Theft: ನಿದ್ರೆಯಲ್ಲಿ ಕದ್ದಿದ್ದನ್ನ ಕನವರಿಸಿ ಜೈಲು ಪಾಲಾದ ಮಹಿಳೆ! ಎಲ್ಲಿ, ಹೇಗೆ ಅಂತ ನೀವೇ ನೋಡಿ

ರುತ್ ಫೋರ್ಟ್ ಆಕೆಯ ಮನೆಯಿಂದ 7,200 ಪೌಂಡ್ ಹಣವನ್ನು ಕದ್ದಿದ್ದ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ತನ್ನ ನಿದ್ರಾ ಸಮಯದಲ್ಲಿ ಈ ಕುರಿತು ಕನವರಿಸುತ್ತಿದ್ದಾಗ ತನ್ನ ಪತಿ ಆ್ಯಂಟನಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದುರ್ಬಲ ಮಹಿಳೆಯೋರ್ವಳಿಂದ ಆಕೆಯನ್ನು ಆರೈಕೆ ಮಾಡುತ್ತಿದ್ದ ಮಹಿಳೆಯೊಬ್ಬಳು ಹಣ ಕದ್ದಿರುವ (Stolen Money) ವಿಷಯ ಆಕೆಯ ನಿದ್ರಾ (Dreaming) ಸಮಯದಲ್ಲೇ ಬಯಲಾಗಿದೆ. ನಿದ್ರೆಯಲ್ಲಿ ಈ ಕುರಿತು ಕನವರಿಸುತ್ತಿದ್ದ ಪತ್ನಿಯನ್ನು ಆತನ ಪತಿಯೇ ಪೊಲೀಸರಿಗೆ ಒಪ್ಪಿಸಿ ಆದರ್ಶ ಮೆರೆದಿದ್ದಾನೆ..!ಈ ಅಸಹಜ ಪ್ರಕರಣವು ಕಳೆದ ವಾರ ಲಿವರ್‌ಪೂಲ್‌ ಕ್ರೌನ್ (Liverpool Crown Court) ಕೋರ್ಟ್‍ನಲ್ಲಿ 47 ವರ್ಷದ ಆರೋಪಿಯನ್ನು ಹಾಜರುಪಡಿಸಿದಾಗ ಬೆಳಕಿಗೆ ಬಂದಿದ್ದು, ಆ ಕೂಡಲೇ ಎಲ್ಲ ಪತ್ರಿಕೆಗಳಲ್ಲೂ ಮುಖಪುಟ (Newspapers) ಸುದ್ದಿಯಾಗಿ ಪ್ರಕಟಗೊಂಡಿದೆ.

ರಹಸ್ಯ ವಿಷಯ ಬಹಿರಂಗ
ವೃದ್ಧ ಮಹಿಳೆಯೊಬ್ಬಳ ಆರೈಕೆಗೆಂದು ನಿಯೋಜನೆಗೊಂಡಿದ್ದ ದಾದಿ ರುತ್ ಫೋರ್ಟ್ ಆಕೆಯ ಮನೆಯಿಂದ 7,200 ಪೌಂಡ್ ಹಣವನ್ನು ಕದ್ದಿದ್ದಳು. ಆಕೆ ಈ ರಹಸ್ಯ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ತನ್ನ ನಿದ್ರಾ ಸಮಯದಲ್ಲಿ ಈ ಕುರಿತು ಕನವರಿಸುತ್ತಿದ್ದಾಗ ತನ್ನ ಪತಿ ಆ್ಯಂಟನಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಕಳವಿನ ಕುರಿತು ಯಾರಿಗೂ ತಿಳಿಯುವ ಅವಕಾಶವೇ ಇಲ್ಲದಿದ್ದರೂ ಆಕೆ ತನ್ನ ನಿದ್ರೆಯಲ್ಲಿನ ಕನವರಿಕೆ ಕಾರಣಕ್ಕೆ ಖುದ್ದು ತನ್ನ ಪತಿಗೇ ಸಿಕ್ಕಿಬಿದ್ದಿದ್ದಾಳೆ.

ತನ್ನ ಕುಟುಂಬವು ರಜಾದಿನಗಳನ್ನು ಕಳೆಯಲು ಮೆಕ್ಸಿಕೊಗೆ ತೆರಳಿದ್ದಾಗ ತನ್ನ ಪತಿ ಹಲವಾರು ಸಾವಿರ ಪೌಂಡ್ ಖರ್ಚು ಮಾಡಿರುವುದು ಮೂರು ಮಕ್ಕಳ ತಂದೆಯಾದ ಆ್ಯಂಟನಿಯ ಅನುಮಾನಕ್ಕೆ ಕಾರಣವಾಗಿತ್ತು. ಆತ ತನ್ನ ಪತ್ನಿ ಗಾಲಿ ಕುರ್ಚಿ ಆಶ್ರಯಿಸಿರುವ ಮಹಿಳೆಯೊಬ್ಬರಿಂದ ಹಣ ಕದ್ದಿರುವ ಸಂಗತಿ ಆಕೆ ತನ್ನ ನಿದ್ರೆಯಲ್ಲಿ ಕನವರಿಸುವಾಗ ತಿಳಿದು ಬಂದಿದೆ. ತಕ್ಷಣ ಆತ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಸೇತುವೆಯನ್ನೇ ಕದ್ದೊಯ್ದ ಖತರ್ನಾಕ್ ಕಳ್ಳ: ಅಸಾಧ್ಯವಾದದ್ದನ್ನು ಮಾಡಿದ್ದಾದರೂ ಹೇಗೆ?

ದುರ್ಬಲ ಮಹಿಳೆಯೊಬ್ಬರಿಂದ ಹಣ ಕದ್ದ ಪತ್ನಿ
ನಾನು ರುತ್‍ಳನ್ನು ಆಳವಾಗಿ ಪ್ರೀತಿಸುತ್ತಿದ್ದೆ. ಆದರೆ, ಆಕೆ ಏನು ಮಾಡುತ್ತಿದ್ದಾಳೆ ಎಂಬುದನ್ನು ನಾನು ಉಪೇಕ್ಷಿಸಲು ಸಾಧ್ಯವಿರಲಿಲ್ಲ. ಆಕೆ ದುರ್ಬಲ ಮಹಿಳೆಯೊಬ್ಬರಿಂದ ಹಣ ಕದಿಯುತ್ತಾಳೆ ಹಾಗೂ ಅದನ್ನು ನಾನು ಪೊಲೀಸರಿಗೆ ವರದಿ ಮಾಡುತ್ತೇನೆ ಎಂಬ ಸಂಗತಿ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿತ್ತು” ಎಂದು 61 ವರ್ಷದ ಆಕೆಯ ಪತಿ ಆ್ಯಂಟನಿ ಹೇಳಿಕೊಂಡಿದ್ದಾನೆ.

“ಗಾಲಿ ಕುರ್ಚಿಯನ್ನು ಅವಲಂಬಿಸಿರುವ ಮಹಿಳೆಯು ಬ್ಯಾಂಕ್ ಖಾತೆಯಲ್ಲಿ 98 ಸಾವಿರ ಪೌಂಡ್ ಹಣ ಹೊಂದಿದ್ದಾಳೆ ಎಂದು ಆಕೆ ನನಗೆ ತಿಳಿಸಿದ್ದಳು. ಆಕೆ ಮಾತನಾಡಿದ ರೀತಿಯಿಂದ ನನ್ನ ಮನಸ್ಸು ಕುಗ್ಗಿ ಹೋಯಿತು. ಆ ಕೂಡಲೆ ನನಗೆ ನನ್ನ ಪತ್ನಿ ಆ ಮಹಿಳೆಯ ಡೆಬಿಟ್ ಕಾರ್ಡ್ ಹಾಗೂ ಅದರ ಪಿನ್ ನಂಬರ್‌ಗೆ ಪ್ರವೇಶ ಪಡೆದಿರಬಹುದು ಎಂದು ಅನಿಸಿತು. ಇದಲ್ಲದೆ ಬೇರೆ ಏನೂ ಇರಲಿಲ್ಲ. ಆದರೆ, ನಾವು ಕಳವಳಕ್ಕೀಡಾಗಲು ಶುರುವಾಯಿತು. ಯಾವುದೇ ಕಾರಣಗಳಿಲ್ಲದಿದ್ದರೂ. ಅದು ನನ್ನ ವರ್ತನೆ ಆಗಿತ್ತು” ಎಂದು ಆತ ಹೇಳಿಕೊಂಡಿದ್ದಾನೆ.

ಜೈಲುವಾಸದ ಶಿಕ್ಷೆ
ಈ ಘಟನೆಯು 2018ರಲ್ಲಿ ತನ್ನ ಕುಟುಂಬವು ಮೆಕ್ಸಿಕೊಗೆ ರಜಾದಿನಗಳನ್ನು ಕಳೆಯಲು ತೆರಳಿದಾಗ ರುತ್ ಸಾವಿರಾರು ರೂಪಾಯಿಗಳನ್ನು ಲೀಲಾಜಾಲವಾಗಿ ಖರ್ಚು ಮಾಡಿದಾಗ ನಡೆದಿತ್ತು. ಆಕೆ ತನ್ನ ಪತಿಯೊಂದಿಗೆ 2010ರಿಂದ ಲ್ಯಾಂಕಾಶೈರ್‌ನಲ್ಲಿ ವಾಸಿಸುತ್ತಿದ್ದಾಳೆ.

ಇದನ್ನೂ ಓದಿ: Aircraft: ವಿಮಾನದ ಟೈರನ್ನೇ ಕದ್ದು ಬಿಟ್ಟ ಖತರ್​ನಾಕ್ ಕಳ್ಳರು!

ಆಕೆ ಪಾರ್ಶ್ವವಾಯು ಪೀಡಿತಗಳಾಗಿ ತನ್ನ ಕೆಲಸಕ್ಕೆ ರಜೆ ತೆಗೆದುಕೊಂಡಾಗ ತಾನು ಮಾಡಿದ್ದ ಅಪರಾಧ ಕೃತ್ಯವನ್ನು ನಿದ್ರೆಯಲ್ಲಿ ಕನವರಿಸುತ್ತಿದ್ದಳು. ಈ ಕುರಿತು ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ ನಂತರ ತಾನು ಕೆಲಸ ಮಾಡುತ್ತಿದ್ದ ಮಹಿಳೆಯ ಮನೆಯಲ್ಲಿ ತಾನು ಹಣ ಕದ್ದಿರುವುದನ್ನು ಋತ್ ಒಪ್ಪಿಕೊಂಡಿದ್ದಳು. ನ್ಯಾಯಾಲಯವು ಆಕೆಗೆ 16 ತಿಂಗಳ ಅಮಾನತುಗೊಂಡ ಜೈಲುವಾಸದ ಶಿಕ್ಷೆಯನ್ನು ಪ್ರಕಟಿಸಿದೆ.
ಆ‍್ಯಂಟಿನಿಯ ನ್ಯಾಯಪರತೆಯನ್ನು ನ್ಯಾಯಾಧೀಶರು ಪ್ರಶಂಸಿಸಿದ ಬೆನ್ನಿಗೇ ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರಿಂದ ತಾನು ಅವಮಾನ ಹಾಗೂ ಮುಜುಗರಕ್ಕೆ ಈಡಾಗಿದ್ದೇನೆ ಎಂದು ಆ್ಯಂಟನಿ ಅಲವತ್ತುಕೊಂಡಿದ್ದಾರೆ.


Published by:vanithasanjevani vanithasanjevani
First published: