Viral Video: ದಾರಿ ಮಧ್ಯೆ ಲವ್ವರ್ ಜೊತೆ ಸಿಕ್ಕ ಪತ್ನಿ; ಇದನ್ನು ನೋಡಿದ ಗಂಡ ಮಾಡಿದ್ದೇನು ನೋಡಿ

ಗಂಡ ಹೆಂಡತಿ ಮದುವೆಯಾಗಿ 10 ವರ್ಷ ಗಳಾಗಿವೆ. ಗಂಡ ಹೆಂಡತಿ ಮತ್ತು ಮಗಳು ಇರುವ ಸುಂದರ ಕುಟುಂಬ. ಆದರೆ ತನ್ನ ಗಂಡ – ಮಗಳ ಜೊತೆಗೆ ಚೆನ್ನಾಗಿ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಿದ್ದ ಆ ಮಹಿಳೆ ತಪ್ಪು ದಾರಿ ಹಿಡಿದಿದ್ದಳು. ಗಂಡನಿಗೆ ಮೋಸ ಮಾಡಿ ಮತ್ತೊಬ್ಬನ ಜೊತೆ ಸುತ್ತಾಡುತ್ತಿದ್ದಳು. ಈಗ ಏನಾಗಿದೆ ನೋಡಿ

ಲವ್ವರ್ ಜೊತೆ ಸಿಕ್ಕ ಪತ್ನಿ

ಲವ್ವರ್ ಜೊತೆ ಸಿಕ್ಕ ಪತ್ನಿ

  • Share this:
ಸಂಬಂಧಗಳಲ್ಲಿ (Relationship) ನಂಬಿಕೆಯೇ ಮುಖ್ಯ. ಅದರಲ್ಲೂ ವೈವಾಹಿಕ ಸಂಬಂಧ ಸರಿಯಾಗಿರಬೇಕೆಂದರೆ ಇಬ್ಬರಲ್ಲೂ ನಂಬಿಕೆ, ಗೌರವ ಹಾಗೂ ನಿಯತ್ತು ಇರಲೇಬೇಕು. ಅಂದಾಗ ಮಾತ್ರ ಸಂಬಂಧ, ಕುಟುಂಬ (Family) ಸರಿಯಾಗಿರುತ್ತೆ. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಆ ಎಲ್ಲ ಅಂಶಗಳು ನಿಧಾನಕ್ಕೆ ಕಾಣೆಯಾಗುತ್ತಿವೆ. ಮೂರು ಹೊತ್ತೂ ಕೈಯ್ಯಲ್ಲಿ ಆನ್‌ ಇರುವ ಸ್ಮಾರ್ಟ್‌ ಫೋನ್‌, ಈಗಿನ ಸಾಮಾಜಿಕ ಜಾಲತಾಣಗಳ (Social Media) ಪ್ರಭಾವ ಸಂಬಂಧಗಳ ಮೇಲೆ, ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತೆ. ಅದರಲ್ಲೂ ವೈವಾಹಿಕ ಸಂಬಂಧಗಳು ಮುರಿದು ಬೀಳೋಕೆ ಈ ಸಾಮಾಜಿಕ ಜಾಲತಾಣಗಳೇ ಪರೋಕ್ಷ ಕಾರಣವೇನೋ ಎಂಬಂತಾಗಿದೆ. ಪತ್ನಿ (Wife) ಗಂಡನಿಗೆ (Husband) ಮೋಸ ಮಾಡೋದು, ಗಂಡ ಹೆಂಡತಿಯ ಬೆನ್ನ ಹಿಂದೆ ಬೇರೇನೋ ನಡೆಸೋದು ಕಾಮನ್‌ ಅನ್ನೋ ಹಾಗಾಗಿದೆ.

ಅದಕ್ಕೊಂದು ಉದಾಹರಣೆ ಎಂಬಂತೆ ಪತಿ ಪತ್ನಿ ಮತ್ತು ವೋಹ್‌ ಕಹಾನಿಯಂತೆಯೇ ಪ್ರಿಯಕರನ ಜೊತೆ ಹೋಗುತ್ತಿದ್ದ ಪತ್ನಿಯನ್ನು ಹಿಡಿದ ಗಂಡನ ವಿಡಿಯೋ ಟ್ವಿಟ್ಟರ್‌ ನಲ್ಲಿ ವೈರಲ್‌ ಆಗಿದೆ.

ಪತಿ ಹಾಗೂ ಮಗಳನ್ನು ಬಿಟ್ಟು ಮತ್ತೊಬ್ಬನ ಜೊತೆ ಸುತ್ತಾಡುತ್ತಿದ್ದ ಯುವತಿ 
ಅಷ್ಟಕ್ಕೂ ಇಂಥದ್ದೊಂದು ಘಟನೆ ನಡೆದದ್ದು ಆಗ್ರಾದಲ್ಲಿ. ಆ ಗಂಡ ಹೆಂಡತಿ ಮದುವೆಯಾಗಿ 10 ವರ್ಷ ಗಳಾಗಿವೆ. ಗಂಡ ಹೆಂಡತಿ ಮತ್ತು ಮಗಳು ಇರುವ ಸುಂದರ ಕುಟುಂಬ. ಆದರೆ ತನ್ನ ಗಂಡ – ಮಗಳ ಜೊತೆಗೆ ಚೆನ್ನಾಗಿ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಿದ್ದ ಆ ಮಹಿಳೆ ತಪ್ಪು ದಾರಿ ಹಿಡಿದಿದ್ದಳು. ಗಂಡನಿಗೆ ಮೋಸ ಮಾಡಿ ಮತ್ತೊಬ್ಬನ ಜೊತೆ ಸುತ್ತಾಡುತ್ತಿದ್ದಳು.ಆದ್ರೆ ಗ್ರಹಚಾರ ಕೆಟ್ಟಾಗ ಏನ್‌ ಮಾಡೋಕಾಗುತ್ತೆ. ಉಪ್ಪು ತಿಂದ ಮೇಲೆ ನೀರು ಕುಡೀಲೇ ಬೇಕು ಅನ್ನೋ ಹಾಗೆ ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇ ಬೇಕು. ಅದೇ ರೀತಿ ಈ ಮಹಿಳೆ ಕೂಡ ಪ್ರಿಯಕರನ ಜೊತೆಯಲ್ಲಿ ಬೈಕ್‌ ನಲ್ಲಿ ಹೋಗುತ್ತಿರುವಾಗಲೇ ಗಂಡನಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ.

ಪತ್ನಿಯನ್ನು ಹಿಮಾಲಿಸಿಕೊಂಡು ಹೋದ ಪತಿ 
ಅಷ್ಟಕ್ಕೂ ಹೆಂಡತಿಯ ನಡವಳಿಕೆಯಿಂದಲೇ ಯಾರೊಂದಿಗೋ ಅಫೇರ್‌ ಇರೋದಾಗಿ ಗಂಡನಿಗೆ ಗೊತ್ತಾಗಿದೆ. ಯಾವುದೋ ಬ್ಯುಸಿನೆಸ್‌ ಮ್ಯಾನ್‌ ಜೊತೆ ಆಕೆಗೆ ಸಂಬಂಧ ಇರೋದನ್ನ ಕಂಡುಹಿಡಿದಿದ್ದಾನೆ. ಕಳೆದ ಭಾನುವಾರ ಹೇಳದೇ ಕೇಳದೇ ಮನೆಯಿಂದ ಹೊರಟ ಪತ್ನಿಯನ್ನು ಪತಿ ಹಿಂಬಾಲಿಸಿದ್ದಾನೆ.

ಇದನ್ನೂ ಓದಿ:  Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಮಗಳ ಜೊತೆಗೆ ಸ್ಕೂಟಿಯಲ್ಲಿ ಹೊರಟು ಪತ್ನಿ ಇನ್ಯಾರದ್ದೋ ಜೊತೆಗೆ ಇಲ್ಲಿನ ಕೈಲಾಶ್‌ ಮಂದಿರ ರಸ್ತೆಯಲ್ಲಿ ಹೋಗ್ತಾ ಇರೋದನ್ನು ನೋಡಿದ್ದಾನೆ. ಕೊನೆಗೂ ಅವರನ್ನು ಅಡ್ಡ ಹಾಕಿ ಹಿಡಿದಿದ್ದಾನೆ. ಅಲ್ಲದೇ ಹೆಂಡತಿಯ ಲವ್ವರ್‌ ನನ್ನು ಹಿಡಿದು ಚೆನ್ನಾಗಿ ಬಾರಿಸಿದ್ದಾನೆ. ಈ ವಿಡಿಯೋ ಟ್ವಿಟ್ಟರ್‌ ನಲ್ಲಿ ವೈರಲ್‌ ಆಗಿದೆ.

ಕೊನೆಗೂ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರೂ ವ್ಯಕ್ತಿಗಳಿಗೆ ದಂಡ ಹಾಕಿದ್ದಾರೆ. ಸಾರ್ವಜನಿಕ ಶಾಂತಿ ಕದಡಿದ ಹಿನ್ನೆಲೆಯಲ್ಲಿ ಚೆನ್ನಾಗಿ ಬೈದು ದಂಡಹಾಕಿ ಕಳಿಸಿದ್ದಾರೆ. ಸದ್ಯ ಪ್ರಿಯತಮನ ಬೆನ್ನು ಬಿದ್ದ ಮಹಿಳೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಕೊನೆಯ ಮಾತು 
ಅಂದಹಾಗೆ ವೈವಾಹಿಕ ಸಂಬಂಧದಲ್ಲಿ ಬಿರುಕು ಅನ್ನೋದು ಈಗೀಗ ಕಾಮನ್‌ ಆಗೋಗಿದೆ. ಅದಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಡೈವೋರ್ಸ್‌ ಕೇಸ್‌ ಗಳು ಬರುತ್ತಿವೆ. ಚಿಕ್ಕಚಿಕ್ಕ ವಿಷಯಗಳಿಂದ ಹಿಡಿದು ತನ್ನ ನಂಬಿದವರಿಗೇ ಮೋಸ ಮಾಡುವಂಥ ದೊಡ್ಡ ವಿಷಯಗಳೇ ಇದಕ್ಕೆ ಕಾರಣ. ನಂಬಿದ ಜೀವನ ಸಂಗಾತಿ ಜೊತೆಗೆ ನಮ್ಮನ್ನೇ ಅವಲಂಬಿಸಿರೋ ಮಕ್ಕಳನ್ನೂ ನೋಡದೇ ತಪ್ಪು ದಾರಿ ಹಿಡಿಯುವ ಅನೇಕರು ಪಾಠ ಕಲಿಯಬೇಕಿದೆ.

ಇದನ್ನೂ ಓದಿ:  Weird Laws: ಈ ದೇಶದಲ್ಲಿ ಹೆಂಡತಿ ಬರ್ತ್‌ ಡೇ ಮರೆಯುವಂತಿಲ್ಲ; ಮಹಿಳೆಯರು, ಪುರುಷರ ಒಳ ಉಡುಪು ಒಟ್ಟಿಗೆ ಒಣಗಿಸುವಂತಿಲ್ಲ!

ಕದ್ದು ಮುಚ್ಚಿ ನಡೆಸುವ ಯಾವ ಸಂಬಂಧಕ್ಕೂ ಅರ್ಥ ಇರೋದಿಲ್ಲ. ಬದಲಾಗಿ ಸುಂದರ ಸಂಸಾರ ನುಚ್ಚು ನೂರಾಗುತ್ತೆ. ಇರುವ ಒಂದು ಬದುಕನ್ನೂ ನಿಯತ್ತಾಗಿ ಬದುಕದೇ ಜೀವನ ಹಾಳು ಮಾಡಿಕೊಳ್ಳುವವರು ನಮಗೆ ಬೇಕಾದಷ್ಟು ಜನ ಸಿಗ್ತಾರೆ. ಇನ್ನಾದರೂ ಇಂಥವರು ಬುದ್ಧಿ ಕಲಿಯಬೇಕಿದೆ. ಇರುವಷ್ಟು ದಿನ ನಿಯತ್ತಾಗಿ, ಮಕ್ಕಳಿಗೆ ಒಳ್ಳೆಯ ಅಪ್ಪ-ಅಮ್ಮನಾಗಿ.. ಸರಿಯಾದ ದಾರಿಯಲ್ಲಿ ನಡೆಯಬೇಕಿದೆ.
Published by:Ashwini Prabhu
First published: