• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಗಂಡಂದಿರೇ ಎಚ್ಚರ! ನಿಮ್ಮ ಹೆಂಡತಿಯನ್ನು ಯಾವುದೇ ಹೀರೋಯಿನ್​ಗೆ ಹೋಲಿಸುವ ಮುನ್ನ ಹುಷಾರ್​!

Viral Video: ಗಂಡಂದಿರೇ ಎಚ್ಚರ! ನಿಮ್ಮ ಹೆಂಡತಿಯನ್ನು ಯಾವುದೇ ಹೀರೋಯಿನ್​ಗೆ ಹೋಲಿಸುವ ಮುನ್ನ ಹುಷಾರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಿಯಾರಾ ಅಡ್ವಾಣಿಯನ್ನು ತನ್ನ ಹೆಂಡತಿಯೊಂದಿಗೆ ಹೋಲಿಸಿದ ನಂತರ ಪತಿಗೆ ಕಾದಿತ್ತು ಒಂದು ಬಿಗ್​ ಶಾಕ್​!

  • Share this:

ಕೆಲವು ದಂಪತಿಗಳು (Couple)  ಕಾಮಿಡಿ ವಿಡಿಯೋಗಳನ್ನು ಮಾಡುವ ಮೂಲಕ   ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ (Viral) ಆಗುತ್ತಾ ಇರುತ್ತಾರೆ.  ಅದೆಷ್ಟೋ ಜನರು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ಸೀರಿಯಸ್​  (Serious) ವಿಡಿಯೋಗಳನ್ನು ಮಾಡುತ್ತಾರೆ. ಇವೆರಡರ ನಡುವೆ ವೈರಲ್​ ಆಗೋದು, ಫೇಮಸ್​ ಆಗೋದು ಕೆಲವೊಂದಷ್ಟು ವಿಡಿಯೋ  (Video) ಎಂದೇ ಹೇಳಬಹುದು.   ಇದೀಗ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ.  ಇಷ್ಟೊಂದು ಯಾಕೆ ವೈರಲ್​ ಆಗ್ತಾ ಇದೆ ಅಂದ್ರೆ ಗಂಡ ಹೆಂಡತಿಯ ನಡುವೆ ಸಂಬಾಷಣೆಯದ್ದಾಗಿದೆ. ಹೀಗಾಗಿ ಎಲ್ಲ ಕಡೆಯಲ್ಲಿಯೂ ವೈರಲ್​ ಆಗ್ತಾ ಇದೆ. ಇದರಲ್ಲಿ ಪತಿ ತನ್ನ ಹೆಂಡತಿಯನ್ನು ನಟಿಗೆ ಹೋಲಿಸುತ್ತಾರೆ. ತದನಂತರ ಈತ ಯಾವ ರೀತಿಯಾಗಿ ಸಫರ್​ ಆಗ್ತಾನೇ ಎಂಬುದೇ ವಿಡಿಯೋದ ಮುಖ್ಯ ಪಾಯಿಂಟ್ (Point)​.  


ನಟಿ ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆದ್ದರಿಂದ ಈಗ ಅವರು ತುಂಬಾ ಜನಪ್ರಿಯರಾಗಿದ್ದಾರೆ. ಇಲ್ಲಿ ಓರ್ವ ವ್ಯಕ್ತಿ ಆ ಹೀರೋಯಿನ್​ನನ್ನು ನೇರವಾಗಿ ತನ್ನ ಹೆಂಡತಿಗೆ ಹೋಲಿಸಿದ್ದಾರೆ. ಅದರ ನಂತರ, ಗಂಡನ ಸ್ಥಿತಿಯನ್ನು ನೋಡಿ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರಿ. ಈ ವಿಡಿಯೋ ಸಖತ್​ ವೈರಲ್​ ಆಗ್ತಾ ಇದೆ.


ಪತಿ ಅರಿವಿಲ್ಲದೆ ತನ್ನ ಹೆಂಡತಿಯನ್ನು ನಟಿ ಕಿಯಾರಾ ಅಡ್ವಾಣಿಯೊಂದಿಗೆ ಹೋಲಿಸುತ್ತಾನೆ. ಹೆಂಡತಿಯರಿಗೆ ಹೊಟ್ಟೆಕಿಚ್ಚು ಸ್ವಲ್ಪ ಜಾಸ್ತಿನೇ ಇರುತ್ತಂತೆ. ಅದ್ರಲ್ಲೂ ತನ್ನ ಗಂಡನ ಮೇಲೆ ಅಂದ್ರೆ ಸ್ವಲ್ಪ ಜಾಸ್ತಿನೇ ಹೊಟ್ಟೆಕಿಚ್ಚು ಅತಿಯಾಗಿಯೇ ಇರುತ್ತದೆ.


ಇದನ್ನೂ ಓದಿ: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ


ಯಾರಾದ್ರೂ ತನ್ನ ಗಂಡನನ್ನು ಹೊಗಳಿದರೆ ಅಥವಾ ಯಾವುದಾದರೂ ಮಹಿಳೆಯರು ತನ್ನ ಗಂಡನನ್ನು ನೋಡುತ್ತಾ ಇದ್ರೆ ಹೆಂಡತಿಗೆ ಹೊಟ್ಟೆ ಉರಿಯೋದು ಅಂತು ಪಕ್ಕಾ ಬಿಡಿ.


ಇದೀಗ ಗಂಡ ತನ್ನ ಹೆಂಡತಿಯನ್ನು ನಟಿ ಕಿಯಾರಾ ಅಡ್ವಾಣಿಯೊಂದಿಗೆ ಹೋಲಿಸುತ್ತಾನೆ. ಯಾಕಂದರೆ ಆಕೆ ಕೊಂಚ ಬೇಸರ ಮಾಡಿಕೊಂಡು ಇರುತ್ತಾಳೆ. ಆಗ ಗಂಡ ಬಂದು ನಿನ್ನಕಿಂತ  ಕಿಯಾರಾ ಅಡ್ವಾಣಿಯೇ ಚೆನ್ನಾಗಿ ಆಕ್ಟ್​ ಮಾಡುತ್ತಾಳೆ ಎಂದು ಹೇಳಿದ್ದಾನೆ. ಇದಕ್ಕೆ ಹೆಂಡತಿಗೆ ತುಂಬಾ ಸಿಟ್ಟು ಬಂದು, ಆಕೆಯನ್ನು ನನಗೆ ಯಾಕೆ ಹೋಲಿಸುತ್ತೀರಾ? ಅಂತೆಲ್ಲಾ ಮಾತನಾಡುತ್ತಾಳೆ. ಇವರ ಇಬ್ಬರ ನಡುವೆ ನಡೆದ ಮಾತಿನ ಚಕಾಮಕಿಯಂತೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್​ ಆಗ್ತಾ ಇದೆ. ವಿಡಿಯೋ ನೀವೇ ನೋಡಿ.ಒಟ್ಟಿನಲ್ಲಿ ಕಿಯಾರಾ ಜೊತೆ ಹೋಲಿಸಿ ನೋಡಿದಾಗ ಹೆಂಡತಿ ಗಂಡನ ಮೇಲೆ ಎಷ್ಟು ಕೋಪಗೊಂಡಿದ್ದಾಳೆ ಎಂದು ಹೇಳಲು ಅಸಾಧ್ಯ. ಕೊನೆಗೆ ಪತಿ ತನ್ನ ತಪ್ಪನ್ನು ಅರಿತುಕೊಂಡಾಗ, ಅವನು ಅವಳಲ್ಲಿ ಕ್ಷಮೆಯಾಚಿಸುತ್ತಾನೆ. ಅವಳ ಮನಸ್ಥಿತಿಯನ್ನು ಹಗುರಗೊಳಿಸಲು ಪ್ರಯತ್ನಿಸುತ್ತಾನೆ, ಅವಳನ್ನು ಮನವೊಲಿಸಲು, ಅವಳ ಕೋಪವನ್ನು ಕಡಿಮೆ ಮಾಡುತ್ತಾನೆ. ಆದರೆ ಹೆಂಡತಿ ಸಮಾಧಾನ ಆಗೋದೇ ಇಲ್ಲ. ಅವಳು ಗಂಡನಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ನೀಡದೆ ಅಡುಗೆಮನೆಯಿಂದ ಹೊರಹಾಕುತ್ತಾಳೆ.


ಈ ವೀಡಿಯೊವನ್ನು @PraveenSarraf_ Twitter ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪತಿ-ಪತ್ನಿಯರ ನಡುವಿನ ಈ ತಮಾಷೆಯ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಬಳಕೆದಾರರು ತಮಾಷೆಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.


'ಅಯ್ಯೋ ಪಾಪ, ಹೆಂಡತಿಯ ಮುಂದೆ ಇನ್ನೊಂದು ಮಹಿಳೆಯನ್ನು ಹೊಗಳಬೇಡಿ ' ಎಂದು ಒಬ್ಬಾತ ಹೇಳಿದರೆ, ಇನ್ನೂ ಒಬ್ಬ ಬಳಕೆದಾರ, 'ನೋಡ, ನೋಡ ಎಷ್ಟು ಚೆಂದ ಅಲ್ವಾ? ' ಅಂತ ಕಾಮಿಡಿಯಾಗಿ ಪ್ರತಿಕ್ರಿಯಿಸಿದ್ದಾನೆ.
ಒಟ್ಟಿನಲ್ಲಿ ಗಂಡಂದಿರು  ಇನ್ನೊಂದು ಹಿರೋಯಿನ್​ ಅನ್ನು ಹೆಂಡತಿಯ ಮುಂದೆ ಹೊಗಳುವ ಮುನ್ನ ನೂರು ಬಾರಿ ಯೋಚನೆ ಮಾಡಲೇಬೇಕು.

First published: