Marriage: ಮದುವೆಯಾದ ಮೊದಲ ರಾತ್ರಿಯೇ ಹೆಂಡತಿಗೆ ಶಾಕ್ ನೀಡಿದ ಪತಿರಾಯ..!
Husband and Wife: ಪೊಟ್ಕಾ ಗ್ರಾಮದ ನಿವಾಸಿ ಪಲ್ಲವಿ ಜಮ್ಶೆಡ್ಪುರದ ಜೈಮಲ್ ಮಂಡಲ್ ಅವರನ್ನು ವಿವಾಹವಾಗಿದ್ದರು. ಮಧುಚಂದ್ರದ ರಾತ್ರಿಯೇ ಜೈಮಲ್ ತನ್ನ ಪತ್ನಿಯ ಮುಂದೆ 2 ವರ್ಷದೊಳಗೆ ಐಎಎಸ್ ಅಧಿಕಾರಿಯಾದರೆ ಮಾತ್ರ ಮದುವೆ ಆಗುತ್ತದೆ ಎಂಬ ವಿಚಿತ್ರ ಷರತ್ತನ್ನು ಮುಂದಿಟ್ಟರು. ಪಲ್ಲವಿಗೆ ಅದೊಂದು ತಮಾಷೆ ಅನ್ನಿಸಿತು. ಮರುದಿನ ಬೆಳಿಗ್ಗೆ ಜೈಮಲ್ ಸಂದರ್ಶನವಿದೆ ಎಂದು ಹೇಳಿ ಹೋದರು ಮತ್ತು ಹಿಂತಿರುಗಲಿಲ್ಲ.
ಮದುವೆಯೆಂಬುದು(Marriage) ಪ್ರತಿಯೊಬ್ಬರ ಬದುಕಿನಲ್ಲೂ ಮರೆಯಲಾಗದ ಬಂಧ.. ಮದುವೆಯ ಬಗ್ಗೆ ಗಂಡಾಗಲಿ(Men) ಹೆಣ್ಣಾಗಲಿ(Women) ಸಾಕಷ್ಟು ಕನಸುಗಳನ್ನು(Dream) ಇಟ್ಟುಕೊಂಡಿರುತ್ತಾರೆ.. ಮದುವೆಯಾದ ಬಳಿಕ ನಾನು ಹೀಗೆ ಇರಬೇಕು ಹಾಗೆ ಇರಬೇಕು ಎಂಬ ಕನಸು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ..ಅದರಲ್ಲೂ ಮದುವೆಯಾದ ಮೊದಲ ರಾತ್ರಿ(First Night) ಹೀಗೆ ಇರಬೇಕು.. ನನ್ನ ಸಂಗಾತಿಯೊಡನೆ ತನ್ನ ಮನಸ್ಸಿನ ಭಾವನೆಗಳನ್ನು(Feelings) ಹಂಚಿಕೊಳ್ಳಬೇಕು ತನ್ನೆಲ್ಲಾ ಆಕಾಂಕ್ಷೆ ಆಸೆಗಳನ್ನು ಆತನ ಮುಂದೆ ವ್ಯಕ್ತಪಡಿಸಬೇಕು ಎಂದು ಎಷ್ಟೋ ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ.. ಆದರೆ ಈ ರೀತಿ ಸಾವಿರಾರು ಕನಸುಗಳನ್ನು ಇಟ್ಟುಕೊಂಡು ಮದುವೆಯಾದ ಮಹಿಳೆಯೊಬ್ಬಳು, ತನ್ನ ಗಂಡನ ವಿಚಿತ್ರ ಬೇಡಿಕೆಯಿಂದ ಮೊದಲ ರಾತ್ರಿಯ ದಿನವೇ ನರಕ ಅನುಭವಿಸುವಂತಾಗಿದೆ..
ಐಎಎಸ್ ಅಧಿಕಾರಿಯಾಗಲು ಮೊದಲ ರಾತ್ರಿಯ ದಿನವೇ ಒತ್ತಾಯ..
ತನ್ನ ಮೊದಲ ರಾತ್ರಿ ಸವಿಯಾಗಿ ಇರಬೇಕು ಎಂದು ಕನಸು ಕಂಡಿದ್ದ ಜಾರ್ಖಂಡ್ ನ ಮದುಮಗಳಿಗೆ ಆ ಮೊದಲ ರಾತ್ರಿಯೇ ನರಕವಾಗಿ ಪರಿಣಮಿಸಿದೆ..ಹೌದು..
ಜಾರ್ಖಂಡ್ ನ ಜಮ್ಶೆಡ್ಪುರ ನಗರದಲ್ಲಿ ಮದುವೆಯಾದ ಮೊದಲ ರಾತ್ರಿಯ ದಿನವೇ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಐಎಎಸ್ ಅಧಿಕಾರಿಯಾಗಬೇಕು ಎಂದು ಒತ್ತಡ ಹೇರಿದ್ದಾನೆ.. ಇಷ್ಟೇ ಅಲ್ಲದೆ ತನ್ನ ಹೆಂಡತಿಗೆ ನೀನು IAS ಅಧಿಕಾರಿ ಯಾಗುವವರೆಗೂ ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಸಂವಹನ ನಿಲ್ಲಿಸಿದ್ದಾನೆ.. ಇದ್ರಿಂದ ಮದುವೆಯ ಬಗ್ಗೆ ಸಾಕಷ್ಟು ಕನಸುಕಂಡಿದ್ದ ನವವಧುವಿಗೆ ಆಘಾತವಾಗಿದೆ.
ಪೊಟ್ಕಾ ಗ್ರಾಮದ ನಿವಾಸಿ ಪಲ್ಲವಿ ಜಮ್ಶೆಡ್ಪುರದ ಜೈಮಲ್ ಮಂಡಲ್ ಅವರನ್ನು ವಿವಾಹವಾಗಿದ್ದರು. ಮಧುಚಂದ್ರದ ರಾತ್ರಿಯೇ ಜೈಮಲ್ ತನ್ನ ಪತ್ನಿಯ ಮುಂದೆ 2 ವರ್ಷದೊಳಗೆ ಐಎಎಸ್ ಅಧಿಕಾರಿಯಾದರೆ ಮಾತ್ರ ಮದುವೆ ಆಗುತ್ತದೆ ಎಂಬ ವಿಚಿತ್ರ ಷರತ್ತನ್ನು ಮುಂದಿಟ್ಟರು. ಪಲ್ಲವಿಗೆ ಅದೊಂದು ತಮಾಷೆ ಅನ್ನಿಸಿತು. ಮರುದಿನ ಬೆಳಿಗ್ಗೆ ಜೈಮಲ್ ಸಂದರ್ಶನವಿದೆ ಎಂದು ಹೇಳಿ ಹೋದರು ಮತ್ತು ಹಿಂತಿರುಗಲಿಲ್ಲ.
ಜೈಮಲ್ ಮಂಡಲ್ MBA ಪದವೀಧರನಾಗಿದ್ದು ಬ್ಯಾಂಕ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾನೆ.. ತನ್ನ ಹೆಂಡತಿ ಐಎಎಸ್ ಅಧಿಕಾರಿಯಾಗಬೇಕು ಎಂದು ಮದುವೆಯ ಮೊದಲ ರಾತ್ರಿಯ ದಿನ ಷರತ್ತು ಹಾಕಿಯ ಹೋದವನು ಈವರೆಗೂ ಮನೆಗೆ ಬಂದಿಲ್ಲ.. ಹೆಂಡತಿ ಕರೆ ಮಾಡಿದರೆ ಆಕೆಯ ಕರೆಗಳನ್ನು ಸ್ವೀಕರಿಸಲು ನಿರಾಕರಣೆ ಮಾಡುತ್ತಿದ್ದಾನೆ.. ಅಲ್ಲದೇ ಆಕೆಗೆ ನೀನು ಐಎಎಸ್ ಅಧಿಕಾರಿ ಆದರೆ ಮಾತ್ರ ನಮ್ಮ ಮದುವೆಯ ಮುಂದುವರೆಯುತ್ತದೆ .. ಇಲ್ಲದಿದ್ದರೆ ವಿಚ್ಛೇದನ ನೀಡಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ.. ಗಂಡನ ಈ ಮಾತುಗಳನ್ನು ಕೇಳಿ ಆಘಾತಕ್ಕೆ ಒಳಗಾದ ಹೆಂಡತಿ, ಗಂಡನ ಮನವೊಲಿಕೆಗೆ ಯತ್ನಿಸಿದ್ದಾಳೆ.. ಯಾವುದೇ ಪ್ರಯೋಜನವಾಗದೇ ಇದ್ದಾಗ ಹೆಂಡತಿ ಚಿಂತೆಗೀಡಾಗಿದ್ದಾರೆ..
ತನ್ನ ಹೆಂಡತಿ ಐಎಎಸ್ ಅಧಿಕಾರಿಯಾಗುವಂತೆ ಒತ್ತಡ ಹಾಕಿ ಮನೆ ಬಿಟ್ಟು ಹೋಗಿ ಹೆಂಡತಿಯಿಂದ ಅಂತರ ಕಾಪಾಡಿಕೊಂಡು ಇದ್ದಾನೆ.. ಸದ್ಯ ಗಂಡನ ವಿಚಿತ್ರ ಬೇಡಿಕೆ ಕಂಡು ಕಂಗಾಲಾಗಿರುವ ಪತ್ನಿ, ನನ್ನ ಗಂಡನಿಗೆ ಬುದ್ಧಿವಾದ ಹೇಳಿ ಸಂಸಾರ ಸರಿ ಮಾಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.. ಸಧ್ಯ ಪೂರ್ವ ಸಿಂಗ್ಭೂಮ್ನ ಪೋಟ್ಕಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಗಳಿಗೆ ಮದುವೆ ಎಂಬುದು ಹಲವರ ಪಾಲಿಗೆ ನರಕವಾಗಿ ಪರಿಣಮಿಸುತ್ತಿದೆ.. ಮದುವೆಯ ಮುಂಚೆ ಅನ್ಯೋನ್ಯತೆ ಇದೆ ಎಂದು ಕಂಡುಬಂದರೂ ಮದುವೆಯಾದ ಬಳಿಕ ಅದು ಕೇವಲ ಕ್ಷಣಿಕ ಎಂಬುದನ್ನು ಸಾಬೀತು ಮಾಡುತ್ತಿದೆ.. ಹೀಗಾಗಿ ಅದೆಷ್ಟೋ ಜನರ ಬದುಕು ಮದುವೆಯಾದ ಮೊದಲ ದಿನವೇ ನರಕ ಕಾಣುವಂತೆ ಮಾಡುತ್ತಿದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ