರದ ಹೈಕೋರ್ಟ್ ಈ ವಿಷಯದಲ್ಲಿ ತೀರ್ಪು ನೀಡಿತು. ಸಂತ್ರಸ್ತೆಯ ಪತಿ ಮತ್ತು ಆತನ ಸ್ನೇಹಿತನಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಸ್ನೇಹಿತನ ಜೊತೆ ಎಲ್ಲವನ್ನು ಹಂಚಿಕೊಳ್ಳುತ್ತಿದ್ದ

    ಮಾಹಿತಿಯ ಪ್ರಕಾರ, ಮಹಿಳೆಯ ಪತಿ ಮತ್ತು ಆತನ ಸ್ನೇಹಿತ 2015 ರಿಂದಲೇ ಪರಿಚಿತರು. ಗಂಡ ತನ್ನ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತನ್ನ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳುತ್ತಿದ್ದನು. ಮತ್ತೊಬ್ಬ ಪುರುಷ ತನ್ನ ಹೆಂಡತಿಯೊಂದಿಗೆ ಮಲಗುವುದನ್ನು ನೋಡಲು ಬಯಸುತ್ತೇನೆ ಎಂದು ಆತನ ಸ್ನೇಹಿತನೊಂದಿಗೆ ಹೇಳಿದ್ದನು.

    ಇದನ್ನು ಓದಿ: Paige Spiranac: ವಿಶ್ವದ ಹಾಟೆಸ್ಟ್ ಗಾಲ್ಫ್ ಆಟಗಾರ್ತಿಯ ನಗ್ನ ಚಿತ್ರ ವೈರಲ್ ಮಾಡಿದ್ದ ಪ್ರಿಯಕರ! ಇದೆಂಥಾ ಸೇಡು..

    ಅಷ್ಟು ಮಾತ್ರವಲ್ಲದೆ, ಆತ ತನ್ನ ಸಹೋದ್ಯೋಗಿಯನ್ನು ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಮನವೊಲಿಸಿದನು ಮತ್ತು ಡಿಸೆಂಬರ್ 31, 2017 ರಂದು ಆತನನ್ನು ಆಕೆಯಿದ್ದ ಕೋಣೆಗೆ ಆಹ್ವಾನಿಸಿದನು. ಮೊದಲು ಪತಿ ಪ್ರಜ್ಞಾಹೀನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ಅದರ ನಂತರ ತನ್ನ ಸ್ನೇಹಿತನಿಗೆ ತನ್ನ ಹೆಂಡತಿಯ ಬಳಿಗೆ ಹೋಗುವಂತೆ ಸೂಚಿಸಿದನು. ಈ ವೇಳೆ ಮಹಿಳೆಯ ಮಕ್ಕಳು ಮತ್ತು ಕೆಲಸದಾಕೆ ಮನೆಯ ಇನ್ನೊಂದು ಭಾಗದಲ್ಲಿ ಮಲಗಿದ್ದರು.

    ಮಹಿಳೆ ಗಂಡನ ಸ್ನೇಹಿತನನ್ನು ಕಂಡುಹಿಡಿದಳು

    ಸ್ನನೇಕತ ಕದ್ದು ಮಹಿಳೆಯೊಂದಿಗೆ ಬಲವಂತದ ಸಂಬಂಧವನ್ನು ಹೊಂದಲು ಪ್ರಯತ್ನಿಸಿದನು. ಆದರೆ ವಿಫಲನಾಗಿದ್ದನು. ಅಪರಿಚಿತ ವ್ಯಕ್ತಿ ತನ್ನನ್ನು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿರುವುದನ್ನು ಅರಿತ ಮಹಿಳೆ ಕಣ್ಣು ತೆರೆದು ನೋಡೊದಳು. ಇದನ್ನು ಕಂಡ ವ್ಯಕ್ತಿ ಓಡಿಹೋಗಿದ್ದಾನೆ.

    ಇದನ್ನು ಓದಿ: Teacher: ನಾಳೆ ಶಾಲೆಗೆ ಹೋಗಲು ಇಂದೇ ಮೇಕಪ್ ಮಾಡ್ಕೊತಾರೆ ಈ ಟೀಚರ್!

    ಮಹಿಳೆ ವ್ಯಕ್ತಿಯನ್ನು ಕಂಡು ತನ್ನ ಪತಿ ಮತ್ತು ಅವನ ಸ್ನೇಹಿತನನ್ನು ತಪ್ಪೊಪ್ಪಿಗೆ ಪತ್ರವನ್ನು ಬರೆಯುವಂತೆ ಮಾಡಿದ್ದಾಳೆ. ಇದಾದ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
    Published by:Harshith AS
    First published: