Wedding Anniversary: ವಿವಾಹ ವಾರ್ಷಿಕೋತ್ಸವಕ್ಕಾಗಿ ವರ್ಷದಿಂದ ಇರಿಸಿದ್ದ ಕೇಕ್ ತಿಂದು ಹೋದ ಗಂಡನ ಸಂಬಂಧಿಕರು; ಆ ಬಳಿಕ ಹೆಂಡತಿ ಮಾಡಿದ್ದೇನು?

ಅವರು ನಿಮ್ಮ ಅಮೂಲ್ಯ ಕ್ಷಣಕ್ಕೆ ಕಾರಣವಾಗಬೇಕಿದ್ದ ಕೇಕ್​ ತಿನ್ನುವ ಮೂಲಕ ಅದನ್ನು ಹಾಳು ಮಾಡಿದ್ದಾರೆ. ನಿಮ್ಮ ಗಂಡನ ಸಂಬಂಧಿಕರು ಮಿತಿ ಮೀರಿ ವರ್ತಿಸಿದ್ದಾರೆ. ಈಗ ಅದನ್ನು ಸರಿಪಡಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಕೆಲವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮದುವೆ ವಾರ್ಷಿಕೋತ್ಸವ (Wedding Anniversary) ಪ್ರತಿಯೊಂದು ದಂಪತಿಗೆ ಅನ್ಯೋನ್ಯ ನೆನಪು. ಅದರಲ್ಲೂ ಮಹಿಳೆಯರು ಈ ದಿನವನ್ನು ವಿಶೇಷವಾಗಿ ಆಚರಿಸಲು ಇಷ್ಟಪಡುತ್ತಾರೆ. ತಮ್ಮ ಜೀವನದ ಪ್ರಮುಖ ದಿನ ವಿಶೇಷವಾಗಿ ಇರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಅದರಂತೆ ಇಲ್ಲೊಬ್ಬ ಹೆಂಡತಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಲು ಒಂದು ವರ್ಷದಿಂದ ಫ್ರೀಜರ್‌ನಲ್ಲಿ ಇರಿಸಿದ್ದ ಕೇಕ್ ಅನ್ನು (Frozen Cake in the fridge for a year) ಹನಿಮೂನ್​ಗೆ (Honeymoon) ಹೋಗಿದ್ದ ಸಂದರ್ಭದಲ್ಲಿ ಆ ಕೇಕ್​ಅನ್ನು ಗಂಡನ ಸಂಬಂಧಿಕರು ತಿಂದು ಬಿಟ್ಟಿದ್ದಾರೆ. ಆ ಬಳಿಕ ಆಕೆ ಹನಿಮೂನ್​ನಿಂದ  ಹಿಂದಿರುಗಿ ಬಂದು ಕೇಕ್​ ನೋಡಿದಾಗ ಎಲ್ಲಿಯೂ ಕಾಣುವುದಿಲ್ಲ. ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಲು ಒಂದು ವರ್ಷದವರೆಗೆ ಫ್ರಿಜ್‌ನಲ್ಲಿ ಇರಿಸಲಾಗಿರುವ ಕೇಕ್ ಅನ್ನು ಗಂಡನ ಸಂಬಂಧಿಕರು ತಿಂದಿದ್ದರು ಎಂಬ ವಿಷಯ ಹೆಂಡತಿಗೆ ಗೊತ್ತಾದಾಗ ಅವಳ ಪರಿಸ್ಥಿತಿ ಏನಾಗಬೇಡ.

    ಪ್ರತಿ ದಿನ ನಾವು ಅತ್ತೆ ಮತ್ತು ಸೊಸೆಯರ ನಡುವಿನ ಕಲಹಗಳನ್ನು ನೋಡುತ್ತೇವೆ ಮತ್ತು ಕೇಳುತ್ತೇವೆ. ಮತ್ತು ಇದಕ್ಕಾಗಿಯೇ ಭಾರತದಲ್ಲಿ ಟೆಲಿ ಧಾರಾವಾಹಿಗಳು ಒಂದು ಉತ್ತಮ ಉದಾಹರಣೆಯಾಗಿದೆ. ಇಲ್ಲಿಯೂ ಸಹ ಒಂದು ರೋಚಕ ಘಟನೆಯನ್ನು ರೆಡ್​ಇಟ್ (Reddit)​, ಜನಪ್ರಿಯ ಸಾಮಾಜಿಕ ಮಾಧ್ಯಮ ತಾಣದಲ್ಲಿ ಹಂಚಿಕೊಂಡಿದೆ. ಕಳೆದ ಗುರುವಾರ ಹಂಚಿಕೊಂಡ ಪೋಸ್ಟ್‌ನಲ್ಲಿ, ಯುವತಿಯೊಬ್ಬಳು ತನ್ನ ಗಂಡನ ಸಂಬಂಧಿಕರು ತಮ್ಮ ಮಧುಚಂದ್ರದಲ್ಲಿದ್ದಾಗ ತಮ್ಮ ವಿವಾಹದ ವಾರ್ಷಿಕೋತ್ಸವ ಸಂಭ್ರಮಾಚರಣೆಗೆ ಒಂದು ವರ್ಷದಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಕೇಕ್​ಅನ್ನು ನಾವು ಮಧುಚಂದ್ರದಲ್ಲಿ ಇದ್ದಾಗ ತಿಂದಿದ್ದರು. ಅದರಿಂದ ಆಕೆಗೆ ಆದ  ನೋವು, ಅಸಮಾಧಾನ ಹಂಚಿಕೊಂಡಿದ್ದಾಳೆ.

    ಈ ಪೋಸ್ಟ್ ಅನ್ನು ID ID Expensive_Praline_71 ಖಾತೆಯಿಂದ ಹಂಚಿಕೊಳ್ಳಲಾಗಿದೆ. ಗಂಡನ ಸಂಬಂಧಿಕರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಒಂದು ವರ್ಷದವರೆಗೆ ಫ್ರಿಜ್‌ನಲ್ಲಿ ಹೆಪ್ಪುಗಟ್ಟಿದ ಕೇಕ್ ಅನ್ನು ತಿನ್ನುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

    ಹಣಕಾಸಿನ ತೊಂದರೆಯಿಂದಾಗಿ ನಮ್ಮ ಮಧುಚಂದ್ರ ಕೇವಲ ನಾಲ್ಕು ದಿನಕ್ಕೆ ಸೀಮಿತವಾಗಿತ್ತು. ಈ ಸಂದರ್ಭದಲ್ಲಿ, ಗಂಡನ ಸಂಬಂಧಿಕರು ಹೋಟೆಲ್ ವೆಚ್ಚ ಮತ್ತು ವಿಮಾನ ಪ್ರಯಾಣದ ಉಳಿತಾಯಕ್ಕಾಗಿ ಆಕೆಯ ಮನೆಯಲ್ಲಿ ಮೂರು ದಿನ ಉಳಿದುಕೊಂಡಿದ್ದರು. ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ತಿಳಿಸಿದ್ದಾರೆ.

    ''ನಾನು ಮತ್ತು ನನ್ನ ಗಂಡ ನಮ್ಮ ಮಧುಚಂದ್ರದಿಂದ ಹಿಂದಿರುಗುವ ಹೊತ್ತಿಗೆ, ಕೇಕ್ ಖಾಲಿಯಾಗಿತ್ತು. ಕೇಕ್‌ಗೆ ಹೆಚ್ಚಿನ ಬೆಲೆ ಇರಲಿಲ್ಲ. ಆದಾಗ್ಯೂ, ನಾವು ಅದನ್ನು ನಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಗಾಗಿ ಇರಿಸಿದ್ದೇವೆ ಎಂದು ಅವರಿಗೆ ಸ್ಪಷ್ಟಪಡಿಸಿದ್ದೇವೆ, ”ಎಂದು ಅವರು ಹೇಳಿದರು.

    ಅವಳು ಬರೆದಳು, ನಾವು ಅವರ ಜೊತೆ ಮಾತನಾಡಿದಾಗ, ಒಂದು ವರ್ಷ ಪೂರ್ತಿ ಕೇಕ್ ಅನ್ನು ಫ್ರೀಜ್ ಮಾಡುವುದು ತುಂಬಾ ಕಿರಿಕಿರಿ ಎಂದು ಅವರು ಹೇಳಿದರು. ಅವರು ನಮಗೆ ಒಂದು ಉಪಕಾರ ಮಾಡಬಹುದಿತ್ತು. ಅವರು ಸುಲಭವಾಗಿ ಇನ್ನೊಂದು ಕೇಕ್ ಅನ್ನು ಖರೀದಿಸಬಹುದಿತ್ತು. ಆದರೆ ನಾನು ಯಾವಾಗಲೂ ಮಾಡಲು ಬಯಸುತ್ತಿದ್ದ ದಿನಚರಿಯನ್ನು ಹಾಳು ಮಾಡಿದರು. ಆಕೆಯ ಸಂಕಟಕ್ಕೆ ಕಾರಣ ಆಕೆಯ ಗಂಡನ ಸಂಬಂಧಿಕರು. ಆಕೆಯ ಬಯಕೆಯ ಬಗ್ಗೆ ಸ್ಪಷ್ಟವಾಗಿ ಹೇಳಿದರೂ ಅವರು ಅದನ್ನು ತಿನ್ನುತ್ತಿದ್ದರು ಎಂದು ಹೇಳಿದ್ದಾಳೆ. ಅನೇಕ ನೆಟ್ಟಿಗರು ಈ ಘಟನೆಯನ್ನು ಓದಿ ಯುವತಿಯ ಕಷ್ಟವನ್ನು ಸಮರ್ಥಿಸಿಕೊಂಡರು.

    ಇದನ್ನು ಓದಿ: Internet Doomsday: ಸೆಪ್ಟೆಂಬರ್ 30ರಂದು ವಿಶ್ವಾದ್ಯಂತ ಇಂಟರ್ನೆಟ್ ಬಂದ್; ಮೊಬೈಲ್,ಲ್ಯಾಪ್​​ಟಾಪ್​​ ಕೆಲಸ ಮಾಡಲ್ಲ!

    ನೀವು ನಿಮ್ಮ ಹನಿಮೂನ್‌ಗೆ ಹೋಗುವ ಹೊತ್ತಿಗೆ ನೀವು ನಿಜವಾಗಿಯೂ ನಿಮ್ಮ ಮನೆಯಲ್ಲಿ ಉಳಿಯಲು ಅವಕಾಶ ನೀಡುವ ಮೂಲಕ ಅವರಿಗೆ ಉಪಕಾರ ಮಾಡಿದ್ದೀರಿ. ಆದರೆ ಒಬ್ಬ ಬಳಕೆದಾರರು ಪ್ರತಿಯಾಗಿ ಅವರು ನಿಮ್ಮ ಅಮೂಲ್ಯ ಕ್ಷಣಕ್ಕೆ ಕಾರಣವಾಗಬೇಕಿದ್ದ ಕೇಕ್​ ತಿನ್ನುವ ಮೂಲಕ ಅದನ್ನು ಹಾಳು ಮಾಡಿದ್ದಾರೆ. ನಿಮ್ಮ ಗಂಡನ ಸಂಬಂಧಿಕರು ಮಿತಿ ಮೀರಿ ವರ್ತಿಸಿದ್ದಾರೆ. ಈಗ ಅದನ್ನು ಸರಿಪಡಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಕೆಲವರು ಹೇಳಿದ್ದಾರೆ.
    Published by:HR Ramesh
    First published: