• Home
  • »
  • News
  • »
  • trend
  • »
  • Weird News: ಹೆಂಡ್ತಿ ಸತ್ತ ನಂತ್ರ ಅವಳಂತೆಯೇ ಬದಲಾದ ಪತಿ, ಆಕೆ ಹಾಕ್ತಿದ್ದ ಉಡುಗೆ-ತೊಡುಗೆಯನ್ನು ತೊಟ್ಟ!

Weird News: ಹೆಂಡ್ತಿ ಸತ್ತ ನಂತ್ರ ಅವಳಂತೆಯೇ ಬದಲಾದ ಪತಿ, ಆಕೆ ಹಾಕ್ತಿದ್ದ ಉಡುಗೆ-ತೊಡುಗೆಯನ್ನು ತೊಟ್ಟ!

ದಂಪತಿ

ದಂಪತಿ

ಪತ್ನಿಯ ಸಾವಿನ ನಂತರ ಪುರುಷನೊಬ್ಬ ಹೆಣ್ಣಾಗಿದ್ದಾರೆ. ಅವನು ತನ್ನ ಹೆಂಡತಿಯ ಬಗ್ಗೆ ಅಸೂಯೆ ಹೊಂದಿದ್ದನು, ಅವನು ಅವಳಂತೆ ಇರಬೇಕೆಂದು ಬಯಸಿದನು ಮುಂದೇನಾಯ್ತು?

  • Share this:

ಹುಟ್ಟಿದಾಗ ಒಂದು ಲಿಂಗ, ಬೆಳೆಯುತ್ತಾ ಅವರು ಬದಲಾಗುವ ಅದೆಷ್ಟೋ ಉದಾಹರಣೆಗಳು (Example) ಇವೆ. ಇಂತಹ ಸಂದರ್ಭದಲ್ಲಿ ಕೆಲವೊಬ್ಬರು ತನ್ನ ಜೀವನವನ್ನು ಯಾವ ರೀತಿಯಾಗಿ ಮುಂದೆ ಸಾಗಬೇಕು ಎಂದು ತಿಳಿದುಕೊಂಡಿರುತ್ತಾರೆ, ಇನ್ನೂ ಕೆಲವೊಬ್ಬರು ಆಯಾ ಕಾಲಕ್ಕೆ ತಕ್ಕಂತೆ ಬದಾಲಗುತ್ತಾರೆ. ಇಂಗ್ಲೆಂಡಿನಲ್ಲಿ ಇಂಥದ್ದೇ ಪ್ರಕರಣವೊಂದು (Case) ಬೆಳಕಿಗೆ ಬಂದಿದ್ದು, ಪತ್ನಿಯ ಸಾವಿನ ನಂತರ ಪುರುಷನೊಬ್ಬ ಹೆಣ್ಣಾಗಿದ್ದಾರೆ. ಅವನು ತನ್ನ ಹೆಂಡತಿಯ (Wife) ಬಗ್ಗೆ ಅಸೂಯೆ ಹೊಂದಿದ್ದನು, ಅವನು ಅವಳಂತೆ ಇರಬೇಕೆಂದು ಬಯಸಿದನು ಮತ್ತು ಅಂತಿಮವಾಗಿ 50 ವರ್ಷಗಳ ನಂತರ ಅವನು ತನ್ನ ಆಸೆಯನ್ನು ಪೂರೈಸಿಕೊಂಡನು.


ನ್ಯೂಯಾರ್ಕ್​ನ ಟೋನಿ ಎಂಬಾತ ಮೊದಲು ಡೆಲ್ಲಿಯಲ್ಲಿ ವಾಸವಾಗಿದ್ದನು. ಅದಾಗ ಆತನಿಗೆ ಹೆಂಗಸರನ್ನು ನೋಡಿದ್ರೆ ಆಗ್ತಾ ಇರ್ಲಿಲ್ಲ. ಆದರೆ, ಹೆಂಗಸರು ಹಾಕುವ ಬಟ್ಟೆಯನ್ನು ಮಾತ್ರ ತುಂಬಾ ಇಷ್ಟ ಪಡುತ್ತಿದ್ದ. ಕೇವಲ ಬಟ್ಟೆ ಮಾತ್ರವಲ್ಲ ಹೆಂಗಸರು ಬಳಸುವ ಆಭರಣಗಳು, ಮೇಕಪ್​ಗಳನ್ನು ತುಂಬಾ ಇಷ್ಟ ಪಡುತ್ತಾ ಇದ್ದರು. ಇದಕ್ಕಾಗಿ ಈತ ದೆಹಲಿಯಲ್ಲಿ ಒಂದು ಬಾರಿ ಮಹಿಳೆಯರ ಆಭರಣವನ್ನು ಕಳ್ಳತನವನ್ನು ಮಾಡಿದ್ದರು. ಬರ್ತಾ ಬರ್ತಾ ಈ ಟೋನಿ ತುಂಬಾ ಬದಲಾಗುತ್ತಾನೆ. ಮಹಿಳೆಯರ ಹಾಗೆಯೇ ಬಟ್ಟೆಗಳನ್ನು ತೊಡುತ್ತಾನೆ, ಮೇಕಪ್​ ಮಾಡಿಕೊಳ್ಳುತ್ತಾನೆ. ಆದರೆ ಹೊರ ಪ್ರಪಂಚದಲ್ಲಿ ತಾನು ಒಬ್ಬ ಗಂಡಸಿನ ಹಾಗೆಯೇ ವರ್ತಿಸುತ್ತಿರುತ್ತಾನೆ


ಅವರು 1980ರಲ್ಲಿ 23 ವರ್ಷದವರಾಗಿದ್ದಾಗ ಥೆರೆಸಾ ಎಂಬ ಮಹಿಳೆಯನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ಹೆಣ್ಣು ಮಕ್ಕಳ ಹಾಗೆ ಏನೂ ರೆಡಿ ಆಗಿರೋಲ್ಲ. ಯಾಕಂದರೆ ಟೋನಿ ಥೆರೆಸಾಳನ್ನು ತುಂಬ ಪ್ರೀತಿ ಮಾಡುತ್ತಾ ಇರುತ್ತಾನೆ. ಹಾಗಾಗಿ ಗಂಡಸಿನ ಹಾಗೆಯೇ ಇರುತ್ತಾನೆ. ಬರುಬರುತ್ತಾ ಥೆರೆಸಾಳಿಗೆ ಟೋನಿ ಮೊದಲು ಹೆಂಗಸರ ಹಾಗೆ ಬಟ್ಟೆಗಳನ್ನು ಧರಿಸುತ್ತಾ ಇದ್ದ ಮತ್ತು ಆತನಿಗೆ ಹಾಗೆ ಇರೋದು ತುಂಬಾ ಇಷ್ಟ ಎಂಬ ವಿಷಯ ತಿಳಿಯಿತು. ಆದರೂ ಆಕೆ ಏನು ಹೇಳೋದಿಲ್ಲ. ಆದರೆ ಟೋನಿ ಓರ್ವ ಗಂಡಸಿನ ಹಾಗೆಯೇ ಇರುತ್ತಾನೆ.


ಇದನ್ನೂ ಓದಿ: ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಏಕಿರುತ್ತದೆ? ತುರ್ತು ನಿರ್ಗಮನ ದ್ವಾರ ತೆರೆದರೆ ಏನಾಗುತ್ತದೆ?


2016ರಲ್ಲಿ ಟೀನಿಯ ಹೆಂಡತಿಯಾದ ಥೆರೆಸಾಳಿಗೆ ಸ್ತನ ಕ್ಯಾನ್ಸರ್​ ಕಾಣಿಸಿಕೊಳ್ಳುತ್ತದೆ. 2019ರಲ್ಲಿ ಹೆಂಡತಿ ನಿಧನರಾದರು. ಟೋನಿಗೆ ತುಂಬಾ ಘಾಸಿಯಾಗುತ್ತದೆ. ಯಾಕಂದ್ರೆ ಹೆಂಡತಿಯನ್ನು ಅಷ್ಟು ಪ್ರೀತಿ ಮಾಡುತ್ತಿದ್ದ ಟೋನಿಯ ಜೀವನವೇ ಶೂನ್ಯ ಎಂದು ಅನಿಸಿತ್ತು. ಮಾನಸಿಕವಾಗಿ ಕೂಡ ಕುಗ್ಗಿದ್ದ.




ಇದಾದ ಬಳಿಕ ತನ್ನ ಹೆಂಡತಿಯ ನೆನಪಿಗಾಗಿ ವೈದ್ಯರ ಬಳಿ ಹೋದ ಮತ್ತು ಅಲ್ಲಿ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ. ಅಂದ್ರೆ ಟೋನಿ ಹೆಣ್ಣಾಗಿ ಬದಲಾದ. ಅವನ ಹೆಂಡತಿ ಯಾವ ಬಟ್ಟೆಗಳನ್ನು ಧರಿಸುತ್ತಾ ಇದ್ದಳೋ , ಯಾವ ರೀತಿಯಾಗಿ ಬಟ್ಟೆಗಳನ್ನು ಧರಿಸುತ್ತಾ ಇದ್ದಳೋ ಹಾಗೆಯೇ ಆಕೆಯ ತಲೆಗೂದಲಿನ ಬಣ್ಣದ ವಿಗ್​ ಮಾಡಿಸಿಕೊಂಡು ಹಾಕಿಕೊಳ್ಳುತ್ತಾನೆ. ಒಟ್ಟಿನಲ್ಲಿ ಟೋನಿ ಮತ್ತೆ ಮೊದಲಿನ ಹಾಗೆಯೇ ಆಗುತ್ತಾನೆ. ಇದಕ್ಕೆ ಅವರ ಮಕ್ಕಳು ಕೂಡ ಸಾತ್​ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡು ಸಂಪೂರ್ಣ ಹುಡುಗಿಯ ಹಾಗೆಯೇ ಬದಲಾಗಿದ್ದಾನೆ ಟೋನಿ. ಇದಂತೂ ವಿಚಿತ್ರ ಅಂತ ಅನಿಸಿದ್ರೂ ಗ್ರೇಟ್​ ಘಟನೆ ಅಲ್ವಾ?


ಪ್ರಸ್ತುತ ಹೆಂಡತಿ ಸತ್ತರೆ ಬೇರೊಂದು ಹೆಣ್ಣನ್ನು ಮದುವೆ ಆಗುವ ಕಾಲದಲ್ಲಿ, ಟೋನಿಯಂತಹ ವ್ಯಕ್ತಿ ಸಿಗೋದು ಅಪರೂಪ ಅಂತ ಹೇಳಿದ್ರೂ ತಪ್ಪಾಗಲಾರದು. ಟೋನಿ  ಇನ್ನೊಬ್ಬಳನ್ನು ನೋಡದೇ ಈ ವ್ಯಕ್ತಿ ಯಾವ ರೀತಿಯಾಗಿ ಬದಲಾಗಿದ್ದಾನೆ ಎಂದು ನೀವೇ ನೋಡಿದ್ರಿ ಅಲ್ವಾ. ಪ್ರೀತಿ ಕುರುಡು ಅಂತ ಇದಕ್ಕೇ ಅಲ್ವಾ ಹೇಳೋದು?

First published: