• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ಹೆಂಡತಿ ಹಣದಲ್ಲಿ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಗಂಡ! ಮಾಜಿ ಪತ್ನಿಗೆ ಫ್ಲಾಟ್ ಖರೀದಿಸಿ ಸಿಕ್ಕಿಬಿದ್ದ!

Viral Story: ಹೆಂಡತಿ ಹಣದಲ್ಲಿ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಗಂಡ! ಮಾಜಿ ಪತ್ನಿಗೆ ಫ್ಲಾಟ್ ಖರೀದಿಸಿ ಸಿಕ್ಕಿಬಿದ್ದ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Lottery Ticket: ಚೀನಾದ ವ್ಯಕ್ತಿಗೊಬ್ಬ ತನ್ನ ಹೆಂಡತಿಯ ಹಣದಲ್ಲಿ ಖರೀದಿಸಿದ ಲಾಟರಿ ಟಿಕೆಟ್​ನಲ್ಲಿ 12 ಕೋಟಿ ರೂಪಾಯಿ ಗೆದ್ದಿದ್ದಾರೆ. ಆದರೆ ಇಲ್ಲಿ ತನ್ನ ಕಟ್ಟಿಕೊಂಡ ಹೆಂಡತಿಯನ್ನು ಮರೆತು, ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಿ ಕೊಟ್ಟಿದ್ದಾನೆ. ಮುಂದೇನಾಯ್ತು ಎಂದು ಈ ಲೇಖನದಲ್ಲಿ ಓದಿ.

ಮುಂದೆ ಓದಿ ...
  • Share this:

    ಮುಖ್ಯಾಂಶಗಳು

    c

    ಹಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚಿನ ಕಾಲಮಾನವಂತೂ ಹಣವಿಲ್ಲದೆ ಏನೂ ನಡೆಯುವುದಿಲ್ಲ ಎಂಬಂತಾಗಿದೆ. ಹಣವೆಂದರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ಹಣಕ್ಕಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಮರೆತುಬಿಟ್ಟಿದ್ದಾನೆ. ಲಾಟರಿ ಟಿಕೆಟ್ (Lottery Ticket)​ ಯಾರು ಖರೀದಿಸಲ್ಲ ಹೇಳಿ. ಅದರ ಮೇಲೆ ನಂಬಿಕೆ ಇಲ್ಲದಿದ್ದರೂ ಬರಬಹುದು ಎಂಬ ನಂಬಿಕೆಯಿಂದ ಕೆಲವೊಂದು ಬಾರಿ ಖರೀದಿಸಿಬಿಡುತ್ತಾರೆ. ಲಾಟರಿ ಗೆದ್ದವರು ಏನೇನೋ ಆಸೆಯನ್ನೆಲ್ಲಾ ಹೊಂದಿರುತ್ತಾರೆ. ಕೆಲವರು ಮನೆ, ಗಾಡಿ ಇವುಗಳನ್ನೆಲ್ಲಾ ಖರೀದಿಸಲು ಮುಂದಾದ್ರೆ, ಇನ್ನೂ ಕೆಲವರಿಗೆ ಏನು ಮಾಡುವುದೆಂದು ತೋಚುವುದೇ ಇಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಬಂದ 12 ಕೋಟಿ ಲಾಟರಿ ಹಣದಲ್ಲಿ ಕಟ್ಟಿಕೊಂಡ ಹೆಂಡತಿಯನ್ನು (Wife) ಬಿಟ್ಟು, ಮಾಜಿ ಹೆಂಡತಿಗೆ (Ex-Wife) ಫ್ಲಾಟ್​ ಖರೀದಿಸಿ ಕೊಟ್ಟಿದ್ದಾರೆ.


    ಹೌದು, ಚೀನಾದ ವ್ಯಕ್ತಿಗೊಬ್ಬ ತನ್ನ ಹೆಂಡತಿಯ ಹಣದಲ್ಲಿ ಖರೀದಿಸಿದ ಲಾಟರಿ ಟಿಕೆಟ್​ನಲ್ಲಿ 12 ಕೋಟಿ ರೂಪಾಯಿ ಗೆದ್ದಿದ್ದಾರೆ. ಆದರೆ ಇಲ್ಲಿ ತನ್ನ ಕಟ್ಟಿಕೊಂಡ ಹೆಂಡತಿಯನ್ನು ಮರೆತು, ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಿ ಕೊಟ್ಟಿದ್ದಾನೆ. ಮುಂದೇನಾಯ್ತು ಎಂದು ಈ ಲೇಖನದಲ್ಲಿ ಓದಿ.


    ಕ್ಷಣಮಾತ್ರದಲ್ಲಿ ಬಿಲಿಯನೇರ್​


    ಚೀನಾದಲ್ಲಿ (China) ಲಾಟರಿ ಟಿಕೆಟ್​ ಅನ್ನು ಖರೀದಿಸಿ ರಾತ್ರಿ ಬೆಳಗಾಗುವುದರೊಳಗೆ ಆತ ಬಿಲಿಯನೇರ್​ ವ್ಯಕ್ತಿಯಾದ. ಹಣ  ಸಿಕ್ಕಿದ ಮೇಲೆ ಅಂದುಕೊಂಡದ್ದನ್ನೆಲ್ಲಾ ಖರೀದಿಸಿದ, ಆದರೆ ಕಟ್ಟಿಕೊಂಡ ಹೆಂಡತಿಯನ್ನೇ ಮರೆತುಬಿಟ್ಟ.


    ಇದನ್ನೂ ಓದಿ: 'ಪಿಸ್ತೂಲ್' ಜೊತೆ 'ಸೈಕಲ್ ರಾಣಿ' 'ಶಾದಿ'ಯಂತೆ! 'ಕೋರ್ಟ್' ಮೆಟ್ಟಿಲೇರಿತು 'ಜಪಾನ್' 'ಸರ್ಕಾರ'!


    ವರದಿಯ ಪ್ರಕಾರ


    ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಈ ಘಟನೆ ನಡೆದದ್ದು ಎರಡು ವರ್ಷಗಳ ಹಿಂದೆ. ಆದರೆ ಇದರ ಕೇಸ್​ ಮಾತ್ರ ಈಗಲೂ ಅಸ್ತಿತ್ವದಲ್ಲಿದೆ. ಏಕೆಂದರೆ ಎರಡು ವರ್ಷದ ಹಿಂದೆ ಲಾಟರಿ ಟಿಕೆಟ್​ ಒಂದರಲ್ಲಿ ಝೌ ಎಂಬ ಚೀನಾದ ವ್ಯಕ್ತಿ ಬಂಪರ್​​ ಹಣವನ್ನು ಗೆದ್ದಿದ್ದರು. ಆ ಲಾಟರಿಯಲ್ಲಿ ಝೌ ಅವರು 10 ಮಿಲಿಯನ್ ಯುವಾನ್​ ಅಂದರೆ 12 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗೆದ್ದಿದ್ದರು. ಆದರೆ ತರಿಗೆಗಳನ್ನೆಲ್ಲಾ ಕಡಿತಗೊಳಿಸಿದ ನಂತರ ಝೌ ಅವರ ಬ್ಯಾಂಕ್ ಅಕೌಂಟ್​ಗೆ 8 ಕೋಟಿ ರೂಪಾಯಿ ಮೊತ್ತ ಬಂದಿತ್ತು. ಆದರೆ ಲಾಟರಿ ಟಿಕೆಟ್ ಅನ್ನು ಗೆದ್ದ ವಿಚಾರವನ್ನು ಮಾತ್ರ ಝೌ ಅವರು ತನ್ನ ಪತ್ನಿಗೆ ಹೇಳಿರಲಿಲ್ಲ, ಜೊತೆಗೆ ಬ್ಯಾಂಕ್​ನಲ್ಲಿದ್ದ ಹಣ ಮಾಹಿತಿಯನ್ನು ತಿಳಿಸಿರಲಿಲ್ಲ.


    ಸಹೋದರಿಗೆ ಮತ್ತು ಮಾಜಿ ಪತ್ನಿಗೆ ಹಣ ನೀಡಿದ್ದ


    ಝೌ ಲಾಟರಿಯಲ್ಲಿ ಗೆದ್ದ 10 ಮಿಲಿಯನ್ ಯುವಾನ್​ ಮೌಲ್ಯದಲ್ಲಿ 2 ಮಿಲಿಯನ್​ ಯುವಾನ್ ಅನ್ನು ಸಹೋದರಿಗೆ ಹಾಗೂ 70000 ಯುವಾನ್​ ಅನ್ನು ತನ್ನ ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಲೆಂದು ನೀಡಿದ್ದ. ಆದರೆ ಇದರ ಬಗ್ಗೆ ಯಾವುದೇ ಮಾಹಿತಿಯನ್ನು ಸಹ ತನ್ನ ಪತ್ನಿಗೆ ಹೇಳಿಲ್ಲ. ಆದರೆ ಈ ವಿಷಯವನ್ನು ಎಲ್ಲಿಂದಲೋ ಅವರ ಪತ್ನಿ ಲಿನ್‌ಗೆ ತಿಳಿದು ಕೋಪಗೊಂಡು ಪತಿಗೆ ಪಾಠ ಕಲಿಸುವ ಉದ್ದೇಶದಿಂದ, ಕೂಡಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು.




    ಈ ಬಗ್ಗೆ ನ್ಯಾಯಲಯದ ತೀರ್ಪು


    ಇನ್ನು ನ್ಯಾಯಾಲಯದ ಮೊರೆ ಹೋಗಿದ್ದ ಝೌ ಪತ್ನಿ ಲಿನ್​ ಪರವಾಗಿ ಕಳೆದ ವಾರವಷ್ಟೇ ನ್ಯಾಯಾಲಯದಿಂದ ತೀರ್ಪು ಬಂದಿದೆ. ಈ ತೀರ್ಪಿನ ಪ್ರಕಾರ ಲಾಟರಿ ಗೆಲುವಿನಲ್ಲಿ ಬಂದ ಹಣದಲ್ಲಿ ಮೂರನೇ ಎರಡರಷ್ಟು  ಹಣವನ್ನು ಪತ್ನಿಯಾದ ಲಿನ್​ಗೆ ಪರಿಹಾರವಾಗಿ ನೀಡುವಂತೆ ಝೌ ಗೆ ಆದೇಶಿಸಿದೆ.


    ಈ ಮೂಲಕ ಲಾಟರಿ ಟಿಕೆಟ್​ ಅನ್ನು ಪತ್ನಿಯ ಹಣದಿಂದಲೇ ಖರೀದಿಸಿ, ಗೆದ್ದ ಹಣವನ್ನು ದೋಚುವ ಪ್ರಯತ್ನದಲ್ಲಿದ್ದ ಝೌ ನ ಇಡೀ ಪ್ಲ್ಯಾನ್​ನ್ನು ಅವರ ಪತ್ನಿಯೇ ಪ್ಲಾಪ್ ಮಾಡಿದ್ದಾರೆ!

    Published by:Prajwal B
    First published: